Thursday 25th, April 2024
canara news

ಮುಂಬಯಿ ವಿವಿ ಕನ್ನಡ ವಿಭಾಗದಲ್ಲಿ ಘಟಿಕೋತ್ಸವ-ಮೋಹನ್ ಬೊಳ್ಳಾರುಗೆ ಡಾಕ್ಟರೇಟ್ ಪ್ರದಾನ

Published On : 21 Feb 2018   |  Reported By : Rons Bantwal


ಅರ್ಥೈಸದವನಿಗೆ ಯಾವುದೂ ಅರ್ಥವಾಗಲ್ಲ : ಡಾ| ಎಸ್.ಎಂ ಹಿರೇಮಠ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.21: ಕರ್ನಾಟಕದ ಒಳ ಅಥವಾ ಹೊರನಾಡ ವಿಶ್ವವಿದ್ಯಾಲಯಗಳಲ್ಲಿ ನಾವು ಇಂತಹ ಕಾರ್ಯಕ್ರಮ ಗಳನ್ನು ಒಪ್ಪಿಕೊಂಡರೆ ಮಾತ್ರ ಕನ್ನಡ ಪ್ರಾಧ್ಯಾಪಕರ ಜೀವನ ಸಾರ್ಥಕವಾಗುವುದು. ಭಕ್ತನು ಭಕ್ತನ ಕಾಣುವುದು ಸದಾಚಾರ ಅಲ್ಲಿ ಕೂಡಿಕೊಂಡು ದಾಸೋಹ ಮಾಡಿದೊಡೆ ಕೂಡಲ ಸಂಗಮದೇವ. ಎಲ್ಲೂ ಇಲ್ಲ ಅಲ್ಲೇ ಇರ್ತಾನೆ ದೇವ ಅಂದ ಬಸವಣ್ಣವರಂತೆ ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪೂರೈಸಿದಾಗ ಅದೇ ದೊಡ್ದಸ್ಥಿಕೆಯ ಬದುಕು ಆಗುತ್ತದೆ. ಮುಂಬಯಿಯಲ್ಲೂ ಗೌರಿಶಂಕರ ಸದೃಶ್ಯರಾದ ಮಹಾಜ್ಞಾನಿ ಡಾ| ಉಪಾಧ್ಯ ಅವರ ಕನ್ನಡಸೇವೆ ಅರ್ಥಪೂರ್ಣವಾದುದು. ಅವರ ಕನ್ನಡ ಪ್ರಜ್ಞೆಯನ್ನು ವಿಕಾಸ ಮಾಡುತ್ತಿರುವುದು ಇಂತಹ ಮಹಾಪ್ರಬಂಧಕ್ಕೆ ಸಾಕ್ಷಿಯಾಗಿದೆ. ಬಸವಣ್ಣ ಮತ್ತು ನಾರಾಯಣ ಗುರುಗಳ ಬದುಕು ಬಯಲು ಸ್ವರೂಪವಾದುದು. ಬಯಲಿಗೆ ಮೇರೆಯನ್ನು ನಿರ್ಮಾಣ ಮಾಡಲು ಅಸಾಧ್ಯ. ಅವರ ಬರಹಗಳನ್ನೊಳಗೊಂಡ ಈ ಪ್ರಬಂಧ ವಿರಾಟ್ ಮತ್ತು ಭೌಮಕ್ರಿಯೆ ಆಗಿದೆ. ಇಲ್ಲಿನ ಅಧ್ಯಯನ ಅದ್ಭುತವಾಗಿದ್ದು, ಸಂಶೋಧನಾ ಹಂತ ವಿಸ್ತಾರಗಳನ್ನು ಸರಿಯಾಗಿ ಅರ್ಥೈಸಿ ಈ ಪ್ರಬಂಧ ಮಂಡಿಸಿರುವುದು ಅಭಿನಂಧನೀಯ. ಅರ್ಥೈಸದವನಿಗೆ ಯಾವುದೂ ಎಂದೂ ಅರ್ಥವಾಗಲ್ಲ ಎಂದು ಕಲಬುರ್ಗಿ ಅಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ನಾಡಿನ ಹಿರಿಯ ವಿದ್ವಾಂಸ ಡಾ| ಎಸ್.ಎಂ ಹಿರೇಮಠ ಅಭಿಪ್ರಾಯ ಪಟ್ಟರು.


ಇಂದಿಲ್ಲಿ ಮಂಗಳÀವಾರ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ರಾನಡೆ ಭವನದಲ್ಲಿ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ನಡೆಸಲ್ಪಟ್ಟ ಪಿಹೆಚ್‍ಡಿ ಪ್ರಬಂಧ ಮಂಡನಾ ಕಾರ್ಯಕ್ರಮದಲ್ಲಿ ಮಂಗಳೂರು ಮಣ್ಣಗುಡ್ಡೆ ಅಲ್ಲಿನ ಶ್ರೀ ಗೋಕರ್ಣಥೇಶ್ವರ ಕಾಲೇಜು ಉಪನ್ಯಾಸಕ ಮೋಹನ್ ಬೊಳ್ಳಾರು ಅವರ `ಬಸವಣ್ಣ ಮತ್ತು ನಾರಾಯಣ ಗುರು ಸಾಮಾಜಿಕ ದರ್ಶನ ಒಂದು ತೌಲನಿಕ ಅಧ್ಯಯನ' ವಿಚಾರಿತ ಮಹಾ ಪ್ರಬಂಧದ ಮೌಕಿಕ ಮೌಲ್ಯಮಾಪಣ ನಡೆಸಿ ಮೋಹನ್ ಬೊಳ್ಳಾರು ಅವರಿಗೆ `ಡಾಕ್ಟರೇಟ್ ಸನದು' ಪ್ರದಾನಿಸಿ ಅಭಿನಂದಿಸಿ ಮಾತನಾಡಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅವರ ಘನ ಉಪಸ್ಥಿತಿಯಲ್ಲಿ ನಡೆಸಲ್ಪಟ್ಟ ಘಟಿಕೋತ್ಸವದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಪ್ರಬಂಧದ ಮಾರ್ಗದರ್ಶಕ ಡಾ| ಕೆ.ರಘುನಾಥ್, ಮುಂಬಯಿನ ಹಿರಿಯ ಸಾಹಿತಿ ಡಾ| ಜೀವಿ ಕುಲಕರ್ಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸತ್ಯ, ಶುದ್ಧತೆÉ, ಪ್ರಾಮಾಣಿಕತೆಗಳ ಸಂಗಮವೇ ಕಾಯಕವಾಗಿದ್ದು, ಇದನ್ನು ಮೀರಿ ಬೆಳೆದಾಗ ಮಾತ್ರ ತನ್ನಲ್ಲಿನ ವಿದ್ವತ್ತನ್ನು ಕೃತಿಯಾಗಿಸ ಬಹುದು. ವಿದ್ವಾಂಸನ ಪರಿಶ್ರಮ, ಶಕ್ತಿ ಮತ್ತು ಸಾಮಥ್ರ್ಯ ಎಂದಿಗೂ ಇನ್ನೊಬ್ಬ ವಿದ್ವಾಂಸ ಮಾತ್ರ ತಿಳಿಯಲು ಸಾಧ್ಯ. ಇದನ್ನು ಮೋಹನ್ ಬೊಳ್ಳಾರು ತನ್ನ ಪ್ರಬಂಧದ ಮೂಲಕ ತೋರ್ಪಡಿಸಿದ್ದಾರೆ. ವಿಶ್ವಕಂಡ 2 ಅಪೂರ್ವ ವ್ಯಕ್ತಿಗಳ 2 ಶಕ್ತಿಗಳ ಸಾಮಾಜಿಕ ಸಾಧ್ಯತೆಗಳನ್ನು ಈ ಮೂಲಕ ಕಟ್ಟಿ ಕೊಟ್ಟಿದ್ದು ಮಾತ್ರವಲ್ಲದೆ ಎರಡು ಸಮುದ್ರಗಳನ್ನು ಒಗ್ಗೂಡಿಸುವ ಕ್ರಿಯೆ ಅವರ ಪ್ರಬಂಧದಲ್ಲಿ ನಡೆದಿದೆ. ಪ್ರಂಜ್ವಲ ಮನಸ್ಸಿನ ವ್ಯಕ್ತಿಗಳಿಂದ ಮಾತ್ರ ಪಿಹೆಚ್‍ಡಿ ಅಧ್ಯಯನ ಮಾಡಲು ಸಾಧ್ಯ ಎಂದೂ ಅವರು ರುಜುವಾತು ಮಾಡಿದ್ದಾರೆ. ಆ ಮುಖೇನ ಪ್ರಬಂಧಕ್ಕೆ ಒಳ್ಳೆಯ ವಿಷಯ ನೀಡಿ ಪ್ರೇರೆಪಿಸಿದ ಹಿರಿಯ ಪತ್ರಕರ್ತ ಎಂ.ಬಿ ಕುಕ್ಯಾನ್‍ರ ಕನಸು ನನಸಾಗಿಸಿದ್ದಾರೆ ಎಂದೂ ಡಾ| ಹಿರೇಮಠ ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸಮಿತಿ ಸದಸ್ಯ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಮಾತನಾಡಿ ಡಾ| ಹಿರೇಮಠ ಆಶಾದಯಕ ವ್ಯಕ್ತಿ, ಕನ್ನಡ ನಾಡುನುಡಿ, ಸಂಸ್ಕೃತಿಗಳ ಸಂಶೋಧಕರಾಗಿದ್ದು ನಮ್ಮಲ್ಲಿಗೆ ಇಂತಹ ಹಿರಿಯ ವಿದ್ವಾಂಸರ ಆಗಮನ ಪುಳಕ ತಂದಿದೆ. ಇಂತಹ ಹಿರಿಯ ಸಂಶೋಧಕರ ಮಾರ್ಗದರ್ಶನದಿಂದ ಹಲವು ಸಂಶೋಧನಾ ಪಿಹೆಚ್‍ಡಿಗಳ ಸಾಧ್ಯವಾಗಿದೆ. ಅಸ್ಪೃಶ್ಯತೆ, ಕೊಲಚೆಗೇರಿ ಶಿಕ್ಷಣದ ಜೊತೆಗೆ ವಿವಿಧತೆಯ ವಿವಿಧತೆಯ ಪ್ರೇರಣೆಗಳನ್ನು ನೀಡಿ ಸಮಾಜ ಸುಧಾರಕರಾಗಿದ್ದ ಬಸವಣ್ಣರು ಮತ್ತು ನಾರಾಯಣ ಗುರುಗಳು ಪ್ರೇರಣಾ ಚೈತನ್ಯರು. ಇಂತಹ ಮಾಹಾನ್ ಚೇತನಗಳ ಚಿಂತನೆಗಳನ್ನು ತೂಗಿ ನೋಡುವ ಕೆಲಸ ಮೋಹನ್ ಮಾಡಿದ್ದಾರೆ ಎಂದÀು ತಿಳಿಸಿದರು.

ಭಾರತೀಯ ಸಾಹಿತ್ಯ ಬೇರೆ ಭಾಷೆಗಳನ್ನು ಹೊಂದಿದ್ದು ಅವುಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ಕಾಯಕದ ಕಲ್ಪನೆ ಏನಿದೆ ಎನ್ನುವುದು ತಿಳಿದಾಗ ನಾರಾಯಣ ಗುರುಗಳು ಕಾಯಕಕ್ಕೆ ಕೈಗಾರಿಕೆ ಎಂದು ವ್ಯಾಖ್ಯಾನಿಸಿದರೆ ಬಸವಣ್ಣರು ಅರಿವೇಗುರು ಎಂದು ಜ್ನಾನವ ಬಣ್ಣಿಸಿದ್ದಾರೆ. ಕಲ್ಪನೆಗಳ ಮೂಲಗಳು ಕಾಲಕಾಲಕ್ಕೆ ಭಾಷೆಭಾಷೆಗಳಿಗೆ ಬದಲಾವಣೆ ಆಗುವುದು ಸಹಜ. ಆದ್ದರಿಂದ ಬದಲಾವಣೆಯ ಸ್ವರೂಪ ಏನು ಎಂದು ನಾವು ಗುರುತಿಸ ಬೇಕು ಅದನ್ನು ಮೋಹನ್ ತಿಳಿಸುವ ಪ್ರಯತ್ನ ಈ ಮೂಲಕ ಮಾಡಿದ್ದಾರೆ ಎಂದು ಡಾ| ರಘುನಾಥ್ ತಿಳಿಸಿದರು.

ಸಾಹಿತ್ಯಕ್ಕೂ ಸಾಮಾಜಿಕ ಚಳುವಳಿಗೂ ಒಂದು ಅವಿನಾಭಾವ ಸಂಬಂಧವಿದೆ. ದಕ್ಷಿಣ ಭಾರತಕ್ಕೆ ಸಂಬಂಧಿಸಿದ ಇಬ್ಬರು ದಾರ್ಶನಿಕರ ಸಾಮಾಜಿಕ ಕೊಡುಗೆಯನ್ನು ಅಧ್ಯಯನ ಮಾಡುವ ಪ್ರಯತ್ನ ಮಾಡಿರುವೆÉ. ಕರ್ನಾಟಕದ ಬಸವಣ್ಣರು, ಕೇರಳದ ನಾರಾಯಣ ಗುರು ವಿಭಿನ್ನ ಭಾಷೆ ಪ್ರದೇಶದಲ್ಲಿ ಹುಟ್ಟಿದ್ದರೂ ಇವರಿಬ್ಬರ ಸಾಮಾಜಿಕ ಕಳಕಳಿ ಮಾತ್ರ ಒಂದೇ ಆಗಿದೆ ಎಂಬ ಕಾರಣಕ್ಕೆ ಈ ವಿಷಯ ಆಯ್ಕೆ ಮಾಡಿದೆ ಎಂದು ಡಾ| ಮೋಹನ್ ಬೊಳ್ಳಾರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಜಯ ಸಿ.ಸುವರ್ಣ, ಎಂ.ಬಿ ಕುಕ್ಯಾನ್, ಡಾ| ಜಿ.ಎನ್ ಉಪಾಧ್ಯ , ವಿ.ಆರ್.ಕೋಟ್ಯಾನ್, ಡಾ| ರಘುನಾಥ್, ನಿತ್ಯಾನಂದ ಕೋಟ್ಯಾನ್ ಮತ್ತಿತರ ಸಹಯೋಗಕ್ಕೆ ಅಭಾರ ಮನ್ನಿಸಿ ದರು.

ಕಾರ್ಯಕ್ರಮದಲ್ಲಿ ರಮಾ ಉಡುಪ, ದಿನಕರ್ ಚಂದನ್, ಎಂ.ಜಿ ಶಿವರಾಜ್, ಉದಯ ಶೆಟ್ಟಿ, ಲಕ್ಷಿ ್ಮೀ ಪೂಜಾರಿ ಮತ್ತಿತರರು ಹಾಜರಿದ್ದು ಡಾ| ಮೋಹನ್‍ಗೆ ಶುಭಾರೈಸಿದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ವೈ.ಮಧುಸೂದನ ರಾವ್ ವಂದಿಸಿದರು.

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here