Tuesday 23rd, April 2024
canara news

ಮುಂಬಯಿ ಮಂಗಳೂರು ಬಸ್‍ನಲ್ಲಿ ಚಿನ್ನಾಭರಣ ಕಳವು

Published On : 06 Apr 2018   |  Reported By : Rons Bantwal


ಕರಿಯಮಣಿಯೂ ಒಯ್ಯದೆ ಬರೀ ಕೈಯಲ್ಲಿ ಮನೆ ಸೇರಿದ ಮದುಮಗ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.06: ಮುಂಬಯಿನಿಂದ ಮಂಗಳೂರುಗೆ ತೆರಳುತ್ತಿದ್ದ ಖಾಸಾಗಿ ಬಸ್‍ವೊಂದರಲ್ಲಿ ಸ್ವತಃ ಮದುಮಗನೇ ಕೊಂಡುಯ್ಯುತ್ತಿದ್ದ ಚಿನ್ನಾಭರಣ, ನಗದು ಕಳವು ಪ್ರಕರಣ ಕಳೆದ ಗುರುವಾರ ರಾತ್ರಿ ನಡೆದಿದೆ.

ನಗರದ ಅಂಧೇರಿ ಮರೋಲ್‍ನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದ ಬಂಟ್ವಾಳ ನಾವೂರು ಅಲ್ಲಿಪಾದೆ ಪುಚ್ಚೆರ್‍ಕಟ್ಟೆ ಮೂಲದ ರೋಶನ್ ಸಿಕ್ವೇರಾ ತನ್ನ ಮದುವೆಯ ಪೂರ್ವತಯಾರಿ ಸಿದ್ಧತೆಗಾಗಿ ಖಾಸಾಗಿ ಸ್ಲೀಪರ್ ಎಸಿ ಬಸ್‍ವೊಂದರಲ್ಲಿ ಮಂಗಳೂರುಗೆ ಹೋಗುತ್ತಿದ್ದು ಬಸ್ ಸತಾರ ಅಲ್ಲಿನ ನವಮಿ ಹೊಟೇಲ್‍ನಲ್ಲಿ ಊಟಕ್ಕಾಗಿ ನಿಲ್ಲಿಸಲ್ಪಟ್ಟಿತು. ಸೂಟ್‍ಕೇಸ್‍ನ್ನು ಹರಿತವಸ್ತುವಿನಲ್ಲಿ ಕತ್ತರಿಸಿ ಒಳಗಿದ್ದ ಸುಮಾರು 3 ಲಕ್ಷ ಮೌಲ್ಯದ ಎನ್ನಲಾದ ಕರಿಯಮಣಿ, ಬ್ರಾಸ್‍ಲೈಟ್, ಉಂಗುರ ಮತ್ತು ಚೈನ್ ಇತ್ಯಾದಿ ಚಿನ್ನಾಭರಣ, ನಗದ ಕಳ್ಳತನ ನಡೆಸಲಾಗಿದೆ.

ಊಟ ಪೂರೈಸಿ ಸತಾರದಿಂದ ಹೊರಟ ಬಸ್ ಸುಮಾರು ಒಂದುಗಂಟೆ ಬಳಿಕ ಕರಾಡ್ ತಲುಪುತ್ತಿದ್ದಂತೆಯೇ ರೋಶನ್ ಸಿಕ್ವೇರಾಗೆ ಈ ವಿಚಾರ ಗಮನಕ್ಕೆ ಬಂದಿದ್ದು, ಬಸ್ ಚಾಲಕ, ನಿರ್ವಾಹಕರ ಗಮನಕ್ಕೆ ತಂದರು. ಬಸ್‍ನ್ನು ಕೋಲಾಪುರ ಪೆÇಲೀಸ್ ಠಾಣೆಗೆ ಒಯ್ದು ಘಟನೆ ಬಗ್ಗೆ ದೂರು ನೀಡಿದರೂ ಪ್ರಕರಣ ಸತಾರದಲ್ಲಿ ನಡೆದ ಕಾರಣ ದೂರು ಸ್ವೀಕರಿಸದೆ ಸತಾರದ ಪೆÇಲೀಸ್ ಠಾಣೆಯಲ್ಲೇ ದೂರು ದಾಖಲಿಸುವಂತೆ ಸೂಚಿದರು ಎನ್ನಲಾಗಿದೆ. ಆದರೆ ರೋಶನ್‍ನ ಸೂಚನೆ ಮೇರೆಗೆ ಬಸ್ ಸತಾರಕ್ಕೆ ಹಿಂತಿರುಗಿಸದೆ ಮಂಗಳೂರುಗೆ ಕೊಂಡೊಯ್ಯಲಾಗಿದ್ದು ಇಂದು ಬೆಳಿಗ್ಗೆ ಎಂದಿನಂತೆ ಬಸ್ ಮಂಗಳೂರುಗೆ ತಲುಪಿದೆ.

ಘಟನೆ ಬಗ್ಗೆ ತತ್‍ಕ್ಷಣ ಎಚ್ಚೆತ್ತ ಬಸ್ ವ್ಯವಸ್ಥಾಪಕರು ಸತಾರದ ನವಮಿ ಹೊಟೇಲ್‍ನ ಎಲ್ಲಾ ಸಿಸಿ ಕೇಮಾರಾಗಳ ಪರಿಶೀಲನೆ ನಡೆಸುವಂತೆ ಸೂಚಿಸಿ, ಪೆÇಲೀಸ್ ಅಧಿಕಾರಿಗಳು ಮತ್ತು ಗ್ರಾಹಕ ರೋಶನ್‍ಗೆ ಸಂಪೂರ್ಣ ಸಹಯೋಗ ನೀಡಿರುವುದಾಗಿ ತಿಳಿದು ಬಂದಿದೆ.

ಪ್ರಯಾಣಿಕರೇ ಎಚ್ಚರ ವಹಿಸುವ ಅಗತ್ಯವಿದೆ:
ಬಹುತೇಕವಾಗಿ ಇಂತಹ ಘಟನೆಗಳು ಪ್ರಯಾಣಿಕರ ಬೇಜವಾಬ್ದಾರಿಯಿಂದಲೇ ನಡೆಯುತ್ತಿವೆ. ಇಷ್ಟೊಂದು ಮೌಲ್ಯದ ವಸ್ತುಗಳು, ನಗದು ಕೊಂಡೊಯ್ಯುವಾಗ ಪ್ರಯಾಣಿಕರೇ ತಮ್ಮ ವಸ್ತುಗಳ ಜಾಗೃತಿ ವಹಿಸುವ ಅಗತ್ಯವಿದೆ. ಘಟನೆ ಬಳಿಕ ಮತ್ತೊಬ್ಬರನ್ನು ದೂರುವ ಅಥವಾ ಆರೋಪ ವಹಿಸಿ ಅಪಾದನೆ ನಡೆಸುವುದು ಸರಿಯಲ್ಲ. ಮಾತ್ರವಲ್ಲದೆ ಸಹ ಪ್ರಾಯಾಣಿಕರನ್ನು ಅನುಮಾನದಿಂದ ಕಂಡು ತಪಾಸನೆ ನೆಪದಲ್ಲಿ ಮಾನಸಿಕ ಕಿರುಕುಳ, ಬಸ್ ತಡೆದು ಕಾಲ ಕಳೆದು ಮಾನಸಿಕವಾಗಿ ಹಿಂಸಿಸುವುದು ಸರಿಯಲ್ಲ ಎಂದು ಬಸ್ ಚಾಲಕ, ನಿರ್ವಾಹಕರು ತಿಳಿಸಿದ್ದಾರೆ. ಇಷ್ಟೊಂದು ಘಟನೆ, ಕಳವು ಪ್ರಕರಣಗಳು ನಡೆಯುತ್ತಿರುವುದನ್ನು ತಿಳಿಯುವ ಪ್ರಯಾಣಿಕರೇ ಎಚ್ಚರ ವಹಿಸುವಂತೆ ಬಸ್ ವ್ಯವಸ್ಥಾಪಕರು ತಿಳಿಸಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here