Thursday 25th, April 2024
canara news

“ಕೊಡಿಯಾಲ ಖಬರ” ದಶಮಾನೋತ್ಸವ

Published On : 28 Dec 2017   |  Reported By : media release


ಕೊಂಕಣಿ ಭಾಷೆ, ಸಂಸ್ಕೃತಿ, ಹಾಗೂ ವಿವಿಧ ಕೊಂಕಣಿ ವಿಚಾರಗಳ ಬಗ್ಗೆ ಕೊಂಕಣಿ ಭಾಂದವರಿಗೆ ಮುಟ್ಟುವಂತೆ ಮಾಡಲು ಕೊಂಕಣಿ ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಹಲವು ಕೊಂಕಣಿ ಪತ್ರಿಕೆಗಳು ದಕ್ಷಿಣ ಕನ್ನಡ, ಉಡುಪಿ ಉತ್ತರ ಕನ್ನಡ ಜಿಲ್ಲೆ ಮಾತ್ರವಲ್ಲದೇ, ಮುಂಬಯಿ, ಕೊಚ್ಚಿಗಳಲ್ಲಿ ಪ್ರಸಾರವಾಗುತಲಿವೆ. ಅವುಗಳಲ್ಲಿ ಪ್ರಮುಖವಾದುದು ರಾಕ್ಣೊ ಸಾಪ್ತಾಹಿಕ, ದಿವೊ, ಪಯ್ಣರಿ, ಪಂಚ್ಕಾದಾಯಿ ಮಾಸಿಕ, ಕೊಡಿಯಲ ಖಬರ ಪಾಕ್ಷಿಕ ಹಾಗೂ ಇನ್ನೀತರ ಕೊಂಕಣಿ ಪತ್ರಿಕೆಗಳು. ಅವುಗಳಲ್ಲಿ ವರ್ಣರಂಜಿತವಾಗಿ ಪ್ರಸಾರವಾಗುತ್ತಿರುವ “ಕೊಡಿಯಲ ಖಬರ” ಪತ್ರಿಕೆಯು 2017ನೇ ಸಾಲಿನಲ್ಲಿ ತನ್ನ 10ನೇ ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ.


ಈ ಸುಸಂದರ್ಭದಲ್ಲಿ ಪತ್ರಿಕೋಧ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಮಾನ್ಯತಾ ದಿನಾಚರಣೆಯ ರಜತ ಮಹೋತ್ಸವದ ಅಂಗವಾಗಿ “ಕೊಡಿಯಾಲ ಖಬರ” ಸಹಯೋಗದಲ್ಲಿ ಕೊಂಕಣಿ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಾಕ್ರಮವು ಡಿ.29, ಶುಕ್ರವಾರದಂದು ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಮಧ್ಯಾಹ್ನ 3.00ಕ್ಕೆ ಸರಿಯಾಗಿ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಸಿ.ಎ. ನಂದಗೋಪಾಲ ಶೆಣೈ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ. ಅಕಾಡೆಮಿಯ ಅಧ್ಯಕ್ಷ ಆರ್.ಪಿ. ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಡುಪಿಯ ಸಮಾಜ ಸೇವಕ ರಾಮ ಭವನದ ವಿಶ್ವನಾಥ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಶ್ರೀ ಬಸ್ತಿ ವಾಮನ ಶೆಣೈ, ಕೊಂಕಣಿ ಲೇಖಕ ಡಾ| ಕೆ. ಮೋಹನ ಪೈ, ಕೊಂಕಣಿ ಸಂಶೋಧಕ ಶ್ರೀ ಪೌಲ ಮೊರಾಸ್ ಗೌರವಾನ್ವೀತ ಅತಿಥಿಗಳಾಗಿರುತ್ತಾರೆ. ಬಳಿಕ 4ರಿಂದ 5ರ ವರೆಗೆ ನಡೆಯುವ ವಿಚಾರ ಗೋಷ್ಠಿಯಲ್ಲಿ “ಕೊಂಕಣಿ ಸಾಹಿತ್ಯ ಮತ್ತು ಸಾಮಾಜೀಕ ಜಾಗೃತಿ’ ಎಂಬ ವಿಷಯದಲ್ಲಿ ಶ್ರೀಮತಿ ಶಕುಂತಳಾ ಆರ್.ಕಿಣಿ, ಶ್ರೀಮತಿ ಚಂದ್ರಿಕಾ ಮಲ್ಯ, ಶ್ರೀ ವೆಂಕಟೇಶ ನಾಯಕ, ಶ್ರೀ ರಾಮನಾಥ ಶ್ಯಾನಭಾಗ, ಶ್ರೀ ಎಂ. ಆರ್. ಕಾಮತ ವಿಚಾರÀ ಮಂಡಿಸಲಿದ್ದಾರೆ. ಬಳಿಕ (5 ಗಂಟೆಯಿಂದ) ಜರಗಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗೌಡ ಸಾರಸ್ವತ ಸೇವಕ ಸಮಾಜದ ಅಧ್ಯಕ್ಷರಾದ ಶ್ರೀ ಜಿ.ಜಿ.ಶೆಣೈ ಮುಖ್ಯ ಅತಿಥಿಗಳಾಗಿರುತ್ತಾರೆ. ಅಂಕಣಕಾರ ಮತ್ತು ಸಮಾಜ ಸೇವಕ ಶ್ರೀ ಕೆ.ಸಿ. ಪ್ರಭು ಹಾಗೂ ಸಮಾಜ ಸೇವಕ ಮತ್ತು ಉದ್ಯಮಿ ಶ್ರೀ ಪ್ರಶಾಂತ ರಾವ ಗೌರವಾನ್ವಿತ ಅತಿಥಿಗಳಾಗಿರುತ್ತಾರೆ. ಈ ಸಮಾರಂಭದ ಅಂಗವಾಗಿ ಕಾರ್ಕಳದ ಡಾ| ಜಗದೀಶ ಪೈ ಇವರಿಂದ ಕೊಂಕಣಿ ಭಾಷೆಯಲ್ಲಿ ಸ್ಟಾಂಡ್ ಅಪ್ ಕಾಮೇಡಿ ಕಾರ್ಯಕ್ರಮ ಜರಗಲಿದೆ. ಸಮಾರೋಪ ಸಮಾರಂಭದ ಬಳಿಕ ಶ್ರೀಮತಿ ಮಾಲತಿ ಯು. ಕಾಮತ ಹಾಗೂ ಬಳಗದವರಿಂದ ಕೊಂಕಣಿ ನಾಟ್ಕುಳೆಂ ಪ್ರದರ್ಶನವಿದೆ.

ಕೊಡಿಯಾಲ ಖಬರ ಬೆಳೆದು ಬಂದ ದಾರಿ:

2007ರಲ್ಲಿ ಕೊಡಿಯಾಲ ರಥೋತ್ಸವದ ಸಂದರ್ಭದಲ್ಲಿ ಮಣಿಪಾಲದ ‘ಕೊಂಕಣಿ ಭೀಷ್ಮ” ದಿವಂಗತ ಕೆ .ಕೆ. ಪೈ ಇವರ ದಿವ್ಯ ಹಸ್ತದಿಂದ ಲೋಕಾರ್ಪಣೆಗೊಂಡ ಸಾರಸ್ವತ ಕೊಂಕಣಿ ಲೋಕದ ಪ್ರಪ್ರಥಮ ಹಾಗೂ ಎಲ್ಲಾ ಪುಟಗಳು ವರ್ಣರಂಜಿತವಾಗಿರುವ ಏಕೈಕ ಕೊಂಕಣಿ ಪಾಕ್ಷಿಕ ಪತ್ರಿಕೆಯಾದ ‘ಕೊಡಿಯಾಲ ಖಬರ’ ಇಂದು ದಶಕ ಪೂರೈಸಿದ ಸಂಭ್ರಮವನ್ನು ಆಚರಿಸುತ್ತಿದೆ. ಕೊಂಕಣಿ ಭಾಷಿಗ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿ ಮಾತೃಭಾಷೆ ಕೊಂಕಣಿಯನ್ನು ಉಪಯೋಗಿಸಿ ಬರೆಯುವ ಹಾಗೂ ಓದುವ ಅಭಿರುಚಿಯನ್ನು ಬೆಳೆಸುವುದು ಹಾಗೂ ಸಮಾಜ ಭಾಂದವರಿಗೆ ವಿವಿಧ ನಗರಗಳಲ್ಲಿ ಹರಡಿರುವ ಇತರ ಸಮಾಜ ಭಾಂದವರು ಆಯೋಜಿಸುವ ಕಾರ್ಯಕ್ರಮಗಳ ಮಾಹಿತಿಯನ್ನು ತಲುಪಿಸುವುದು ಈ ಎರಡು ಉದ್ಧೇಶಗಳನ್ನಿಟ್ಟು ಪ್ರಾರಂಭಗೊಂಡ ಈ ಪಾಕ್ಷಿಕ ಪತ್ರಿಕೆಗೆ ಇಂದು ದೇಶವಿಡಿ ಸುಮಾರು 85 ನಗರಗಳಲ್ಲಿ 18000ಕ್ಕೂ ಮಿಕ್ಕಿ ಓದುಗರಿದ್ದಾರೆ.

ಉದ್ಯಮಶೀಲ ಸಾರಸ್ವತ ಬ್ರಾಹ್ಮಣ ಸಮಾಜವು ದೇಶವಿಡೀ ಹರಡಿದ್ದು ತಮ್ಮದೇ ಆದ ಛಾಪನ್ನು ಪ್ರತಿಯೊಂದು ಕ್ಷೇತ್ರಗಳಲ್ಲಿ ಹಾಗೂ ಪ್ರದೇಶಗಳಲ್ಲಿ ಮೂಡಿಸಿರುತ್ತದೆ. ಇಂತಹ ಸಮಾಜದ ಸದಸ್ಯರಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಓಂದು ವೇದಿಕೆ ನೀಡುವುದು, ಸಮಾಜದ ಕುಂದು ಕೊರತೆಗಳ ಬಗ್ಗೆ ಲೇಖನಗಳನ್ನು ಪ್ರಕಟಿಸಿ ಜಾಗೃತಿ ಮೂಡಿಸುವುದು, ಮಾತೃ ಭಾಷೆ ಕೊಂಕಣಿಯ ಅಭಿವೃದ್ಧಿಯ ನಿಟ್ಟಿನಲ್ಲಿ ಅಲ್ಲಲ್ಲಿ ಕಾರ್ಯಾಗಾರಗಳನ್ನು ನಡೆಸುವುದು, ಸ್ಫರ್ಧೆಗಳನ್ನು ನೆರವೇರಿಸುವುದು ಇಂತಹ ಕಾರ್ಯಕ್ರಮಗಳನ್ನು ‘ಕೊಡಿಯಾಲ ಖಬರ’ ಕಳೆದ ಹತ್ತು ವರ್ಷಗಳಿಂದ ಹಮ್ಮಿಕೊಂಡು ಬಂದಿದೆ.

ಈ ಪತ್ರಿಕೆ ಪ್ರಾರಂಭಗೊಂಡ ಬಳಿಕ ಅನೇಕ ಹೊಸ ಲೇಖಕರು ಅದರಲ್ಲೂ ತರುಣ ಲೇಖಕರನ್ನು ಕೊಂಕಣಿ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ ಕೀರ್ತಿ ‘ಕೊಡಿಯಾಲ ಖಬರ’ ಪಾಕ್ಷಿಕಕ್ಕೆ ಸಲ್ಲುತ್ತದೆ. ಇದರಲ್ಲಿ ಪ್ರಕಟಗೊಂಡ ಹಲವು ಲೇಖನಗಳು ಸಾರಸ್ವತ ಸಮಾಜದಲ್ಲಿ ಸಂಚಲನವನ್ನು ಮೂಡಿಸಿದ್ದು, ಇದರಿಂದಾಗಿ ಸಾಮಾಜದಲ್ಲಿ ಬದಲಾವಣೆಗಳನ್ನು ಕಾಣಲು ಸಾಧ್ಯವಾಗಿದೆ. ಕೊಂಕಣಿ ಸಾಹಿತ್ಯಕ್ಕೆ ‘ಕೊಡಿಯಾಲ ಖಬರ’ ನೀಡಿದ ಕೊಡುಗೆಯನ್ನು ಪರಿಗಣಿಸಿ ಪತ್ರಿಕೆಯ ಸಂಪಾದಕರಾದ ವೆಂಕಟೇಶ ಬಾಳಿಗಾ ಮಾವಿನಕುರ್ವೆ ಇವರಿಗೆ 2010ರಲ್ಲಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
2010ರಲ್ಲಿ ಕೊಡಿಯಾಲ ಖಬರ ಪತ್ರಿಕೆಯು ಸಮಾಜದ ಯುವಕರನ್ನು ಸಂಘಟಿಸುವ ನೆಲೆಯಲ್ಲಿ ಪ್ರಪ್ರಥಮ ಬಾರಿಗೆ “ಜಿ.ಎಸ.ಬಿ ಯುವ” ಎಂಬ ಮೂರು ದಿನಗಳ ರಾಷ್ಟ್ರ ಮಟ್ಟದ ಯುವ ಸಮ್ಮೇಳನವನ್ನು ಸಂಘಟಿಸಿತ್ತು. ದೇಶದ ವಿವಿದೆಡೆಯ ಸಂಪನ್ಮೂಲ ವ್ಯಕ್ತಿಗಳಿಂದ ಸಮಾಜವನ್ನು ಕಾಡುತ್ತಿದ್ದ ಮೂರು ವಿಷಯಗಳಾದ ಉದ್ಯಮಶೀಲತೆ ಕಡಿಮೆಯಾಗುತ್ತಿರುವುದು, ಸಾಂಸ್ಕøತೀಕ ದಿವಾಳಿತನ ಹಾಗೂ ವೈವಾಹಿಕ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ಈ ಸಮ್ಮೇಳನದಲ್ಲಿ ಆಯಿತು.

2012ರಲ್ಲಿ ನಡೆದ 5ನೇ ವಾರ್ಷಿಕೋತ್ಸವದ ಅಂಗವಾಗಿ ಜರಗಿದ ‘ಕೊಂಕಣಿ ಗಲಗಲೊ’ ಸಾಂಸ್ಕøತೀಕ ಸ್ಪರ್ಧೆಗಳಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯ ಹಲವು ಕೊಂಕಣಿ ಭಾಷಿಗ ಸಂಸ್ಥೆಗಳಿಂದ ಸಾಂಸ್ಕøತೀಕ ಪ್ರದರ್ಶನ ನಡೆಯಿತು.

2013ರಲ್ಲಿ ಜಿ.ಎಸ.ಬಿ ಸಮಾಜದ ಪ್ರಮುಖ ಸಂಘಟನೆಗಳ ಪ್ರಮುಖರನ್ನು ಸಂಘಟಿಸಿ ‘ಜಿ.ಎಸ.ಬಿ ಮಂಥನ’ ಕಾರ್ಯಕ್ರಮವನ್ನು ಆಯೋಜಿಸಿದ್ದರಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳು ಆರಂಭಗೊಳ್ಳಲು ಕಾರಣವಾಯಿತು. ಈ ಮಂಥನದಲ್ಲಿ ಸಮಾಜದ ಯುವಕರು ಉನ್ನತ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಅವರಿಗೆ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ, ವಿದ್ಯಾರ್ಥಿ ವೇತನ ನಿಧಿ ಹಾಗೂ ಅವುಗಳ ಸಮನ್ವಯ ಹಾಗೂ ಮಕ್ಕಳಿಗೆ ಮೌಲಿಕ ಶಿಕ್ಷಣ ಈ ವಿಷಯಗಳ ಬಗ್ಗೆ ವಿಚಾರ ಮಂಡಣೆಯಾಗಿ ದಾರಿ ಸೂಚಿ ರೂಪಿಸಲಾಯಿತು.

ಪತ್ರಿಕೆಯು ಈ ಹತ್ತು ವರ್ಷಗಳಲ್ಲಿ ಹಲವು ವಿಶೇಷಾಂಕಗಳನ್ನು ಪ್ರಕಟಿಸಿದ್ದು ಇವುಗಳಲ್ಲಿ ಮಂಜೇಶ್ವರ ದೇವಳದ ಪುನರಪ್ರತಿಷ್ಠಾ ಕಾರ್ಯಕ್ರಮ, ಕೊಡಿಯಾಲ ತೇರು, ಶ್ರೀಮದ್ ಸುಧೀಂದ್ರ ತೀರ್ಥರ ನವತಿ ಕಾರ್ಯಕ್ರಮದ ಸಂದರ್ಭಗಳಲ್ಲಿ ಪ್ರಕಟಿಸಿದ ವಿಶೇಷಾಂಕಗಳಿಗೆ ಇಂದಿಗೂ ಬೇಡಿಕೆಯಿದೆ.

ಸಂಪಾದಕ ವೆಂಕಟೇಶ ಬಾಳಿಗಾ ಮಾವಿನಕುರ್ವೆ ಇವರ ಸಂಪಾದಕೀಯಗಳ ಸಂಗ್ರಹವಾದ ‘ಮನಾ ದಾಕೂನ’ ಇದನ್ನು 5ನೇ ವಾರ್ಷಿಕೋತ್ಸವದ ಸಮಯದಲ್ಲಿ ಪ್ರಕಟಿಸಲಾಗಿದೆ. ಕೊಡಿಯಾಲ ಖಬರ ಪತ್ರಿಕೆಯಲ್ಲಿ ಗೀತಾ ಸಿ. ಕಿಣಿಯವರು ಬರೆದ ಅಡುಗೆಯ ಅಂಕಣ “ವಾಸರೀಂತು ಹಾಂವ” ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ವಿದ್ಯಾ ವಿ. ಬಾಳಿಗಾ ಪತ್ರಿಕೆಯ ಉಪ ಸಂಪಾದಕಿಯಾಗಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here