Wednesday 24th, April 2024
canara news

ವಲಯ ಕಥೊಲಿಕ್ ಸಭಾ, ಶೆವೊಟ್ ಪ್ರತಿಷ್ಟಾನ್ ಕುಂದಾಪುರ ಇವರಿಂದ ಪ್ರತಿಭಾವಂತರಿಗೆ ಪುರಸ್ಕಾರ

Published On : 19 Feb 2018   |  Reported By : Bernard Dcosta


ಕುಂದಾಪುರ,ಜ.19: ಕಥೊಲಿಕ್ ಸಭಾ ಉಡುಪಿ ಪ್ರದೇಶ್ ರಿ. ಕುಂದಾಪುರ ವಲಯ ಸಮಿತಿ ಮತ್ತು ಶೆವೊಟ್ ಪ್ರತಿಷ್ಟಾನ್ ರಿ. ಕುಂದಾಪುರ ಇವರಿಂದ ಶೈಕ್ಷಣಿಕ ವರ್ಷದಲ್ಲಿ ವಲಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿಧ್ಯಾರ್ಥಿಗಳನ್ನು ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮವು ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಂಡಿತ್ತು.

ಕಾರ್ಯಕ್ರಮವನ್ನು ಕಥೊಲಿಕ್ ಸಭಾ ಕುಂದಪುರ ವಲಯ ಸಮಿತಿಯ ಅಧ್ಯಕ್ಷ ಜೇಕಬ್ ಡಿ’ಸೋಜಾ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ‘ನಾವು ಪ್ರತಿ ವರ್ಷವೂ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಿ ಅವರಿಗೆ ಮತ್ತು ಇತರ ಮಕ್ಕಳಿಗೆ ಪ್ರೇರಣೆ ದೊರಕಬೇಕೆಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ. ರಾಜ್ಯ ಸರಕಾರ ಕ್ರೈಸ್ತರ ಏಳಿಗೆಗಾಗಿ ಹಲವು ಯೋಜನೆಗಳನ್ನು ಹಮ್ಮಿ ಕೊಂಡ್ಡಿದೆ, ಅದರ ಸದುಉಪಯೋಗವನ್ನು ನಾವು ಪಡೆದೊ ಕೊಳ್ಳಬೇಕು’ ಎಂದು ಅವರು ಹೆಳಿದರು.

ಭಾಷಣ ಮತ್ತು ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು ವಲಯ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವೀಯೊಲಾ ಲುವಿಸ್ ತ್ರಾಸಿ, ಸಿ.ಬಿ.ಎಸ್.ಸಿ ಯಲ್ಲಿ ನಿಕ್ಸನ್ ದೀಪಕ್ ಲೋಬೊ ಗಂಗೊಳ್ಳಿ, ಪಿ.ಯು.ಸಿ. ಕಾಮರ್ಸನಲ್ಲಿ ಪ್ರಿನ್ಸಿಯಾ ಮರಿಯಾ ಕ್ರಾಸ್ತಾ ತ್ರಾಸಿ, ಪ್ರವಿಕಾ ಬಾರೆಟ್ಟೊ ಬಸ್ರೂರು, ಸಾಯನ್ಸನಲ್ಲಿ ಕ್ಯಾರೊಲ್ ಮಿನಲ್ ಮಿನೇಜಸ್ ಪಿಯುಸ್ ನಗರ್, ಬಿ.ಎಸ್.ಸಿ. ಯಲ್ಲಿ ಅನ್ಸಿಟಾ ಅಲಿಟಾ ಮೆಂಡೊನ್ಸಾ ಗಂಗೊಳ್ಸಿ, ಬಿ.ಸಿ.ಎ. ಯಲ್ಲಿ ವಿಧ್ಯಾ ಉಜ್ವಲ್ ಅಮಂಡಾ ಬೈಂದೂರು, ರಾಜ್ಯ ಮಟ್ಟದಲ್ಲಿ ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ವೆನ್ಸಿಟಾ ರಾಣಿ ಡಿಸೋಜಾ ತಲ್ಲುರು, ಎಂಜಿನಿಯರಿಂಗ್‍ನಲ್ಲಿ ಮಿಲ್ಟನ್ ಸೈಮ ಡಾಯಸ್ ಬೈಂದೂರು, ಬಾಯೊ ಟೆಕ್ನೊಲೋಜಿಯಲ್ಲಿ ಲೊಲಿಟಾ ಲೋಬೊ, ಬೈಂದೂರು, ಎಮ್.ಕಾಮ್. ನಲ್ಲಿ ಅಸ್ಮಿತಾ ಸ್ಟೆಲ್ಲಾ ಕೊರೆಯಾ ಕುಂದಾಪುರ ಮತ್ತು ಬಿ.ಎಚ್.ಎಮ್.ಎಸ್. (ಹೋಮಿಯೊ ಪಥಿಕ್) ವಿಭಾಗದಲ್ಲಿ ಆರನೇ ರ್ಯಾಂಕ್ ಪಡೆದ ಫಾ|ಮುಲ್ಲರ್ಸ್ ಮೆಡಿಕಲ್ ಕಾಲೇಜಿನ ವಿಧ್ಯಾರ್ಥಿನಿ ಡಿಂಪಲ್ ಗೇಲ್ ರೆಬೆಲ್ಲೊ ಕೊಟೇಶ್ವರ ಇವರನ್ನು ಪುರಸ್ಕಾರದ ಜೊತೆ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ಪ್ರಗತಿ ಪರಿಶೀಲನ ಸಮಿತಿಯ ಸದಸ್ಯ ಪ್ರಭು ಕೆನೆಡಿ ಪಿರೇರಾ, ಕುಂದಾಪುರ ತಾಲೂಕು ಪಂಚಾಯತ್ ಸದಸ್ಯೆ ವಾಯ್ಲೆಟ್ ತಾವ್ರೊ ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು. ಕಥೊಲಿಕ್ ಸಭಾ ವಲಯ ನಿಯೋಜಿತ ಅಧ್ಯಕ್ಷ ಮೈಕಲ್ ಪಿಂಟೊ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯಕ್ರಮದ ಸಂಚಾಲಕ ಕಿರಣ್ ಕ್ರಾಸ್ತಾ, ನಿಕಟ ಪೂರ್ವ ಅಧ್ಯಕ್ಷ ಫ್ಲೈವನ್ ಡಿಸೋಜಾ, ಕೋಶಾಧಿಕಾರಿ ವಿನಯ ಡಿಆಲ್ಮೇಡಾ, ಉಪಸ್ಥಿತರಿದ್ದರು. ಶೆವೊಟ್ ಪ್ರತಿಷ್ಟಾನದ ಆಲ್ವಿನ್ ಕ್ವಾಡರ್ಸ್ ಸ್ವಾಗತ ಕೋರಿದರು. ಕಾರ್ಯದರ್ಶಿ ಶೈಲಾ ಡಿಆಲ್ಮೇಡಾ ವಂದಿಸಿದರು.

ವಾಲ್ಟರ್ ಡಿಸೋಜಾ ಮತ್ತು ಮೇಬಲ್ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here