Thursday 25th, April 2024
canara news

ಕರ್ನಾಟಕ: ಎಂಎಲ್‍ಎ ಸ್ಪರ್ಧೆಗೆ ಮತ್ತೆ ಉತ್ಸುಕರಾದ

Published On : 13 Jan 2018   |  Reported By : Rons Bantwal


ಅಜಾತಶತ್ರು ರಾಜಕಾರಣಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ

ಮುಂಬಯಿ, ಜ.12: ಕರ್ನಾಟಕ ರಾಜ್ಯದ ಅಸೆಂಬ್ಲಿ ಚುನಾವಣೆಗೆ ಅಖಾಡ ಸಜಾಗುತ್ತಿದ್ದಂತೆಯೇ ಎಲ್ಲಾ ಪಕ್ಷದ ನಾಯಕರು ಶಾಸಕನಾಗುವ ಹುಮ್ಮಸ್ಸಿನಲ್ಲಿದ್ದು ತೆರೆಮರೆಯಲ್ಲಿದ್ದೇ ಸ್ಪರ್ಧೆಗೂ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ರಾಜ್ಯದಾದ್ಯಂತ ವಿವಿಧ ಪಕ್ಷಗಳ ನಾಯಕರ ಆಯ್ಕೆ ಪ್ರಕ್ರಿಯೆ ಬರದಲ್ಲಿ ಸಾಗುತ್ತಿದ್ದಂತೆಯೇ ಮಾಜಿ-ಹಾಲಿ ನಾಯಕರಂತೂ ಶಾಸಕತ್ವ ಸ್ಥಾನ ಗಳಿಸಿಕೊಳ್ಳುವಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದಾರೆ.

ಅಜಾತಶತ್ರು ರಾಜಕಾರಣಿ ಎಂದೇ ಜನಜನಿತ ವಿಟ್ಲ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅವರು ಮುಂದಿನ ಚುನಾವಣೆಯಲ್ಲಿ ಎಂಎಲ್‍ಎ ಸ್ಪರ್ಧೆಗೆ ಮತ್ತೆ ಉತ್ಸುಕತೆ ತೋರಿಸಿರುವುದಕ್ಕೆ ಅವರ ಅಭಿಮಾನಿ ಬಳಗ ಬಾರೀ ಸಂತಸ ವ್ಯಕ್ತಪಡಿಸಿದೆ.

ಅನೇಕ ದಶಕಗಳಿಂದ ರಾಜಕೀಯವಾಗಿ ಅಪಾರ ಅನುಭವ ಹೊಂದಿದವ ರುಕ್ಮಯ ಪೂಜಾರಿ 1967ರ ಬಿ.ಎಸ್‍ಸಿ ಪದವಿಧರ. ಆರ್‍ಎಸ್‍ಎಸ್ ಕಾರ್ಯಕರ್ತ.1969ರಲ್ಲಿ ಜನಸಂಘಕ್ಕೆ ಸೇರ್ಪಡೆಗೊಂಡು ಬಂಟ್ವಾಳ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿದ್ದು ದೆಹಲಿಯಲ್ಲಿ ಅಟಲ್‍ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ನಡೆದ ಹೋರಾಟ ನಡೆಸಿ ತಿಹಾರ್ ಜೈಲಿನಲ್ಲಿ ಕಾರಾಗೃಹ ವಾಸ ಅನುಭವಿಸಿದ ಧೀಮಂತ ನಾಯಕ. 1972ರಲ್ಲಿ ಜನಸಂಘದ ಅಭ್ಯಥಿರ್üಯಾಗಿ ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಜಂಟಿ ಅಭ್ಯಥಿರ್ü ಬಿ.ವಿಕಕ್ಕಿಲ್ಲಾಯ ವಿರುದ್ಧ ಸ್ಪರ್ಧಿಸಿದ, 1978ರಲ್ಲಿ ನೂತನವಾಗಿ ರಚನೆ ಆದ ಜನತಾ ಪಕ್ಷದ ಅಭ್ಯಥಿರ್üಯಾಗಿ ಬಂಟ್ವಾಳದಿಂದ ಬಿ.ಎ ಮೊೈದಿನ್ ವಿರುದ್ಧ ಸ್ಪರ್ಧೆ ನಡೆಸಿದ, 1983ರಲ್ಲಿ ವಿಟ್ಲ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮವಾಗಿ ಶಾಸಕನಾಗಿ ಆಯ್ಕೆಯಾದ ಹಿರಿಯ ರಾಜಕಾರಣಿ ಮತ್ತೆ ಈ ಬಾರಿಯ ವಿಧಾನ ಸಭಾ ಚುನಾವಣೆ ಎದುರಿಸಲು ಸಿದ್ಧವಾಗಿರುವುದು ಇದೀಗ ಭಾರೀ ಸುದ್ದಿಗೆ ಗ್ರಾಸವಾಗಿದೆ. 1989 ಮತ್ತು 1994ರಲ್ಲಿ ವಿಟ್ಲ ಕ್ಷೇತ್ರದಿಂದ ಸತತವಾಗಿ ಶಾಸಕನಾಗಿ ಆಯ್ಕೆ ಆಗಿದ್ದು, 1991ರಲ್ಲಿ ಉಡುಪಿ ಕ್ಷೇತ್ರದಿಂದ ಆಸ್ಕರ್ ಫರ್ನಾಂಡಿಸ್ ವಿರುದ್ಧ ಲೋಕಸಭೆಗೆ ಸ್ಪರ್ಧಿಸಿದ ಅನುಭವೀ ರಾಜಕಾರಣಿ ಇವರಾಗಿದ್ದಾರೆ.

ಭಾರತೀಯ ಜನತಾ ಪಕ್ಷದ (ಬಿಜೆಪಿ) ಪಕ್ಷದ ಶಿಸ್ತಿನ ಸಿಪಾಯಿ ಎಂದೇ ಗುರುತಿಸಿಕೊಂಡಿರುವ ರುಕ್ಮಯ ಪೂಜಾರಿ ಅವರು ಪಕ್ಷ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದ್ದಾರೆ. 2004ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ನಾನು ಅಭ್ಯಥಿರ್üಯಾಗಬೇಕೆಂಬ ಒತ್ತಡ ಇತ್ತಾದರೂ ಆ ಸ್ಥಾನ ಮನೋರಮಾ ಮಧ್ವರಾಜ್ ಅವರಿಗೆ ಬಿಟ್ಟುಕೊಟ್ಟರೆಂದು ಪೂಜಾರಿ ಆಪ್ತರು ತಿಳಿಸುತ್ತಾರೆ.

1980ರಲ್ಲಿ ಬಿಜೆಪಿಯ ಸ್ಥಾಪನೆಯ ದಿನದಿಂದಲೂ ಜನಸಂಘದ ಎಲ್ಲರೂ ಬಿಜೆಪಿಗೆ ಸೇರ್ಪಡೆ ಗೊಂಡÀು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಪದಾಧಿಕಾರಿ, 1992-95 ವರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷನಾಗಿ, 1994ರಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿ, 7 ಬಾರಿ ವಿಧಾನ ಸಭೆಗೆ ಒಂದು ಬಾರಿ ಲೋಕಸಭೆಗೆ, ಒಂದು ಬಾರಿ ಜಿಲ್ಲಾ ಪರಿಷತ್‍ಗೆ ಸ್ಪರ್ಧಿಸಿದ ಅನುಭವಸ್ಥ ರಾಜಕಾರಣಿ ಇವರಾಗಿದ್ದಾರೆ.

1983ರಲ್ಲಿ ಮೊತ್ತ ಮೊದಲ ಬಾರಿ ವಿಧಾನ ಸಭೆಗೆ ಪ್ರವೇಶಿಸಿ ಕ್ಷೇತ್ರ, ಜಿಲ್ಲಾದ್ಯಂತ ಹೋರಾಟ ಮಾಡಿ ಪಕ್ಷ ಕಟ್ಟಿ ಬೆಳೆಸಿದ ಪಕ್ಷದ ನಿಷ್ಠಾವಂತ ಕಾರ್ಯಕರ್ತ. 2014ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ನಳಿನ್‍ಕುಮಾ ರ್ ಕಟೀಲ್ ಸ್ಪರ್ಧಾ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷನಾಗಿ, ಅದಲ್ಲದೆ ಜೆ.ಕೃಷ್ಣ ಪಾಲೆಮಾರ್, ಬಿ.ನಾಗರಾಜ್ ಶೆಟ್ಟಿ, ರಾಜೇಶ್ ನಾಯ್ಕ್ ಉಳೆಪಾಡಿಗುತ್ತು ಹಾಗೂ ಇತರ ಬಿಜೆಪಿ ಅಭ್ಯಥಿರ್üಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ನೇತಾರ ಆಗಿದ್ದಾರೆ. ತಮ್ಮ 26ನೇ ವಯಸ್ಸಿನಲ್ಲೇ, ರಾಜಕೀಯಕ್ಕೆ ಪಾದಾರ್ಪಣೆ ಮಾಡಿ ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಅದರ ವಿರುದ್ಧ ಹೋರಾಡಿ 5 ತಿಂಗಳು ಮಂಗಳೂರು ಸಬ್ ಜೈಲಿನಲ್ಲಿ ಜೈಲುವಾಸ ಅನುಭವಿಸಿದ, 1976ರಲ್ಲಿ ಬಳ್ಳಾರಿಯಲ್ಲಿ ಮೀಸಾ ಕಾನೂನಿನಡಿ 5 ತಿಂಗಳು ಜೈಲುವಾಸ ಅನುಭವಿಸಿದ ಅನುಭವಿ.

ಸಂಘ ಪರಿವಾರದಿಂದ ಹಿಡಿದು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಇವರ ಶ್ರಮ ಅಪಾರವಾದದ್ದು. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಭಾಜಪ ಸರಕಾರ ರಚನೆ ಆದಾಗ ಅದರ ಹಿಂದೆ ಇದ್ದ ನಾಯಕರಲ್ಲಿ ಇವರೋರ್ವರು. ಕೇಂದ್ರದಲ್ಲಿ ಮಾನ್ಯ ಮೋದಿಯವರ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ದೇಶದ ಗೌರವ, ಪ್ರತಿಷ್ಠೆ ಹೆಚ್ಚಾಗಿದೆ. ಅಭಿವೃದ್ಧಿ ಕೆಲಸಗಳು ಸಾಗುತ್ತಿದೆ. ಇದರಿಂದ ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ವಿರೋಧ ಪಕ್ಷಗಳು ಜನರ ವಿಶ್ವಾಸ ಕಳಕೊಳ್ಳುತ್ತಿವೆ. ಇದರಿಂದ ಕಂಗೆಟ್ಟ ಕಾಂಗ್ರೆಸ್ಸು, ಕಮ್ಯೂನಿಸ್ಟ್ ಪಕ್ಷ, ಬುದ್ಧಿಜಾಲಗಳೆಂದೂ ಕರೆಸಿಕೊಳ್ಳುತ್ತಿರುವ ವ್ಯಕ್ತಿ ಬಿಜೆಪಿ ಮತ್ತು ಮೋದಿಯವರ ವಿರುದ್ಧ ಅಪಪ್ರಚಾರ ದೇಶದಲ್ಲಿ ಅರಾಜಕತೆ ಉಂಟು ಮಾಡಲು ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಅಗತ್ಯ ಇದೆ. ಇಂತಹ ಸಂದರ್ಭದಲ್ಲಿ ಸಂಘ ಪರಿವಾರ, ಕಾರ್ಯಕರ್ತರು, ಪಕ್ಷದ ವರಿಷ್ಠರು, ಹೈಕಮಾಂಡ್ ತೀರ್ಮಾನಿಸಿದರೆ ನಾನು ಅಭ್ಯಥಿರ್üಯಾಗಲು ಸಿದ್ಧನಿದ್ದೇನೆ. ನಾನು ಮತ್ತು ನಮ್ಮ ರಾಜ್ಯಾಧ್ಯಕ್ಷರು ಸಮಕಾಲೀನರು. ಪಕ್ಷವನ್ನು ಒಟ್ಟೊಟ್ಟಿಗೆ ಕಟ್ಟಿ ಬೆಳೆಸಿದವರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಇವರೊಂದಿಗೂ ಅನ್ಯೋನ್ಯತೆ ಕಾಯ್ದು ಕೊಂಡಿದ್ದೇನೆ. ಎಲ್ಲರಲ್ಲೂ ಅಪಾರ ಗೌರವವಿದೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮತದಾರ ಬಂಧುಗಳಿಗೆ ನನ್ನ ಬಗ್ಗೆ ಇರುವ ಪ್ರೀತಿ ವಿಶ್ವಾಸದ ಆಧಾರದಲ್ಲಿ ನಾನು ಚುನಾವಣೆ ಗೆಲ್ಲುವ ವಿಶ್ವಾಸ ಕೂಡಾ ಹೊಂದಿದ್ದೇನೆ ಎನ್ನುತ್ತಾರೆ ಎ.ರುಕ್ಮಯ ಪೂಜಾರಿ.

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here