Sunday 22nd, July 2018
canara news

ಕರ್ನಾಟಕ ಕಾಂಗ್ರೆಸ್ ಮುಕ್ತವಾಗಬೇಕು – ಯಡಿಯೂರಪ್ಪ

Published On : 12 Nov 2017   |  Reported By : Canaranews network


ಮಂಗಳೂರು: ಕಾಂಗ್ರೆಸ್ ಮುಕ್ತ ಭಾರತಕ್ಕೆ ಪೂರಕವಾಗಿ ಕರ್ನಾಟಕವೂ ಕಾಂಗ್ರೆಸ್ ಮುಕ್ತ ವಾಗಬೇಕು. ಇದು ಪ್ರಧಾನಿ ನರೇಂದ್ರ ಮೋದಿಯವರ ಆಶಯ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹೇಳಿದರು.ಅವರು ಬಿ.ಸಿ ರೋಡಿನಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿ, ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವಾಗಿಸಲು ಯಡಿಯೂರಪ್ಪ ಒಬ್ಬನಿಂದಲೇ ಸಾಧ್ಯವಿಲ್ಲ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನೂ ಈ ಕುರಿತು ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ಬದಲಾವಣೆ ಅನಿವಾರ್ಯವಾಗಿದೆ.

ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ಹಾಗೂ ಮರದ ದಂಧೆ ಸಚಿವ ರೈ ಬಂಟರಿಂದ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಮುಂದಿನ ಚುನಾವಣೆಯಲ್ಲಿ ಬಂಟ್ವಾಳದಲ್ಲಿ ಬಿಜೆಪಿ ಬರಬೇಕು. ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದರು.ಈ ವೇಳೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ, ಡಿ.ವಿ.ಸದಾನಂದ ಗೌಡ, ಸಂಸದೆ ಶೋಭಾಕರಂದ್ಲಾಜೆ, ನಳಿನ್ ಕುಮಾರ್ ಕಟೀಲು, ಸಂಸದ ಶ್ರೀರಾಮುಲು, ಬಿಜೆಪಿ ಮುಖಂಡರಾದ ಮಾಳವಿಕಾ, ಆಯನೂರು ಮಂಜುನಾಥ್, ತೇಜಸ್ವಿನಿ ರಮೇಶ್, ಭಾರತಿ ಶೆಟ್ಟಿ, ಗಣೇಶ್ ಕಾರ್ಣಿಕ್, ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು.

 
More News

ತುಳುವೆರೆ ಆಯನೊ ಕೂಟ ಕುಡ್ಲ (ರಿ.) ಗೌರವಾಧ್ಯಕ್ಷರಾಗಿ ಡಾ. ಆರೂರು ಪ್ರಸಾದ್ ರಾವ್ ಆಯ್ಕೆ
ತುಳುವೆರೆ ಆಯನೊ ಕೂಟ ಕುಡ್ಲ (ರಿ.) ಗೌರವಾಧ್ಯಕ್ಷರಾಗಿ ಡಾ. ಆರೂರು ಪ್ರಸಾದ್ ರಾವ್ ಆಯ್ಕೆ
ಬಿಎಂಸಿ ಪರಿಮಂಡಳ ಸಮಿತಿ ಸದದ್ಯರಾಗಿ ನಿರಂಜನ್ ಲಕ್ಷ ್ಮಣ್ ಪೂಜಾರಿ ನಿಯುಕ್ತಿ
ಬಿಎಂಸಿ ಪರಿಮಂಡಳ ಸಮಿತಿ ಸದದ್ಯರಾಗಿ ನಿರಂಜನ್ ಲಕ್ಷ ್ಮಣ್ ಪೂಜಾರಿ ನಿಯುಕ್ತಿ
ಜನರ ಖಾತೆಗೆ ಮೋದಿ ಈಗ 15 ಲಕ್ಷದ ಬದಲು 30 ಲಕ್ಷ ಹಾಕಬೇಕು'; ರೈ
ಜನರ ಖಾತೆಗೆ ಮೋದಿ ಈಗ 15 ಲಕ್ಷದ ಬದಲು 30 ಲಕ್ಷ ಹಾಕಬೇಕು'; ರೈ

Comment Here