Thursday 25th, April 2024
canara news

ಕರಾಟೆ ಚಾಂಪಿಯನ್‍ಶಿಪ್‍ಗೆ ವರ್ಣರಂಜಿತ ತೆರೆ

Published On : 05 Nov 2017   |  Reported By : media release


ಮಂಗಳೂರು: ಎರಡು ದಿನಗಳಿಂದ ನಗರದ ನೆಹರೂ ಮೈದಾನದಲ್ಲಿ ನಡೆಯುತ್ತಿದ್ದ ಇಂಡಿಯನ್ ಕರಾಟೆ ಚಾಂಪಿಯನ್‍ಶಿಪ್ ಭಾನುವಾರ ತಡರಾತ್ರಿ ವರ್ಣರಂಜಿತ ಮುಕ್ತಾಯ ಕಂಡಿತು.

ಸಮಾರೋಪ: ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ್ ರೈ ಸಮಾರೋಪ ಭಾಷಣ ಮಾಡಿದರು. ಎ.ಸದಾನಂದ ಶೆಟ್ಟಿ, ಶಶಿಧರ್ ಹೆಗ್ಡೆ, ಮೇಯರ್ ಕವಿತಾ ಸನಿಲ್, ರಾಜಶೇಖರ ರೈ, ಬಿ.ಎಂ.ನರಸಿಂಹನ್, ಮಲೇಷ್ಯಾದ ರಾಷ್ಟ್ರೀಯ ಕೋಚ್ ಶಿಯಾನ್ ವಸಂತನ್, ಅಧ್ಯಕ್ಷ ಬಿ.ಸುರೇಂದ್ರ, ಸುರೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. 65 ಕೆ.ಜಿ.ಗಿಂತ ಅಧಿಕ ತೂಕದ ಬ್ಲ್ಯಾಕ್ ಬೆಲ್ಟ್ ಮಹಿಳಾ ವಿಭಾಗದಲ್ಲಿ ಪದಕ ವಿಜೇತರಿಗೆ ಸಚಿವರು ಪದಕ ಪ್ರದಾನ ಮಾಡಿದರು.

ಕರಾಟೆ ಆತ್ಮರಕ್ಷಣೆಯ ಆಟ. ಆತ್ಮರಕ್ಷಣೆಯ ಕಲೆಯನ್ನು ಕಲಿಯುವ ಮೂಲಕ ಮಹಿಳೆಯರು ಸಮಾಜದಲ್ಲಿ ತಮ್ಮ ಮೇಲಾಗುವ ದೌರ್ಜನ್ಯದಿಂದ ತಪ್ಪಿಸಿಕೊಳ್ಳಬಹುದು. ಶಾಲಾ ಕಾಲೇಜುಗಳಲ್ಲೂ ಕರಾಟೆಗೆ ಈಗ ಉತ್ತೇಜನ ಸಿಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ರೈ ಅಭಿಪ್ರಾಯಪಟ್ಟರು.

ಈ ಚಾಂಪಿಯನ್‍ಶಿಪ್ ಶಿಸ್ತುಬದ್ಧ ಹಾಗೂ ಅತ್ಯುತ್ತಮವಾಗಿ ನಡೆದಿರುವುದು ರಾಜ್ಯವೇ ಹೆಮ್ಮೆಪಡುವ ಸಂಗತಿ ಎಂದು ಹೇಳಿದರು.


ಫಲಿತಾಂಶ: ಭಾಗ-3
35 ರಿಂದ 40 ಕೆ.ಜಿ. ಬ್ಲ್ಯಾಕ್‍ಬೆಲ್ಟ್ ಮಹಿಳೆಯರ ಕಟಾ: ರಮ್ಯಾ-1, ಶ್ರುತಿ-2, ಶ್ರೇಯಾ ಶೆಟ್ಟಿ-3, ಸುಷ್ಮಾ ಸಂತೋಷಿ-3.
35 ರಿಂದ 40 ಕೆ.ಜಿ. ಬ್ಲ್ಯಾಕ್‍ಬೆಲ್ಟ್ ಮಹಿಳೆಯರ ಕುಮಿಟೆ: ಶ್ರುತಿ-1, ರಮ್ಯಾ-2, ಸುಶ್ಮಾ ಸಂತೋಷಿ--3, ಧನ್ಯತಾ-3.
35 ಕೆ.ಜಿ.ಗಿಂತ ಕಡಿಮೆ ತೂಕದ ಬ್ಲ್ಯಾಕ್‍ಬೆಲ್ಟ್ ಮಹಿಳೆಯರ ಕಟಾ: ಧೃತಿ ಡಿ.ಎ-1, ಗೌತಮಿ-2.
35 ಕೆ.ಜಿ.ಗಿಂತ ಕಡಿಮೆ ತೂಕದ ಬ್ಲ್ಯಾಕ್‍ಬೆಲ್ಟ್ ಮಹಿಳೆಯರ ಕುಮಿಟೆ: ಧೃತಿ ಡಿ.ಎ-1, ಗೌತಮಿ-2.
45 ರಿಂದ 50 ಕೆ.ಜಿ. ಬ್ಲ್ಯಾಕ್‍ಬೆಲ್ಟ್ ಮಹಿಳೆಯರ ಕಟಾ: ಶೈನಿದಾಸ್-1, ನಿಕಿತಾ-2, ಕೌಶಲ್ ಡಿಸೋಜಾ-3, ರಿಯಾ ಶೆಟ್ಟಿ-3.
45 ರಿಂದ 50 ಕೆ.ಜಿ. ಬ್ಲ್ಯಾಕ್‍ಬೆಲ್ಟ್ ಮಹಿಳೆಯರ ಕುಮಿಟೆ: ರಶ್ಮಿ ಎಚ್-1, ರಿಯಾ ಶೆಟ್ಟಿ-2, ಶೈನಿದಾಸ್-3, ದೀಕ್ಷಾ-3.
35 ಕೆ.ಜಿ.ಗಿಂತ ಕಡಿಮೆ ತೂಕದ ಬ್ಲ್ಯಾಕ್‍ಬೆಲ್ಟ್ ಪುರುಷರ ಕಟಾ: ಭವಿಷ್-1, ಅನಿರುದ್ಧ್ ರೈ-2, ರಿಶಬ್‍ದಾಸ್-3, ಅನಿರುದ್ಧ್ ಎಂ-3.
35 ಕೆ.ಜಿ.ಗಿಂತ ಕಡಿಮೆ ತೂಕದ ಬ್ಲ್ಯಾಕ್‍ಬೆಲ್ಟ್ ಪುರುಷರ ಕುಮಿಟೆ: ಶಯನ್-1, ಈಶ-2, ರಿಶಬ್-3, ಅನಿರುದ್ಧ್-3.
35 ರಿಂದ 40 ಕೆ.ಜಿ. ಬ್ಲ್ಯಾಕ್‍ಬೆಲ್ಟ್ ಪುರುಷರ ಕಟಾ: ಶಶಾಂಕ್ ಪಿ.ಎಚ್-1, ನಿಹಾಲ್ ಪಿ.ಎಚ್-2.
35 ರಿಂದ 40 ಕೆ.ಜಿ. ಬ್ಲ್ಯಾಕ್‍ಬೆಲ್ಟ್ ಪುರುಷರ ಕಮಿಟೆ: ಶಶಾಂಕ್ ಪಿ.ಎಚ್-1, ಪ್ರಶಾಂತ್-2 ನಿಹಾಲ್-3.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here