Wednesday 24th, April 2024
canara news

ಗೋಕುಲ ಯುವ ವಿಭಾಗದ ಆಯೋಜನೆಯಲ್ಲಿ ಆಶ್ರಯದಲ್ಲಿ ಚಿಣ್ಣರಿಗಾಗಿ ಚಳಿಗಾಲದ ಶಿಬಿರ

Published On : 30 Dec 2017


ಮುಂಬಯಿ, ಡಿ. 29: ಬಿ. ಎಸ್. ಕೆ. ಬಿ. ಎಸೋಸಿಯೇಶನ್, ಸಾಯನ್, ಗೋಕುಲ ಯುವ ವಿಭಾಗವು, ಪ್ರತಿವರ್ಷದಂತೆ ಈ ವರ್ಷವೂ ಚಿಣ್ಣರಿಗಾಗಿ ಎರಡು ದಿನದ ಚಳಿಗಾಲದ ಶಿಬಿರವನ್ನು ಆಶ್ರಯದಲ್ಲಿ ಹಮ್ಮಿಕೊಂಡಿತ್ತು. ಈ ಶಿಬಿರದಲ್ಲಿ ಮಕ್ಕಳಿಗೆ ಭಜನೆ, ಕನ್ನಡ ಭಾಷಾಜ್ಞಾನ, ರಂಗೋಲಿ, ಪೇಪರ್ ನಿಂದ ಚೀಲಗಳನ್ನು ತಯಾರಿಸುವುದು, ಮಧುಬನಿ, ಒರಿಗಾಮಿ, ಗ್ರೀಟಿಂಗ್ ಕಾರ್ಡ್ ತಯಾರಿಸುವುದು ಮುಂತಾದುವುಗಳನ್ನು, ಸಹನಾ ಪೆÇೀತಿ, ಸಹನಾ ಭಾರದ್ವಾಜ್, ಚೈತ್ರ ಪೆÇೀತಿ, ಅಂಜನಾ ರಾವ್, ಶಾಲಿನಿ ಉಡುಪ, ಸರೋಜಾ ಸತ್ಯನಾರಾಯಣ, ಪಿ.ಸಿ.ಎನ್ ರಾವ್, ಅರುಣಾ ಆಚಾರ್ ರವರು ಕಲಿಸಿಕೊಟ್ಟರು. ಇತ್ತೀಚಿಗೆ ಮಹಾರಾಷ್ಟ್ರ ರಾಜ್ಯಮಟ್ಟದ ವೇದಿಕ್ ಗಣಿತ ಸ್ಪರ್ಧೆಯಲ್ಲಿ ನಾಲ್ಕನೆಯ ಬಹುಮಾನವನ್ನು ಪಡೆದ ಸುದೀಪ್ ಉಡುಪ, ವೇದಿಕ್ ಗಣಿತದ ಮೂಲಕ ಸರಳವಾಗಿ ಗಣಿತವನ್ನು ಮಾಡುವ ವಿಧಾನಗಳನ್ನು ತಿಳಿಸಿದನು.

ಶಿಬಿರದ ಸಮಾರೋಪ ಸಮಾರಂಭವು ಡಾ. ಸುರೇಶ್ ಎಸ್ ರಾವ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಯುವ ವಿಭಾಗದ ಅಧ್ಯಕ್ಷರಾದ ಹರಿದಾಸ್ ಭಟ್ ಸ್ವಾಗತ ಕೋರುತ್ತಾ ಅಧ್ಯಕ್ಷರನ್ನು ಹಾಗೂ ಪದಾಧಿಕಾರಿಗಳನ್ನು ವೇದಿಕೆಗೆ ಆಮಂತ್ರಿಸಿದರು.

ಡಾ| ಸುರೇಶ್ ರಾವ್ ರವರು ಈ ಸಂದರ್ಭದಲ್ಲಿ ಮಕ್ಕಳಿಗೆ ಶುಭಾಶಯವನ್ನು ಕೋರುತ್ತಾ, ಭಾಗವಹಿಸಿದ ಮಕ್ಕಳು ಹಾಗೂ ಅವರ ಪಾಲಕರು ಶಿಬಿರದಿಂದಾಗುವ ಪ್ರಯೋಜನಗಳನ್ನು ಇತರರಿಗೂ ತಿಳಿಸಿ, ಮುಂದಿನ ಶಿಬಿರದಲ್ಲಿ ಇನ್ನೂ ಹೆಚ್ಚಿನ ಮಕ್ಕಳು ಭಾಗವಹಿಸುವಂತೆ ಪೆÇ್ರೀತ್ಸಾಹಿಸಬೇಕೆಂದು ಕೇಳಿಕೊಂಡರು.ಶಿಬಿರದ ಯಶಸ್ಸಿಗೆ ಸಹಕರಿಸಿದ ಸ್ವಯಂ ಸೇವಕರಿಗೆ ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ಕಾರ್ಯದರ್ಶಿ ಎ. ಪಿ.ಕೆ. ಪೆÇೀತಿ, ಜತೆ ಕಾರ್ಯದರ್ಶಿ ಪಿ.ಸಿ. ಎನ್ . ರಾವ್, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಮವಿಠಲ ಕಲ್ಲೂರಾಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಚಾಲಕಿ ವಿನೋದಿನಿ ರಾವ್ ಧನ್ಯವಾದ ಸಮರ್ಪಿಸಿದರು

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here