Friday 19th, October 2018
canara news

ಗೋಕುಲ-ಬಿಎಸ್‍ಕೆಬಿ ಅಸೋಸಿಯೇಶನ್‍ನಿಂದ ನಡೆಸಲ್ಪಟ್ಟ ವಾರ್ಷಿಕ ಆಟೋಟ ಸ್ಪರ್ಧೆ

Published On : 11 Jan 2018


ಕ್ರೀಡೆ ದೇಹಕ್ಕೆ ಚೈತನ್ಯವನ್ನು ಕೊಡುತ್ತವೆ : ಎಸ್.ಎನ್ ಉಡುಪ

(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಜ.10: ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಸಂಸ್ಥೆ ತನ್ನ ಸದಸ್ಯರಿಗಾಗಿ ವರ್ಷಂಪ್ರತಿ ಆಯೋಜಿಸುವಂತೆ ಈ ಬಾರಿಯೂ ಆಟೋಟ ಸ್ಪರ್ಧೆಯನ್ನು ಕಳೆದ ಭಾನುವಾರ ವಡಾಲ ಅಲ್ಲಿನ ಎನ್‍ಕೆಇಎಸ್ ಶೈಕ್ಷಣಿಕ ಸಂಸ್ಥೆಯ ಮೈದಾನದಲ್ಲಿ ಆಯೋಜಿಸಿತ್ತು.

ಮೂರ ವರ್ಷದ ಚಿಣ್ಣರಿಂದ ನೂರರ ಸಮೀಪದ ಹಿರಿಯ ನಾಗರೀಕರ ವರೆಗೂ ಆಯೋಜಿಸಿದ ಕ್ರೀಡಾ ಕೂಟವನ್ನು ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿ ಇದರ ಪ್ರಧಾನ ಅರ್ಚಕರೂ, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಮಂಡಳಿ ಸದಸ್ಯರೂ ಆದ ಎಸ್.ಎನ್ ಉಡುಪ ಅವರು ಉದ್ಘಾಟಿಸಿದರು.

ಇಂತಹ ಕ್ರೀಡಾ ಚಟುವಟಿಕೆಗಳು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ದೈನಂದಿನ ಏಕತಾನತೆಯನ್ನು ದೂರಗೊಳಿಸಿ ದೇಹಕ್ಕೆ ನವ ಚೈತನ್ಯವನ್ನು ಕೊಡುತ್ತವೆ. ಪ್ರತಿ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಕ್ರೀಡೋತ್ಸವದಲ್ಲಿ ಭಾಗಿ ಆಗುವಂತಾಗಲಿ ಎಂದು ಹಾರೈಸಿದರು.

ಬಿಎಸ್‍ಕೆಬಿ ಅಸೋಸಿಯೇಶನ್‍ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕ್ಟೀಲು, ಉಪಾಧ್ಯಕ್ಷ ವಾಮನ್ ಹೊಳ್ಳ ಮತ್ತು ಶೈಲಿನಿ ರಾವ್, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಕೋಶಾಧಿಕಾರಿ ಹರಿದಾಸ್ ಭಟ್ ಹಾಗೂ ಎಸ್.ಎನ್ ಉಡುಪ ಅವರು ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.

ಯುವ ವಿಭಾಗಧ್ಯಕ್ಷ ಹರಿದಾಸ್ ಭಟ್ ಮತ್ತು ಸಂಚಾಲಕಿ ವಿನೋದಿನಿ ರಾವ್ ಅವರ ಮುಂದಾಳತ್ವದಲ್ಲಿ ಹಲವಾರು ಆಟೋಟ ಸ್ಪರ್ಧೆಗಳು ಜರಗಿದವು. ಶಶಿಧರ್ ರಾವ್ ವಿಜೇತರ ಯಾದಿ ವಾಚಿಸಿದರು. ಗುರುರಾಜ್ ಭಟ್ ಹಾಗೂ ಹರಿದಾಸ್ ಭಟ್ ಆಟೋಟ ಸ್ಪರ್ಧೆ ನಿರ್ವಾಹಿಸಿದರು. ಕಾರ್ಯಕಾರಿ ಸಮಿತಿಯ ಪ್ರಶಾಂತ್ ಹೆರ್ಲೆ, ಉಮೇಶ್ ರಾವ್, ವಿದ್ಯಾ ರಾವ್, ಪ್ರೇಮಾ ರಾವ್, ಸಹನಾ ಪೆÇೀತಿ, ಅರ್ಪಿತಾ ಬಂಟ್ವಾಳ, ಶಾಂತಿಲಕ್ಷ್ಮೀ ಉಡುಪ, ಹರಿಶ್ಚಂದ್ರ ರಾವ್, ದಾಮೋದರ್ ಭಟ್, ಸ್ಮಿತಾ ಭಟ್, ಹಾಗೂ ಯುವ ವಿಭಾಗದ ಕಾರ್ಯಕರ್ತರು ಉಪಸ್ಥಿತರಿದ್ದು ಕ್ರೀಡೆಗೆ ಸಹಕರಿಸಿದರು.

 

 
More News

ಬಿ.ಎ ಮೊಹಿದೀನ್ ಅವರು ತೆರೆದಿಟ್ಟ ನನ್ನೊಳಗಿನ ನಾನು
ಬಿ.ಎ ಮೊಹಿದೀನ್ ಅವರು ತೆರೆದಿಟ್ಟ ನನ್ನೊಳಗಿನ ನಾನು
ಪೇಜಾವರ ಮಠದಲ್ಲಿ ನೆರವೇರಿದ ವಾರ್ಷಿಕ ಶರನ್ನವರಾತ್ರಿ ದುರ್ಗಾಪೂಜೆ
ಪೇಜಾವರ ಮಠದಲ್ಲಿ ನೆರವೇರಿದ ವಾರ್ಷಿಕ ಶರನ್ನವರಾತ್ರಿ ದುರ್ಗಾಪೂಜೆ
ಮೈಸೂರು ಅಸೋಸಿಯೇಶನಲ್ಲಿ `ರಂಗಭೂಮಿಯಿಂದ ಸಮಾಜ ಸುಧಾರಣೆ' ವಿಚಾರ ಸಂಕಿರಣ
ಮೈಸೂರು ಅಸೋಸಿಯೇಶನಲ್ಲಿ `ರಂಗಭೂಮಿಯಿಂದ ಸಮಾಜ ಸುಧಾರಣೆ' ವಿಚಾರ ಸಂಕಿರಣ

Comment Here