Thursday 18th, April 2024
canara news

ಮಾದಕ ವಸ್ತು ಮಾರಾಟ ಜಾಲ ಪತ್ತೆ - ವ್ಯಕ್ತಿಗಳ ಬಂಧನ

Published On : 26 Dec 2017   |  Reported By : Canaranews network


ಮಂಗಳೂರು:ನಿಷೇದಿತ ಮಾದಕ ವಸ್ತಗಳಾದ ಎಲ್ ಎಸ್ ಡಿ , ಎಂ.ಡಿ ಎಂ.ಎ ಮತ್ತು ಎಂ ಡಿ ಎಂ ಟ್ಯಾಬ್ಲೆಟ್ ಗಳನ್ನು ಮಾರಾಟ ಮಾಡುತ್ತಿದ್ದ ಅಂತರಾಜ್ಯ ಜಾಲವನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹ ದಳದ ತಂಡದವರು ಭೇದಿಸಿದ್ದು ಇದರಲ್ಲಿ ಬಂಧನಕ್ಕೆ ಬಾಕಿ ಇದ್ದ ಇನ್ನು ಇಬ್ಬರು ಆರೋಪಿಗಳನ್ನು ಮಂಗಳೂರಿನಲ್ಲಿ ಬಂಧಿಸಿದ್ದಾರೆ.

ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಜಾಲದ ಬಗ್ಗೆ ಮಂಗಳೂರು ದಕ್ಷಿಣ ಉಪವಿಭಾಗದ ರೌಡಿ ನಿಗ್ರಹ ದಳದ ಸಹಾಯಕ ಪೊಲಿಸ್ ಆಯುಕ್ತರಿಗೆ ಬಂದ ಖಚಿತ ಮಾಹಿತಿಯಂತೆ ಈ ಮೊದಲು ನಿಖಿಲ್ ಕೆ.ಬಿ, ಶ್ರವಣ ಪೂಜಾರಿ , ರೋಶನ್ ವೇಗಸ್ , ಬಾಶೀಂ ಬಶೀರ್ ಎಂಬವರನ್ನು ದಸ್ತಗಿರಿ ಮಾಡಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿತ್ತು.ಈ ಪ್ರಕರಣದಲ್ಲಿ ಬಾಕಿ ಇದ್ದ ಆರೋಪಿಗಳಾದ ಹಂಪನಕಟ್ಟೆಯ ಕಾರ್ಲ್ ಡಿ ಕುನ್ಹ ಯಾನೆ ಅಸ್ಟಿನ್ (29)ಹಾಗೂ ಕುಲಶೇಖರ್ ಸಿಲ್ವರ್ ಗೇಟ್ ನ ನಿವಾಸಿ ಅನೂಪ್ ಡಿ ಅಲ್ಮೇಡಾ (26) ವರನ್ನು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳಿಂದ 93 ಎಂ ಡಿ ಎಂ ಪೀಲ್ಸ್ ಗಳನ್ನು , 1ಹುಂಡೈ ಇಯಾನ್ ಕಾರು , 3 ಮೊಬೈಲ್ ಪೋನ್, 30,850 ನಗದು ಹಣ ವಶಪಡಿಸಿಕೊಳ್ಳಲಾಗಿದೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here