Wednesday 24th, April 2024
canara news

ಸಂ.ಮೆ.ಹಿ.ಪ್ರಾಥಮಿಕ ಶಾಲಾ ಕ್ರೀಡೋತ್ಸವ

Published On : 12 Dec 2017   |  Reported By : Bernard D'Costa


‘ವಿಧ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳ ಬೇಕು’

ಕುಂದಾಪುರ, ಡಿ.12: ‘ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಸಾಮರ್ಥ್ಯಗಳನ್ನು ಒರೆ ಹಚ್ಚಿಕೊಳ್ಳ ಬೇಕು, ಸೋಲು ಗೆಲುವು ಮುಖ್ಯವಲ್ಲಾ , ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ’ ಗಾಂಧಿ ಮೈದಾನದಲ್ಲಿ ನೆಡೆದ ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆಯ ನೆಡೆದ ಕ್ರಿಡೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಸುಪರ್ ಗ್ರೇಡ್ ವಿದ್ಯುತ್ ಕಂಟ್ರ್ಯಾಕ್ಟರ್ ಕೆ.ಆರ್.ನಾಯಕ್ ಪಥ ಸಂಚಲನದ ಗೌರವನ್ನು ಸ್ವೀಕರಿಸಿ ಕ್ರೀಡಾಳುಗಳಿಗೆ ಸಂದೇಶ ನೀಡಿದರು.

 

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕ ವಂ|ಫಾ|ಅನಿಲ್ ಡಿಸೋಜಾ ‘ಧ್ವಜಾರೋಹಣ ಮಾಡಿ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ, ನಮ್ಮ ದೇಹದ ಕ್ಷಮತೆ ಹೆಚ್ಚುತ್ತದೆ, ಸೋಲು ಗೆಲುವುಗಳನ್ನು ನಾವು ಸಮಾನಾವಾಗಿ ಸ್ವೀಕರಿಸೋಣ’ ಎಂದು ಶುಭ ಹಾರೈಸಿದರು. ನಿವ್ರತ್ತ ಅಧ್ಯಾಪಕರಾದ ಎಲ್.ಜೆ.ಫೆರ್ನಾಂಡಿಸ್ ಕ್ರೀಡ ಜ್ಯೋತಿಯನ್ನು ಬೆಳಗಿಸಿದರು.ಶಾಲಾ ನಾಯಕಿ ಶಮಿತ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಯಿನಿ ಡೋರಾ ಸುವಾರಿಸ್ ಸ್ವಾಗತಿಸಿದರು. ಧೈಹಿಕ ಶಿಕ್ಷಕ ಚಂದ್ರ ಶೇಖರ ಬೀಜಾಡಿ ಮತ್ತು ಧೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ ತಿರ್ಪುಗಾರಾಗಿ ಕಾರ್ಯ ನಿರ್ವಹಿಸಿದರು. ಧೈಹಿಕ ಶಿಕ್ಷಕಿ ಶಾಂತಿ ರಾಣಿ ಬಾರೆಟ್ಟೊ ವಂದಿಸಿದರು. ಶಿಕ್ಷಕಿ ಜ್ಯೋತಿ ಡಿಸಿಲ್ವಾ ಕಾರ್ಯಕ್ರಮವನ್ನು ನಿರೂಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here