Thursday 25th, April 2024
canara news

ರೋಜರಿ ಕ್ರೆಡಿಟ್ ಕೋ ಆಪ್ ಸೊಸೈಟಿಯ ಗಂಗೊಳ್ಳಿ - ತ್ರಾಸಿಯ ಶಾಖೆಯ ಉದ್ಘಾಟನೆ

Published On : 17 Feb 2018   |  Reported By : Bernard Dcosta


ಉತ್ತಮ ಸೇವೆಯಿಂದ ಸಂಸ್ಥೆ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲಿ

ಕುಂದಾಪುರ, ಉತ್ತಮ ಗುಣ ಮಟ್ಟದ ಸೇವೆ, ಉತ್ತಮ ಸಂಬಂಧಗಳಿಂದ ಗ್ರಾಹಕರಿಗೆ ಸಂಸ್ಥೆಯ ಮೇಲೆ ನಂಬಿಕೆ ಬರುವುದರ ಜೊತೆ ಸಾಧನೆಯ ಜೊತೆ ಸಫಲತೆಯೊಂದಿಗೆ ತಮ್ಮ ಗುರಿಮುಟ್ಟಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ಸೇವೆ ಸಲ್ಲಿಸಿ ವೇಗೆವಾಗಿ ಬೆಳೆಯುತ್ತಿರುವ ರೋಜರಿ ಕ್ರೆಡಿಟ್ ಕೋ. ಆಪ್. ಸೊಸೈಟಿಯು ಇನ್ನೂ ಹೆಚ್ಚಿನ ಸೇವೆ, ಪ್ರಮಾಣಿಕತೆಯೊಂದಿಗೆ ಸಮಾಜದ ಏಳಿಗೆಗಾಗಿ ಶ್ರಮಿಸಿ ಸಂಸ್ಥೆ ಇನ್ನೂ ಪ್ರಗತಿ ಸಾಧಿಸಲಿ ’ ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ವಂ|ಅನಿಲ್ ಡಿಸೋಜಾ ಸಂದೇಶ ನೀಡಿದರು.

ಅವರು ಗಂಗೊಳ್ಳಿ ಬಂದರು ರಸ್ತೆಯ ಬಸ್ಸ್ ನಿಲ್ದಾಣದ ಸಮೀಪದ ರೇಬೆರೊ ಕಾಂಪ್ಲೆಕ್ಷ್‍ನಲ್ಲಿ ಕುಂದಾಪುರದ ರೋಜರಿ ಕ್ರೆಡಿಟ್ ಕೋ ಆಪ್ ಸೊಸೈಟಿಯ ಗಂಗೊಳ್ಳಿ - ತ್ರಾಸಿಯ ನೂತನ ಶಾಖೆಯನ್ನು ಉದ್ಘಾಟಿಸಿ ಮಾತಾನಾಡಿದರು. ರೋಜರಿ ಕ್ರೆಡಿಟ್ ಕೋ. ಆಪ್. ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿಆಲ್ಮೇಡಾ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ‘ಕಳೆದ ಸಾಲಿನಲ್ಲಿ 150 ಕೋಟಿ ರೂ. ವ್ಯವಹಾರ ಮಾಡಿದ್ದು ಪ್ರಸಕ್ತ ಸಾಅಲಿನಲ್ಲಿ 220 ಕೋಟಿ ವ್ಯವಹಾರ ಗುರಿ ಹೊಂದಿದೆ, ಆದರೆ ಗ್ರಾಹಕರ, ಸಂಸ್ಥೆಯ ಸದಸ್ಯರ ಉತ್ತಮ ಸ್ಪಂದನೆ ಹಾಗೂ ಸಹಕಾರದಿಂದ ರೂ. 250 ಕೋಟಿಗೂ ಹೆಚ್ಚು ಠೇವಣಿ ಸಂಗ್ರಹಿಸಿ ದಾಖಲೆ ನಿರ್ಮಿಸುವಲ್ಲಿ ದಾಪುಗಾಲು ಹಾಕುತ್ತಿದೆ, ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಶಾಖೆಗಳನ್ನು ತೆರೆಯುವ ಉದ್ದೇಶವನ್ನು ಹೊಂದಿದೆಯೆಂದು’ ಅವರು ತಿಳಿಸಿದರು.

ಗಂಗೊಳ್ಳಿ ಕೊಸೆಸಾಂವ್ ಮಾತೆ ಇಗರ್ಜಿಯ ಧರ್ಮಗುರು ವಂ|ಆಲ್ಬರ್ಟ್ ಕ್ರಾಸ್ತಾ ಆಶೀರ್ವಚನ ಮಾಡಿದರು. ಭದ್ರತಾ ಕೋಶವನ್ನು ಗಣೇಶ್ ಕಾಮತ್ ಉದ್ಘಾಟಿಸಿದರು. ಗಂಗೊಳ್ಳಿ ಜಮಾತಲ್ ಮುಸ್ಲಿಮನ್ ಜುಮ್ಮಾ ಮಸಿದೀಯ ಅಧ್ಯಕ್ಷ ಮಹ್ಮದ್ ರಫೀಕ್ ಟೇವಣಿ ಪತ್ರ ವಿತರಿಸಿದರು. ಅತ್ಯುತ್ತಮ ಗ್ರಾಹಕರಾದ ಡೇರಿಕ್ ಕ್ರಾಸ್ತಾ, ಜೋನ್ ಲೋಬೊ, ಪ್ರಕಾಶ್ ಲೋಬೊ ಮತ್ತು ಶಾಖಾ ಕಾಂಪ್ಲೆಕ್ಷ್ ಮಾಲೀಕರಾದ ಫೆಲಿಕ್ಸ್ ರೇಬೆರೊ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಗಂಗೊಳ್ಳಿ ಇಗರ್ಜಿಯ ಪಾಲನ ಮಂಡಳಿ ಉಪಾಧ್ಯಕ್ಷ ವಿವಿಯನ್ ಕ್ರಾಸ್ತಾ, ನಿರ್ದೇಶಕರಾದ ಮಾರ್ಟಿನ್ ಡಾಯಸ್, ಜೇಕಬ್ ಡಿಸೋಜಾ, ಕಿರಣ್ ಲೋಬೊ, ಸ್ಟ್ಯಾನಿ ಡಿಸೋಜಾ, ಶಾಂತಿ ಕರ್ವಾಲ್ಲೊ, ಡಾಯ್ನಾ ಡಿಆಲ್ಮೇಡಾ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು. ಗಂಗೊಳ್ಳಿ ಶಾಖಾ ಸಭಾಪತಿ ಜೆರಾಲ್ಡ್ ಕ್ರಾಸ್ತಾ ಸ್ವಾಗತಿಸಿದರು. ನಿರ್ದೇಶಕ ವಿನೋದ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು, ಸೊಸೈಟಿಯ ಉಪಾಧ್ಯಕ್ಷ ಜೋನ್ ಮಿನೇಜಸ್ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here