Thursday 28th, March 2024
canara news

ಕುಂದಾಪುರ ಮಹಿಳಾ ದಿನಾಚರಣೆ – ಮಹಿಳೆಯರು ಕುಟುಂಬಗಳ ದೀಪಗಳಾಬೇಕು

Published On : 12 Mar 2018   |  Reported By : Bernard Dcosta


ಕುಂದಾಪುರ, ಮಾ.12: ‘ಹುಟ್ಟಿನಲ್ಲಿ ಮಹಿಳೆ ಪರಿಪೂರ್ಣತೆಯನ್ನು ಹೊಂದಿದವಳಾಗಿದ್ದಾಳೆ, ಅವಳಲ್ಲಿ ಸ್ರಶ್ಠಿಕರ್ತ ಮಮತೆ, ವಾತ್ಸಲ್ಯ, ಪ್ರೀತಿ, ವಿಸ್ವಾಸ, ಧ್ರಡತೆ, ಬುದ್ದಿವಂತಿಗೆ, ಸಹಿಶ್ಣುತೆ ಇಂತಹ ಹಲವಾರು ಗುಣಗಳಿಂದ ಹುಟ್ಟಿಸಿದ್ದಾನೆ, ನೈತಿಕ ವಿಚಾರದಾರೆಯಿಂದ, ದೇವ ನಂಬಿಕೆಯಿಂದ ಸನ್ಮಾರ್ಗದಲ್ಲಿ ನೆಡೆದು ತಮ್ಮ ಮಕ್ಕಳನ್ನು ಅದರಂತೆ ಪೆÇೀಶಿಸಿ ಕುಟುಂಬಗಳ ದೀಪಗಳಾಬೇಕು’ ಎಂದು ಅವರು ಮಹಿಳೆಯರಿಗೆ ಸಂದೇಶ ನೀಡಿದರು ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಕುಂದಾಪುರ ಘಟಕದ ನೇತ್ರದ್ವದಲ್ಲಿ ಚರ್ಚಿನ ಸ್ವಸಹಾಯ ಗುಂಪುಗಳ ಜೊತೆ ಹೋಲಿ ರೊಜರಿ ಚರ್ಚಿನ ಸಭಾಭವನದಲ್ಲಿ ನೆಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭ ಅವರು ಸಂದೇಶ ನೀಡಿದರು.

 

ಮೊದಲು ಚರ್ಚಿನಲ್ಲಿ ಬಲಿಪೂಜೆಯನ್ನು ಅರ್ಪಿಸಿದ ತರುವಾಯ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಧಾನ ಧರ್ಮಗುರು ವ| ಅನೀಲ್ ಡಿಸೋಜಾ ‘ಮಹಿಳೆಯರು ಯಾವತ್ತು ತ್ಯಾಗ, ಪ್ರೀತಿ, ವಿಶ್ವಾಸ, ಮಮತೆ ಆರೈಕೆಯಲ್ಲಿ ಮುಂದು, ಅದರಿಂದ ಸಮಾಜ ನಿಮ್ಮನ್ನು ಅಭಿಮಾನದಿಂದ ನೋಡುತ್ತದೆ, ನೀವು ನಿಮ್ಮ ಮಕ್ಕಳೊಡನೆ ಹೆಚ್ಚು ಬೆರೆಯಬೇಕು, ಹಾಗೆಯೇ ನೆರಮನೆಯವರಲ್ಲಿ ಒಳ್ಳೆಯ ಭಾಂದವ್ಯವನ್ನು ಬೆಳೆಸಿಕೊಳ್ಳಬೇಕು’ ಎಂದು ಅವರು ನುಡಿದರು. ಸಹಾಯಕ ಧರ್ಮಗುರು ವಂ|ಸಂದೀಪ್ ಜೆರಾಲ್ಡ್ ಡಿಮೆಲ್ಲೊ ‘ಮಹಿಳೆ ತಾಯಿಯಾಗುವ ಮಹಾ ಭಾಗ್ಯವನ್ನು ಪಡೆದ ಅದ್ರಶ್ಠವಂತೆ, ಅವಳಲ್ಲಿ ಮಮತೆಯ ಶೆಲೆಯಿದೆ’ಎಂದು ಶುಭ ಕೋರಿದರು. ಪ್ರಾಂಶುಪಾಲ ಪ್ರವೀಣ್ ಅಮ್ರತ್ ಮಾರ್ಟಿಸ್ ‘ತಾಯಿ ಜೀವದ ಮೂಲ, ಹಾಗಾಗಿ ತಾಯಿ ಮಮತೆಯ ಸಾಕಾರಾವಾಗಿದ್ದಾಳೆಂದು’ ಶುಭ ಕೋರಿದರು.

ಹೆಚ್ಚು ಹಾಜರಾತಿಯ ಸ್ವಸಹಾಯ ಗುಂಪುಗಳಿಗೆ, ಮತ್ತು ಆಡೋಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಹಂಚಲಾಯಿತು. ಮಹಿಳೆಯರಿಗಾಗಿಯೇ ವಿಶೇಷವಾದ ಕಿರು ನಾಟಕಗಳನ್ನು ಬರೆಯುವ ಸಾಹಿತಿ ಬರ್ನಾಡ್ ಡಿಕೊಸ್ತಾರನ್ನು ಗೌರವಿಸಲಾಯಿತು. ನಂತರ ಕಿರುನಾಟಕಗಳು, ನ್ರತ್ಯ ಗಾಯಾನಗಳ ಪ್ರದರ್ಶನವನ್ನು ಮಹಿಳೆಯರು ನೀಡಿದರು. ವೇದಿಕೆಯಲ್ಲಿ ಪಾಲನ ಮಂಡಳಿಯ ಕಾರ್ಯದರ್ಶಿ ಫೆಲ್ಸಿಯಾನ ಡಿಸೋಜಾ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು ಕುಂದಾಪುರ ಚರ್ಚ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಶಾಂತಿ ರಾಣಿ ಬಾರೆಟ್ಟೊ ಸ್ವಾಗತಿಸಿದರು. ಕಾರ್ಯದರ್ಶಿ ವೀಣಾ ಡಿಆಲ್ಮೇಡಾ ವಂದಿಸಿದರು. ಶಾಂತಿ ಕರ್ವಾಲ್ಲೊ ಕಾರ್ಯಕ್ರಮ ನಿರ್ವಹಿದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here