Wednesday 24th, April 2024
canara news

ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದಲ್ಲಿ ನಡೆಸಲ್ಪಟ್ಟ ವಿಚಾರ ಗೋಷ್ಠಿಗಳು

Published On : 11 Feb 2018   |  Reported By : Rons Bantwal


ಮುಂಬಯಿಗರ ಕನ್ನಡಪ್ರೇಮ ನಿಷ್ಕಳಂಕವಾದುದು: ಡಾ| ಜಯಂತ ಕಾಯ್ಕಿಣಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.10: ಮನುಷ್ಯನ ವಿಕಾಸದ ಆಟವು ಹಾವು-ಏಣಿಯಂತೆ. ಹಾವು ಎಂದರೆ ಜಾತೀಯತೆ, ಮತಾಂತರ ಪಿಡುಗು, ಮೂಢನಂಬಿಕೆ, ಹೆಣ್ಣಿನ ಶೋಷಣೆ ಇತ್ಯಾದಿ. ಏಣಿ ಅಂದರೆ ದಾಸರು ವಚನಕಾರರು ಬೇಂದ್ರೆ ಕುವೆಂಪು ಇಂತಹ ಚಿಂತಕರು ಸಾಧಕರು ಹಾಗಾಗಿ ನಾವೂ ಏಣಿಯನ್ನು ಏರಲಿ ಇಂತಹ ಸಾಹಿತ್ಯಾಸಕ್ತಿ ಇರಿಸಬೇಕು. ಮುಂಬಯಿ ಶಹರ ನಮಗೆ ಅನಾಮಿಕತೆ ನೀಡುತ್ತದೆ. ಅನಾಮಿಕತೆಯಿಂದ ಸಾಹಿತ್ಯ ಹುಟ್ಟುತ್ತದೆ. ಮುಂಬಯಿ ಎನ್ನುವುದು ನನಗೆ ಪರಮ ಮೌಲ್ಯ. ಇಲ್ಲಿ ಬಂದಾಗ ತಲೆಯಲ್ಲಿರುವ ಕಸವನ್ನು ಕಲೆ ಸ್ವಚ್ಛ ಮಾಡುತ್ತದೆ.ಮುಂಬಯಿಯವರು ಬಹಳ ದುಡ್ಡು ಮಾಡಿದ್ದಾರೆ ಎಂಬ ಕಲ್ಪನೆ ನಾಡಿನ ಜನತೆಗಿದೆ. ಆದರೆ ವಾಸ್ತವಸ್ಥಿತಿ ಹಾಗಿಲ್ಲ. ಇಲ್ಲಿಯ ಜನತೆ ಶ್ರಮಜೀವಿಗಳಾಗಿದ್ದು ಭಾಷಾಭಿಮಾನ, ಸಾಮರಸ್ಯದಿಂದ ಶ್ರೀಮಂತರಾಗಿ ದ್ದಾರೆ. ಆದುದರಿಂದಲೇ ಮುಂಬಯಿಗೆ ತನ್ನದೇ ಆದ ಸ್ವಂತಿಕೆಯ ಅಸ್ತಿತ್ವವಿದೆ. ಅಂತಹ ಅಸ್ತಿತ್ವ ಬೆಂಗಳೂರುನಲ್ಲಿ ಸದ್ಯ ಲಕ್ಷಣ ಕಾಣುವುದಿಲ್ಲ. ಮುಂಬಯಿ ಮಹಾನಗರ ಬೇಧಭಾವವಿಲ್ಲದೆ ಪೆÇೀಷಿಸುವ ಮಹಾನಗರ ಎಂದು ನಾಡಿನ ಪ್ರಸಿದ್ಧ ಸಾಹಿತಿ ಡಾ| ಜಯಂತ ಕಾಯ್ಕಿಣಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಮುಂಬಯಿ ಹಾಗೂ ಉಪನಗರಗಳಲ್ಲಿನ ವಿವಿಧ ಕನ್ನಡ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಅಂಧೇರಿ ಪಶ್ಚಿಮದಲ್ಲಿನ ಮೊಗವೀರ ಭವನದಲ್ಲಿ ಆಯೋಜಿಸಿರುವ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದಲ್ಲಿ ನಡೆಸಲ್ಪಟ್ಟ `ಮುಂಬಯಿ ಕನ್ನಡಿಗರು ಸೃಜನಶೀಲ ನೆಲೆಗಳು' ವಿಚಾರಿತ ಸಮಾವೇಶದ ಪ್ರಥಮ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಡಾ| ಕಾಯ್ಕಿಣಿ ಮಾತನಾಡಿದರು.


ಸಮ್ಮೇಳನಧ್ಯಕ್ಷ ಡಾ| ಮನು ಬಳಿಗಾರ್ ಉಪಸ್ಥಿತಿಯಲ್ಲಿ ನಡೆಸಲ್ಪಟ್ಟ ಗೋಷ್ಠಿಯಲ್ಲಿ `ಪ್ರದರ್ಶಕ ಕಲೆಗಳು' ವಿಷಯದಲ್ಲಿ ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಚಲನಚಿತ್ರ-ರಂಗಭೂಮಿ ವಿಷಯವಾಗಿ ಡಾ| ಮಮತಾ ರಾವ್, `ಸಾಹಿತ್ಯ' ವಿಷಯದಲ್ಲಿ ಡಾ| ಗಣೇಶ ಎನ್.ಉಪಾಧ್ಯ ಬಹಳ ನಿಖರವಾಗಿ ಪ್ರಕರವಾಗಿ ಪ್ರಬಂಧಗಳನ್ನು ಮಂಡಿಸಿದರು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಮತ್ತು ಹಿರಿಯ ಸಾಹಿತಿ ಮಿತ್ರಾ ವೆಂಕಟ್ರಾಜ್ ಮುಂಬಯಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದರು. ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಹೆಚ್.ಕೆ ಸುಧಾಕರ ಅರಾಟೆ ಸ್ವಾಗತಿಸಿದರು. ರಂಗ ಕಲಾವಿದೆ ಅಹಲ್ಯಾ ಬಲ್ಲಾಳ್ ಗೋಷ್ಠಿ ನಿರ್ವಹಿಸಿದರು. ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ಯರ್ ವಂದಿಸಿದರು.

ಪ್ರಸಿದ್ಧ ಲೇಖಕ, ಮಧ್ಯಪ್ರದೇಶದ ಅಮರಕಂಟಕ ಅಲ್ಲಿನ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿವಿ ಕುಲಪತಿ ಪೆÇ್ರ| ತೇಜಸ್ವಿ ಕಟ್ಟೀಮನಿ ಅಧ್ಯಕ್ಷತೆಯಲ್ಲಿ ದ್ವಿತೀಯ ಗೋಷ್ಠಿಯು`ಹೊರನಾಡ ಕನ್ನಡಿಗರ ಸವಾಲುಗಳು' ವಿಚಾರ ವಾಗಿ ನಡೆಸಲ್ಪಟ್ಟಿದ್ದು ಶೈಕ್ಷಣಿಕ-ವಿಷಯದಲ್ಲಿ ಪೆÇ್ರ| ಕೆ.ಬಿ ತಾರಕೇಶ್ವರ, ಔದ್ಯೋಗಿಕ-ವಿಷಯದಲ್ಲಿ ಮೊಗವೀರ ಬ್ಯಾಂಕ್ ಲಿಮಿಟೆಡ್‍ನ ಕಾರ್ಯಾಧ್ಯಕ್ಷ ಸದಾನಂದ ಎಸ್.ಕೋಟ್ಯಾನ್, ಸಾಂಸ್ಕೃತಿಕ-ವಿಷಯದಲ್ಲಿ ಸಾಹಿತಿ ಡಾ| ಚಂದ್ರಕಾಂತ ಪೆÇೀಕಳೆ ಪ್ರಬಂಧ ಮಂಡಿಸಿದರು. ಡಾ| ಗುರುಲಿಂಗಪ್ಪ ದಭಾಲೆ ಸೊಲ್ಲಾಪುರ, ಜಿ.ವಿ ವಿಠ್ಠಲ್ ದೆಹಲಿ ಮತ್ತು ಕಾಂತಿ ಶೆಟ್ಟಿ ಡೊಂಬಿವಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಸಾಹಿತ್ಯ ¨ಳಗ ಮುಂಬಯಿ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಸ್ವಾಗತಿಸಿದರು. ಮುಂಬಯಿ ವಿವಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಗೋಷ್ಠಿ ನಿರ್ವಹಿಸಿದರು. ಕುಲಾಲ ಸಂಘ ಮುಂಬಯಿ ಅಧ್ಯಕ್ಷ ದೇವದಾಸ್ ಎಲ್.ಕುಲಾಲ್ ಧನ್ಯವದಿಸಿದರು.

ನಮ್ಮಲ್ಲಿ ಇಂದು ಕೋಟಿ ರೂಪಾಯಿ ಖರ್ಚು ಮಾಡಿ ಎಂಬಿಬಿಎಸ್, ಇಂಜಿನಿಯರ್ಸ್ ಇತ್ಯಾದಿ ಸೇರುತ್ತಾರೆ. ಆದರೆ ಉದ್ಯಮದತ್ತ ಇಳಿಯಲು ನಿರಾಕರಿಸುತ್ತಾರೆ. ಶಿಕ್ಷಣಕ್ಕೆ ವ್ಯಯಿಸಿದ ಕೋಟಿ ರೂಪಾಯಿ ಹಣವನ್ನು ಸ್ವಂತ ಉದ್ಯಮಕ್ಕೆ ಹಾಕುವ ಧೈರ್ಯ ವಹಿಸಿದ್ದರೆ ಅವರಿಂದು ಯಶಸ್ವಿ ಉದ್ಯಮಿಗಳಾಗುತ್ತಿದ್ದರು. ಯುವೋದ್ಯಮಿಗಳು ಆದವರೂ ಬಹಳಷ್ಟಿದ್ದಾರೆ. ಅವರ ಯಶಸ್ವಿನ ಕಥೆ ಲೇಖಕರು ಬರೆಯಿರಿ. ಇನ್ನೊಬ್ಬರಿಗೆ ಆ ಯಶಸ್ಸಿನ ಕಥೆಯಿಂದ ಸ್ಫೂರ್ತಿ ಬರಲಿ. ಬಹುಶ ನಮ್ಮ ಪೆÇ್ರಫೆಸರ್‍ಗಳಿಗೆ ಇಂತಹ ಬುಕ್-ಸ್ಟೋರಿ ಇಷ್ಟವಾಗಲಾರದು ಅಥವಾ ಯೋಗ್ಯ ಅಲ್ಲ ಅಂತ ಭಾವಿಸಿದ್ದಾರೋ ಏನೋ. ಈ ಸಕ್ಸಸ್ ಜನರ, ಕನ್ನಡಿಗರು ಕೌಶಲ್ಯದಿಂದ ಮೇಲೆ ಬಂದಿರುವ ಅಂತಂಹ ಯಶೋಗಾಥೆಯ ಬಗ್ಗೆ ಹೆಚ್ಚೆಚ್ಚು ಬರೆಯಿರಿ ಎಂದು ತೇಜಸ್ವಿ ಕಟ್ಟೀಮನಿ ತಿಳಿಸಿದರು.

ಸಂಜೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ಡಾ| ಮನು ಬಳಿಗಾರ್ ಪರಿಷತ್ತು ಸದಸ್ಯರನ್ನೊಳಗೊಂಡು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ| ಮೃತ್ಯುಂಜಯ ಬಳಗವು ಹಿಂದೂಸ್ತಾನಿ ಗಾಯನ ಪ್ರಸ್ತುತ ಪಡಿಸಿತು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸಂಚಾಲಿತ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯು `ಕುಶಲವ' ಯಕ್ಷಗಾನ ಪ್ರದರ್ಶಿಸಿತು. ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಜಿ.ಎಸ್.ನಾಯಕ್ ಸ್ವಾಗತಿಸಿದರು. ಡಾ| ಜಿ.ಪಿ ಕುಸುಮ ಕಾರ್ಯಕ್ರಮ ನಿರೂಪಿಸಿದ ರು. ಕರ್ನಾಟಕ ವೈಭವ ಸಂಸ್ಥೆ ಅಂಬರ್‍ನಾಥ್ ಅಧ್ಯಕ್ಷ ಹೆಚ್.ಆರ್ ಚಲವಾದಿ ಅಭಾರ ಮನ್ನಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here