Thursday 25th, April 2024
canara news

ಸೌಹಾರ್ದತೆಯಿಂದ ಎಲ್ಲವನ್ನು ಗೆಲ್ಲಲು ಸಾಧ್ಯ.: ಸಚಿವ ಬಿ.ರಮಾನಾಥ ರೈ

Published On : 03 Mar 2018   |  Reported By : Rons Bantwal


ಬಂಟ್ವಾಳ. ಸೌಹಾರ್ದತೆಯಿಂದ ಎಲ್ಲವನ್ನು ಗೆಲ್ಲಲು ಸಾಧ್ಯ. ಪ್ರತಿಯೊಬ್ಬರಲ್ಲಿ ಸೌಹಾರ್ದ ಮನೋಭಾವ ಬೆಳೆದಾಗ ನಮ್ಮ ಊರು. ತಾಲೂಕು ಜಿಲ್ಲೆ ರಾಜ್ಯ ದೇಶವೇ ಮಾದರಿ ದೇಶವಾಗಿ ಬೆಳೆಯಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಪಟ್ಟರು.

ಅವರು ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಮಖಾಂ ಉರೂಸ್ ಪ್ರಯುಕ್ತ ಆಯೋಜಿಸಿದ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕೋಮುಭಾವನೆಯುಲ್ಲ ಒಬ್ಬನಿಂದ ಊರಿಗೆ ಕಟ್ಟ ಹೆಸರು ತರಲು ಸಾಧ್ಯ. ಎಲ್ಲರೂ ಸೌಹಾರ್ದತೆಯಿಂದ ಇದ್ದಾಗ ಊರಿನಲ್ಲಿ ಕೋಮು ಕೃತ್ಯಗಳಿಗೆ ಅವಕಾಶ ಸಿಗುದ್ದಿಲ್ಲ. ಕಟ್ಟತ್ತಿಲದಲ್ಲಿ ಎಲ್ಲರೂ ಸೌಹಾರ್ದತೆಯಿಂದ ಇದ್ದು ಉರೂಸ್ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದು ಮತ್ತು ಕ್ರಿಸ್ತ ಸಮುದಾಯದ ಜನರು ಭಾಗವಹಿಸುದ್ದನ್ನು ನಾನು ಕಂಡಿದ್ದೆನೆ ಎಂದು ಹೇಳಿದರು.

ಅಸ್ಸಯ್ಯಿದ್ ವಿ.ಎಸ್ ಅಬ್ದುಲ್ ಹಮೀದ್ ತಂಙಳ್ ಉದ್ಯಾವರ ದುಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಟ್ಟತ್ತಿಲ ಮುದರ್ರಿಸ್ ಇಬ್ರಾಹಿಂ ಫೈಝಿ ಪುಳಿಕ್ಕೂರು ಅಧ್ಯಕ್ಷತೆವಹಿಸಿದರು. ಕಟ್ಟತ್ತಿಲ ಜುಮಾ ಮಸೀದಿ ಮಾಜಿ ಗೌರವಾಧ್ಯಕ್ಷ ಕೆ.ಎಂ ಉಮ್ಮರ್ ಮದನಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಕಳ ಸುಫ್ಯಾನ್ ಸಖಾಫಿ ಮುಖ್ಯ ಪ್ರಭಾಷಣಗೈದರು.

ಕೊಳ್ನಾಡು ಜಿ.ಪಂ ಸದಸ್ಯ ಎಂ.ಎಸ್ ಮುಹಮ್ಮದ್, ಕೊಳ್ನಾಡು ಗ್ರಾ.ಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಯಿ, ಬಂಟ್ವಾಳ ತಾ.ಪಂ ಸದಸ್ಯ ನಾರಾಯಣ ಶೆಟ್ಟಿ ಕುಲ್ಯಾರು, ಬಾಕ್ರಬೈಲ್ ಸೋಮೇಶ್ವರ ದೇವಸ್ಥಾನದ ಅರ್ಚಕ ತಿರುಮಲೇಶ್ವರ ಭಟ್ ಮೆದು, ಸಾಲೆತ್ತೂರು ನಿತ್ಯಾದರ್ ಚರ್ಚ್ ಧರ್ಮಗುರು ಫಾ.ಎಂ. ಹೆನ್ರಿ ಡಿಸೋಜ, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಹೈದರ್ ಪಾ?ತಿಪಾಡಿ, ಕಟ್ಟತ್ತಿಲ ಜುಮಾ ಮಸೀದಿ ಅಧ್ಯಕ್ಷ ಕೆ.ಪಿ ಅಬ್ದುಲ್ ಖಾದರ್, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಕಾಂಗ್ರೆಸ್ ಕೊಳ್ನಾಡು ವಲಯ ಅಧ್ಯಕ್ಷ ಎ.ಬಿ ಅಬ್ದುಲ್ಲ, ಬಂಟ್ವಾಳ ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾ.ಪಂ ಸದಸ್ಯರಾದ ಮುಹಮ್ಮದ್ ಮಂಚಿ, ಇಬ್ರಾಹಿಂ ಮಣ್ಣಗದ್ದೆ, ಸಾಲೆತ್ತೂರು ಗ್ರಾ.ಪಂ ಸದಸ್ಯ ನಾರಾಯಣ ಪೂಜಾರಿ ವಾಲ್ತಾಜೆ, ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಿ.ಎಂ.ಕೆ ಮೊಹಮ್ಮದ್ ಹಾಜಿ, ಬಂಟ್ವಾಳ ತಾಲೂಕು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾದವ ಮಾವೆ, ಬಂಟ್ವಾಳ ತಾ.ಪಂ ಮಾಜೆ ಸದಸ್ಯ ಸಾಲೆ ಮುಹಮ್ಮದ್, ಪುರುಷೋತ್ತಮ ಶೆಟ್ಡಿ, ಉದ್ಯಮಿ ಬಾಪಕುಂಞ, ಕಟ್ಟತ್ತಿಲ ಜಮಾಅತ್ ಉಪಾಧ್ಯಕ್ಷ ಡ್ರೈವರ್ ಮೂಸಾ, ಪ್ರ.ಕಾರ್ಯದರ್ಶಿ ಪಿ.ಇಬ್ರಾಹಿಂ, ಕಾರ್ಯದರ್ಶಿಗಳಾದ ಮುಹಮ್ಮದ್ ಕುಂಞ, ಕೆ.ಬಿ ಉಸ್ಮಾನ್, ಕೋಶಾಧಿಕಾರಿ ಮುಹಮ್ಮದ್, ಸದಸ್ಯರಾದ ಅಬೂಬಕ್ಕರ್ ಪಾಲ್ತಾಜೆ, ಡಿ.ಎ ಹಮೀದ್ ಹಾಜಿ ದಾರೆಪಡ್ಪು, ಸಲೀಂ ದಾರೆಪಡ್ಪು ಮುಂತಾದವರು ಉಪಸ್ಥಿತರಿದ್ದರು.

ಸಾಲೆತ್ತೂರು ಗ್ರಾ.ಪಂ ಸದಸ್ಯ ಎ.ಸಿ ಮೊದ್ದೀನ್ ಕುಂಞ ಸ್ವಾಗತಿಸಿದರು. ಕಟ್ಟತ್ತಿಲ ಜುಮಾ ಮಸೀದಿ ಕಾರ್ಯದರ್ಶಿ ಕೆ.ಎಂ ಮುಹ್ ಯುದ್ದೀನ್ ಮದನಿ ವಂದಿಸಿದರು. ನೌಫಲ್ ಕೆ.ಬಿ.ಎಸ್ ಕೂಡ್ತಮೋಗರು ಕಾರ್ಯಕ್ರಮ ನಿರೂಪಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here