Thursday 25th, April 2024
canara news

ಅನೀವಾರ್ಯವಾದರೆ ಮಾತ್ರ‌ ವಾಣಿಜ್ಯ ಸಂಕೀರ್ಣ ತೆರವು

Published On : 07 Jan 2018   |  Reported By : Rons Bantwal


ಬಂಟ್ವಾಳ; ತಾಪಂ ನ ವಾಣಿಜ್ಯ ಸಂಕೀರ್ಣವನ್ನು ಅನಿವಾರ್ಯವಾದರೆ ಮಾತ್ರ ತೆರವುಗೊಳಿಸುವುದು,ಉಳಿದಂತೆ ಹಳೇ ಕಟ್ಟಡದ ತೆರವುಗೊಳಿಸಿ ಪಿಪಿ ಪಿ ಮಾದರಿಯಲ್ಲಿ ಬಸ್ ನಿಲ್ದಣ ನಿರ್ಮಾಣಕ್ಕೆ ಶನಿವಾರ ನಡೆದ ಬಂಟ್ವಾಳ ತಾಪಂ ನ ವಿಸೇಷ ಸಭೆಯಲ್ಲಿ ನಿರ್ಧರಿಸಲಾಯಿತು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ. ಸಭಾಧ್ಯಕ್ಷತೆ ವಹಿಸಿ ಈ ಕಟ್ಟಡಕ್ಕೆ ಇದ್ದ ತಾತ್ಕಾಲಿಕ ತಡೆಯಾಜ್ಞೆ ಸರಕಾರಿ ಮಟ್ಟದಲ್ಲಿ ತೆರವುಗೊಂಡಿದೆ ಎಂದು ಸಭೆಯ ಗಮನಕ್ಕೆ ತಂದರು.ಆಗ ಪ್ರತಿಕ್ರಯಿಸಿದ ವಿಪಕ್ಷ ಸದಸ್ಯ ರಮೇಶ್ ಕುಡ್ಮೇರು ಅವರು ಅಲ್ಲಿ ಬಸ್ ನಿಲ್ದಾಣ ಅಥವಾ ಇನ್ನಾವುದೇ ಅಭಿವೃದ್ದಿ ಕಾರ್ಯ ನಡೆಸುವುದಕ್ಕೆ ನಮ್ಮ ಅಭ್ಯಂತರವಿಲ್ಲ,ಈ ಹಿಂದಿನ ಸಭೆಯಲ್ಲೆ ಈ ಬಗ್ಗೆ ಎಲ್ಲಾ ಸದಸ್ಯರಿಗೆ ನೀಲನಕ್ಷೆ ಒದಗಿಸುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಅದು ಈ ವರೆಗೂ ಸಿಕ್ಕಿಲ್ಲ ,ತಾಪಂ ಗೆ ಸಂಪನ್ಮೂಲ ಬರುವಂತ ಹೊಸ ಕಟ್ಟಡವನ್ನು ಉಳಿಸಿ ಹಳೇ ಕಟ್ಟಡ ತೆರವುಗೊಳಿಸಬೇಕೆ ಎಂದು ಬೇಡಿಕೆ ಇಟ್ಟರು.ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಯಶವಂತ ಪೊಳಲಿ ಅವರು,ನ್ಯಾಯಾಲಯದಲ್ಲಿ ತಾತ್ಕಾಲಿಕ ತಡೆಯಾಜ್ಞೆಯಷ್ಟೆ ತೆರವಾಗಿದೆ.ಇನ್ನು ಅಂತಿಮವಾಗಿಲ್ಲ,ಹಿಸ ಕಟ್ಟಡ ತೆರವುಗೊಳಿಸಿದರೂ,ಸ್ಥಳ ರಸ್ತ ಮಾರ್ಜಿನ್ ಗೆ ಹೋಗುವ ಸಾಧ್ಯತೆ ಇದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು,ಮಾ.31ರವರೆಗೆ ಹೊಸ ಕಟ್ಟಡದಲ್ಲಿರುವ‌ ಬಾಡಿಗೆದಾರರಿಗೆ ಅವಕಾಶವಿದ್ದು, ಈಗಾಗಲೇ ಅವರೊಂದಿಗೆ ಮಾತುಕತೆಯನ್ನು ನಡೆಸಲಾಗಿದೆ.ಅದುವರೆಗೆ ಹೊಸ ಕಟ್ಟಡ ತೆರವು ಗೊಳಿಸುವ ಪ್ರಶ್ನೆಯೇ ಇಲ್ಲ , ಅಗತ್ಯವಿದ್ದರೆ ಮಾತ್ರ ಆ ಕಟ್ಟಡ ತೆರವುಗೊಳಿಸಲಾಗುವುದು ಎಂದರು.

ಸದಸ್ಯ ಸಂಜೀವ ಪೂಜಾರಿ ಮದ್ಯಪ್ರವೇಶಿಸಿ ಒಮ್ಮೆ ಆಗಿರುವ ನಿರ್ಣಯವನ್ನು ಪದೇ ಪದೇ ಬದಲಾಯಿಸುವುದು ಸರಿಯಲ್ಲ ಎಂದರು. ಕಂದಾಯ ಇಲಾಖೆಯ ಸಹಕಾರದಿಂದ ಈ ಜಮೀನು ಲಭ್ಯವಾಗಿದ್ದು, ಸಿಕ್ಕಿರುವ ಅವಕಾಶವನ್ನು ಅಭಿವೃದ್ದಿಯ ದೃಷ್ಠಿಯಿಂದ ಸದುಪಯೋಗಪಡಿಸಿಕೊಳ್ಳುವ ಎಂದು ಉಪಾಧ್ಯಕ್ಷ‌ ಅಬ್ಬಾಸ್ ಆಲಿ ಹೇಳಿದರು. "ಅಧ್ಯಕ್ಷರಿಗೆ ಅವಕಾಶವಿಲ್ಲ* : ತಡೆಯಾಜ್ಞೆ ನೀಡಲು ಜಿಪಂ ಅಧ್ಯಕ್ಷರಿಗೆ ಅವಕಾಶವಿಲ್ಲ, ,ಅದರೂ ಕಾನೂನಿಗೆ ಗೌರವಕೊಟ್ಟು ಸಮ್ಮನಾಗಿದ್ದೆವು, ಸರಕಾರಿ ಮಟ್ಟದಲ್ಲಿ ಪ್ರಯತ್ನಪಟ್ಟು ತಡೆಯಾಜ್ಙೆ ತೆರವುಗೊಳಿಸಲಾಗಿದೆ.

ಬೆಳೆಯುತ್ತಿರುವ ಬಿ.ಸಿ.ರೋಡಿಗೆ ಮುಕುಟಪ್ರಾಯವಾಗಿ ಮತ್ತು ತಾಪಂ ನ ಸಂಪನ್ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಲಾಗುತ್ತಿದೆ‌ ಎಂದರು.ಇದೇ‌ವೇಳೆ ತಾಪಂ ಹಳೇ‌ಕಟ್ಟಡವನ್ನು ಕೆಡವಿ ಅದರ ಪಕ್ಕಾಸು ಸಹಿತ ವಿವಿಧ ಸೊತ್ತುಗಳನ್ನು ಬಹಿರಂಗ ಹರಾಜು ಹಾಕಿ ವಿಲೇ ಮಾಡಲು ಹಾಗೂ ಪಕ್ಕದ ಹಳೆ‌ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು. *ಉಪಹಾರದಲ್ಲೂ ಕ್ಯಾತೆ*: ಅಭಿವೃದ್ದಿ ವಿಚಾರದ ಬಗ್ಗೆ ಚರ್ಚಿಸಬೇಕಾದ ಸದಸ್ಯರು ಉಪಹಾರದ ವಿಷಯದಲ್ಲೂ ಕ್ಯಾತೆ ತೆಗೆದರು ನೀರು,ಉಪಹಾರವನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ ಎಂದು ಸದಸ್ಯ ರಮೇಶ್ ಕುಡ್ಮೇರ್‌ ಹೇಳಿದರೆ.ಕಳೆದವಾರ ಇ.ಒ.ಅವರ ವಿದಾಯಕೂಟ ಸಮಾರಂಭದಲ್ಲೂ ಉಪಹಾರ ವಿತರಣೆಯಲ್ಲಿ ಅವ್ಯವಸ್ಥೆಯಾಗಿತ್ತು ಎಂದು ಸದಸ್ಯ‌ಸಂಜೀವ ಪೂಜಾರಿ ಗಮನಸೆಳೆದರು.

ಆಗ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಜನಪ್ರತಿನಿಧಿಗಳ,ಅಧಿಕಾರಿಗಳಿಗೆ ಸಮರ್ಪಕವಾಗಿ ಉಪಹಾರ,ಕುಡಿಯುವ ನೀರು ಪೂರೈಕೆ ಮಾಡುವಂತೆ ಇಲಾಖೆ‌ಯ ಜವಾನರಿಗೆ ಸೂಚಿಸಿದರು. 2017-18 ನೇ ಸಾಲಿಗೆ ತಯಾರಿಸಲಾದ ಕ್ರಿಯಾಯೋಜನೆಯ ಕಾಮಗಾರಿಯನ್ನು ಫೆಬ್ರವರಿ 15 ರೊಳಗೆಪೂರ್ಣಗೊಳಿಸುವಂತೆ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರು ಸದಸ್ಯರಿಗೆ ಮನವಿ ಮಾಡಿದರು. ಜನಪ್ರತಿನಿಧಿಗಳು ವಿನಿವಿಧಾನಸೌಧದ ಒಳಗಡೆ ವಾಹನ ನಿಲುಗಡೆಗೆ ಅವಕಾಶವಿದೆ ಎಂದು ಸದಸ್ಯರೊಬ್ಬರ ಪ್ರಶ್ನೆಗೆ ತಹಶೀಲ್ದಾರ್‌ಪುರಂದರ ಹೆಗ್ಡೆ‌ ಸ್ಪಷ್ಟಪಡಿಸಿದರು.ಉಪಾಧ್ಯಕ್ಷ ಅಬ್ಬಾಸ್ ಆಲಿ,ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ ವೇದಿಕೆಯಲ್ಲಿದ್ದರು.ಸಭೆಯ ಬಳಿಕ ಅಧ್ಯಕ್ಷ‌,ಉಪಾಧ್ಯಕ್ಷರ‌ ನಿಯೋಗ ಸ್ಥಳ ಪರಿಶೀಲನೆ ನಡೆಸಿತು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here