Friday 19th, April 2024
canara news

ಮುದ್ರಾ ವಿಜ್ಞಾನದ ಪ್ರಣೀತೆ ಸುಮನ್ ಕೆ.ಚಿಪ್ಳೂಣ್‍ಕರ್ ನಿಧನ

Published On : 19 Feb 2018   |  Reported By : canaranews network


ಮುಂಬಯಿ, ಫೆ.19: ಮುದ್ರಾ ವಿಜ್ಞಾನದ ಲೇಖಕಿ, ಸಮಾಜ ಸೇವಕಿ, ಬಿಎಂಸಿ ಮೇಯರ್ ಪ್ರಶಸ್ತಿ ವಿಜೇತೆ ಹೆಸರಾಂತ ಶಿಕ್ಷಕಿ, ಸುಮನ್ ಕೆ.ಚಿಪ್ಳೂಣ್‍ಕರ್ (77) ಇಂದಿಲ್ಲಿ ನಾಸಿಕ್ ಅಲ್ಲಿನ ಆಸ್ಪತ್ರೆಯಲ್ಲಿ ವಿಧಿವಶರಾದರು.

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿ ಸುಸಂಸ್ಕೃತ ಮರಾಟೆ ಕುಟುಂಬದ ಶ್ರೀ ದುರ್ಗಾ ವೆಂಕಟೇಶ ಭಟ್ ಹಾಗೂ ಶ್ರೀಮತಿ ಪದ್ಮಾಕ್ಷಿ ದಂಪತಿಗಳ ಕುವರಿಯಾಗಿ ಜನಿಸಿದ ಸುಮನ್ ಹೆತ್ತವರಿಂದ ಬಳುವಳಿಯಾಗಿ ಬಂದ ಸಮಾಜ ಸೇವೆ, ಅಧ್ಯಯನ ಶೀಲತೆಯಂತಹ ಸಂಸ್ಕಾರಗಳನ್ನು ಮೈಗೂಡಿಸಿಕೊಂಡಿಇದ್ದರು. ಜ್ಞಾನದಾಹಿಯಾದ ಸುಮನ್ ತಮ್ಮ ಜೀವನದ 60 ವಸಂತಗಳ ನಂತರ ಕನ್ನಡದಲ್ಲಿ ಎಂಎ ಪದವಿ, ತನ್ನ ಗುರು ಮಹಾರಾಷ್ಟ್ರ ರಾಜ್ಯದ ಮಾಜಿ ಸಚಿವೆ ಡಾ| ಲಲಿತಾ ರಾವ್ ಅವರಿಂದ ಮುದ್ರಾ ವಿಜ್ಞಾನ ಅಧ್ಯಯನ ಮಾಡಿ, ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಗಳಿಸಿದ್ದರು. `ಆರೋಗ್ಯ ನಮ್ಮ ಕೈಯಲ್ಲಿದೆ' ಎಂಬುವುದನ್ನು ಬಲವಾಗಿ ನಂಬಿದ ಶಿಕ್ಷಕಿ ನಿವೃತ್ತಿಯ ನಂತರ ಮುದ್ರಾ ಹಿಡಿತ ಸಾಧಿಸಿ ತೀರಾ ಸಾಮಯಿಕ ಮೌಲ್ಯವುಳ್ಳ ಹೊತ್ತಗೆ `ಮುದ್ರಾ ವಿಜ್ಞಾನ ಮತ್ತು ಆರೋಗ್ಯ' ವಿಭಿನ್ನ ವರ್ಗದ ಕೃತಿಯನ್ನು ಡಾ| ಲಲಿತಾ ರಾವ್ ಅವರಿಗೆ ಅರ್ಪಿಸಿ ಪ್ರಕಟಿಸಿದ್ದಾರೆ. ಈ ಕೃತಿ 52 ಬಾರಿ ಮರಾಠಿ, ಕನ್ನಡ, ಇಂಗ್ಲೀಷ್-ಮರಾಠಿ ಮುದ್ರಣ ಕಂಡು ದಾಖಲೆಯಾಗಿದೆ. ಪ್ರತಿಷ್ಠಿತ `ಅಕಲಂಕ' ಪ್ರಶಸ್ತಿ' ಗಳಿಸಿದೆ. ಟೈಮ್ಸ್‍ನೌ ಸಮೂಹವು ಇವರ `ಮುದ್ರಾ ವಿಜ್ಞಾನ' ಸಿಡಿ ರಚಿಸಿದ್ದು, ಲಕ್ಷಾಂತರ ಪ್ರತಿಗಳ ಮಾರಾಟವಾಗಿ ಪುಸ್ತಕ ಪ್ರಪಂಚದ ಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಮರಾಠಿ ಭಾಷಾಂತರ `ಮುದ್ರಾ ಅಣಿ ಆರೋಗ್ಯ ಸಿದ್ದಾಂತ' ಇತ್ತೀಚೆಗೆ ಬಿಡುಗಡೆಗೊಂಡು ಈಗಾಗಲೇ ಸಾವಿರಾರು ಪ್ರತಿಗಳ ಮಾರಾಟವಾಗಿ ಹಲವು ಮುದ್ರಣ ಕಂಡಿದೆ. ಮುದ್ರಾ ವಿಜ್ಞಾನದ 800 ಪ್ರಾತ್ಯಕ್ಷಿಕೆಗಳನ್ನು ದೇಶ ವಿದೇಶಗಳಲ್ಲಿ ಪ್ರಸ್ತುತ ಪಡಿಸಿರುವುದು, ಕಸ್ತೂರಿ ವಾಹಿನಿಯಲ್ಲಿ 20 ಪ್ರಾತ್ಯಕ್ಷಿಕಾ ಕಾರ್ಯಕ್ರಮಗಳು ಪ್ರಸಾರವಾಗಿ ಜಗಜ್ಜಾಹಿರವಾಗಿದೆ. ಸಮಾಜಕ್ಕೆ ನೀಡಿದ ಕೊಡುಗೆ ಹಾಗೂ ಮುದ್ರಾ ವಿಜ್ಞಾನದ ತಮ್ಮ ಲೇಖನ, ತರಂಗದಲ್ಲಿ ಮುಖಪುಟ ಲೇಖನವಾಗಿ ಪ್ರಕಟವಾಗಿರುವುದು ನಮಗೆ ಅತ್ಯಂತ ಹೆಮ್ಮೆಯ ವಿಷಯ. ಖಿimes Weಟಟಟಿess ನಿಂದ 'ಖಿhe ಂಟಿಛಿieಟಿಣ Iಟಿಜiಚಿಟಿ ಒuಜಡಿಚಿs' ಎಂಬ ಡಿವಿಡಿ ಕೂಡಾ ಸಿದ್ಧವಾಗಿ ಶಾಲಾ ಕಾಲೇಜು, ಬ್ಯಾಂಕ್ ಹಾಗೂ ಹಲವಾರು ಕಂಪೆನಿಗಳಲ್ಲಿ ಪ್ರಾತ್ಯಕ್ಷಿಕೆ ಜರಗಿದೆ.

ರಾಷ್ಟ್ರದಾದ್ಯಂತ ಸುಮಾರು 50ಕ್ಕೂ ಅಧಿಕ ಮುದ್ರಾ ತಜ್ಞರನ್ನು ತರಬೇತಿ ಪಡಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಅಲ್ಲಲ್ಲಿ ಮುದ್ರಾ ವಿಜ್ಞಾನದ ಉಚಿತ 800 ತರಬೇತಿಗಳನ್ನು ನಡೆಸಿ ಲಕ್ಷಾಂತರ ಜನತೆಯ ಆರೋಗ್ಯಭಾಗ್ಯಕ್ಕಾಗಿ ಶ್ರಮಿಸಿದ್ದರು.

35 ವರ್ಷಗಳಿಂದ ಬಿಎಸ್‍ಕೆಬಿಎಯಲ್ಲಿ ಕಾರ್ಯಕಾರೀ ಸಮಿತಿಯ ಸದಸ್ಯೆ, ಉಪಾಧ್ಯಕ್ಷೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಸಲ್ಲಿಸಿದ ಸೇವೆ ಅಪಾರ. ಹಿರಿಯ ನಾಗರಿಕರ ಆಶ್ರಯ ಧಾಮ, ಮತ್ತು ಗೋಕುಲದ ಪುನರ್ ನಿರ್ಮಾಣಕ್ಕಾಗಿ ಸ್ವದೇಣಿಗೆಯನ್ನಿತ್ತು, ಧನ ಸಂಗ್ರಹ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿದ್ದವರು. ಅಮೇರಿಕಾದಲ್ಲಿ ಜರಗಿದ ಮುದ್ರಾ ವಿಜ್ಞಾನದ 12 ಕಾರ್ಯಕ್ರಮಗಳಲ್ಲಿ ದೊರೆತ 2500 ಡಾಲರುಗಳನ್ನೂ ಗೋಕುಲದ ಸೇವೆಗೆ ಅರ್ಪಿಸಿರುವರು. ಸದಾ ಹಸನ್ಮುಖಿಯಾಗಿದ್ದು ಸುಮನವೆಂಬ ತಮ್ಮ ಅನ್ವರ್ಥ ನಾಮಕ್ಕೆ ಅನುಗುಣವಾಗಿ, ಕರುಣೆ, ವಿನಯಗಳ ಸಾಕಾರಮೂರ್ತಿಯಾದ ಅವರು ಅನಾಥಾಶ್ರಮ, ಶಾಲೆಗಳ ಸಮಿತಿಯಲ್ಲಿ ಸೇರಿ ಅನನ್ಯ ಸಹಾಯವನ್ನಿತ್ತು ಶಿಕ್ಷಣ, ಸಮಾಜ ಸೇವೆ ಮತ್ತು ಆರೋಗ್ಯ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟು. ಅದರಲ್ಲಿಯೇ ಸಂತೃಪ್ತಿ, ಧನ್ಯತೆ ಪಡೆದಿರುವರು. ಡಿ.ಇಡ್, ಎಂ.ಎ.ಎಂ ಇಡ್ ಉನ್ನತ ಶಿಕ್ಷಣದ ಪದವಿಧರೆಯಾಗಿ ಮುಂಬಯಿ ಮಹಾನಗರ ಪಾಲಿಕಾ ಶಾಲೆಯಲ್ಲಿ ಶಿಕ್ಷಕಿ, ನಿರೀಕ್ಷಕಿ ಮತ್ತು ಅಧೀಕ್ಷಕಿಯಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿ `ಶ್ರೇಷ್ಠ ಶಿಕ್ಷಕಿ' ಮೇಯರ್ ಪ್ರಶಸ್ತಿಗೆ ಪಾತ್ರರಾಗಿದ್ದರು. ಗಾಯಕಿ, ಲೇಖಕಿ, ರಂಗ ನಟಿ ಹೀಗೆ ಬಹು ಮುಖ ಪ್ರತಿಭಾವಂತರಾದ ಅವರಿಗೆ ಗೋಕುಲದಿಂದ `ಶ್ರೇಷ್ಠ ಮಹಿಳೆ' ಮತ್ತು `ಕಲಾಶ್ರೀ', ಗೋರೆಗಾಂವ್ ಕನ್ನಡ ಸಂಘದಿಂದ `ಶಿಕ್ಷಣ ತಜ್ಞೆ' ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನದಿಂದ `ವನಿತಾ ರತ್ನ' ಹೀಗೆ ಪ್ರಶಸ್ತಿಗಳ ಸರಮಾಲೆ, ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಗೌರವ ಪುರಸ್ಕಾರಗಳನ್ನು ಪಡೆದಿರುವರು. ಸದ್ಯ ನಾಸಿಕ್‍ನÀಲ್ಲಿ ಪತಿ, ಸುಪುತ್ರಿಯೊಂದಿಗೆ ನೆಲೆಸಿ ಅಲ್ಲಿಯೂ ಗೋಕುಲದ ಏಳಿಗೆಯ ಕನಸನ್ನೇ ಕಾಣುತ್ತಾ ಮುದ್ರಾ ವಿಜ್ಞಾನ ಹಾಗೂ ಕನ್ನಡದ ಕಂಪನ್ನು ಪಸರಿಸುವ ಕ್ರಿಯಾಶೀಲತೆ ತೋರಿದ್ದರು.

ಮುಂಬಯಿಯಲ್ಲಿ ಪ್ರಪ್ರಥಮ ಬಾರಿಗೆ ಬಿಎಸ್‍ಕೆಬಿಎ ಆಯೋಜಿಸಿದ ಬ್ರಾಹ್ಮಣ ಸಮಾವೇಶದ `ಶ್ರೀ ಲಕ್ಷ್ಮೀ ವೈಭವ ಸಭೆ'ಯಲ್ಲಿ ಗಣ್ಯರ ಉಪಸ್ಥಿತಿಯಲ್ಲಿ `ಅರುವತ್ತರ ನಂತರ ಮರಳಿ ಮರಳಿ ಅರಳು' ಎನ್ನುತ್ತಾ ಸುಮನ್‍ರ ಸಾರ್ಥಕ ಜೀವನದ ಅಮೃತಮಹೋತ್ಸವದದಲ್ಲಿ ಅವರನ್ನು ಗೌರವಿಸಲಾಗಿತ್ತು. ಸುಮನ್ ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾಗದ ನಷ್ಟವೇ ಸರಿ. ಮೃತರು ಪತಿ ಕೇಶವರಾವ್ ಚಿಪ್ಲೂಣ್‍ಕರ್, ಒಬ್ಬಳು ಪುತ್ರಿ ಹಾಗೂ ಓರ್ವ ಪುತ್ರನನ್ನು ಸೇರಿದಂತೆ ಅಪಾರ ಬಂಧುಬಳಗ, ಶಿಷ್ಯವರ್ಗವನ್ನು ಅಗಲಿದ್ದಾರೆ.

ಸುಮನ್ ಕೆ.ಚಿಪ್ಳೂಣ್‍ಕರ್ ನಿಧನಕ್ಕೆ ಸಂತಾಪದ ಮಹಾಪೂರ
ಚಿಪ್ಳೂಣ್‍ಕರ್ ಅಗಲುವಿಕೆ ಮುಂಬಯಿಯ ಇಡೀ ಸಮಾಜಕ್ಕೆ ತುಂಬಲಾಗದ ನಷ್ಟವಾಗಿದೆ. ಅವರೋರ್ವ ಸಾಮರಸ್ಯದ ಧ್ಯೋತಕವಾಗಿದ್ದು ಸಮಾಜದ ಮಿನುಗುತಾರೆಯಾಗಿ ಜನಾನುರೆಣಿಸಿದ್ದರು. ಬಿಎಸ್‍ಕೆಬಿಎ ಸಂಸ್ಥೆಯ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ಸರ್ವ ಪದಾಧಿಕಾರಿಗಳು, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಮಂಡಳಿ, ಗೋಕುಲವಾಣಿ ಮಾಸಿಕದ ಗೌರವ ಸಂಪಾದಕ ಡಾ| ವ್ಯಾಸರಾಯ ನಿಂಜೂರು, ಹೆಚ್.ಬಿ.ಎಲ್ ರಾವ್, ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್, ಬಿ.ರಮಾನಂದ ರಾವ್, ಕಲೀನ, ಐ.ಕೆ ಪ್ರೇಮಾ ಎಸ್.ರಾವ್, ಡಾ| ತಾಳ್ತಜೆ ವಸಂತಕುಮಾರ್, ಡಾ| ಜಿ.ಎನ್ ಉಪಾಧ್ಯ ಸೇರಿದಂತೆ ನೂರಾರು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. : ರೋನ್ಸ್ ಬಂಟ್ವಾಳ್

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here