Tuesday 22nd, January 2019
canara news

ಮುಂಬಯಿ ವಿವಿ ಕನ್ನಡ ವಿಭಾಗ ನಡೆಸಿದ ಜಾನಪದ ಸಂಭ್ರಮ ಮತ್ತು ಕೃತಿ ಬಿಡುಗಡೆ ಜಾನಪದದಿಂದ ಧರ್ಮ ಗೌರವ ಸಿದ್ಧಿಸಿದೆ : ಡಾ| ಅಪ್ಪಗೆರೆ ತಿಮ್ಮರಾಜು

Published On : 09 Apr 2018   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.09: ನನಗೆ ನಂಬಿಕೆ ಗಟ್ಟಿದ್ದು ಜಾನಪದ. ನಂಬಿಕೆ ಎಂದರೆ ಜಾನಪದ. ಗೌರವವನ್ನು ಪಡೆಯಲು ಕಲಿಸಿದ್ದು ಜಾನಪದ. ಹಿರಿಯರ ಮುಂದೆ ಗೌರವಪೂರ್ವಕವಾಗಿ ಯಾವ ಕೆಲಸ ಮಾಡಬಾರದು ಎಂದು ಸಂಸ್ಕೃತಿ ಕಲಿಸಿದ್ದಲ್ಲ ಅದು ಜಾನಪದ ಸಂಸ್ಕೃತಿ ಕಲಿಸಿದ್ದು. ಆದುದರಿಂದ ಬಾಳಿನ ಮರ್ಯಾದೆ ಗೌರವವನ್ನು ಜಾನಪದದಿಂದ ಅರಿತಿದ್ದೇನೆ. ಮಕ್ಕಳಿಗೆ ಬಾಂಧವ್ಯ ,ಮಾವ, ಚಿಕ್ಕಮ್ಮ ಚಿಕ್ಕಪ್ಪ ಅದೆನೆಲ್ಲಾ ಕಲಿಸಿದ್ದು ಜಾನಪದ. ಆದರೆ ಮಕ್ಕಳಲ್ಲಿ ಆಂಟಿ ಅಂಕಲ್ ಎಂದು ಕರೆಯುವ ಸಂಸ್ಕೃತಿಯೊಳಗೆ ನಾವೂ ಬಾಂಧÀವ್ಯವನ್ನು ಕಳಕೊಂಡಿದ್ದೇವೆ. ನಾವೂ ದುಡಿಮೆಗಾಗಿ ಮುಂಬಯಿಗೆ ಬಂದಿದ್ದೇವೆ. ಅಂತೆಯೇ ನಮ್ಮ ಸಂಸ್ಕೃತಿ ಕಟ್ಟಲು ಅಥವಾ ಸಂಸ್ಕೃತಿ ಉಳಿಸಲು ಬಂದಿದ್ದೇವೆ ಎಂದೂ ತಿಳಿಯುವ ಅಗತ್ಯವಿದೆ. ಮುಂಬಯಿ ವಿವಿ ಕನ್ನಡ ವಿಭಾಗ 40 ವರ್ಷಗಳಿಂದ ಸಂಸ್ಕೃತಿ ಕಟ್ಟುವ ಭಾಷಾ ಕಟ್ಟುವ ಕೆಲಸವನ್ನು ಮಾಡುತ್ತಿದೆ. ಸಂಸ್ಕೃತಿ ಮತ್ತು ಭಾಷೆಗೆ ತ್ಯಾಗ ಕೊಟ್ಟಂತಹ ಕವಿಗಳ ವಿಷಯವನ್ನು ಚರ್ಚಿಸುವಂತಹ ಕೆಲಸ ಮಾಡುತ್ತಿದೆ ಅಂದ ಮೇಲೆ ಮುಂಬಯಿಗರಲ್ಲಿ ಮಾತೃಸಂಸ್ಕೃತಿ ಜೀವಂತವಾಗಿದೆ ಎಂದರ್ಥ ಎಂದು ಬೆಂಗಳೂರು ಅಲ್ಲಿನ ಅಂತರಾಷ್ಟ್ರೀಯ ಪ್ರಸಿದ್ಧ, ಪ್ರಶಸ್ತಿ ವಿಜೇತ ಜಾನಪದ ಕಲಾವಿದ ಡಾ| ಅಪ್ಪಗೆರೆ ತಿಮ್ಮರಾಜು ನುಡಿದರು.

ಇಂದಿಲ್ಲಿ ಶನಿವಾರ ಅಪರಾಹ್ನ ಸಾಂತಾಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‍ನ ವಿದ್ಯಾನಗರಿ ಅಲ್ಲಿನ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದ ಸಭಾಂಗಣದಲ್ಲಿ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿದ್ದ ಜಾನಪದ ಸಂಭ್ರಮ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ `ಜಾನಪದ ಉಳಿವು' ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿüಯಾಗಿ ಗೌರವ್ವಾನಿತ ಅತಿಥಿüಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಾರತೀಯ ಸಂಸ್ಕೃತಿ ಕಟ್ಟಿದ್ದೇ ನಾರಿಯರು. ಬೆಳಗಿನಿಂದ ಸಂಜೆಯವರೆಗೆ ಎಲ್ಲಾ ಕೆಲಸಗಳ ಮಧ್ಯೆಯೂ ಸಂಸ್ಕೃತಿ ಕಟ್ಟಿಬೆಳೆಸಿದ ಮಹಿಳೆ ಮಾತೆಯರು ಈ ತನಕ . ಜಾನಪದ ಬದುಕುಳಿಸಿರುವುದೇ ದೊಡ್ಡತನ. ಇಂತಹ ಮನಸ್ಸು ಶುದ್ಧವಾಗಿಸಿದರೆ ಬದುಕು ಭವ್ಯವಾಗುವುದು. ಆದುದರಿಂದ ಯಾವುದೇ ಯೋಚನೆಗೆ ತಲೆಯೊಡ್ಡದೆ ಬಾಳುವ ಪ್ರಯತ್ನ ಮಾಡಿರಿ. ಅನಾವಶ್ಯಕ ಯೋಚನೆಗಳು ಹೆಚ್ಚಾದರೆ ಆಯುಷ್ಯ ಕಡಿಮೆಯಾಗುತ್ತಿದೆ. ಸಂಸ್ಕೃತಿಯನ್ನು ಕಟ್ಟುವುದೇ ಹೆಣ್ಣು ಮಕ್ಕಳು. ಮನುಷ್ಯ ಜಗತ್ತಿನಲ್ಲಿ ಎಷ್ಟೂ ದೊಡ್ಡವನಾಗಲಿ ಆದರೆ ಅವನ ಸರಳತೆ ಸಂಸ್ಕೃತಿಯನ್ನು ಮೆರೆಯ ಬಾರದು. ಬದುಕು ಕಲಿಯುತ್ತಿದ್ದೇನೆ ಎಂಬುದಕ್ಕಿಂತ ಕಲಿಸುತ್ತಿದ್ಡೇನೆ ಎಂಬುವುದು ಬಹಳ ಮುಖ್ಯ. ಅಂತೆಯೇ ನಮ್ಮ ಜಾನಪದವು ಬದುಕು ಕಲಿಸುತ್ತಿದೆÉ ಎಂದು ಡಾ| ಅಪ್ಪಗೆರೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಾನಪದ ಕಲಾವಿದ ಸಿದ್ದಪ್ಪ ಬಿದರಿ ಸಿದ್ದಪ್ಪ ಬಿದರಿ ಅವರ `ಜಾನಪದ ಜವಾರಿ' ಕೃತಿಯನ್ನು ಡಾ| ಅಪ್ಪಗೆರೆ ಬಿಡುಗಡೆ ಗೊಳಿಸಿದರು. ಕನ್ನಡ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಡಾ| ಜೀವಿ ಕುಲಕರ್ಣಿ ಕೃತಿ ಪರಿಚಯಿಸಿದರು. ಬಳಿಕ ಡಾ| ಅಪ್ಪಗೆರೆ ತಿಮ್ಮರಾಜು, ಸಮಾಜ ಸೇವಕ ಮುದ್ರಾಡಿ ದಿವಾಕರ ಶೆಟ್ಟಿ ಹಾಗೂ ಶ್ರೀಪಾದ ಪಾದಕೀ ನವಿ ಮುಂಬಯಿ ಅವರನ್ನು ಅತಿಥಿüಗಳು ಸನ್ಮಾನಿಸಿ ಅಭಿನಂದಿಸಿದರು.

ಒಂದು ಕಾಲದಲ್ಲಿ ಜಾನಪದ ಹಾಡು ಹಾಡಿದರೆಂದರೆ ಅವರೇ ಧರ್ಮವಂತರು ಶ್ರೇಷ್ಠ ಸಂತರು ಎಂದಾಗಿತ್ತು. ಸತ್ಯವು ಶರಣರ ಪರವೂ ಗೌರವವೂ ಆಗಿತ್ತು. ಜಾನಪದ ಜನಪರ ಆಸ್ತಿ ಆದಾಗ ಈ ಸಂಸ್ಕೃತಿ ಬೆಳೆದು ಉಳಿಯುವುದು ಎಂದು ಇಂಪಾಗಿ ಹಾಡುಗಳನ್ನು ಹಾಡುತ್ತಾ ಬಿದರಿ ತಿಳಿಸಿದರು.

ಎಂದು ನಾಲ್ಕು ಶಬ್ದಗಳು ಹುಟ್ಟಿದವೋ ಅಂದೇ ಜಾನಪದ ಹುಟ್ಟಿತು. ತಾಯಿಯ ಹುಟ್ಟಿನಿಂದ ಇಂತಹ ಜಾನಪದ ವಿಸ್ತ್ಕೃತಗೊಂಡಿತು. ಇಂತಹ ಜಾನಪದವನ್ನು ಮುಂಬಯಿಗರು ಬೆಳೆಸಿರುವರು. ಮುಂಬಯಿ ಕನ್ನಡಿಗರು ಸಿದ್ಧಿಸಾಧನೆಗೈದ ಪ್ರಾಮಾಣಿಕ ಬುದ್ಧಿಜೀವಿಗಳು. ಇಂತಹ ಜಾನಪದ ಸಂಭ್ರಮದ ವೇದಿಕೆಯಲ್ಲಿ ನನ್ನಂತವರನ್ನು ಗುರುತಿಸಿ ಗೌರವಿಸಿದ್ದು ಅಭಿಮಾನ ಅಣಿಸಿದೆ ಎಂದು ಗೌರವ ಸ್ವೀಕರಿಸಿ ದಿವಾಕರ ಶೆಟ್ಟಿ ತಿಳಿಸಿದರು.

ಮುಂಬಯಿವಾಸಿ ಕನ್ನಡಿಗರ ಸಾಧನೆ ಅಪರಿಮಿತವಾದದ್ದು. ಇಲ್ಲಿನ ಕನ್ನಡಿಗರು ಧೀರರು, ಶೂರರು, ಮಹಾನ್ ಸಾಹಸಿಗರೂ ಹೌದು. ಇಲ್ಲಿನ ಜನತೆಯ ಶ್ರದ್ಧೆ, ನಿಷ್ಠಾವಂತ ಬಾಳು ಸಾಮರಸ್ಯದ ಜೀವನ ಎಲ್ಲವೂ ಸುಂದರಮಯ. ಆದುದರಿಂದ ಮುಂಬಯಿ ಭಾರತದ ಭಾಗ್ಯನಗರಿ ಆಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ| ಜಿ.ಎನ್ ಉಪಾಧ್ಯ ತಿಳಿಸಿದರು.

ಸುಶೀಲಾ ಎಸ್.ದೇವಾಡಿಗ ಸ್ವಾಗತಗೀತೆಯನ್ನಾಡಿದರು. ನಳೀನಾ ಪ್ರಸಾದ್ ಸ್ವಾಗತಿಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸೋಮಶೇಖರ ಮಾಲ್ತಿ ಪಾಟೀಲ್ ವಂದಿಸಿದರು.

 

 

 

 
More News

ಮಾಹಿಮ್‍ನಲ್ಲಿ ಮೊಡೇಲ್ ಬ್ಯಾಂಕ್‍ನಿಂದ 2018ನೇ ಸಾಲಿನ ವಿದ್ಯಾಥಿ೯ ವೇತನ ವಿತರಣೆ
ಮಾಹಿಮ್‍ನಲ್ಲಿ ಮೊಡೇಲ್ ಬ್ಯಾಂಕ್‍ನಿಂದ 2018ನೇ ಸಾಲಿನ ವಿದ್ಯಾಥಿ೯ ವೇತನ ವಿತರಣೆ
ಆಲ್ ಇಂಡಿಯಾ ಕೋ.ಅಪರೇಟಿವ್ ಬ್ಯಾಂಕಿಂಗ್ ಕಾನ್ಫರೆನ್ಸ್
ಆಲ್ ಇಂಡಿಯಾ ಕೋ.ಅಪರೇಟಿವ್ ಬ್ಯಾಂಕಿಂಗ್ ಕಾನ್ಫರೆನ್ಸ್
ಐವಾನ್ ಡಿಸೋಜಾ ಅವರಿಗೆ ಶುಭಾರೈಸಿದ ಸುನೀಲ್ ಪಾಯ್ಸ್
ಐವಾನ್ ಡಿಸೋಜಾ ಅವರಿಗೆ ಶುಭಾರೈಸಿದ ಸುನೀಲ್ ಪಾಯ್ಸ್

Comment Here