Thursday 25th, April 2024
canara news

ಕರ್ನಾಟಕ ಸಮಾಜ ಸೂರತ್ ಸಂಸ್ಥೆಯಿಂದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

Published On : 03 Nov 2017   |  Reported By : Rons Bantwal


ಸೂರತ್‍ನಲ್ಲಿ ಕನ್ನಡಿಗ ಸಂಸದ-ಶಾಸಕರ ಆಯ್ಕೆ ಆಗಬೇಕು: ಶ್ರೀನಿವಾಸ ಬಿದರಿ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಗುಜರಾತ್ (ಸೂರತ್), ನ.01: ಕರ್ನಾಟಕದವರು ಒಂದಾದಗಲೇ ಈ ಸಂಭ್ರಮ ಅರ್ಥಪೂರ್ಣವಾಗುವುದು. ಅಲೂರು ವೆಂಕಟರಾಯರ ಏಕೀಕರಣದ ಫಲವಾಗಿ ಈ ಸಂಭ್ರಮ ನಮಗೆ ಸಾಧ್ಯವಾಗಿದೆ. ಕನ್ನಡಿಗರ ಏಕೀಕರಣದ ಸುದಿನವೇ ರಾಜ್ಯೋತ್ಸವ ಆಗಿದ್ದು, ಇದು ಭವಿಷ್ಯತ್ತಿನ ಪೀಳಿಗೆಗೂ ಮುನ್ನಡೆಯಬೇಕು. ಹೊರನಾಡÀ ಕನ್ನಡಿಗರಲ್ಲಿ ಒಳನಾಡಿನ ಕನ್ನಡಿಗರಿಕ್ಕಿಂತ ಭಾಷಾ ಸ್ಪಷ್ಟತೆಯಿದೆ. ಸೂರತ್-ಹುಬ್ಬಳ್ಳಿ-ಬೆಂಗಳೂರು ನೇರ ವಿಮಾನ ಸಂಚಾರ, ಸೂರತ್‍ನಲ್ಲಿ ಕನ್ನಡಿಗ ಸಂಸದ, ಶಾಸಕನ ಆಯ್ಕೆ ಆಗಬೇಕು ಎಂಬ ಬಗ್ಗೆ ಆಶಯ ಹೊಂದಿದ್ದೇನೆ. ಇದಕ್ಕಾಗಿ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಇದಕ್ಕಾಗಿ ಇಲ್ಲಿನ ಕನ್ನಡಿಗರು ಒಗ್ಗಟ್ಟಿನ ದನಿ ಕೂಡಿಸಿದರೆ ಇದೆಲ್ಲವೂ ಸಾಕಾರಗೊಳ್ಳುವ ಆಶಯ ನನ್ನಲ್ಲಿದೆ ಎಂದು ಸೂರತ್ ಇಲ್ಲಿನ ಆದಾಯ ತೆರಿಗೆ ಇಲಾಖಾ ಆಯುಕ್ತ ಶ್ರೀನಿವಾಸ ಬಿದರಿ ಮಾತನಾಡಿದರು.

ಕರ್ನಾಟಕ ಸಮಾಜ ಸೂರತ್ (ರಿ.) ಸಂಸ್ಥೆಯು ಇಂದಿಲ್ಲಿ ಬುಧವಾರ ಮಧ್ಯಾಹ್ನ ಸೂರತ್ ನಗರದ ನಾನ್‍ಪುರಾ ಇಲ್ಲಿನ ಜೀವನ ಭಾರತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಶ್ರೀನಿವಾಸ ಬಿದರಿ ಮಾತನಾಡಿದರು.

ಶ್ರೀ ಕಟೀಲು ಮೇಳದ ಭಾಗವತ, ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು ಇದರ ಸಂಸ್ಥಾಪಕಾಧ್ಯಕ್ಷ, ಯಕ್ಷಚಕ್ರೇಶ್ವರ ಪಟ್ಲ ಸತೀಶ್ ಶೆಟ್ಟಿ ಮುಖ್ಯ ಅತಿಥಿüಯಾಗಿ ಉಪಸ್ಥಿತರಿದ್ದು ಸೂರತ್‍ನ ಹಿರಿಯ ತುಳುಕನ್ನಡತಿ, ಸಮಾಜ ಸೇವಕಿ ವಿೂನಾ ಮಂಜುನಾಥ್ ಶೆಟ್ಟಿಗಾರ್ ದೀಪ ಪ್ರಜ್ವಲಿಸಿ ರಾಜ್ಯೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿದರು.

ಗೌರವ ಅತಿಥಿüಗಳಾಗಿ ಸ್ಥಾನೀಯ ಪ್ರತಿಷ್ಠಿತ ಉದ್ಯಮಿ ರಾಧಕೃಷ್ಣ ಶೆಟ್ಟಿ ಸೂರತ್, ಬಿಲ್ಲವ ಸಂಘ ಸೂರತ್ ವಿಶ್ವನಾಥ ಪೂಜಾರಿ, ಗುಜರಾತ್ ಘಟಕದ ಪ್ರಧಾನ ಸಂಘಟಕ ಹಾಗೂ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ.ಶೆಟ್ಟಿ ಉಪಸ್ಥಿತರಿದ್ದರು.

ವಿೂನಾ ಶೆಟ್ಟಿಗಾರ್ ಮಾತನಾಡಿ ಕರ್ನಾಟಕ ರಾಜ್ಯೋತ್ಸವವನ್ನು ನಿಜವಾಗಿಸಿ ಆಚರಿಸಿದಾಗ ಕನ್ನಡಿಗರ ಜನ್ಮ ಸಾರ್ಥಕವಾಗುವುದು. ಕರ್ನಾಟಕ ಕನ್ನಡಿಗರೆಲ್ಲರ ಆಸ್ತಿ. ಇದರ ಉಳಿವು ನಮ್ಮೆಲ್ಲರ ಹೊಣೆಯಾಗಿದೆ ಎಂದು ಸ್ಥಾನೀಯ ಕನ್ನಡಿಗರಿಗೆ ಕರೆಯಿತ್ತರು.


ಹೊರನಾಡ ಕನ್ನಡಿಗರು ಅಪ್ಪಟ ಕನ್ನಡಪ್ರೇಮಿಗಳಾಗಿದ್ದಾರೆ. ಇವರಲ್ಲಿನ ಭಾಷಾಪ್ರೇಮ, ಸಾಹಿತ್ಯ ಸಂಸ್ಕೃತಿಯ ನೈಜ್ಯ ಸೇವೆ ಒಳನಾಡ ಕನ್ನಡಿಗರಿಗೆ ಮಾದರಿಯಾಗಿದೆ. ಭವಿಷ್ಯತ್ತಿನಲ್ಲೂ ಕನ್ನಡಾಂಭೆಯ ಅನುಪಮ ಸೇವೆಯಲ್ಲಿ ತೊಡಗಿಸಿ ನಮ್ಮತನ ಉಳಿಸಿಕೊಳ್ಳೋಣ ಎಂದು ಶಶಿಧರ್ ಬರೋಡ ನೆರೆದ ಸಭಿಕರನ್ನು ಹುರಿದುಂಬಿಸಿದರು.

ಗುಜರಾತ್‍ನಲ್ಲಿ ಒಳನಾಡ ಸಂಭ್ರಮ ನಿಜವಾಗಿ ಅಭಿನಂದನೀಯ. ಭಾಷೆ ಸಂಸ್ಕೃತಿಗಳನ್ನು ಎಲ್ಲಾ ಪ್ರಕಾರಗಳೊಂದಿಗೆ ಆಚರಿಸುತ್ತಿರುವುದು ಕನ್ನಡದ ಸೌಭಾಗ್ಯವಾಗಿದೆ. ಇದೊಂದು ಅರ್ಥಗರ್ಭಿತವಾಗಿ ಆಚರಿಸಿ ಮಕ್ಕಳಲ್ಲಿ ಕನ್ನಡದ ಹುಮ್ಮಸ್ಸು ಬೆಳೆಸುತ್ತಿರುವುದನ್ನು ಹೇಳಲು ಶಬ್ದಗಳಿಲ್ಲ. ಭಾಷಾ ವಿರೋಧಿಗಳಾಗದಿರಿ ಆದರೆ ಕನ್ನಡ ಅಥವಾ ಮಾತೃಭಾಷೆಯನ್ನು ಎಂದೂ ಮರೆಯದಿರಿ. ಕನ್ನಡ ಭಾಷೆ ಜನನಿ ಸಮಾನವಾದದ್ದು ಇದನ್ನು ಪ್ರೀತಿಸಿದರೆ ಜನನಿದಾತೆಯನ್ನು ಪ್ರೀತಿಸಿದಂತೆ ಎಂದು ಸತೀಶ್ ಪಟ್ಲ ಸಂಸ್ಥೆಯ ಮುನ್ನಡೆಯ ಯಶಸ್ಸಿಗೆ ಶುಭಾರೈಸಿದರು.

ಅಧ್ಯಕ್ಷ ಮನೋಜ್ ಸಿ.ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳ್ನಾಡಿ ಹೊರನಾಡಿನಲ್ಲಿ ಮಾತೆ ಇದೀ ಭವನೇಶ್ವರಿಯ ಸೇವೆಯನ್ನು ಕರುನಾಡ ದೀಪ ಹಚ್ಚಿ ಬಾಂಧವ್ಯತೆ ಮೈಗೂಡಿಸಿ ನಡೆಸುತ್ತಿದ್ದೇವೆ. ಕನ್ನಡಕ್ಕಾಗಿ ಸಂಘಟನೆಯ ಅವಶ್ಯವಿದೆ. ಕನ್ನಡ ಉಳಿದರೆ ನಮ್ಮ ಸಂಸ್ಕೃತಿ ತನಿಂದ ತಾನೇ ಬೆಳೆಯುವುದು ಸ್ಫೂರ್ತಿದಾಯಕ ನುಡಿಗಳನ್ನಾಡಿ ನೆರೆದ ಸಮಸ್ತ ಕನ್ನಡಾಭಿಮಾನಿಗಳಲ್ಲಿ ಪೆÇ್ರೀತ್ಸಾಹ ತುಂಬಿಸಿದರು.

ವೇದಿಕೆಯಲ್ಲಿ ಸಮಾಜ ಸೇವಕರಾದ ಅಜಿತ್ ಎಸ್.ಶೆಟ್ಟಿ ಅಕ್ಲೇಶ್ವರ, ವಸಂತ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಗೋಪಾಲ ಪೂಜಾರಿ, ಇಂದುದಾಸ್ ಶೆಟ್ಟಿ, ವಾಸು ಪಿ.ಪೂಜಾರಿ ಬರೋಡಾ, ಶಿವರಾಮ ಶೆಟ್ಟಿ, ಸಂಘದ ಗೌರವಾಧ್ಯಕ್ಷ ರಾಮಚಂದ್ರ ವಿ.ಶೆಟ್ಟಿ, ಉಪಾಧ್ಯಕ್ಷರುಗಳಾದ ದಿನೇಶ್ ಶೆಟ್ಟಿ, ರಮೇಶ್ ಭಂಡಾರಿ ಬರ್ಡೊಲಿ, ಉಮೇಶ್ ಸಫಲಿಗ, ಅಜಿತ್ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ವನಿತಾ ಜೆ.ಶೆಟ್ಟಿ, ಜೊತೆ ಕಾರ್ಯದರ್ಶಿ ಶಾಂತಿ ಡಿ.ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಸಂತೋಷ್ ವಿ.ಶೆಟ್ಟಿ, ಆಥಿರ್üಕ ಸಮಿತಿ ಕಾರ್ಯಾಧ್ಯಕ್ಷೆ ಸುನೀತಾ ಆರ್.ಶೆಟ್ಟಿ, ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ವರ್ಣ ದಾಂಪತ್ಯ ಪೂರೈಸಿದ ರಾಮಣ್ಣ ಶೆಟ್ಟಿ ಮತ್ತು ಯಶೋಧ ಆರ್.ಶೆಟ್ಟಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂತೆಯೇ ದಾನಿಗಳಿಗೆ ಹಾಗೂ ಪ್ರಾಯೋಜಕರಿಗೆ ಸ್ವರಣಿಕೆ ನೀಡಿ ಗೌರವಿಸಲಾಯಿತು. ಅತಿಥಿüಗಳು ಪ್ರತಿಭಾ ಪುರಸ್ಕಾರ, ಕ್ರೀಡಾ ಕೂಟದ ವಿಜೇತರಿಗೆ ಬಹು ಮಾನಗಳನ್ನು ವಿತರಿಸಿ ಅಭಿನಂದಿಸಿದರು.

ನಾಡಗೀತೆಯೊಂದಿಗೆ ಸಂಭ್ರಮ ಪ್ರಾರಂಭಗೊಂಡಿತು. ಅಮಿತಾ ಉಮೇಶ್ ಪ್ರಾರ್ಥನೆಯನ್ನಾಡಿದರು. ಕೋಶಾಧಿಕಾರಿ ರಾಧಾಕೃಷ್ಣ ಮೂಲ್ಯ ವಿಜೇತರ ಪಟ್ಟಿ ವಾಚಿಸಿದರು. ರಂಜನಿ ಪ್ರವೀಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರÀು. ಮನೋರಂಜನಾ ಕಾರ್ಯಕ್ರಮವಾಗಿ ಸೂರತ್‍ನ ಕಲಾವಿದರು ವೈವಿಧ್ಯಮಯ ನೃತ್ಯಾವಳಿಗಳನ್ನು ಸಾದರ ಪಡಿಸಿದರು. ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರು ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆಯಲ್ಲಿ `ಮಾನಿಷಾದ' ಯಕ್ಷಗಾನ ಪ್ರದರ್ಶಿಸಿದರು.

ಸಂಘದ ಮಹಿಳಾಧ್ಯಕ್ಷೆ ಸೌಮ್ಯ ಪಿ.ಪೂಜಾರಿ, ಕಾರ್ಯದರ್ಶಿ ಕಸ್ತೂರಿ ಎಲ್.ಶೆಟ್ಟಿ, ಜೊತೆ ಕಾರ್ಯದರ್ಶಿ ಉಮಾ ಆರ್.ಮೂಲ್ಯ, ಬರೋಡದ ಹರೀಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಕೃಷ್ಣ ಶೆಟ್ಟಿ, ಸೂರತ್‍ನ ದಿನೇಶ್ ಶೆಟ್ಟಿ ಹಾವಂಜೆ, ಶೋಭಾ ಪ್ರಕಾಶ್ ಶೆಟ್ಟಿ, ರಮೇಶ್ ಭಂಡಾರಿ, ಪುಷ್ಪ ವಿ.ಶೆಟ್ಟಿ, ರತ್ನಾಕರ ಕೋಟ್ಯಾನ್, ನರೇಶ್ ಕುಲಾಲ್, ಮೋಹನ್ ಬಂಜನ್, ಶಾರದಾ ದೇವಾಡಿಗ, ಜಗನ್ನಾಥ್ ರೈ ಸೇರಿದಂತೆÀ ಸದಸ್ಯರನೇಕರು, ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯದ ನೂರಾರು ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here