Thursday 25th, April 2024
canara news

ಮಾ.04: ಸಾಂತಕ್ರೂಸ್‍ನ ಬಿಲ್ಲವ ಭವನದಲ್ಲಿ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟೋಣ ಸಮಿತಿ ಸಭೆ

Published On : 03 Mar 2018   |  Reported By : Rons Bantwal


ಮುಂಬಯಿ, ಮಾ:03: ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘ ಇದರ ಕಟ್ಟೋಣ ಸಮಿತಿಯ ಪರಾಮರ್ಶೆ ಸಭೆಯನ್ನು ಸಾಂತಕ್ರೂಸ್ ಬಿಲ್ಲವ ಭವನದ ಸಮಾಲೋಚನಾ ಸಭಾಗೃಹದಲ್ಲಿ ಇದೇ ಮಾ.04ನೇ ಆದಿತ್ಯಾವಾರ ಸಂಜೆ 3.30 ಗಂಟೆಗೆ ಬಿಲ್ಲವಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ನಾಣಿಲ್ ಅಧ್ಯಕ್ಷತೆ ಹಾಗೂ ಹಾಗೂ ಕಟ್ಟೋಣ ಸಮಿತಿ ಅಧ್ಯಕ್ಷ ಮೋಹನ್ ಎಸ್.ಸುವರ್ಣ ಮಾರ್ಗದರ್ಶ ನದಲ್ಲಿ ನಡೆಸಲಾಗುವುದು.

1963ರಲ್ಲಿ ಅಂದಿನ ಹಿರಿಯ ಮುತ್ಸದ್ಧಿಗಳ ನೇತೃತ್ವದಲ್ಲಿ ಸ್ಥಾಪನೆಯಾದ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘವು ಸಮಾಜಮುಖಿ ಚಿಂತನೆಯೊಂದಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ನೀಡಿ ಜನಮಾನಸದಿಂದ ಮೆಚ್ಚುಗೆಯನ್ನು ಪಡೆದು, 2013ರಲ್ಲಿ ಭವ್ಯವಾದ ಗುರು ಮಂದಿರವನ್ನು ಲೋಕಾರ್ಪಣೆ ಮಾಡಿ ಇಂದು ಹಳೆಯಂಗಡಿಯ ಈ ಪುಣ್ಯಭೂಮಿ ಭಕ್ತಾಭಿಮಾನಿ ಗಳಿಂದ ಪವಿತ್ರ ಗುರುಕ್ಷೇತ್ರವಾಗಿ ಬೆಳೆಯುತ್ತಿದೆ.

1974ರಲ್ಲಿ ಮುಂಬಯಿಯ ಹಿರಿಯ ಸಮಾಜ ಬಾಂಧವರ ಸಹಕಾರದಿಂದ ನಿರ್ಮಾಣವಾದ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹವು 4.5 ದಶಕಗಳಿಂದ ನಿಶ್ಚಯ, ಮದುವೆ, ಔತಣ, ಸೀಮಂತ, ಉತ್ತರಕ್ರಿಯೆ, ನಾಟಕ, ಯಕ್ಷಗಾನ ಮಾತ್ರವಲ್ಲದೆ ಹಲವು ಧಾರ್ಮಿಕ ಸಭೆ-ಸಮಾರಂಭಗಳಿಗೆ ಸಾಕ್ಷಿಭೂತವಾಗಿ ಸಮಾಜ ಬಾಂಧವರ ಆಶೋತ್ತರಗಳನ್ನು ಪೂರೈಸಿದೆ. ಪ್ರಸ್ತುತ ಈ ಸಭಾಗೃಹದಿಂದ ಈಗಿನ ಕಾಲಸ್ಥಿತಿಯ ಅಗತ್ಯತೆ ಪೂರೈಸಲು ಅಸಾಧ್ಯವಾಗಿರುವುದರಿಂದ ಮತ್ತು ಸಭಾಗೃಹವು ಸಂಪೂರ್ಣ ಶಿಥಿüಲ ಆಗಿರುವುದರಿಂದ ನೂತನ ಭವ್ಯ ಸುಸಜ್ಜಿತ ಸಭಾಗೃಹದ ನಿರ್ಮಾಣ ಅಗತ್ಯ ಹಾಗೂ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನೂತನ ಸಭಾಗೃಹದ ನಿರ್ಮಾಣದ ರೂಪುರೇಖೆ ಈಗಾಗಲೇ ಸಿದ್ಧಗೊಂಡಿದ್ದು, ಈ ಯೋಜನೆಯನ್ನು ಕಾರ್ಯಗತಗೊಳಿಸಲು ತಮ್ಮೆಲ್ಲರ ಸಲಹೆ ಸಹಕಾರದ ನಿರೀಕ್ಷೆಯಲ್ಲಿದ್ದೇವೆ ಎಂದು ಕಟ್ಟೋಣ ಸಮಿತಿ ಅಧ್ಯಕ್ಷ ಮೋಹನ್ ಎಸ್.ಸುವರ್ಣ ತಿಳಿಸಿದ್ದಾರೆ.

ಆ ಪ್ರಯುಕ್ತ ವಿಶೇಷವಾಗಿ ಹಳೆಯಂಗಡಿ, ಪಡುಪಣಂಬೂರು, ಬೆಳ್ಳಾಯರು, ಕೊಲ್ನಾಡು, ಕದಿಕೆ-ಕೊಳುವೈಲು, ಪಾವಂಜೆ, ಚೇಳಾರು, ತೋಕೂರು, ಬೊಳ್ಳೂರು ಮತ್ತು ಪಂಜ ಕೊೈಕುಡೆ ವ್ಯಾಪ್ತಿಯ ಮತ್ತು ಮಹಾನಗರದಲ್ಲಿನ ಸರ್ವ ಸಮಾಜ ಬಾಂಧವರು, ಹಿತೈಷಿಗಳು ಸಭೆಯಲ್ಲಿ ಪಾಲ್ಗೊಂಡು ಮಣಭಾರದ ಈ ಯೋಜನೆ ಕಾರ್ಯಗತಗೊಳಿಸಲು ತಮ್ಮೆಲ್ಲರ ಅತ್ಯಮೂಲ್ಯ ಸಲಹೆ-ಸಹಕಾರ ನೀಡಿ ಸಹಕರಿಸುವ ಂತೆ ಬಿಲ್ಲವಸಮಾಜ ಸೇವಾ ಸಂಘದ ಸುರೇಂದ್ರ ಎ.ಪೂಜಾರಿ ಈ ಮೂಲಕ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here