Wednesday 24th, April 2024
canara news

ಕುಂದಾಪುರ ಊರ್‍ಮನಿ ಹಬ್ಬ ಸಮಾರೋಪ

Published On : 02 Jan 2018   |  Reported By : Bernard J Costa


ಊರ್‍ಮನಿ ಹಬ್ಬ ಅದ್ಭುತ ಪರಿಕಲ್ಪನೆ: ರವಿ ಬಸ್ರೂರು

ಕುಂದಾಪುರ: ಕುಂದಾಪುರ ಮಣ್ಣಿನ ಸಂಸ್ಕøತಿ, ಆಚಾರ ವಿಚಾರಗಳನ್ನು ಬಿಂಬಿಸುವ ಊರ್‍ಮನಿ ಹಬ್ಬ ಅದ್ಭುತ ಪರಿಕಲ್ಪನೆಯಾಗಿದೆ. ಇಂತಹ ಉತ್ಸವಗಳು ಯಶಸ್ವಿಯಾಗಬೇಕಾದರೆ ಜನರ ಸಹಕಾರ ಅಗತ್ಯ. ಸಾವಿರಾರು ಮಂದಿ ಈ ಉತ್ಸವದಲ್ಲಿ ಪಾಲ್ಗೊಳ್ಳುವುದರ ಮೂಲಕವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಖ್ಯಾತ ಸಂಗೀತ ನಿರ್ದೇಶಕ, ಕುಂದಗನ್ನಡ ಭಾಷೆಯನ್ನು ಚಲನಚಿತ್ರಕ್ಕೆ ಅಳವಡಿಸಿದ ನಿರ್ದೇಶಕ ರವಿ ಬಸ್ರೂರು ಹೇಳಿದರು.

ಇಂಥಹ ಉತ್ಸವದಲ್ಲಿ ಜನರ ಆಚಾರ ವಿಚಾರ,ಸಾಂಸ್ಕøತಿಕ ವೈವಿಧ್ಯದ ಜತೆಗೆ ಜನಪದ ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ಮುಂದಿನ ತಲೆಮಾರಿವರೆಗೆ ಪರಿಚಯಿಸುವ ಕಾರ್ಯ ನಡೆದಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಿರುತೆರೆ ನಟ, ಕುಂದಾಪುರ ಅತ್ರಾಡಿಯ ಶೈನ್ ಶೆಟ್ಟಿ ಮಾತನಾಡಿ, ದೊಡ್ಡಮಟ್ಟದ ಕಾರ್ಯಕ್ರಮವನ್ನು ಸಂಘಟಿಸುವಾಗ ಸಂಘಟಕರು ಅದರ ಯಶಸ್ಸಿನ ಹಿಂದೆ ನಿರಂತರವಾಗಿ ಕೆಲಸವನ್ನು ಮಾಡುತ್ತಾರೆ. ಅವರ ಸೇವೆಯನ್ನು ಗುರುತಿಸುವ ಅಗತ್ಯವಿದೆ. ಹಬ್ಬದ ಹೆಸರೆ ಸೂಚಿಸುವಂತೆ ಊರ್‍ಮನಿ ಹಬ್ಬ ನಮ್ಮ ಆಚಾರ ವಿಚಾರ, ಹಳ್ಳಿಯ ಬದುಕು,ಕರಾವಳಿಯ ಜನಜೀವನ ಇದೆಲ್ಲವೂ ಕೇಂದ್ರೀಕೃತವಾಗುವುದರ ಮೂಲಕ ಉತ್ಸವ ಯಶಸ್ವಿಯಾಗಿದೆ. ಊರ್‍ಮನಿ ಹಬ್ಬದ ಮೂಲಕ ಇಲ್ಲಿನ ಪ್ರವಾಸಿ ತಾಣವನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವ ಕೆಲಸ ನಡೆದಿರುವುದರಿಂದ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಕೋಟೇಶ್ವರ ಬೀಚ್ ಉತ್ಸವ ಸಮಿತಿಯ ಅಧ್ಯಕ್ಷ ಬೈಲೂರು ಉದಯ ಕುಮಾರ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಬಿಲ್ಲವ, ಸದಸ್ಯರಾದ ಭಾಸ್ಕರ ಬಿಲ್ಲವ, ಜ್ಯೋತಿ, ಕೃಷ್ಣ ಪೂಜಾರಿ, ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ವಾದಿರಾಜ ಹೆಬ್ಬಾರ್, ಪ್ರಕಾಶ್ ಪೂಜಾರಿ, ಜೇಸಿಂತಾ ಡಿ ಮೆಲ್ಲೋ, ಮತ್ಸ್ಯೋದ್ಯಮಿ ಪುಂಡಲೀಕ ಬಂಗೇರ, ಕುಂದಾಪುರ ಠಾಣಾಧಿಕಾರಿ ಹರೀಶ್ ಕುಮಾರ್, ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ವೆಂಟ್ರಮಣ ಮೊಗೇರ ಉಪಸ್ಥಿತರಿದ್ದು, ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದರು. ಉತ್ಸವ ಸಮಿತಿಯ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಪ್ರಮುಖ ಸ್ಪರ್ಧೆಯ ಫಲಿತಾಂಶ
ಊರ್‍ಮನಿ ಹಬ್ಬದ ಪ್ರಯುಕ್ತ ಹಗ್ಗಜಗ್ಗಾಟ ಸ್ಪರ್ಧೆಯ ಜತೆಗೆ ವಾಲಿಬಾಲ್ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಲ್ಪೆಯ ಬಲರಾಮ ಫ್ರೆಂಡ್ಸ್ ಪ್ರಥಮ ಸ್ಥಾನ ಪಡೆದರೆ, ಸಾಸ್ತಾನ ಕೋಡಿತಲೆಯ ಕೋಳಿರಾಯ ಫ್ರೆಂಡ್ಸ್ ದ್ವಿತೀಯ ಸ್ಥಾನ ಪಡೆಯಿತು. ವಾಲಿಬಾಲ್ ಸ್ಪರ್ಧೆಯಲ್ಲಿ ಕೋಡಿ ಫ್ರೆಂಡ್ಸ್ ಕೋಡಿ ಪ್ರಥಮ ಸ್ಥಾನ ಪಡೆದರೆ, ಕಂಡ್ಲೂರಿನ ಕನ್ನಿಕಾ ಫ್ರೆಂಡ್ಸ್ ದ್ವಿತೀಯ ಸ್ಥಾನ ಪಡೆಯಿತು.
...
ಭಾನುವಾರ ಊರ್‍ಮನಿ ಹಬ್ಬಕ್ಕೆ ಕಿಕ್ಕಿರಿದು ಜನಸ್ತೋಮ ಸೇರಿದ್ದು, ಜೋಲಿ ಬೈಕ್‍ರೈಡ್ ಜತೆಗೆ ಸಮುದ್ರದಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಮಾಡಲಾಯಿತು. ವಿವಿಧ ಬಗೆಯ ಸ್ಟಾಲ್‍ಗಳಲ್ಲಿ ಜನಸ್ತೋಮ ತುಂಬಿ ತುಳುಕಿತು. ಅಮ್ಯೂಸ್‍ಮೆಂಟ್ ಪಾರ್ಕ್‍ನಲ್ಲಿ ಜನಸಂದಣಿ ಹೆಚ್ಚಿತ್ತು.
..
2ನೇ ದಿನದ ಸಾಂಸ್ಕøತಿಕ ಕಾರ್ಯಕ್ರಮವನ್ನು ಕುಂದಾಪುರ ನಗರಾಭಿವೃದ್ಥಿ ಪ್ರಾಧಿಕಾರದ ಅಧ್ಯಕ್ಷರ ವಿಕಾಸ್ ಹೆಗ್ಡೆ ಉದ್ಘಾಟಿಸಿದರು.ಪತ್ರಕರ್ತ ಡಾ.ಸುಧಾಕರ ನಂಬಿಯಾರ್,ಕೋಟ ಗೀತಾನಂದ ಫೌಂಡೇಶನ್ ಟ್ರಸ್ಟ್ ಪ್ರಶಾಂತ್ ಕುಂದರ್,ಕೊರಗ ಸಂಘಟನೆಯ ಪ್ರಮುಖ ಗಣೇಶ್,ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ವೆಂಟ್ರಮಣ ಮೊಗೇರ ಮೊದಲಾದವರು ಉಪಸ್ಥಿತರಿದ್ದರು.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕೋಟೇಶ್ವರದ ಪಾವನ ಐತಾಳ್ ತಂಡದವರಿಂದ ಯಕ್ಷ ನಾಟ್ಯ ವೈಭವ,ಬಾರಕೂರು ಹುಭಾಶಿಕ ಯುವ ಕಲಾ ವೇದಿಕೆ ಕೊರಗಜ್ಜನ ನೃತ್ಯ,ಕಿರುತೆರೆ ನಟ ಶೈನ್ ಶೆಟ್ಟಿ ಹಾಡು,ಸತೀಶ್ ಹೆಮ್ಮಾಡಿಯವರ ಜಾದು ಪ್ರದರ್ಶನ, ಡ್ರಾಮ ಜ್ಯೂನಿಯರ್ ಆದಿತ್ಯನ ಸಂಗೀತ, ಉಡುಪಿ ಸುಧನ್ ಇವೆಂಟ್ ಮ್ಯಾನೇಜ್‍ಮೆಂಟ್‍ನ ನೃತ್ಯ ಪ್ರದರ್ಶನ, ಜತೆಗೆ ಕನ್ನಡದ ರಾಕ್ ಬ್ಯಾಂಡ್ ಮ್ಯೂಸಿಕಲ್ ನೈಟ್ ಎಲ್ಲರನ್ನು ಆಕರ್ಷಿಸಿತು.
...
ಭಾನುವಾರ ಬೆಳಿಗ್ಗೆ ಆರೋಗ್ಯ ಇಲಾಖೆಯಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ ಜರಗಿತು.
ವಿಸೂ:ಬದಲಾಯಿಸಿಕೊಳ್ಳಿ




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here