Thursday 25th, April 2024
canara news

ವ್ಹಿ. ಪಿ. ಎಮ್ ಶಾಲೆಯ ಆವರಣಕ್ಕಾಗಿ ವಿದ್ಯಾರ್ಥಿಗಳಿಂದ ಪಾದಯಾತ್ರೆಯ ಹೋರಾಟದ ಪ್ರದರ್ಶನ

Published On : 22 Feb 2018   |  Reported By : Rons Bantwal


“ನಮ್ಮ ಶಾಲೆಗೆ ಕ್ರೀಡಾಂಗಣ ಸಿಗುವುದು ಯಾವಾಗ ? - ಡಾ|| ಪಿ. ಎಮ್ ಕಾಮತ್

ಮುಂಬಯಿಯ ಮುಲುಂಡ್ ಪೂರ್ವದಲ್ಲಿರುವ ವ್ಹಿ. ಪಿ. ಎಮ್ ಮಂಡಳದ ಆಡಳಿತ ಮಂಡಳಿ ಮತ್ತು ಪ್ರಾಥಮಿಕದಿಂದ ಮಹಾ ವಿದ್ಯಾಲಯದವರೆಗಿನ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯಿನಿಯವರು, ಪರಿವೀಕ್ಷಕಿಯರು, ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿಗಳು ಶಾಲೆಯ ಕ್ರೀಡಾಂಗಣದ ವಿಳಂಬನೇಯ ನಿವಾರಣೆಗಾಗಿ ಶಾಲೆಯಿಂದ ನೀಲಮ್ ನಗರದವರೆಗೆ ಪಾದಯಾತ್ರೆಯ ಪ್ರದರ್ಶನದ ಮೂಲಕ ತ್ವರಿತ ನ್ಯಾಯ ಒದಗಿಸಿ ಕೊಡಲು ಕೋರಿ ಎಮ್. ಪಿ. ಮಾನ್ಯ ಕಿರೀಟ ಸೋಮಯ್ಯನವರ ಕಾರ್ಯಾಲಯದ ದ್ವಾರ ಬಾಗಿಲಿಗೆ ಶನಿವಾರ ಮುತ್ತಿಗೆ ಹಾಕಿದರು. “ ನಮ್ಮ ದೇಶ ಮಹಾನ್ ದೇಶವಾಗಿದೆ” ನಮ್ಮ ಶಾಲೆಗೆ ಆಟದ ಮೈದಾನ ಯಾವಾಗ ಸಿಗುತ್ತದೆ? ಬೇಕೆ ಬೇಕು ಆಟದ ಮೈದಾನ ಬೇಕು ಎನ್ನುವ ಘೋಷಣೆಯ ಮೂಲಕ ವಿದ್ಯಾರ್ಥಿಗಳು “ ಸದೃಡವಾದ ದೇಹದಲ್ಲಿ ಸದೃಡವಾದ ಮನಸ್ಸಿರುತ್ತದೆ” ಎಂದು ಹೋರಾಟವನ್ನು ಮಾಡಿದರು. ಶಾಲೆಯ ಹೆಸರಲ್ಲಿ ಮೀಸಲಾಗಿರುವ ಆಟದ ಆವರಣವನ್ನು ದಯಪಾಲಿಸಬೇಕೆಂದು ಅನೇಕ ವರ್ಷಗಳಿಂದ ರಾಜ್ಯ ಮತ್ತು ಕೇಂದ್ರ ಸರಕಾರದ ಜೊತೆಗೆ ಪತ್ರ ವ್ಯವಹಾರವನ್ನು ಮಾಡಿದರೂ ಸಹ ನಮ್ಮ ಆಟದ ಮೈದಾನವು ಇಲ್ಲಿಯವರೆಗೂ ಕನಸು ಕನಸಾಗಿಯೇ ಉಳಿದಿದೆ, ನನಸಾಗುತ್ತಿಲ್ಲ. ಅದಕ್ಕಾಗಿ ಮಾನನೀಯ ಎಮ್. ಪಿ ಯವರಿಗೆ ತಕ್ಷಣ ಸಹಾಯ-ಸಹಕಾರ ಮಾಡಬೇಕೆಂದು ವಿನಂತಿ ಮಾಡಲು ಈ ಹೋರಾಟಕ್ಕಿಳಿಯಬೇಕಾಯಿತು. ಶಾಲೆಯ ಮಾನ್ಯತೆಯಗನುಸಾರವಾಗಿ 1993 ರಲ್ಲಿ ಕ್ರೀಡಾಂಗಣದ ಭುಮಿಯ ವಿಕಾಸದ ವಿಭಾಗವು ಶಾಲೆಗಾಗಿ ಮೀಸಲಾಗಿರಿಸಿದೆ.

ಆದರೂ ಸಹ ಇಲ್ಲಿಯವರೆಗೆ ಶಾಲೆಗಾಗಿ ಕಾಗದ ಪತ್ರದ ಮೂಲಕ ವರ್ಗಾವಣೆ ಮಾಡಿರುವುದಿಲ್ಲ. ವಿದ್ಯಾ ಪ್ರಸಾರಕ ಮಂಡಳದ ಶಾಲೆಯ ಕ್ರೀಡಾಂಗಣದ ಸ್ಥಳವು ರಾಜ್ಯ ಮತ್ತು ಕೇಂದ್ರದ ಮಾಲಕತ್ವದ ದ್ವಂದ್ವವು ನಿರ್ಣಯಗೊಂಡಿಲ್ಲ. ಅದು ಸರಕಾರಗಳಿಗೆ ಬಿಟ್ಟ ವಿಷಯ. ಏನೇ ಆದರೂ ಆದಷ್ಟು ಬೇಗ ಕ್ರೀಡಾಂಗಣವನ್ನು ಶಾಲೆಗಾಗಿ ಒದಗಿಸಿಕೊಡಬೇಕೆಂಬ ವಿನಂತಿಯನ್ನು ವ್ಹಿ. ಪಿ. ಎಮ್ ಸಂಸ್ಥೆಯ ಪದಾಧಿಕಾರಿಗಳು ಲೋಕಸಭೆಯ ಸದಸ್ಯರಾಗಿರುವ ಕಿರೀಟ ಸೋಮಯ್ಯನವರ ಕಛೇರಿಗೆ ಮುತ್ತಿಗೆ ಹಾಕಿದರು!

ಶಾಂತ ಚಿತ್ತದಿಂದ ಹೋರಾಟ ಕೈಗೊಂಡ ಶಾಲಾ-ಕಾಲೇಜುಗಳ ಸಂಗಡ ಪ್ರಧಾನ ಗೌರವ ಕಾರ್ಯದರ್ಶಿಗಳಾದ ಡಾ|| ಪಿ. ಎಮ್. ಕಾಮತ್, ಹಾಗೂ ಗೌರವ ಕಾರ್ಯದರ್ಶಿಗಳಾದ ಶ್ರೀಯುರ ಬಿ. ಎಚ್. ಕಟ್ಟಿಯವರ ಮಾರ್ಗದರ್ಶನದಲ್ಲಿ ಮೆರವಣಿಗೆಯು ದಾರಿಯುದ್ದಕ್ಕೂ ಬೇಕೆ ಬೇಕು ನ್ಯಾಯ ಬೇಕು ಎನ್ನುವ ಬೇಡಿಕೆಯ ನಾ ಫಲಕಗಳನ್ನು ಹಿಡಿದು ವೀರಾವೇಶದಿಂದ ಮುನ್ನುಗ್ಗುತ್ತಿದ್ದರು. ಈ ಸಂದರ್ಭದಲ್ಲಿ ಡಾ|| ಪಿ. ಎಮ್ ಕಾಮತ್‍ರು ಮಾತನಾಡಿ ನಮ್ಮ ಬೇಡಿಕೆಯ ಕ್ರೀಡಾಂಗಣದ ಭೂಮಿಯನ್ನು ನಮ್ಮ ಸಂಸ್ಥೆಯ ಶಾಲೆಗಾಗಿ ಮೀಸಲಿಡಲಾಗಿದೆ. ಈ ಭೂಮಿಯಲ್ಲಿ ನಾವು ಯಾವುದೇ ನಿವಾಸದ ಸ್ಥಾನಕ್ಕೆ ಅವಕಾಶ ನಿಡಿರುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರದ ಪ್ರಕ್ರಿಯೆಯಲ್ಲಿ ಸಿಲಿಕಿಕೊಂಡು “ ಗಂಡ-ಹೆಂಡತಿಯ ನಡುವೆ ಕೂಸು ಬಡವಾಯಿತು” ಎನ್ನುವಂತೆ ನಮ್ಮ ಶಾಲೆಗೆ ಕ್ರೀಡಾಂಗಣ ಸಿಗುತ್ತಿಲ್ಲ. ಮಾನ್ಯ ಪ್ರಧಾನ ಮಂತ್ರಿಗಳು “ ಕೆಲೋ ಇಂಡಿಯಾ ಕೆಲೋ” ಎನ್ನುವ ಘೋಷಣೆಯನ್ನು ಮಾಡುತ್ತಾರೆ. ಆದರೆ ವ್ಹಿ. ಪಿ. ಎಮ್ ಮಂಡಳದಲ್ಲಿ ಸುಮಾರು 6000 ವಿದ್ಯಾರ್ಥಿಗಳು ಅಧ್ಯಯನದಲ್ಲಿ ನಿರತರಾಗಿದ್ದಾರೆ, ಆದರೆ ಅವರಿಗೆ ಆಟವಾಡಲು ಮೈದಾನವೇ ಇಲ್ಲ ಹೇಗೆ ಆಡಬೇಕೆಂದು ಪ್ರಶ್ನೆ ಮಾಡಿದ್ದೇವೆ. ಈ ಮೊದಲು ಲೋಕಸಭೆಯ ಸದಸ್ಯರಲ್ಲಿ ವಿನಂತಿಸಲಾಗಿದ್ದರು ಕಾರ್ಯವು ಆಮೆಯ ಗತಿಯಲ್ಲಿ ಸಾಗುತ್ತಿರುವುದ. ಅದಕ್ಕಾಗಿ ಅದನ್ನು ತಿವ್ರಗೊಳಿಸಲು ಶೀಘ್ರವಾಗಿ ದಯಪಾಲಿಸಲು ಮತ್ತು ಜಾಗೃತಗೊಳಿಸಲು ಈ ಹೋರಾಟ ಮಾಡಬೇಕಾಯಿತು. ನಮ್ಮ ಬೇಡಿಕೆಯನ್ನು ಗಮನಿಸಿದ ಶ್ರೀಯುತ ಕಿರೀಟ ಸೋಮಯ್ಯನವರು ಆದಷ್ಟು ಬೇಗನೆ ಕ್ರೀಡಾಂಗಣವು ವಿದ್ಯಾ ಪ್ರಸಾರಕ ಮಂಡಳದ ಕನ್ನಡ ಮಾಧ್ಯಮಿಕ ಮತ್ತು ಪದವಿ ಪೂರ್ವ ಕಾಲೇಜ್‍ನ ಹೆಸರಲ್ಲಿ ಶಾಲಾ ಆವರಣವು ತಮ್ಮದಾಗುತ್ತದೆಂದು ಭರವಸೆ ಕೊಟ್ಟರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here