Monday 16th, July 2018
canara news

ಕಂಬಳಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

Published On : 07 Nov 2017   |  Reported By : Canaranews network

ಮಂಗಳೂರು: ಕರಾವಳಿ ಸಹಿತ ರಾಜ್ಯದಲ್ಲಿ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ಕುರಿತ ಪ್ರಕರಣದ ಅರ್ಜಿ ವಿಚಾರಣೆಯನ್ನು ನ. 13ಕ್ಕೆ ಮುಂದೂಡಿದೆ. ಈ ಮೂಲಕ ಕರಾವಳಿ ಭಾಗದಲ್ಲಿ ಕಂಬಳ ಆಯೋಜನೆಗೆ ತಲೆದೋರಿದ್ದ ಆತಂಕ ಸದ್ಯಕ್ಕೆ ದೂರವಾಗಿದೆ.

ರಾಜ್ಯದಲ್ಲಿ ಕಂಬಳಕ್ಕೆ ಅವಕಾಶ ನೀಡಿರುವ ಸರಕಾರದ ಅಧ್ಯಾದೇಶ ಪ್ರಶ್ನಿಸಿ ಪ್ರಾಣಿದಯಾ ಸಂಘವಾದ ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್ಸ್) ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠ ಕಂಬಳ ಆಯೋಜನೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಮುಂದಿನ ವಿಚಾರಣೆಯನ್ನು ನ. 13ಕ್ಕೆ ಮುಂದೂಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದೆ.
More News

ವಾರ್ಷಿಕ ಕನ್ನಡ ಸರ್ಟಿಫಿಕೇಟ್ ಶ್ರೇಣಿಗೆ ಚಾಲನೆಯನ್ನಿತ್ತ ಮುಂಬಯಿ ಕನ್ನಡ ಸಂಘ
ವಾರ್ಷಿಕ ಕನ್ನಡ ಸರ್ಟಿಫಿಕೇಟ್ ಶ್ರೇಣಿಗೆ ಚಾಲನೆಯನ್ನಿತ್ತ ಮುಂಬಯಿ ಕನ್ನಡ ಸಂಘ
ದೇಶ ಜಗತ್ತಿನಲ್ಲಿ ಮಂಚೂಣಿಯಲ್ಲಿ ಬರುವಂತಹ ಯೋಗದಾನ ನಿಮ್ಮದಾಗ ಬೇಕು  : ಗೋಪಾಲಕ್ರಷ್ಣ ಶೆಟ್ಟಿ
ದೇಶ ಜಗತ್ತಿನಲ್ಲಿ ಮಂಚೂಣಿಯಲ್ಲಿ ಬರುವಂತಹ ಯೋಗದಾನ ನಿಮ್ಮದಾಗ ಬೇಕು : ಗೋಪಾಲಕ್ರಷ್ಣ ಶೆಟ್ಟಿ
ವರುಣನ ಕೋಪದ ನಡುವೆಯೂ ಮಾನವೀಯತೆ ಮೆರೆದ ಕನ್ನಡಿಗ ಸಮಾಜ ಸೇವಕರು
ವರುಣನ ಕೋಪದ ನಡುವೆಯೂ ಮಾನವೀಯತೆ ಮೆರೆದ ಕನ್ನಡಿಗ ಸಮಾಜ ಸೇವಕರು

Comment Here