Friday 29th, March 2024
canara news

ಪುಣೆಯಲ್ಲಿ ಜಾತಿ ಪ್ರಮಾಣ ಪತ್ರಿಕಾ ತಿಳಿವಳಿಕಾ ಕಾರ್ಯಕ್ರಮ

Published On : 13 Apr 2018   |  Reported By : Rons Bantwal


ಹಿಂದುಳಿದವರು ಮುನ್ನಡೆಯ ಚಿತ್ತವನ್ನರಿಸಬೇಕು : ಶ್ರೀಧರ್ ಪೂಜಾರಿ ಲೋಣಾವಳಾ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಎ.12: ಮಹಾತ್ಮ ಜ್ಯೋತಿಬ ಫುಲೆ ಅವರ ಜನ್ಮೋತ್ಸವ ನಿಮಿತ್ತ ಯುನಿಟಿ ಸಮಾಜ ವೆಲ್ಫೇರ್ ಫೌಂಡೇಶನ್ ಪ್ರಿಂಪ್ರಿ ಕ್ಯಾಂಪ್ ಪುಣೆ ಸಂಸ್ಥೆಯು ಜಾತಿ ಪ್ರಮಾಣ ಪತ್ರಿಕಾ ತಿಳಿವಳಿಕೆ ಕಾರ್ಯಕ್ರಮವು ಕಳೆದ ಬುಧವಾರ ಸಂಜೆ ಪುಣೆ ಅಲ್ಲಿನ ಪ್ರಿಂಪ್ರಿ ಸಂತ ತುಕರಾಮ ನಗರದಲ್ಲಿನ ಹೊಟೇಲ್ ದಕ್ಷಿಣ್ ಸಭಾಗೃಹದಲ್ಲಿ ಆಯೋಜಿಸಿತ್ತು.

ಕಾರ್ಯಕ್ರಮದಲಿ ಮುಖ್ಯ ಅತಿಥಿüಯಾಗಿ ಲೋಣಾವಳಾ ನಗರ ಪರಿಷತ್‍ನ ಉಪ ನಗರಾಧ್ಯ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ ಮತ್ತು ಅಭ್ಯಾಗತರುಗಳಾಗಿ ಮಂಗಳೂರು ತಾಲೂಕು ಪಂಚಾಯತ್ ಉಪ ಕಾರ್ಯಾಧ್ಯಕ್ಷೆ ಪೂರ್ಣಿಮಾ ಗಣೇಶ್ ಪೂಜಾರಿ, ಕುಲಾಲ ಸಮುದಾಯದ ಸ್ಥಾನೀಯ ಮುಂದಾಳು ನ್ಯಾ| ಅಪ್ಪು ಮೂಲ್ಯ, ಒಬಿಸಿ ಸ್ಪೆಶಿಯಲಿಸ್ಟ್ ರೋಹಿತ್ ಎಂ.ಸುವರ್ಣ, ಬಿಲ್ಲವ ಮುಂದಾಳುಗಳಾದ ಗಣೇಶ್ ಅಂಚನ್, ಶ್ರೀಧರ ಪೂಜಾರಿ ಉಪಸ್ಥಿತರಿದ್ದು ತಮ್ಮ ಅನುಭವವನ್ನು ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳು ಮುನ್ನಡೆಯ ಬಗ್ಗೆ ಚಿಂತಿಸಬೇಕು. ಭವಿಷ್ಯವನ್ನು ರೂಪಿಸುವಲ್ಲಿ ಸರಕಾರಿ ಸ್ವಾಮ್ಯದ ಎಲ್ಲಾ ಪ್ರಯೋಜನಗಳನ್ನು ತನ್ನದಾಗಿಬೇಕು. ವಿಶೇಷವಾಗಿ ಶೈಕ್ಷಣಿಕವಾಗಿ ಲಭಿಸುವ ಯಾವುದೇ ಸೌಲತ್ತುಗಳನ್ನು ಪಡೆಯುವ ಪ್ರಯತ್ನ ಮಾಡÀಬೇಕು. ಆ ನಿಟ್ಟಿನಲ್ಲಿ ಸಾಮಾನ್ಯ ಹಿಂದುಳಿದ ವರ್ಗ (ಒಬಿಸಿ) ಪಂಗಡಕ್ಕೆ ಲಭ್ಯವಿರುವ ಯಾವುದೇ ಅವಕಾಶ, ಸೌಲತ್ತುಗಳನ್ನು ತಮ್ಮದಾಗಿಸಬೇಕು ಎಂದು ಶ್ರೀಧರ್ ಎಸ್.ಪೂಜಾರಿ ತಿಳಿಸಿದರು.

ಬಿಲ್ಲವ, ಬೆಳ್ವಡ, ಬಂಜಾರ, ದೇವಾಡಿಗ, ಗಾಣಿಗ, ಕುಲಾಲ್, ಲಮಾನಿ, ಮೂಲ್ಯ ಪದ್ಮಶಾಲಿ ಸಫಲಿಗ ಸಮುದಾಯದ ಅನೇಕರು ಪಾಲ್ಗೊಂಡು ಕಾರ್ಯಕ್ರಮದ ಫಲಾನುಭವ ಪಡೆದರು. ಕಿರಣ್ ವೈ.ಸುವರ್ಣ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು. ಸಂಗೀತ ಸುವರ್ಣ ಧನ್ಯವಾದಗೈದರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here