Thursday 18th, April 2024
canara news

ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಸಂಸ್ಥೆಯ 74ನೇ ವಾರ್ಷಿಕ ಮಹಾಸಭೆ

Published On : 08 Jan 2018   |  Reported By : Rons Bantwal


ಜನ ಮಾನ್ಯತೆಯಿಂದ ಸಮಾಜದ ಏಕೀಕರಣ ಸಾಧ್ಯ: ರಾಜ್‍ಕುಮಾರ್ ಕಾರ್ನಾಡ್
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜ.08: ಸಮಾಜಕ್ಕಾಗಿ ಸದಸ್ಯತ್ವ, ಸದಸ್ಯರಿಂದ ಸಂಘ ಸಂಸ್ಥೆ ಮತ್ತು ಇವೆಲ್ಲವೂಗಳ ಉನ್ನತಿಗಾಗಿ ಸದಸ್ಯರ ಸಹಯೋಗ ಮುಖ್ಯವಾಗಿರುತ್ತದೆ. ನಮ್ಮಲ್ಲಿ ಒಗ್ಗಟ್ಟಿದೆ ಆದರೂ ಯುವ ಜನತೆ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಸಂಸ್ಥೆ ಇನ್ನೂ ಏಕೀಕರಣ ಆಗಲು ಸಾಧ್ಯ. ಹಣಕ್ಕಿಂತ ಜನ ಮಾನ್ಯತೆ ದೊರೆತಾಗ ಸಂಸ್ಥೆ ಸಮಾಜ ತನ್ನಷ್ಟಕ್ಕೆನೇ ಮುನ್ನಡೆಯುತ್ತದೆ. ಇಂದು ನಮ್ಮಲ್ಲಿ ಸಾವಿರಕ್ಕೂ ಮಿಕ್ಕಿದ ಸದಸ್ಯತ್ವ ಇದೆ. ಇಂತಹ ಏಕತೆಗೆ ನಮ್ಮ ಪೂರ್ವಜರ, ಸಂಸ್ಥೆಯ ರೂಪಕರ ದೂರದೃಷ್ಟಿತ್ವವೇ ಕಾರಣ. ಅವರ ಆಶಯದ ಕನಸು ನಮ್ಮ ಒಗ್ಗೂಡುವಿಕೆಯಿಂದ ನನಸಾಗಿಸಿದೆ ಎಂದು ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಸಂಸ್ಥೆಯ ಅಧ್ಯಕ್ಷ ರಾಜ್‍ಕುಮಾರ್ ಕಾರ್ನಾಡ್ ನುಡಿದರು.

ಇಂದಿಲ್ಲಿ ಭಾನುವಾರ ಅಪರಾಹ್ನ ಸಯನ್ ಪೂರ್ವದಲ್ಲಿನ ಜಿಎಸ್‍ಬಿ ಸೇವಾ ಮಂಡಲದ ಶ್ರೀ ಸುದೀಂದ್ರ ಸಭಾಗೃಹದಲ್ಲಿ ರಾಮರಾಜ ಕ್ಷತ್ರಿಯ ಸೇವಾ ಸಂಘ ಮುಂಬಯಿ ಸಂಸ್ಥೆಯ ವಾರ್ಷಿಕ ಸ್ನೇಹಮಿಲನಕ್ಕೆ ಚಾಲನೆ ನೀಡಿ ಬಳಿಕ 74ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಅಮೃತಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿ ರಾಜ್‍ಕುಮಾರ್ ಮಾತನಾಡಿದರು.

ಮಹಾನಗರ ಮುಂಬಯಿಯಲ್ಲಿ ಕಳೆದ ಸುಮಾರು ಏಳುವರೆ ದಶಕಗಳಿಂದ ದೀರ್ಘಾವಧಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆಗಳಿಂದ ಕಾರ್ಯನಿರತ ಸಂಸ್ಥೆಯ ಸಭೆಯಲ್ಲಿ ಉಪಾಧ್ಯಕ್ಷ ಕೆ.ಶಿವರಾಮ ರಾವ್, ಜೊತೆ ಕಾರ್ಯದರ್ಶಿಗಳಾದ ಕೇದರ್‍ನಾಥ ಆರ್.ಬೋಳಾರ್ ಮತ್ತು ರಿತೇಶ್ ಆರ್.ರಾವ್, ಜೊತೆ ಕೋಶಾಧಿಕಾರಿ ರೂಪೇಶ್ ಆರ್.ರಾವ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರೀನಾ ಕೇದರ್‍ನಾಥ ಬೋಳಾರ್, ಕಾರ್ಯದರ್ಶಿ ಚಿತ್ರಾ ಎಂ.ರಾವ್ ವೇದಿಕೆಯಲ್ಲಿ ಆಸೀನರಾಗಿದ್ದರು. ಗೌ| ಪ್ರ| ಕಾರ್ಯದರ್ಶಿ ಎನ್.ರವೀಂದ್ರನಾ ಥ್ ರಾವ್ ಸ್ವಾಗತಿಸಿ ವಾರ್ಷಿಕ ಚಟುವಟಿಕೆಗಳ ಮಾಹಿತಿ ಹಾಗೂ ಗತ ವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ನವೀನ್ ಎಸ್.ರಾವ್ ಗತ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು.

ಕಾರ್ಯಕ್ರಮದಲ್ಲಿ ರಾಮರಾಜ ಕ್ಷತ್ರೀಯ ಸಂಘದ ಅಧ್ಯಕ್ಷ ಬಿ.ಗಣಪತಿ ಶೇರ್ವೆಗಾರ್ ಮತ್ತಿತರ ಹಿರಿಯ ಮುಂದಾಳುಗಳು ಉಪಸ್ಥಿತರಿದ್ದು ಪದಾಧಿಕಾರಿಗಳು ಸಮಾಜದ ಮಧುಸೂಧನ ರಾವ್, ರಮೇಶ್ ವಿ.ರಾವ್ ದಂಪತಿಗಳು, ಕೆ.ದಾಮೋದರ್ ರಾವ್, ವೆಂಕಟಲಕ್ಷಿ ್ಮೀ ಎಸ್.ರಾವ್, ಪ್ರತಿಭಾವಂತ ವಿದ್ಯಾಥಿರ್sಗಳಾದ ಕು| ಅಕ್ಷತಾ ಸಂತೋಷ್ ರಾವ್, ಕು| ದಿವ್ಯ ಸೂರ್ಯಕಾಂತ್ ರಾವ್, ಕು| ಶಿವಾನಿ ದಿನೇಶ್ ರಾವ್, ರಾಜೇಂದ್ರ ಆರ್. ರಾವ್, ನಿತ್ಯಾನಂದ ಸಿ.ರಾವ್, ಚಿರಾಗ್ ಆರ್.ರಾವ್ ಮೊದಲಾದವರನ್ನು ಗೌರವಿಸಲಾಯಿತು. ಇತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾಥಿರ್ü ವೇತನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧಕರೆಣಿಸಿದ ಸಮಾಜ ಬಾಂಧವರಿಗೆ ಸತ್ಕರಿಸಿ ಅಭಿನಂದಿಸಿದರು. ಸಭೆಯ ಆದಿಯಲ್ಲಿ ಗತ ವಾರ್ಷಿಕ ಸಾಲಿನಲ್ಲಿ ಅಗಲಿದ ಸಂಸ್ಥೆಯ ಸದಸ್ಯರು, ಸಮಾಜ ಬಂಧುಗಳು, ಗಣ್ಯರಿಗೆ ಶ್ರದ್ಧಾಂಜಲಿ ಕೋರಲಾಯಿತು.

ಬೆಳಿಗ್ಗೆ ಶ್ರೀ ಕೆ.ರಾಮಚಂದ್ರ ಉಪದ್ಯಾಯ ಅವರು ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿಸಿ ತೀರ್ಥ ಪ್ರಸಾದವನ್ನೀಡಿ ಹರಸಿದರು. ನಿತಿನ್ ರಾವ್ ಮತ್ತು ಶುೃತಿ ರಾವ್ ಹಾಗೂ ಪ್ರತಿಮಾ ರಾವ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು. ನಂತರ ಮಹಿಳಾ ಸದಸ್ಯೆಯರಿಂದ ಅರಸಿನ ಕುಂಕುಮ ಮತ್ತು ಭಜನಾ ಕಾರ್ಯಕ್ರಮ ನಡೆಸಲ್ಪಟ್ಟಿತು. ಸದಸ್ಯ ಬಂಧುಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಅಶೋಕ್ ಕೊಡ್ಯಡ್ಕ ನಿರ್ದೇಶನದಲ್ಲಿ `ಭಕ್ತ ಮಾರ್ಕಂಡೆಯ' ನಾಟಕ ಪ್ರದರ್ಶಿಸಿದರು.


ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೇಂದ್ರ ರಾವ್, ಮನೋಜ್ ಸಿ.ರಾವ್, ಸಂತೋಷ್ ಕುಮಾರ್ ರಾವ್, ನಾರಾಯಣ ಯು.ರಾವ್, ದಿನೇಶ್ ಎಸ್.ರಾವ್ ಧನಂಜಯ ಎನ್.ಶೇರ್ವಿಗಾರ್, ಅಶೋಕ್ ಕುಮಾರ್ ಎಸ್.ರಾವ್, ಶಿವನಂದ ಎಸ್.ಕೋಟೆಗಾರ್, ಜನಾರ್ಧನ ಸಿ.ಶೇರ್ವೆಗಾರ್, ನಿತ್ಯಾನಂದ ಸಿ.ರಾವ್, ಮಹಿಳಾ ಮಂಡಳಿ ಉಪ ಕಾರ್ಯಾಧ್ಯಕ್ಷೆ ವೀಣಾ ಎಸ್.ರಾವ್, ಕೋಶಾಧಿಕಾರಿ ಪ್ರಜ್ಞಾ ಎಸ್.ರಾವ್, ಜೊತೆ ಕಾರ್ಯದರ್ಶಿ ಆರತಿ ಎನ್.ರಾವ್, ಜೊತೆ ಕೋಶಾಧಿಕಾರಿ ಕವಿತಾ ಆರ್.ರಾವ್ ಮತ್ತಿತರ ಮಹಿಳಾ ಪದಾಧಿಕಾರಿಗಳು ಸೇರಿದಂತೆ ಹೆಚ್ಚಿನ ಸದಸ್ಯ ಬಾಂಧವರು ಉಪಸ್ಥಿತರಿದ್ದರು.

ಮಹಿಳಾ ವಿಭಾಗದ ಕೋಶಾಧಿಕಾರಿ ಪ್ರಜ್ಞಾ ಸುಹಾಸ್ ರಾವ್ ಪ್ರಾರ್ಥನೆಯನ್ನಾಡಿದರು. ಕೆ.ಶಿವರಾಮ ರಾವ್, ಸುಖಾಗಮನ ಬಯಸಿದರು. ಎನ್.ರವೀಂದ್ರನಾ ಥ್ ರಾವ್ ಸಭಾ ಕಲಾಪ ನಡೆಸಿ ಕೃತಜ್ಞತೆ ಸಲ್ಲಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here