Friday 29th, March 2024
canara news

ನಾವು ಸಮಾಜಕ್ಕೆ ಒಳಿತನ್ನುಂಟು ಮಾಡ ಬೇಕು - ಫಾ|ಅನಿಲ್ ಡಿಸೋಜಾ

Published On : 12 Feb 2018   |  Reported By : Bernard J Costa


ಕುಂದಾಪುರ, ಫೆ.12: ‘ನಾವು ಸಮಾಜಕ್ಕೆ ಒಳಿತನ್ನುಂಡು ಮಾಡುವ ಕೆಲಸಗಳನ್ನು ಮಾಡ ಬೇಕು, ಜನರಿಗೆ ಅಗತ್ಯವಿರುವ ನೆರವನ್ನು ನೀಡಿ, ಕಶ್ಟದಲ್ಲಿರುವರಿಗೆ ಸಹಾಯ ಹಸ್ತ ನೀಡಿ, ಸಮಾಜದಲ್ಲಿ ಕಡೆಗಣಿಸಿದವರನ್ನು ನಾವು ಪ್ರೀತಿ ದಯೆ ತೋರಿ ಅವರಿಗೆ ನಮ್ಮಂತೆ ಬದುಕಲು ಸಹಕರಿಸೋಣ’ ಎಂದು ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ|ಫಾ|ಅನಿಲ್ ಡಿಸೋಜಾ ಸಂದೇಶ ನೀಡಿದರು.

 

 

ಅವರು ಹೇರಿಕುದ್ರುವಿನ ಸಂತ ಸೆಬಾಸ್ಟಿಯನ್ ವಾಳೆಯ ಹಬ್ಬದಲ್ಲಿ ಸಮಾಜ ಸೇವಕ ಶ್ರೀದೇವಿ ಅಂಬುಲೆನ್ಸನ ಮ್ಹಾಲಕ, ಜೀವ ರಕ್ಷಕ ಪ್ರಶಸ್ತಿ ಪಡೆದ ವಾಸುದೇವ ಹಂದೆ, ಮತ್ತು ಆರೋಗ್ಯ ಇಲಾಖೆಯಲ್ಲಿದ್ದು ಜನರಿಗೆ ಸರಕಾರಿ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಜಾತಿ ಮತ ಭೇದ ಮರೆತು ಜನರಿಗೆ ಸಹಕರಿಸುತ್ತಿರುವ ಸಮಾಜ ಸೇವಕ ಸಚಿದಾನಂದ ಎಮ್.ಎಲ್. ಮತ್ತು ವಾಳೆಗೆ ಐದು ವರ್ಷ ಸೇವೆ ಸಲ್ಲಿಸಿದ ಮಾಜಿ ಗುರಿಕಾರಳಾದ ಪ್ರೆಸಿಲ್ಲಾ ರೆಬೆಲ್ಲೊ ಅವರನ್ನು ವಾಡೆಯ ಪರವಾಗಿ ಸನ್ಮಾನಿಸಿ ಮಾತಾನಾಡಿದರು.

ಸನ್ಮಾನ ಸ್ವೀಕರಿಸಿದವರ ಪರವಾಗಿ ಸಚಿದಾನಂದ ಎಮ್.ಎಲ್. ‘ನನಗೆ ಈ ರೀತಿ ಸಮಾಜ ಸೇವೆ ಮಾಡಲು ಮೊದಲು ಪ್ರೇರಣೆ ನಿಡ್ಡಿದ್ದು ನಾನು ಕಲಿತ ಇಗರ್ಜಿ ಶಾಲೆಯ ಮುಖ್ಯಸ್ಥರಾದ ಒಬ್ಬ ಧರ್ಮಗುರುಗಳು, ಎರಡನೇದು ನನ್ನ ತಾಯಿ ಯಾವುದೇ ಜಾತಿ ಧರ್ಮ ನೋಡದೆ ಎಲ್ಲರ ಸೇವೆ ಮಾಡು ಎಂದಿದ್ದು, ಈಗ ಈ ಸೇವೆಗೆ ಪ್ರೇರಣೆ ನನ್ನ ಧರ್ಮಪತ್ನಿ, ಮುಂದೆಯು ಈ ನನ್ನ ಸೇವೆ ಮುಂದುವರಿಯುತ್ತದೆ. ಕ್ರಿಶ್ಚಿಯಯನ ಸಮುದಾಯ ಶಿಕ್ಷಣ, ಆರೋಗ್ಯ ಸೇವೆಯಲ್ಲಿ ಮಂಚೂಣಿಯಲ್ಲಿದೆ’ ಎನ್ನುತ್ತಾ ಸನ್ಮಾನಕ್ಕೆ ವಂದನೆಗಳನ್ನು ಸಲ್ಲಿಸಿದರು.

ವಾಲೇರಿಯನ್ ಮೊನಿಕಾ ಡಿಆಲ್ಮೇಡಾ ಇವರ ಆಶ್ರಯದಲ್ಲಿ ನೆಡೆದ ಕಾರ್ಯಕ್ರಮಕ್ಕೆ ಸ್ವಾಗತಿಸಿದ ವಾಡೆಯ ಗುರಿಕಾರ ಅಂತೋನಿ ಡಿ’ಆಲ್ಮೇಡ ಧರ್ಮಗುರುಗಳಾದ ಫಾ|ಅನಿಲ್ ಡಿಸೋಜಾ, ಪ್ರಾಂಶುಪಾಲ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಸಹಾಯಕ ಧರ್ಮಗುರು ಫಾ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಇವರನ್ನು ವಾಡೆಯ ಪರವಾಗಿ ಗೌರವಿಸಿದರು. ಇವರೆಲ್ಲರೂ ತಮ್ಮ ಸಂದೇಶಗಳನ್ನು ನೀಡಿದರು. ಪ್ರೇರಕಿ ಲೀಡಿಯಾ ಡಿಆಲ್ಮೇಡಾ ವರದಿಯನ್ನು ವಾಚಿಸಿದರು. ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ವಾಯ್ಲೆಟ್ ತಾವ್ರೊ, ಪಾಲನ ಮಂಡಳಿಯ ಉಪಾಧ್ಯಕ್ಷರಾದ ಜೇಕಬ್ ಡಿಸೋಜಾ, 18 ಆಯೋಗಗಳ ಮುಖ್ಯಸ್ಥೆ ಪ್ರೇಮಾ ಡಿಕುನ್ಹಾ, ಸಮುದಾಯ ಪ್ರಧಾನೆ ಎಲಿಜಾ ಡಿಸೋಜಾ ಕಾರ್ಯಕ್ರಮದಲ್ಲಿ ಹಾಜರಿದ್ದು ಶುಭಾಷಯ ಕೋರಿದರು. ವಾರ್ಡ ಸದಸ್ಯ ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.

ಸಾಂಸ್ಕ್ರತಿಕ ಕಾರ್ಯಕ್ರದಲ್ಲಿ ಕಿರಿಯರು, ಹಿರಿಯರು, ಗಾಯನ ನ್ರತ್ಯ, ಕಿರು ನಾಟಕ ಮುಂತಾದ ಪ್ರದರ್ಶನಗಳನ್ನು ನೀಡಿದರು. ಪ್ರತಿಭಾವಂತರಿಗೆ ಗೌರವಿಸಿ, ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು.ವಾಳೆಯ ಪ್ರತಿನಿಧಿ ಜೂಲಿಯೆಟ್ ಮಿನೇಜೆಸ್ ವಂದಿಸಿದರು, ಜೊಯ್‍ಸ್ಲಿನ್ ಡಿಆಲ್ಮೇಡಾ ಪ್ರಮೀಳಾ ಡಿಸಿಲ್ವಾ ಕಾರ್ಯಕ್ರವನ್ನು ನೆಡೆಸಿಕೊಟ್ಟರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here