Thursday 25th, April 2024
canara news

ರಾಜ್ಯ ಕಂಡ ಸ್ವಚ್ಛ ರಾಜಕಾರಣಿ, ನಿಷ್ಕಳಂಕ-ನಿಷ್ಕಪಟ ಮೃದು ಸ್ವಭಾವದ ಜನನಾಯಕ

Published On : 13 Jan 2018


ಶ್ರೀ ಎ.ರುಕ್ಮಯ ಪೂಜಾರಿ ಅವರ ರಾಜಕೀಯ ಜೀವನ ಅನುಭವ
: ಪತ್ರಿಕಾ ಸಂದರ್ಶನ Rons Bantwal


ಕರ್ನಾಟಕದ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಮತ್ತು ಮುಂಬಯಿಗೆ ಅವಿನಾಭಾವ ಸಂಬಂಧವಿದೆ. ಅವರ ಕುಟುಂಬ ಸಂದಸ್ಯರನೇಕರು ಮುಂಬಯಿನಲ್ಲಿ ವಾಸವಾಗಿದ್ದಾರೆ. ಅವಾಗವಾಗ ಬೃಹನ್ಮುಂಬಯಿಗೆ ಆಗಮಿಸುತ್ತಿ ರುವ ಪೂಜಾರಿ ಇತ್ತೀಚೆಗೂ ಬೃಹನ್ಮುಂಬಯಿಗೆ ಆಗಮಿಸಿದ್ದರು. ಆದರೆ ಈ ಬಾರಿಯಂತೂ ಅವರಲ್ಲಿ ಏನೂ ಹೊಸತನ, ನಾಯಕತ್ವದ ಉತ್ಸಹ ಎದ್ದು ಕಾಣುತ್ತಿದ್ದಂತೆಯೇ ಅವರ ಮನದಾಳದ ಅಬುಭವಗಳನ್ನು ಕೇಳಿದಾಗ ಸಿಕ್ಕ ಉತ್ತರಗಳಲ್ಲು ಇಲ್ಲಿ ತಿಳಿಸಲಾಗಿದೆ.

ಪ್ರಶ್ನೆ: ತಾವು ರಾಜಕೀಯವಾಗಿ ಅಪಾರ ಅನುಭವ ಹೊಂದಿದವರು. ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ಏರಿಳಿತವನ್ನು ಕಂಡವರು. ಬಿಜೆಪಿ ಪಕ್ಷವನ್ನು ರಾಜ್ಯ ಮಟ್ಟದಲ್ಲಿ ಕಟ್ಟಿ ಬೆಳೆಸಿದವರಲ್ಲಿ ತಾವೂ ಮುಂಚೂಣಿಯಲ್ಲಿ ಇದ್ದವರು. ತಮ್ಮ ದೀರ್ಘವಾದ ರಾಜಕೀಯ ಜೀವನದ ಬಗ್ಗೆ ತಿಳಿಸುವಿರಾ?

ಉತ್ತರ: 1967ರಲ್ಲಿ ಬಿ.ಎಸ್‍ಸಿ ಪದವಿಧರನಾಗಿ ನಂತರ 1968ರಲ್ಲಿ ಕಲ್ಲಡ್ಕದಲ್ಲಿ ಡಾ| ಪ್ರಭಾಕರ್ ಭಟ್ ಮತ್ತು ನಾನು ಮತ್ತು ಇತರ ಯುವಕರೊಂದಿಗೆ ಆರ್‍ಎಸ್‍ಎಸ್ ಶಾಖೆ ಆರಂಭಿಸಿದೆವು. 1969ರಲ್ಲಿ ಜನಸಂಘಕ್ಕೆ ಸೇರ್ಪಡೆಗೊಂಡು ಬಂಟ್ವಾಳ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಆದೆ. ಅದೇ ವರ್ಷ ದೆಹಲಿಯಲ್ಲಿ ಬೆಲೆಯೇರಿಕೆ ವಿರುದ್ಧ ನಡೆದ ಚಳುವಳಿಯಲ್ಲಿ ಭಾಗವಹಿಸುವ ಒಂದು ಅವಕಾಶ ಸಿಕ್ಕಿತು. ನಂತರ 1971ರಲ್ಲಿ ಬಾಂಗ್ಲಾದೇಶಕ್ಕೆ ಮಾನ್ಯತೆ ನೀಡುವಂತೆ ದೆಹಲಿಯಲ್ಲಿ ಜನಸಂಘದ ವತಿಯಿಂದ ಅಟಲ್‍ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದೆ. ಅವಾಗ ದೆಹಲಿಯ ತಿಹಾರ್ ಜೈಲಿನಲ್ಲಿ ಒಂದು ದಿವಸದ ಕಾರಾಗೃಹ ವಾಸದ ಶಿಕ್ಷೆ ಅನುಭವಿಸಿದ್ದೆ. ಅಲ್ಲಿಂದ ನಿರಂತರ ನನ್ನ ರಾಜಕೀಯ ಕಾರ್ಯಚಟುವಟಿಕೆ ಗಳು ಪ್ರಾರಂಭಗೊಂಡಿತು.

ಪ್ರಶ್ನೆ: ತಾವು ವಿಧಾನ ಸಭೆಗೆ ಹಲವಾರು ಬಾರಿ ಸ್ಪರ್ಧಿಸಿದಿರಿ. ಆ ಬಗ್ಗೆ ಸ್ಥಾಲವಾದ ಮಾಹಿತಿ?

ಉತ್ತರ: 1972ರಲ್ಲಿ ಜನಸಂಘದ ಅಭ್ಯಥಿರ್üಯಾಗಿ ಬಂಟ್ವಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳ ಜಂಟಿ ಅಭ್ಯಥಿರ್ü ಬಿ.ವಿಕಕ್ಕಿಲ್ಲಾಯ ಇವರ ವಿರುದ್ಧ ಸ್ಪರ್ಧಿಸಿದೆ. 1978ರಲ್ಲಿ ನೂತನವಾಗಿ ರಚನೆ ಆದ ಜನತಾ ಪಕ್ಷದ ಅಭ್ಯಥಿರ್üಯಾಗಿ ಬಂಟ್ವಾಳದಿಂದ ಬಿ.ಎ ಮೊೈದಿನ್ ವಿರುದ್ಧ ಸ್ಪರ್ಧೆ. 1983ರಲ್ಲಿ ವಿಟ್ಲ ಕ್ಷೇತ್ರದಿಂದ ಸ್ಪರ್ಧಿಸಿ ಪ್ರಥಮವಾಗಿ ಶಾಸಕನಾಗಿ ಆಯ್ಕೆಯಾದೆ. ಪುನಃ 1985ರಲ್ಲಿ ಸ್ಪರ್ಧಿಸಿ ಸೋಲು ಕಂಡೆ. 1987ರಲ್ಲಿ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಿಜೆಪಿ ವತಿಯಿಂದ ವಿಜೇತ ಏಕೈಕ ಸ್ಪರ್ಧಿ ನಾನಾಗಿರುವೆ. 1989 ಮತ್ತು 1994ರಲ್ಲಿ ವಿಟ್ಲ ಕ್ಷೇತ್ರದಿಂದ ಸತತವಾಗಿ ಶಾಸಕನಾಗಿ ಆಯ್ಕೆ ಆಗಿರುವೆ. 1991ರಲ್ಲಿ ಉಡುಪಿ ಕ್ಷೇತ್ರದಿಂದ ಆಸ್ಕರ್ ಫೆರ್ನಾಂಡಿಸ್ ವಿರುದ್ಧ ಲೋಕಸಭೆಗೆ ಸ್ಪರ್ಧಿಸಿ (ರಾಜೀವ ಗಾಂಧಿ ಹತ್ಯೆ) ವೇಳೆ 1999ರಲ್ಲಿ ಸ್ಪರ್ಧಿಸಿ ಸೋಲು.

ಪ್ರಶ್ನೆ: 2004ರಲ್ಲಿ ತಮ್ಮನ್ನು ಪುನಃ ವಿಟ್ಲ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ಹೆಸರನ್ನು ಅಂತಿಮವಾಗಿ ಹೈಕಮಾಂಡ್ ನಿರ್ಧರಿಸಿದರೂ ಕೊನೆ ಗಳಿಗೆಯಲ್ಲಿ ತಪ್ಪಿತು ಅಂತರಲ್ಲಾ.. ಹೌದೆ ?

ಉತ್ತರ: ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ಮತ್ತು ಹೈಕಮಾಂಡ್ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಎಂದೂ ಬದ್ಧ. 2004ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ನಾನು ಅಭ್ಯಥಿರ್ü ಆಗಬೇಕೆಂಬ ಒತ್ತಡ ಇತ್ತು. ನಾನು ಒಲ್ಲದ ಕಾರಣಕ್ಕಾಗಿ ಮನೋರಮಾ ಮಧ್ವರಾಜ್‍ಗೆ ಅವಕಾಶ ದೊರೆಯಿತು. ಅಲ್ಲದೆ ಅದೇ ವರ್ಷ ವಿಧಾನ ಪರಿಷತ್ತಿನ ಸದಸ್ಯತನ ನೀಡುವ ಬಗ್ಗೆ ವರಿಷ್ಠರಿಂದ ಭರವಸೆ ದೊರಕಿತು. ಆದರೆ ಅದೂ ಕೊನೆ ಗಳಿಗೆ ಕೈತಪ್ಪಿತು.

ಪ್ರಶ್ನೆ: ಬಿಜೆಪಿಯನ್ನು ರಾಜ್ಯಮಟ್ಟದಲ್ಲಿ ಕಟ್ಟಿ ಬೆಳೆಸುವಲ್ಲಿ ತಾವು ಕೂಡ ಮಹತ್ತರ ಪಾತ್ರ ವಹಿಸಿರುವಿರಿ ಪಕ್ಷ ತಮಗೆ ಯಾವ ರೀತಿ ಪೆÇ್ರೀತ್ಸಹಿಸಿದೆ ?

ಉತ್ತರ: 1980ರಲ್ಲಿ ಬಿಜೆಪಿ ಸ್ಥಾಪನೆ ಆಯಿತು. ಜನಸಂಘದ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ ಗೊಂಡರು. ರಾಜ್ಯಮಟ್ಟದಲ್ಲಿ ನನ್ನನ್ನು ಗುರುತಿಸಿ ಪದಾಧಿಕಾರಿಯನ್ನಾಗಿ ಆಯ್ಕೆ ಮಾಡಿದರು. 1992ರಿಂದ 1995ರ ವರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷನಾಗಿ ಆಯ್ಕೆಯಾದೆ. 1994ರಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಮುಖ್ಯ ಸಚೇತನಾಗಿ ನೇಮಕಗೊಂಡು ಸೇವೆ ಸಲ್ಲಿಸಿದ್ದೇನೆ. ಅಂತೆಯೇ 7 ಬಾರಿ ವಿಧಾನ ಸಭೆಗೆ ಒಂದು ಬಾರಿ ಲೋಕಸಭೆಗೆ, ಒಂದು ಬಾರಿ ಜಿಲ್ಲಾ ಪರಿಷತ್ತಿಗೆ ಸ್ಪರ್ಧೆಸುವಲ್ಲಿ ಅವಕಾಶ ಸಿಕ್ಕಿದೆ. ಒಂದು ಬಾರಿ ಜಿಲ್ಲಾ ಪರಿಷತ್ತಿಗೆ 3 ಬಾರಿ ವಿಧಾನ ಸಭೆಗೆ ಆಯ್ಕೆ ಆಗಿದ್ದೇನೆ.

ಪ್ರಶ್ನೆ: ಬಿಜೆಪಿಯು ರಾಜ್ಯದಲ್ಲಿ ಶೂನ್ಯದಿಂದ ಆರಂಭ ಮಾಡಿ ಸರಕಾರ ರಚಿಸಿಕೊಂಡಿತು. ಇದರಲ್ಲಿ ತಮ್ಮ ಪಾತ್ರವೇನು?

ಉತ್ತರ: 1983ರಲ್ಲಿ ಮೊತ್ತ ಮೊದಲ ಬಾರಿ ವಿಧಾನ ಸಭೆಗೆ ಪ್ರವೇಶಿಸಿದೆ. 1989ರಲ್ಲಿ ಬಿಜೆಪಿಯಿಂದ ಕೇವಲ 4 ಜನರು ಶಾಸಕರಾಗಿ ಆಯ್ಕೆ ಆದೆವು. ನಮ್ಮ ನಾಯಕರಾದ ಬಿ.ಎಸ್ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ, ನಾರಾಯಣ ರಾವ್ ಮನಹಳ್ಳಿ ಹಾಗೂ ನಾನೂ ಒಟ್ಟಿಗೆ 4 ಜನರು ಶಾಸಕರಾಗಿ ಆಯ್ಕೆ ಆದವರು. 1992 ರಿಂದ 1995 ರ ವರೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷನಾಗಿದ್ದು ಜಿಲ್ಲಾದ್ಯಂತ ಹೋರಾಟ ಮಾಡಿ ಪಕ್ಷ ಕಟ್ಟಿ ಬೆಳೆಸಿದವರÀಲ್ಲಿ ನಾನೂ ಒಬ್ಬ. ಆದ್ದರಿಂದ 1994ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೇರಿ 7 ಜನರು ಬಿಜೆಪಿಯಿಂದ ಶಾಸಕರಾಗಿ ಚುನಾಯಿತರಾಗಿದ್ದೆವು. 2009 ಮತ್ತು 2014ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ನಳಿನ್‍ಕುಮಾರ್ ಕಟೀಲ್ ಸ್ಪರ್ಧಿಸುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರಿಂದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷನಾಗಿ ನೇಮಿಸಲ್ಪಟ್ಟಿದ್ದೆ. ನಳಿನ್‍ಕುಮಾರ್ ಕಟೀಲ್ ವಿಜೇತರಾಗುವಲ್ಲೂ ಪ್ರಮುಖ ಪಾತ್ರ ವಹಿಸಿರುವೆ. ಅದಲ್ಲದೆ ಕೃಷ್ಣ ಜೆ.ಪಾಲೆಮಾರ್, ಬಿ.ನಾಗರಾಜ್ ಶೆಟ್ಟಿ, ರಾಜೇಶ್ ನಾಯ್ಕ್ ಉಳೆಪಾಡಿಗುತ್ತು ಹಾಗೂ ಇತರ ಬಿಜೆಪಿ ಅಭ್ಯಥಿರ್üಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಿರುವೆನು. ದಕ್ಷಿಣ ಕನ್ನಡ ಜಿಲ್ಲೆಯ ಕೆ.ರಾಮ ಭಟ್ಟ್, ಸಿ.ಜೆ ಕಾಮತ್, ಕಾಡಬೆಟ್ಟು ನಾರಾಯಣ ಶೆಟ್ಟಿ, ಕರಂಬಳಿ ಸಂಜೀವ ಶೆಟ್ಟಿ, ಡಾ| ವಿ.ಎಸ್ ಆಚಾರ್ಯ ಮತ್ತು ಹಲವಾರು ಮಂದಿ ಹಿರಿಯರ ಜೊತೆಗೆ ನಾನೂ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದೆ.

ಪ್ರಶ್ನೆ: ತಮಗೆ ವಿಧಾನ ಸಭೆ ಅಥವಾ ಲೋಕ ಸಭೆಗೆ ಸ್ಪರ್ಧಿಸಲು ಹಣಕಾಸಿನ ನೆರವು ಎಲ್ಲಿಂದ ಬರುತ್ತಿತ್ತು?

ಉತ್ತರ: ಈಗ ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿರುವುದು ನಮಗೆಲ್ಲಾ ಗೊತ್ತು ಆದರೆ ನಾನು ಸಾಮಾನ್ಯ ರೈತ ಕುಟುಂಬದಿಂದ ಬಂದವನು. ಆದ್ದರಿಂದ ನನಗೆ ಖರ್ಚು ಮಾಡಲು ಸಾಧ್ಯವಾಗಿಲ್ಲ. ಆದರೆ ಜನಸಾಮಾನ್ಯರು ಹಾಗೂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳೇ ಹಣ ಖರ್ಚು ಮಾಡಿ, ಕೆಲಸ ಮಾಡಿ ನನ್ನನ್ನು ಶಾಸಕನಾಗಿ ಮಾಡಿರುವರು ಹಾಗೂ ಇಷ್ಟು ಎತ್ತರಕ್ಕೆ ಬೆಳೆಸಿರುವರು. ಅವರೆಲ್ಲರಿಗೂ ನಾನು ಸದಾ ಕೃತಜ್ಞನಾಗಿದ್ದೇನೆ.

ಪ್ರಶ್ನೆ: ತಾವು ತಮ್ಮ 26ನೇ ವಯಸ್ಸಿನಲ್ಲೇ, ರಾಜಕೀಯಕ್ಕೆ ಪಾದಾರ್ಪಣೆ ಮಾಡಿರುವಿರಿ. ತುರ್ತು ಪರಿಸ್ಥಿತಿಯ ಬಗ್ಗೆ ತಮ್ಮ ಅನುಭವ?

ಉತ್ತರ: ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಅದರ ವಿರುದ್ಧ ಹೋರಾಡಿ 5 ತಿಂಗಳು ಜೈಲುವಾಸ ಅನುಭವಿಸ ಬೇಕಾಯಿತು. (ಮಂಗಳೂರು ಸಬ್ ಜೈಲಿನಲ್ಲಿ), 1976ರಲ್ಲಿ ಬಳ್ಳಾರಿಯಲ್ಲಿ ಮೀಸಾ ಕಾನೂನುನಡಿ 5 ತಿಂಗಳು ಜೈಲುವಾಸ ಅನುಭವಿಸಿದೆ. 1977ರಲ್ಲಿ ಇಂದಿರಾ ಗಾಂಧಿ ಅವರು ಚುನಾವಣೆ ಘೋಷಿಸಿದಾಗ ಎಲ್ಲಾ ವಿರೋಧ ಪಕ್ಷಗಳು ಸೇರಿ ಜನತಾ ಪಕ್ಷದ ಸ್ಥಾಪನೆ ಆಯಿತು. ಆಗ ರಾಜ್ಯಾಧ್ಯಕ್ಷರಾಗಿ ವೀರೇಂದ್ರ ಪಾಟೀಲ್ ನೇಮಕ ಆದರು. 4 ಜನ ಉಪಾಧ್ಯಕ್ಷರುಗಳಲ್ಲಿ ರಾಮಕೃಷ್ಣ ಹೆಗ್ಗಡೆ, ಹೆಚ್.ಡಿ ದೇವೇಗೌಡ ಹಾಗೂ ನಾನೂ ಹಾಗೂ ಇನ್ನೊಬ್ಬರು ಹೆಸರು ನೆನಪಿಲ್ಲ ನೇಮಕವಾಗಿದ್ದೆವು. ಇದರಿಂದ ಕೂಡಲೇ, ಜೈಲಿನಿಂದ ಬಿಡುಗಡೆ ಗೊಳಿಸಲ್ಪಟ್ಟೆವು.

ಪ್ರಶ್ನೆ: ತಾವು ಜಿಲ್ಲೆಯಲ್ಲಿ ಹಿರಿಯ ರಾಜಕಾರಣಿ ಹಾಗೂ ಬಿಜೆಪಿಯಲ್ಲಿ 48 ವರ್ಷಗಳ ಅನುಭವೀ ರಾಜಕಾರಣಿ ಆಗಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷವು ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೆ ತಾವು ಸ್ವೀಕರಿಸುವಿರಾ?

ಉತ್ತರ: ಸಂಘ ಪರಿವಾರದಿಂದ ಹಿಡಿದು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ನನ್ನದೂ ಅಪಾರ ಶ್ರಮವಿದೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಭಾಜಪ ಸರಕಾರ ರಚನೆ ಆದಾಗ ಅದರ ಹಿಂದೆ ಇದ್ದ ನಾಯಕರ ಶ್ರಮ ಅನನ್ಯ. ಪಕ್ಷದಲ್ಲಿ ಏರಿಳಿತವನ್ನು ಕಂಡಿದ್ದೇನೆ. ಚುನಾವಣೆ ಹತ್ತಿರ ಬರುತ್ತಿದೆ. ಸದ್ಯ ಪಕ್ಷ ಮತ್ತು ಹೈಕಮಾಂಡ್ ನೀಡುವ ಯಾವುದೇ ಜವಾಬ್ದಾರಿ ಸ್ವೀಕರಿಸಲು ನಾನು ಸದಾ ಸಿದ್ಧ. ಪಕ್ಷದ ಮತ್ತು ವರಿಷ್ಠರ ನಿರ್ಧಾರಕ್ಕೆ ಯಾವಾಗಲೂ ಬದ್ಧನಾಗಿರುತ್ತೇನೆ. ಕೇಂದ್ರದಲ್ಲಿ ಮಾನ್ಯ ಮೋದಿ ಅವರ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರ ಮತ್ತು ಅಂತ:ರಾಷ್ಟ್ರ ಮಟ್ಟದಲ್ಲಿ ದೇಶದ ಗೌರವ, ಪ್ರತಿಷ್ಠೆ ಹೆಚ್ಚಾಗಿದೆ. ಅಭಿವೃದ್ಧಿ ಕೆಲಸಗಳು ಸಾಗುತ್ತಿದೆ. ಇದರಿಂದ ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದೆ. ವಿರೋಧ ಪಕ್ಷಗಳು ಜನರ ವಿಶ್ವಾಸ ಕಳಕೊಳ್ಳುತ್ತಿವೆ. ಇದರಿಂದ ಕಂಗೆಟ್ಟ ಕಾಂಗ್ರೆಸ್ಸು, ಕಮ್ಯೂನಿಸ್ಟ್ ಪಕ್ಷ, ಬುದ್ಧಿಜಾಲಗಳೆಂದೂ ಕರೆಸಿಕೊಳ್ಳುತ್ತಿರುವ ವ್ಯಕ್ತಿ ಬಿಜೆಪಿ ಮತ್ತು ಮೋದಿ ಅವರ ವಿರುದ್ಧ ಅಪಪ್ರಚಾರ ದೇಶದಲ್ಲಿ ಅರಾಜಕತೆ ಉಂಟು ಮಾಡಲು ಪ್ರಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಅಗತ್ಯ ಇದೆ. ಇಂತಹ ಸಂದರ್ಭದಲ್ಲಿ ಸಂಘ ಪರಿವಾರ, ಕಾರ್ಯಕರ್ತರು, ಪಕ್ಷದ ವರಿಷ್ಠರು, ಹೈಕಮಾಂಡ್ ತೀರ್ಮಾನಿಸಿದರೆ ನಾನು ಅಭ್ಯಥಿರ್ü ಆಗಲು ಸಿದ್ಧ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮತದಾರ ಬಂಧುಗಳಿಗೆ ನನ್ನ ಬಗ್ಗೆ ಇರುವ ಪ್ರೀತಿ ವಿಶ್ವಾಸದ ಆಧಾರದಲ್ಲಿ ನಾನು ಚುನಾವಣೆ ಗೆಲ್ಲುವ ವಿಶ್ವಾಸ ಕೂಡಾ ನನಗಿದೆ.

ಪ್ರಶ್ನೆ: ರಾಜ್ಯ ಅಧ್ಯಕ್ಷ ಬಿ.ಎಸ್ ಯಡ್ಡಿಯೂರಪ್ಪ ಮತ್ತು ತಮ್ಮ ಸಂಬಂಧ ಹೇಗಿದೆ?

ಉತ್ತರ: ನಾನು ಮತ್ತು ಯಡ್ಡಿಯೂರಪ್ಪರು ಸಮಕಾಲೀನರು. ಜೊತೆಜೊತೆಗೆ ಪಕ್ಷ ಕಟ್ಟಿ ಬೆಳೆಸಿದವರು. ಅವರ ಬಗ್ಗೆ ಅಪಾರ ಗೌರವ ನನಗಿದೆ. ನಮ್ಮ ನಾಯಕರುಗಳಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್‍ಕೃಷ್ಣ ಅಡ್ವಾಣಿ, ಅನಂತಕುಮಾರ್, ಡಿ.ಎಸ್ ಸದಾನಂದ ಗೌಡ, ಕೆ.ಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್, ನಳಿನ್‍ಕುಮಾರ್ ಕಟೀಲು, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಇವರೊಂದಿಗೆ ಅನ್ಯೋನ್ಯತೆ ಕಾಯ್ದು ಕೊಂಡಿದ್ದೇನೆ. ಯಾರಿಗೂ ಇದುವರೆಗೂ ಮನ ನೋಯಿಸುವ ಕೆಲಸ ಮಾಡಲಿಲ್ಲ. ನಮ್ಮ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಅಮಿತ್ ಶಾಹರವರ ನೇತೃತ್ವದಲ್ಲಿ ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ಹೊಸ ಹುಮ್ಮಸ್ಸು ತುಂಬಿ ಜನಸೇವೆ ಮಾಡುತ್ತಿರುವುದು ಅತೀವ ಸಂತಸ ತಂದಿದೆ.

ಪ್ರಶ್ನೆ: ನಿಮ್ಮದೇ ಸಮುದಾಯದ ಇನ್ನೋರ್ವ ಜನನಾಯಕ ಜನಾರ್ದನ ಪೂಜಾರಿ ಬಗ್ಗೆ ನಿಮ್ಮ ಅಭಿಪ್ರಾಯ?

ಉತ್ತರ: ಸಾಲ ಮೇಳ ಮತ್ತು ಬಡವರ ಬಂಧು ಪ್ರಸಿದ್ಧ ಬಿ.ಜನಾರ್ದನ ಪೂಜಾರಿ ಅವರೋರ್ವ ಕಾಂಗ್ರೇಸ್ ಪಕ್ಷದ ಶ್ರೇಷ್ಠ ರಾಜಕಾರಣಿ. ಇಂದಿರಾ ಗಾಂಧಿ ಕಾಲದಿಂದಲೂ ಮುಂಚೂಣಿಯ ನಾಯಕರು ಹಾಗೂ ದೇಶಕಂಡ ಸ್ವಚ್ಛ ರಾಜಕಾರಣಿ. ಮಂಗಳೂರು ದಸರಾದ ರೂವಾರಿ. ಸರ್ವ ಧರ್ಮ ಮತ್ತು ಹಿಂದೂ ಧರ್ಮದ ಬಗ್ಗೆ ಅಭಿಮಾನ ಇರುವವರು. ನಮ್ಮ ನಡುವೆ ಪಕ್ಷಬೇಧ ಹೊರತು ವ್ಯಕ್ತಿ, ವೈಯಕ್ತಿಕವಾಗಿ ಅವರ ಬಗ್ಗೆ ನನಗೆ ವಿಶೇಷ ಗೌರವವಿದೆ. ದಕ್ಷಿಣ ಕನ್ನಡದ ರಾಜಕೀಯದಲ್ಲಿ ಕಾಂಗ್ರೆಸಲ್ಲಿ ಜನಾರ್ಧನ ಪೂಜಾರಿ, ಭಾಜಪದಲ್ಲಿ ರುಕ್ಮಯ ಪೂಜಾರಿ ಅವರ ನಡುವೆ ಪರಸ್ಪರ ಅಪಾರ ಪ್ರೀತಿ ಮತ್ತು ಗೌರವವನ್ನು ಉಳಿಸಿಕೊಂಡು ಬಂದಿದ್ದೇವೆ.

ಪ್ರಶ್ನೆ: ಜನಾರ್ದನ ಪೂಜಾರಿ ಅವರಿಗೆ ಆದ ಅನ್ಯಾಯ, ಅವಮಾನದ ಬಗ್ಗೆ ತಮ್ಮ ಅನಿಸಿಕೆ ಏನು?

ಉತ್ತರ: ಭಾರತ ದೇಶ ಕಂಡ ಓರ್ವ ಸಚ್ಚಾರಿತ್ರ ್ಯ ಹೊಂದಿರುವ ವ್ಯಕ್ತಿಯನ್ನು ಈ ತರದ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವುದು ಯಾರೇ ಆದರೂ ಖಂಡನೀಯ ಈ ಬಗ್ಗೆ ನನಗೆ ತುಂಬಾ ನೋವಾಗಿದೆ. ಓರ್ವ ಹಿರಿಯ ವ್ಯಕ್ತಿಯಾಗಿ ಕಾಂಗ್ರೆಸ್ಸನ್ನು ಕಟ್ಟಿ ಬೆಳೆಸಿದವರು. ನಿಷ್ಕಂಳಕ, ಭ್ರಷ್ಟಾಚಾರ ರಹಿತ, ಓರ್ವ ಅಸಾಧಾರಣ ವ್ಯಕ್ತಿತ್ವ ಅವರದ್ದು. ವೃದ್ಧಾಪ್ಯದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅವರನ್ನು ನಡೆಸಿಕೊಂಡ ರೀತಿ ನೋವು ತಂದಿದೆ. ನಳಿನ್‍ಕುಮಾರ್ ಕಟೀಲ್ ಇಂದಿಗೂ ಜನಾರ್ದನ ಪೂಜಾರಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದು ಗೌರವ ಸೂಚಿಸುತ್ತಿರುವುದು ಅಭಿಮಾನ, ಸಂಸ್ಕಾರ ತೋರುತ್ತದೆ. ಆದರೆ ಪೂಜಾರಿಯವರ ಕೃಪೆಯಿಂದಲೇ ಬೆಳೆದವರು ಅವರನ್ನು ನಾನಾ ರೀತಿ ನಿಂದಿಸಿರುವುದು ಖಂಡನೀಯ.

ಪ್ರಶ್ನೆ: ಸ್ವಸಮುದಾಯ ಬಿಲ್ಲವ ಸಮಾಜದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ: ಅವಿಭಜಿತ ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆ ಬಿಲ್ಲವ ಸಮಾಜ ಹೊಂದಿ ರಾಜಕೀಯವಾಗಿ ನಿರ್ಣಾಯಕ ಸ್ಥಾನದಲ್ಲಿರುವ ಸಮಾಜ ಮತ್ತು ಪ್ರಾಮಾಣಿಕ, ಶ್ರಮಿಕ ಸಮಾಜ. ನಮ್ಮ ಸಮಾಜದಲ್ಲಿ ಅದೆಷ್ಟೋ ಜನನಾಯಕರು ಸಮಾಜ ಸಂಘಟಕರಿದ್ದಾರೆ. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅವರು ಪಕ್ಷಾತೀತವಾಗಿ ಗುರುತಿಸಿಕೊಂಡ ಓರ್ವ ಸಮರ್ಥ ಜನನಾಯಕ. ಅವರ ಬಗ್ಗೆ ಅಪಾರ ಗೌರವವಿದೆ. ಅವರಿಂದಾಗಿ ಮುಂಬಯಿಯಲ್ಲಿರುವ ಬಿಲ್ಲವ ಸಮಾಜವು ಸಾಮಾಜಿಕವಾಗಿ ಸಂಘಟನೆ ಹೊಂದಿ, ಬಿಲ್ಲವರ ಅಸೋಸಿಯೇಶನ್ ಸಂಚಾಲಕತ್ವದ ಭಾರತ್ ಬ್ಯಾಂಕ್ 101 ಶಾಖೆಗಳನ್ನು ಹೊಂದಿ ಕಾರ್ಯಪ್ರವೃತ್ತ ಆಗಿರುವುದು ಸಮುದಾಯದ ಹಿರಿಮೆ. ನಮ್ಮ ಜಿಲ್ಲೆಯಲ್ಲಿ ಮಾನ್ಯರಾದ ದಿ| ದಾಮೋದರ ಸುವರ್ಣರು ಸಮಾಜ ಸಂಘಟಕರನ್ನು ಕಟ್ಟಿ ಬೆಳೆಸುವಲ್ಲಿ ಹಾಗೂ ಸಮಾಜಕ್ಕೆ ಗೌರವ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈಗ ಅವರ ಸುಪುತ್ರ ನವೀನ್‍ಚಂದ್ರ ಸುವರ್ಣ ತಂದೆಯ ಅವರ ಕಾರ್ಯಭಾರ ಮುನ್ನಡೆಸುತ್ತ್ತಿರುವುದು ಹೆಮ್ಮೆಯ ಸಂಗತಿ.

ಇವಿಷ್ಟು, ರಾಜಕೀಯವಾಗಿ ಯಶಸ್ಸಿನ ಮೆಟ್ಟಲೇರಲು ಶುದ್ಧಹಸ್ತದ ವ್ಯಕ್ತಿಗಳ ಅಗತ್ಯವಿರುವ ಈ ಕಾಲ ಘಟ್ಟದಲ್ಲಿ ಓರ್ವ ಶುದ್ಧ ಹಸ್ತದ, ಭ್ರಷ್ಟಾಚಾರ ರಹಿತ ನಿಷ್ಕಳಂಕ, ಅಸಾಧಾರಣ, ಸೌಮ್ಯ ವ್ಯಕ್ತಿ ಎ.ರುಕ್ಮಯ ಪೂಜಾರಿ ಅವರ ಮನದಾಳ ಮಾತುಗಳು. ಅವರ ರಾಜಕೀಯ ಜೀವನ ಉಜ್ವಲವಾಗಲಿ, ಅವರಂತಹ ಸ್ವಚ್ಛ ರಾಜಕಾರಣಿ ಮುಂದೆಯೂ ಹುಟ್ಟಿ ಬರಲಿ ಎಂದು ಶುಭ ಹಾರೈಕೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here