Thursday 25th, April 2024
canara news

ತೃತೀಯ ವಾರ್ಷಿಕ ರಕ್ತದಾನ ಶಿಬಿರ ಆಯೋಜಿಸಿದ ಭವಾನಿ ಫೌಂಡೇಶನ್ ಮುಂಬಯಿ

Published On : 02 Apr 2018   |  Reported By : Rons Bantwal


ರಕ್ತದಾನ ಮಾನವ ಪುನರ್‍ಜ್ಜೀವನಕ್ಕೆ ಪೂರಕ : ಸಂತೋಷ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ,: ಭವಾನಿ ಫೌಂಡೇಶನ್ ನವಿ ಮುಂಬಯಿ ಸಂಸ್ಥೆಯು ಫೆÇೀರ್ಟಿಸ್ ಹಾಸ್ಟಿಟಲ್ ಮುಂಬಯಿ ಸಹಯೋಗದೊಂದಿಗೆ ತೃತೀಯ ವಾರ್ಷಿಕ ರಕ್ತದಾನ ಶಿಬಿರ ಇಂದಿಲ್ಲಿ ಶನಿವಾರ ಪೂರ್ವಾಹ್ನ ನವಿಮುಂಬಯಿ ಸಿಬಿಡಿ ಬೇಲಾಪುರ ಅಲ್ಲಿನ ವಿಟೈಮ್ಸ್ ಸ್ಕ್ವೇರ್‍ನ ಸಭಾಗೃಹದಲ್ಲಿ ಆಯೋಜಿಸಿತ್ತು. ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಹಾಗೂ ಭವಾನಿ ಫೌಂಡೇಶನ್‍ನ ಸಂಸ್ಥಾಪಕಾಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋದÀರ ದೇರಣ್ಣ ಶೆಟ್ಟಿ (ಕೆ.ಡಿಶೆಟ್ಟಿ) ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ರಕ್ತದಾನ ಶಿಬಿರವನ್ನು ಎನ್.ಎಸ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕ ಸಂತೋಷ್ ಶೆಟ್ಟಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಅಭ್ಯಾಗತರುಗಳಾಗಿ ಉದ್ಯಮಿ ರಾಘವ ರೈ, ಸಮಾಜ ಸೇವಕರುಗಳಾದ ಮುರಳೀಧರ್ ಪಾಲ್ವೆ ಭಿಲವಲೆ, ಭವಾನಿ ಫೌಂಡೇಶನ್‍ನ ಕಾರ್ಯಕಾರಿ ಸಮಿತಿ ಸದಸ್ಯ ಪಂಡಿತ್ ನÀವೀನ್‍ಚಂದ್ರ ಆರ್.ಸನೀಲ್, ಫೆÇೀರ್ಟಿಸ್ ಹಾಸ್ಟಿಟಲ್‍ನ ವೈದ್ಯಾಧಿಕಾರಿ ಡಾ| ಪ್ರದ್ನ್ಯಾ ಕರಾಟ್ ವೇದಿಕೆಯಲ್ಲಿ ಆಸೀನರಾಗಿದ್ದರು.

ಆಧುನಿಕ ಯಾಂತ್ರಿಕ ಜೀವನದಲ್ಲಿ ಆರೋಗ್ಯದ ಕಾಳಜಿ ಮರೆಯಾಗುತ್ತಿದೆ. ನಿರ್ಲಕ್ಷ ಮತ್ತು ಅವಸರ ಪ್ರವೃತ್ತಿಯ ಜೀವನಶೈಲಿ ಅನಾರೋಗ್ಯಕ್ಕೆ ಕಾರಣವಾಗಿದೆ. ಆದುದರಿಂದ ಮಾನವನು ಪ್ರಕೃತಿಸಯ್ಯ ಜೀವನಕ್ಕೆ ಸ್ಪಂದಿಸುವ ಅಗತ್ಯವಿದೆ. ನಾವು ಆರೋಗ್ಯದಾಯಕರಾಗಿದ್ದರೆ ಮಾತ್ರ ಮತ್ತೊಬ್ಬರಿಗೆ ಜೀವದಾನ ನೀಡಲು ಸಾಧ್ಯ. ಆರೋಗ್ಯವಾಗಿದ್ದರೆ ಮಾತ್ರ ಮತ್ತೊಬ್ಬರ ಜೀವದಾನಕ್ಕೆ ರಕ್ತದಾನ ನೀಡಬಹುದು. ರಕ್ತದಾನ ಶಿಬಿರ ಸ್ವಸ್ಥ ಸಮಾಜಕ್ಕೆ ವರದಾನ ಆಗಿದ್ದು, ರಕ್ತದಾನ ಮಾನವ ಪುನರ್‍ಜ್ಜೀವನಕ್ಕೆ ಪೂರಕವೂ ಹೌದು. ಇಂತಹ ವಿವಿಧ ಸೇವೆಗಳ ದಾನಕ್ಕೆ ಭವಾನಿ ಫೌಂಡೇಶನ್‍ನ ಸೇವೆ ಅನುಪಮವೆಣಿಸಿದೆ ಎಂದು ಸಂತೋಷ್ ಶೆಟ್ಟಿ ಭವಾನಿ ಫೌಂಡೇಶನ್‍ನ ಸ್ವಸ್ಥ ಸಮಾಜದ ಕಾಳಜಿಯನ್ನು ಪ್ರಶಂಸಿಸಿದರು.

ನನ್ನ ಮಾತೆಯ ಅನುಗ್ರಹದಿಂದ ಇಂತಹ ಸಮಾಜ ಸೇವೆ ಸಾಧ್ಯವಾಗುತ್ತ್ತಿದೆ. ಜನನಿದಾತೆಯ ಕನಸು ಸೇವೆಯ ಮೂಲಕ ನನಸಾಗುತ್ತಿದೆ. ಸ್ವಸ್ಥ ್ಯ ಮತ್ತು ಸುಶಿಕ್ಷಿತ ಸಮಾಜದ ಆಶಯ ಭವಾನಿ ಫೌಂಡೇಶನ್ ಸಂಸ್ಥೆಯದ್ದಾಗಿದೆ. ಮಾನವ ಜೀವನ ಸಾರ್ಥಕತೆಯ ಸಾಧನಗಳಲ್ಲಿ ದಾನ ಅತಿ ಶ್ರೇಷ್ಠ ಸ್ಥಾನ ಪಡೆದಿದೆ. ಇಂತಹ ದಾನಗಳಿಗೆ ಹಲವು ರೂಪಗಳಿವೆ. ವಿವಿಧ ಪ್ರಕಾರಗಳನ್ನು ದಾನರೂಪದಲ್ಲಿ ಕಾಣಬಹುದು. ನಿರಪೇಕ್ಷ ಮನೋಬುದ್ಧಿಯಿಂದ ಏನನ್ನಾದರೂ ಕೊಡುವುದೇ ದಾನದ ಗೂಡಾರ್ಥ. ಇದನ್ನೇ ಮಾದರಿಯನ್ನಾಗಿಸಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇವೆ. ಸಮಾಜ ಕಳಕಳಿ ಪ್ರತೀಯೋರ್ವನದ್ದಾಗÀಬೇಕು ಎನ್ನುವುದನ್ನು ಮನವರಿಕೆ ಮಾಡಬೇಕು ಅನ್ನುವುದೇ ನಮ್ಮ ಸದಾಶಯ. ಬಂಟ್ಸ್ ಸಂಘ ಮುಂಬಯಿ ನನಗೆ ಸೇವೆಗೆ ನೀಡಿದ ಪೆÇ್ರೀತ್ಸ್ಸಹ, ಅವಕಾಶದ ಪರಿಣಾಮವಾಗಿ ನಾನು ಇಂತಹ ಸಾಧನೆಯನ್ನು ಯೋಚಿಸಲು ಸಾಧ್ಯವಾಗಿದೆ. ಭವಾನಿ ಪರಿವಾರ, ಪದಾಧಿಕಾರಿ, ಸದಸ್ಯರ ಸಹಯೋಗದಿಂದ ಸಂಸ್ಥೆ ಸೇವೆಗೆ ಮತ್ತಷ್ಟು ಉತ್ಸುಕವಾಗಿದೆ. ಸಾಧು ಸಂತರ ಮರಾಠಿ ಭೂಮಿಯಲ್ಲಿನ ಸೇವೆಯ ಫಲ ಎಂದೂ ಮರೆಯಲಾಗದು. ಸೇವಾಕರ್ತರಿಗೆ ಸದಾ ಪ್ರತಿಫಲಿಸ ಬಲ್ಲದು. ಆದುದರ್‍ಂದ ಸೇವಾ ಮುನ್ನಡೆಗೆ ಎಲ್ಲರ ಪ್ರೀತಿ ಸದಾ ನಮ್ಮಮೇಲಿದ್ದರೆ ಸಾಕು. ಅವಾಗಲೇ ನಮ್ಮ ಶ್ರಮ ಫಲದಾಯಕವಾಗ ಬಲ್ಲದು ಎಂದು ಕೆ.ಡಿ ಶೆಟ್ಟಿ ತಿಳಿಸಿದರು.


ಕಾರ್ಯಕ್ರಮದಲ್ಲಿ ಫೆÇೀರ್ಟಿಸ್ ಹಾಸ್ಟಿಟಲ್‍ನ ರಕ್ತ ಸಂಗಹಣಾ ವಿಭಾಗೀಯ ಮುಖ್ಯಸ್ಥೆ ಶ್ರದ್ಧಾ ಖುಪ್‍ಕರ್, ಸಕಾಲ್ ವಿೂಡಿಯಾ ಸಮೂಹದ ಉಪ ಮಹಾ ಪ್ರಬಂಧಕ ದಿನೇಶ್ ಎಸ್.ಶೆಟ್ಟಿ ಪಡುಬಿದ್ರೆ, ಸಮಾಜ ಸೇವಕ ಸಂಜಯ್ ಚವ್ಹಾಣ್ ಭಿಲವಲೆ, ಫೌಂಡೇಶನ್‍ನ ವಿಶ್ವಸ್ಥ ಸದಸ್ಯರುಗಳು ಸರಿತಾ ಕುಸುಮೋದರ್ ಶೆಟ್ಟಿ, ಅಂಕಿತಾ ಜೆ.ಶೆಟ್ಟಿ, ಕೋಶಾಧಿಕಾರಿ ಚೈತಾಲಿ ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯ ಪ್ರೇಮನಾಥ ಬಿ.ಶೆಟ್ಟಿ ಮುಂಡ್ಕೂರು ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ಥಾನೀಯ ಅನೇಕ ಸಂಸ್ಥೆಗಳ ಪದಾಧಿಕಾರಿಗಳು, ಭವಾನಿ ಶಿಪ್ಪಿಂಗ್ ಸರ್ವಿಸಸ್ ಸಂಸ್ಥೆಯ ಉನ್ನತಾಧಿಕಾರಿಗಳು, ಸಿಬ್ಬಂದಿಗಳು, ಶೆಟ್ಟಿ ಪರಿವಾರದ ಬಂಧು-ಮಿತ್ರರು, ಹಿತಚಿಂತಕರು ಸೇರಿದಂತೆ ಸುಮಾರು 390 ಮಂದಿ ಭಾಗವಹಿಸಿದ್ದರು. ಆ ಪಯ್ಕಿ ಸುಮಾರು 106 ಮಂದಿಯ ರಕ್ತ ಸ್ವೀಕರಿಸಲು ನಿರಾಕರಿಸಲ್ಪಟ್ಟರು. 250 ಮಂದಿಯ ರಕ್ತ ಸ್ವೀಕರಿಸಲ್ಪಟ್ಟಿದ್ದು ಸುಮಾರು 102 ಯೂನಿಟ್‍ಗಳಷ್ಟು ರಕ್ತ ಸಂಗ್ರಹಿಸಲ್ಪಟ್ಟಿತು. ಫೆÇೀರ್ಟಿಸ್ ಆಸ್ಪತ್ರೆಯ ಸಂಜಯ್ ಚೌವ್ಹಾಣ್, ಮುರಳೀಧರ್ ಪಾಲ್ವೆ, ಎನ್.ಎಲ್ ಲಾಜಿಸ್ಟಿಕ್ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ, ಸುನೀಲ್ ಪಾಗೋರೆ, ರಮೇಶ್ವರ ರಾಜ್‍ಪುತ್, ಸುಚೀಂತ್ರ ದುರ್ಗುಡೆ, ಜಗಯ್ ಪಡ್ವಾಲೆ, ಅಜಯ್ ಸೂರಿ, ಎಸ್.ರಾಜಶ್ರೀ, ಆರ್.ಶಿಲ್ಪಾ, ಕೆ.ಅಶ್ವಿನಿ ರಕ್ತ ಸಂಗ್ರಹಕ್ಕೆ ಸಹಕರಿಸಿದ್ದು ಶಿಬಿರದಲ್ಲಿ

ಫೌಂಡೇಶನ್‍ನ ಉಪಾಧ್ಯಕ್ಷ ಜೀಕ್ಷಿತ್ ಕುಸುಮೋದರ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಾಜಿ ಗೌ| ಪ್ರ| ಕಾರ್ಯದರ್ಶಿ ರಾಜಲಕ್ಷ್ಮೀ ಸುಬ್ರಹ್ಮಣ್ಯಂ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕೋಶಾಧಿಕಾರಿ ನವೀನ್ ಸಂಜೀವ್ ಶೆಟ್ಟಿ, ರೋನಾಲ್ಡ್ ಥೋಮಸ್ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಗೌ| ಪ್ರ| ಸೀಮಾ ಪವಾರ್ ವೈಧ್ಯ ತಂಡವನ್ನು ಪರಿಚಯಿಸಿ ವಂದನಾರ್ಪಣೆಗೈದರು.

 

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here