Thursday 25th, April 2024
canara news

ಮೆಲ್ರಿಕ್ ಡಿಸೋಜಾ ಹತ್ಯೆ ಪ್ರಕರಣ; 6 ಜನರ ಬಂಧನ

Published On : 31 Dec 2017   |  Reported By : Canaranews network


ಮಂಗಳೂರು : ಕ್ರಿಸ್ಮಸ್ ದಿನದಂದು ಮಂಗಳೂರಿನಲ್ಲಿ ನಡೆದ ರೌಡಿ ಶೀಟರ್ ಮೆಲ್ರಿಕ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಪಾಂಡೇಶ್ವರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಗೋರಿಗುಡ್ಡೆ ನಿವಾಸಿಗಳಾದ ನಿಶಾಕ್ ಪೂಜಾರಿ (28)ವಿನೇಶ್ ಕುಮಾರ್ (30), ಮುಳಿಹಿತ್ಲು ನಿವಾಸಿಗಳಾದ ಸಚಿನ್ ಶೆಟ್ಟಿ(22), ಜಪ್ಪಿನಮೊಗರು ನಿವಾಸಿ ಗಣೇಶ್ ಕುಲಾಲ್ (34), ಕಂಕನಾಡಿ ನಿವಾಸಿ ಪ್ರವೀಣ್ ಪೂಜಾರಿ (42), ಜಪ್ಪು ಕುಟ್ಪಾಡಿ ನಿವಾಸಿ ಸಂದೀಪ್ ಶೆಟ್ಟಿ (33) ಎಂದು ಗುರುತಿಸಲಾಗಿದೆ.

ಈ ಕೊಲೆ ಪ್ರಕರಣದ ಕುರಿತು ತನಿಖೆ ನಡೆಸಿದ ಪಾಂಡೇಶ್ವರ ಠಾಣೆಯ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ನಗರದ ವಿವಿದೆಡೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಹತ್ಯೆಗೆ ಬಳಸಿದ 5 ಮಾರಾಕಾಸ್ತ್ರಗಳು, 2 ಬೈಕ್, ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.2016 ರಲ್ಲಿ ನಗರದ ಮಾರ್ನಮಿಕಟ್ಟೆ ಎಂಬಲ್ಲಿ ನಡೆದಿದ್ದ ಸಂದೀಪ್ ಶೆಟ್ಟಿ ಕೊಲೆಯತ್ನ ಪ್ರಕರಣಕ್ಕೆ ಪ್ರತಿಕಾರವಾಗಿ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 25 ರ ತಡರಾತ್ರಿ ಮಂಗಳೂರಿನ ವೆಲೆನ್ಸೀಯಾದಲ್ಲಿ ಮೆಲ್ರಿಕ್ ಡಿಸೋಜಾ(21) ಅವರನ್ನು ತಂಡ ಒಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ನಡೆಸಿತ್ತು.ಹತ್ಯೆಗೀಡಾಗಿದ್ದ ಮೆಲ್ರಿಕ್ ಡಿಸೋಜಾ, ರೌಡಿಶೀಟರ್ ಮಂಕಿ ಸ್ಟ್ಯಾಂಡ್ ವಿಜಯ್ ಸಹಚರನಾಗಿದ್ದು, ಈತ 2016 ರಲ್ಲಿ ನಡೆದಿದ್ದ ಸಂದೀಪ್ ಹತ್ಯೆ ಯತ್ನ ಪ್ರಕರಣದ ಆರೋಪಿಯಾಗಿದ್ದ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here