Tuesday 22nd, January 2019
canara news

ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ ಕಾರ್ಪೋರೇಟರ್ ಪ್ರತಿಭಾ ಕುಳಾಯಿ

Published On : 15 Apr 2018   |  Reported By : canaranews network


ಮಂಗಳೂರು; ಮಂಗಳೂರಿನ ಮಹಿಳಾ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ರಾಜ್ಯ ಬಿಜೆಪಿ ಪಕ್ಷವು, ಕಾಂಗ್ರೆಸ್ ಪಕ್ಷದ ವಿರುದ್ದ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿರುವ ಚಾರ್ಜ್ ಶೀಟ್ ನಲ್ಲಿ ಪ್ರತಿಭಾ ಕುಳಾಯಿ ಅವರ ಹೆಸರು ಮತ್ತು ಭಾವಚಿತ್ರ ಬಳಸಿದ್ದರು.

ಈ ಹಿನ್ನೆಲೆ ಪ್ರತಿಭಾ ಕುಳಾಯಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಶೋಭಾ ಕರಂದ್ಲಾಜೆ, ರವಿಶಂಕರ್ ಪ್ರಸಾದ್ ಹೀಗೆ ಐವರು ಕಾರ್ಯಕರ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.ತನ್ನ ಭಾವಚಿತ್ರ ಹಾಗೂ ಹೆಸರು ಬಳಸಿರುವುದರಿಂದ ನನಗೆ ಮಾನಸಿಕ ಹಿಂಸೆಯಾಗಿದೆ. ಚಾರ್ಜ್ ಶೀಟ್ ನಲ್ಲಿ ಭಾವಚಿತ್ರ ಹಾಗೂ ಹೆಸರು ಬಳಸಿ ನನ್ನ ಮಾನಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ.ಮಂಗಳೂರಿನ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಏ 19 ರಂದು ವಿಚಾರಣೆ ನಡೆಯಲಿದೆ.
More News

ಮಾಹಿಮ್‍ನಲ್ಲಿ ಮೊಡೇಲ್ ಬ್ಯಾಂಕ್‍ನಿಂದ 2018ನೇ ಸಾಲಿನ ವಿದ್ಯಾಥಿ೯ ವೇತನ ವಿತರಣೆ
ಮಾಹಿಮ್‍ನಲ್ಲಿ ಮೊಡೇಲ್ ಬ್ಯಾಂಕ್‍ನಿಂದ 2018ನೇ ಸಾಲಿನ ವಿದ್ಯಾಥಿ೯ ವೇತನ ವಿತರಣೆ
ಆಲ್ ಇಂಡಿಯಾ ಕೋ.ಅಪರೇಟಿವ್ ಬ್ಯಾಂಕಿಂಗ್ ಕಾನ್ಫರೆನ್ಸ್
ಆಲ್ ಇಂಡಿಯಾ ಕೋ.ಅಪರೇಟಿವ್ ಬ್ಯಾಂಕಿಂಗ್ ಕಾನ್ಫರೆನ್ಸ್
ಐವಾನ್ ಡಿಸೋಜಾ ಅವರಿಗೆ ಶುಭಾರೈಸಿದ ಸುನೀಲ್ ಪಾಯ್ಸ್
ಐವಾನ್ ಡಿಸೋಜಾ ಅವರಿಗೆ ಶುಭಾರೈಸಿದ ಸುನೀಲ್ ಪಾಯ್ಸ್

Comment Here