Thursday 28th, March 2024
canara news

ಕನ್ನಡ ಬಳಗ ಗೋಕುಲ್‍ಧಾಮ್ ಪರಿಸರ ಸಂಭ್ರಮಿಸಿದ ಮೂವತ್ತೊಂದನೇ ವಾರ್ಷಿಕೋತ್ಸವ

Published On : 11 Feb 2018   |  Reported By : Rons Bantwal


ಸೇವೆಯಲ್ಲಿ ಪಾರದರ್ಶಕತೆ ಇರಲಿ: ರತ್ನಾಕರ ಶೆಟ್ಟಿ ಮುಂಡ್ಕೂರು
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ಫೆ.10: ಗೋರೆಗಾಂವ್ ಪೂರ್ವದ ಆರ್‍ಎಂಎಂಎಸ್ ಸೆಕ್ಟರ್‍ನ ಗಣೇಶ ಮೈದಾನದಲ್ಲಿ ಸ್ಥಾನೀಯ ಕನ್ನಡ ಬಳಗ ಗೋಕುಲ್‍ಧಾಮ್ ಪರಿಸರ ತನ್ನ 31ನೇ ವಾರ್ಷಿಕೋತ್ಸವನ್ನು ವಿಜೃಂಭನೆಯಿಂದ ಸಂಭ್ರಮಿಸಿದ್ದು ಮಾತೃಭೂಮಿ ಕೋ. ಅಪರೇಟಿವ್ ಸೊಸೈಟಿ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿ ಶುಭಾರೈಸಿದರು.

ಬಳಗದ ಅಧ್ಯಕ್ಷ ಗುಂಡಿಬೈಲ್ ಪ್ರಭಾಕರ್ ಪೂಜಾರಿ ಅಧ್ಯಕ್ಷತೆಯಲ್ಲಿ ನೆರವೇರಿದ ಸಮಾರಂಭದಲ್ಲಿ ಮುಖ್ಯ ಅತಿಥಿsಯಾಗಿ ಸರ್ವೋಚ್ಛ ನ್ಯಾಯಲಯದ ವಕೀಲ ನ್ಯಾ| ಶಶಿಧರ್ ಯು.ಕಾಪು, ಗೌರವ ಅತಿಥಿsಗಳಾಗಿ ರತ್ನಾ ಇಂಟರ್‍ನ್ಯಾಷನ ಲ್ ಸಮೂಹದ ನಿರ್ದೇಶಕ ಉಮೇಶ್ ಶೆಟ್ಟಿ, ಸಮಾಜ ಸೇವಕ ಸಚ್ಚೀದ್ರ ಕೆ.ಕೋಟ್ಯಾನ್ ಉಪಸ್ಥಿತರಿದ್ದು ಬಳಗದ ಮಾಜಿ ಅಧ್ಯಕ್ಷ ಅಂಗರ ಅಪು ಬಂಗೇರ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ನಾವು, ನಮ್ಮತನ ಇದ್ದಾಗ ಇಂತಹ ಸಂಸ್ಥೆಗಳ ವಾರ್ಷಿಕ ಉತ್ಸವಗಳು ಸಾಧ್ಯವಾಗುವುದು. ಆದುದರಿಂದ ಈ ಪರಿಸರದಲ್ಲಿನ ಎಲ್ಲಾ ತುಳು ಕನ್ನಡಿಗರು ಸಕ್ರೀಯರಾಗಿ ಈ ಸಂಸ್ಥೆಯನ್ನು ಮುನ್ನಡೆಸಬೇಕು. ಸೇವೆಯಲ್ಲಿ ಪಾರದರ್ಶಕತೆ ಇದ್ದಲ್ಲಿ ಸಂಸ್ಥೆ ತನ್ನಿಂತಾನೇ ಹೆಮ್ಮರವಾಗಿ ಬೆಳೆಯುವುದು. ಆ ಮೂಲಕ ಸ್ಥಳಿಯ ಜನತೆಗೆ ಸೇವಾಫಲ ಲಭಿಸುವುದು ಎಂದು ರತ್ನಾಕರ್ ಶೆಟ್ಟಿ ತಿಳಿಸಿದರು.

ವೇದಿಕೆಯಲ್ಲಿ ಗೌರವಾಧ್ಯಕ್ಷರುಗಳಾದ ವೈ.ಬಿ ಪೂಜಾರಿ, ಆರ್.ಎಸ್ ಕಾಂಚನ್, ಆರ್.ಎಸ್ ಶೆಟ್ಟಿ, ಉಪಾಧ್ಯಕ್ಷರುಗಳಾದ ಪ್ರಕಾಶ್ ಕೋಟ್ಯಾನ್, ಶ್ರೀಪತಿ ರಾವ್, ದಿವಾಕರ್ ದೇವಾಡಿಗ, ಗೌರವ ಕೋಶಾಧಿಕಾರಿ ಎಸ್.ಎನ್ ದೇವಾಡಿಗ ಉಪಸ್ಥಿತರಿದ್ದರು.

ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಸಂಜೆ ವಿದ್ವಾನ್ ಶಿವಾನಂದ ಭಟ್ ವಿೂರಾರೋಡ್ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿಸಿ ಮಂಗಳಾರತಿ, ಪ್ರಸಾದ ವಿತರಿಸಿ ಹರಸಿದರು. ರೋಹಿತ್ ದೇವಾಡಿಗ ಮತ್ತು ಅಶ್ವಿತಾ ರೋಹಿತ್ ದಂಪತಿ ಪೂಜಾಧಿಗಳ ಸಹಭಾಗಿತ್ವ ವಹಿಸಿದ್ದರು.

ಬಾಲ ಕಲಾವಿದೆಯರು ಪ್ರಾರ್ಥನೆಯನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಟಿ.ಎ ಪೂಜಾರಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಸ್ಥೂಲ ಮಾಹಿತ್ಯನ್ನಿತ್ತರು. ಉಪ ಕಾರ್ಯದರ್ಶಿ ಶಶಿಧರ್ ಬಂಗೇರ, ಸ್ವಾಗತಿಸಿದರು. ಜತೆ ಕೋಶಾಧಿಕಾರಿ ಮಧುಕರ್ ಕೋಟ್ಯಾನ್ ಮತ್ತಿತರರು ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿüಗಳನ್ನು ಹಾಗೂ ಸನ್ಮಾನಿತರನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಉಪ ಕಾರ್ಯದರ್ಶಿ ಸುಶಿನ್ ಶೆಟ್ಟಿ ವಂದನಾರ್ಪಣೆಗೈದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಘದ ಸದಸ್ಯರ ಮಕ್ಕಳು ನೃತ್ಯ ವೈಭವ, ದಶಾವತಾರ ನೃತ್ಯ, ಪದ್ಮಾವತಿ, ಬಾಹುಬಲಿ ಸಿನೆಮಾ ಹಾಡುಗಳ ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ಮನೋರಜನಾ ಕಾರ್ಯಕ್ರಮವಾಗಿ ರಮಾನಂದ್ ನಾಯಕ್ ರಚಿಸಿ, ರಂಜಿತ್ ಸಾಂತೂರು ನಿರ್ದೇಶಿಸಿದ `ಪತ್ತಾದ್ ಪದ್ರಾಡ್' ತುಳು ಹಾಸ್ಯಮಯ ನಾಟಕವನ್ನು ರೋಹನ್ ಕುಮಾರ್ ಸಾರಥ್ಯದಲ್ಲಿ ಮುದರಂಗಡಿಯ ಶ್ರೀ ಗುರು ಕಲಾ ತಂಡವು ಪ್ರದರ್ಶಿಸಿತು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here