Thursday 26th, April 2018
canara news

ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ - ರಮಾನಾಥ ರೈ

Published On : 15 Apr 2018   |  Reported By : canaranews network


ಮಂಗಳೂರು: ಚುನಾವಣೆಗೆ ನಿಲ್ಲುವುದು ಎಂದರೆ ನನಗೆ ಪರೀಕ್ಷೆ ಬರೆದಂತೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.ಬಂಟ್ವಾಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಜಾತಿ ಭಾಷೆ, ಧರ್ಮವನ್ನು ಪ್ರೀತಿಸುವವರು ಮಾತ್ರ ಆಡಳಿತಾಧಿಕಾರಿಯಾಗಬೇಕು. ಪೇಜ್ ಪ್ರಮುಖರಿಗೆ ಕೌಂಟರ್ ಆಗಿ ಕಾಂಗ್ರೆಸ್ ನಲ್ಲಿ ಸತ್ಯವಾದಿಯನ್ನು ನೇಮಕ ಮಾಡಲಾಗುತ್ತಿದೆ.

ಸುಳ್ಳು ಹೇಳಿ ಪಕ್ಷ ಕಟ್ಟುವ ಅಗತ್ಯವಿಲ್ಲ. ನಾನು ಸತ್ಯವನ್ನು ಹೇಳಿ ಪಕ್ಷವನ್ನು ಕಟ್ಟಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.ಎಲ್ಲಾ ಸಮಾಜವನ್ನು ಪ್ರೀತಿ ಮಾಡಿದಾಗ ವಿರೋಧಿಗಳಿಗೆ ಪತ್ಯವಾಗುವುದಿಲ್ಲ. ಎಲ್ಲರ ಪ್ರೀತಿ ವಿಶ್ವಾಸವನ್ನು ಸಂಪಾದಿಸಿದ್ದೇನೆ. ನಾನು ಇಲ್ಲಿಯವರೆಗೆ ಕ್ಷೇತ್ರದ ಜನರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
More News

ನಳಿನ್ ಗೆ ಬಿಜೆಪಿ ಕಾರ್ಯಕರ್ತರೇ ವಿಶ್ರಾಂತಿ ನೀಡಲಿದ್ದಾರೆ: ರಮಾನಾಥ್ ರೈ
ನಳಿನ್ ಗೆ ಬಿಜೆಪಿ ಕಾರ್ಯಕರ್ತರೇ ವಿಶ್ರಾಂತಿ ನೀಡಲಿದ್ದಾರೆ: ರಮಾನಾಥ್ ರೈ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ನಾಮಪತ್ರ ಸಲ್ಲಿಕೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 98 ನಾಮಪತ್ರ ಸಲ್ಲಿಕೆ
ಬಾಲಕಿಗೆ ಲೈಂಗಿಕ ಕಿರುಕುಳ ವ್ಯಕ್ತಿಯ ಬಂಧನ
ಬಾಲಕಿಗೆ ಲೈಂಗಿಕ ಕಿರುಕುಳ ವ್ಯಕ್ತಿಯ ಬಂಧನ

Comment Here