Thursday 25th, April 2024
canara news

ಮೈಸೂರು ಅಸೋಸಿಯೇಶನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ-2018

Published On : 24 Feb 2018   |  Reported By : Rons Bantwal


ಕವಿ ಕಾಣದ್ದನ್ನು ಗಮಕಿ ಕಾಣುತ್ತಾನೆ : ಡಾ| ಎಂ.ಎ ಜಯರಾಮ ರಾವ್

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.24: ಸೃಜನಾತ್ಮ ಕಲೆಗಳಲ್ಲಿ ಗಮಕ ಕಲೆಯೂ ಇದೆ. ಆದಿ ಗಮಕಿಗಳಾಗಿ ಲವ-ಕುಶರು ಗುರುತಿಸಲ್ಪಡುತ್ತಿದ್ದು ಈ ಗಮಕ ಕಲೆ ಪ್ರಾಚೀನ ಕಾಲದಿಂದ ಕಿವಿಯಿಂದ ಕಿವಿಗೆ ಸಾಗುತ್ತ ಬಂದಿದೆ. ಅದೂ ಈಗಲೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಮೊಟ್ಟ ಮೊದಲ ಗಮಕ ಸಮ್ಮೇಳನ ಮುಂಬಯಿಯಲ್ಲಿ ಜರುಗಿದ್ದು, ಮುಂಬಯಿ ಕನ್ನಡಿಗರಿಗೆ ತುಂಬ ಹೆಮ್ಮೆಯ ಸಂಗತಿ. ಗಮಕ ವಾಚನ ಮಾಡುವಾಗ ರಾಗಗಳ ಬಳಕೆ ಬಹು ಎಚ್ಚರಿಕೆಯಿಂದ ಉಪಯೋಗಿಸಬೇಕು. ಹಾವಭಾವ ಹಿತಮಿತವಾಗಿರಬೇಕು. ಹೀಗೆ ಕುಮಾರವ್ಯಾಸನ, ಪಂಪರನ್ನು, ವಾಲ್ಮೀಕಿಯ ಕಾವ್ಯಗಳನ್ನು ಎತ್ತಿಕೊಂಡು ಹಾವಭಾವ, ರಾಗಗಳಿಂದ ಸುಶ್ರಾವ್ಯವಾಗಿ, ಹಿಡಿ ಪ್ರೇಕ್ಷಕರನ್ನು ಮಂತ್ರ ಮುಗ್ದಗೊಳಿಸಿವೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ, ಪ್ರಸಿದ್ಧ ಗಮಕಿ ಡಾ| ಎಂ.ಎ ಜಯರಾಮ ರಾವ್ ತಿಳಿಸಿದರು.

 

ಇಂದಿಲ್ಲಿ ಶನಿವಾರ ಸಂಜೆ ಮಾಟುಂಗಾ ಪೂರ್ವದಲ್ಲಿನ ಮೈಸೂರು ಅಸೋಸಿಯೇಶನ್‍ನ ಕಿರು ಸಭಾಗೃಹÀದಲ್ಲಿ ಮೈಸೂರು ಅಸೋಸಿಯೇಶÀನ್ ಮುಂಬಯಿ ಮತ್ತು ಮುಂಬಯಿ ವಿವಿ ಕನ್ನಡ ವಿಭಾಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೈಸೂರು ಅಸೋಸಿಯೇಶÀನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ-2018 ರಲ್ಲಿ `ಸೃಜನಶೀಲತೆಯನ್ನು ಬೆಳೆಸುವ ಪರಿ' ವಿಚಾರವಾಗಿ ಉಪನ್ಯಾಸ ನೀಡಿ ಡಾ| ರಾವ್ ಮಾತನಾಡಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವನೆಗೈದು ಮುಂಬಯಿನಲ್ಲಿ ಕನ್ನಡ ಸೇವೆಯಲ್ಲಿ ಮೈಸೂರು ಅಸೋಸಿಯೇಶನ್ ಸಂಸ್ಥೆಯೂ ಒಂದು. ಈ ಸಂಸ್ಥೆ ಅನೇಕ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡಪ್ರೇಮ ಬಿಂಬಿಸುತ್ತಿದೆ. ಗಮಕಿ ವಿದ್ವಾಂಸ ಜಯರಾಮರ ಮಹಾಭಾರತದ ಕರ್ಣ ಕೃತಿ ಬಿಡುಗಡೆ ಹಾಗೂ ಅವರಿಂದ ಸೃಜನಶೀಲತೆ ಬೆಳೆಸುವ ಪರಿ ಕುರಿತು ಉಪನ್ಯಾಸ ಕೇಳುವುದೇ ನಮ್ಮನಿಮ್ಮೆಲ್ಲರವ ಭಾಗ್ಯ. ಕನ್ನಡದ ಫ್ರೌಡ ಕಾರ್ಯಗಳನ್ನು ಜನಸಾಮಾನ್ಯರಿಗೆ ತಲುಪುವಂತೆ ಶ್ರಮಿಸಿದ ಗಮಕಿ ವಿದ್ವಾಂಸರಲ್ಲಿ ಜಯರಾಮರೂ ಒಬ್ಬರು ಎಂದರು.

ಮೈಸೂರು ಅಸೋಸಿಯೇಶÀನ್‍ನ ಅಧ್ಯಕ್ಷೆ ಕು| ಕಮಲಾ ಕಾಂತರಾಜ್ ಸ್ವಾಗತಿಸಿದರು ಹಾಗೂ ಡಾ| ರಾವ್ ರಚಿತ `ಮಹಾಭಾರತದ ಕರ್ಣ' ಕೃತಿ ಬಿಡುಗಡೆ ಗೊಳಿಸಿ ಡಾ| ಕರ್ಜಗಿ ಅವರನ್ನು ಸತ್ಕರಿಸಿ ಅಭಿವಂದಿಸಿದರು.

ಕಾರ್ಯಕ್ರಮದಲ್ಲಿ ಡಾ| ಕೆ.ರಘುನಾಥ್, ನಾಗರತ್ನ ಎಸ್.ಮಂಡ್ಯ, ರುದ್ರಮೂರ್ತಿ ಪ್ರಭು, ಸೌಮ್ಯ ಕೆ.ಪ್ರಸಾದ್, ಕೆ.ಗೋವಿಂದ ಭಟ್, ದಿನಕರ ಎನ್.ಚಂದನ್, ಅಹಲ್ಯಾ ಬಲ್ಲಾಳ್, ಡಾ| ಹಾ.ಸು ಶ್ರೀನಿವಾಸ್, ಜಿ.ಹೆಚ್ ರಂಗನಾಥ್ ರಾವ್ವ್, ಮಂಹು ದೇವಾಡಿಗ, ಡಾ| ಅಂಬರೀಶ್ ಪಾಟೀಲ, ಪದ್ಮಜಾ ಪಿ,ಮಣ್ಣೂರ್, ಶಾಂತಳಾ ಆರ್.ಪ್ರಭು, ದುರ್ಗಪ್ಪ ಯು.ಕೋಟಿಯವರ್, ರಮಾ ಉಡುಪ, ಮೈಸೂರು ಅಸೋಸಿಯೇ ಶÀನ್‍ನ ಪ್ರಬಂಧಕ ಬಿ.ಕೆ ಮಧುಸೂದನ್ ಸೇರಿದಂತೆ ಅನೇಕ ಸಾಹಿತ್ಯ, ಗಮಕಾಭಿಮಾನಿಗಳು ಉಪಸ್ಥಿತರಿದ್ದರು.

ಮುಂಬಯಿ ಕನ್ನಡ ವಿಭಾಗದ ವೈ.ಮಧುಸೂದನ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಮೈಸೂರು ಅಸೋಸಿಯೇಶÀನ್‍ನ ಪ್ರಧಾನ ಕಾರ್ಯದರ್ಶಿ ಡಾ| ಗಣಪತಿ ಎಸ್.ಶಂಕರಲಿಂಗ ವಂದಿಸಿದರು.

ಇಂದು ಭಾನುವಾರ (ಫೆ.25) ಬೆಳಿಗ್ಗೆ 11.00 ಗಂಟೆಗೆ ಎರಡನೇ ಮಾಳಿಕೆಯಲ್ಲಿ `ಸಾಹಿತಿಗಳ ಒಡನಾಟದಲ್ಲಿ' ವಿಚಾರವಾಗಿ ಉಪನ್ಯಾಸ ನಡೆಯಲಿದ್ದು ನಂತರ ಡಾ| ಜಯರಾಮ ಗಮಕ ವಾಚನ ನಡೆಸಿ ವಾಖ್ಯಾನ ಗೈಯುವರು ಎಂದು ಬಿ.ಕೆ ಮಧುಸೂದನ್ ತಿಳಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here