Thursday 25th, April 2024
canara news

ಮಂಗಳೂರಿನಲ್ಲಿ ಸದ್ಯದಲ್ಲೇ ಆರಂಭಗೊಳ್ಳಲಿದೆ ಪ್ರಿ-ಪೇಯ್ಡ್ ವಿದ್ಯುತ್ ವ್ಯವಸ್ಥೆ

Published On : 26 Feb 2018   |  Reported By : canaranews network


ಮಂಗಳೂರು: ಸ್ಮಾರ್ಟ್ ಸಿಟಿಯಾಗಿ ಬೆಳೆಯುತ್ತಿರೋ ಮಂಗಳೂರು ಮತ್ತೊಂದು ಸ್ಮಾರ್ಟ್ ಯೋಜನೆಗೆ ಸಜ್ಜಾಗುತ್ತಿದೆ. ಪ್ರಿಪೇಯ್ಡ್ ವಿದ್ಯುತ್ ವ್ಯವಸ್ಥೆ ಮಂಗಳೂರಿನಲ್ಲಿ ಸದ್ಯದಲ್ಲೆ ಆರಂಭಗೊಳ್ಳಲಿದೆ.ನಾವು ಇಷ್ಟೊಂದು ಕರೆಂಟ್ ಬಳಸಲೇ ಇಲ್ಲ ಆದರೂ ಇಷ್ಟು ದೊಡ್ಡ ಬಿಲ್ ಬಂದಿದೆ ಎಂದು ತಲೆ ಕೆಡಿಸಿಕೊಳ್ಳಬೇಕಿಲ್ಲ, ಏಕೆಂದರೆ, ಇನ್ನು ಮುಂದೆ ಎಷ್ಟು ಹಣ ರೀಚಾರ್ಜ್ ಮಾಡುತ್ತಿರೋ ಅಷ್ಟು ವಿದ್ಯುತ್ ನ್ನು ಬಳಸಿಕೊಳ್ಳಬಹುದಾಗಿದೆ. ಈ ರೀತಿಯ ಯೋಜನೆಯನ್ನು ಮೆಸ್ಕಾಂ ಜಾರಿಗೆ ತರಲು ಯೋಜನೆ ರೂಪಿಸಿದೆ.

ಪ್ರೀಪೇಯ್ಡ್ ವಿದ್ಯುತ್ ವ್ಯವಸ್ಥೆ : ಮೊಬೈಲ್ ಕರೆನ್ಸಿ ಪ್ರಿಪೇಯ್ಡ್ ನಂತೆಯೆ ಇದು ಕಾರ್ಯ ನಿರ್ವಹಿಸುತ್ತದೆ. ಮನೆಯ ಡಿಟಿಎಚ್ ಗಳನ್ನು ರಿಚಾರ್ಜ್ ಮಾಡಿದಂತೆ ಇಲ್ಲೂ ಕೂಡ ಮೊದಲು ಹಣ ತುಂಬುವ ವ್ಯವಸ್ಥೆ ಇದೆ. ಮನೆಗೆ ಮೀಟರ್ ರೀಡರ್ ಬಂದು ಬಿಲ್ ನೀಡುವ ವ್ಯವಸ್ಥೆ ಇಲ್ಲಿಲ್ಲ. ಎಷ್ಟು ಹಣ ರಿಚಾರ್ಜ್ ಮಾಡಿರುತ್ತೇವೋ ಅಷ್ಟು ವಿದ್ಯುತ್ ನ್ನು ಬಳಕೆ ಮಾಡಬಹುದಾಗಿದೆ. ಹಣ ಮುಗಿಯುತ್ತಿದ್ದಂತೆ ಆಟೋಮ್ಯಾಟಿಕ್ ಆಗಿ ವಿದ್ಯುತ್ ಕಡಿತಗೊಳ್ಳುತ್ತದೆ.

ವಿದ್ಯುತ್ ಬಳಕೆಯ ಅಲರ್ಟ್ ಮೊಬೈಲ್ ಹಾಗೂ ಇಮೇಲ್ ಗೆ: ಸ್ಮಾರ್ಟ್ ಮೀಟರ್ ಅಲರ್ಟ್ ಸಂಪರ್ಕವನ್ನು ಮೊಬೈಲ್ ಹಾಗೂ ಇಮೇಲ್ ಗೆ ಕಳುಹಿಸಲಾಗುತ್ತದೆ. ನಿಮ್ಮ ರಿಚಾರ್ಜ್ ಬ್ಯಾಲೆನ್ಸ್ 25 ರೂಪಾಯಿಗೆ ಬಂದಾಗ ಮೊಬೈಲ್ ಹಾಗೂ ಇಮೇಲ್ ಗೆ ಸಂದೇಶ ರವಾನೆಯಾಗುತ್ತದೆ. ಗ್ರಾಹಕ ಕೂಡಲೇ ರಿಚಾರ್ಜ್ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳ್ಳದಂತೆ ಎಚ್ಚರಿಕೆ ವಹಿಸಬಹುದಾಗಿದೆ.ಈ ನೂತನ ವ್ಯವಸ್ಥೆಗೆ ಈಗಾಗಲೇ ಬಳಕೆಯಲ್ಲಿರುವ ಮೀಟರ್ ಬಳಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಪ್ರತ್ಯೇಕ ಸ್ಮಾರ್ಟ್ ಮೀಟರ್ ಆಳವಡಿಸಬೇಕಾಗುತ್ತದೆ. ಟಿವಿ ಸೆಟ್ ಆಪ್ ಬಾಕ್ಸ್ ನಲ್ಲಿರುವಂತೆ ಸ್ಮಾರ್ಟ್ ಕಾರ್ಡ್ ಈ ಮೀಟರ್ ನಲ್ಲಿರುತ್ತದೆ. ಸದ್ಯ ಮೀಟರ್ ಗೆ 8 ಸಾವಿರ ರೂಪಾಯಿ ಖರ್ಚಾಗಲಿದ್ದು, ಆ ಹಣವನ್ನು ಮೆಸ್ಕಾಂ ಭರಿಸಲಿದೆ. ಆದರೆ, ಮೀಟರ್ ನಿರ್ವಹಣಾ ವೆಚ್ಚ 75 ರೂಪಾಯಿಯನ್ನು ಮೆಸ್ಕಾಂ ಗೆ ಪ್ರತಿ ತಿಂಗಳು ಕಟ್ಟಬೇಕಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here