Friday 29th, March 2024
canara news

ಪಗ್ಗು ಪದಿನೆಣ್ಮ ತುಳುವರಿಗೆ ಭರವಸೆಯದಿನ – ಡಾ.ಸುನೀತಾ ಶೆಟ್ಟಿ

Published On : 02 May 2018   |  Reported By : Rons Bantwal


ಮುಂಬಯಿ, ಮೇ.02: ಸಿರಿ ಮಹಾಕಾವ್ಯ ವಿಶ್ವದ ಯಾವುದೇ ಮಹಾಕಾವ್ಯಗಳಿಗೆ ಹೋಲಿಸಿದರೆ ಒಂದು ಹೆಜ್ಜೆ ಮುಂದೆ ನಿಲ್ಲುತ್ತದೆ. ಯಾಕೆಂದರೆ ಮಾತೃ ಪ್ರಧಾನವಾದ ತುಳುವ ಸಂಸ್ಕøತಿ ಮತ್ತು ಜೀವನ ಪದ್ಧತಿಗಳನ್ನು ಇದರಲ್ಲಿ ಅನಾವರಣಗೊಳಿಸಲಾಗಿದೆ. ಪಗ್ಗು ಪದಿನೆಣ್ಮದಂದು ತುಳುವರಾದ ನಾವು ಬೀಜ ಬಿತ್ತುವ ಸಮಯ. ಬೀಜ ಚಿಗುರಿ ಮುಂದೆ ಸಮೃದ್ಧಿಯ ಫಸಲು ಲಭಿಸಬಹುದೆಂಬ ವಿಶ್ವಾಸದಿಂದ ಬಿತ್ತುತ್ತೇವೆ, ಅದುದರಿಂದ ಪಗ್ಗು ಪದಿನೆಣ್ಮ ತುಳುವರಿಗೆ ಭರವಸೆಯದಿನವಾಗಿದೆ. ಪಗ್ಗು ಪದಿನೆಣ್ಮದಂದು ಸಿರಿಯನ್ನು ಹೃದಯದೊಳಗೆ ಬಿತ್ತುವುದು ಔಚಿತ್ಯ ಪೂರ್ಣವಾಗಿದೆ ಎóಂದು ಡಾ. ಸುನೀತಾ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ಬಂಟರ ಯಾನೆ ನಾಡವರ ಮಾತೃ ಸಂಘ ಮಹಿಳಾ ವಿಭಾಗ ಮತ್ತು ತುಳುವೆರೆ ಆಯನೊ ಕೂಟ ಇದರ ನೇತೃತ್ವದಲ್ಲಿ ನಡೆದ ಪಗ್ಗು ಪದಿನೆಣ್ಮ-ಸಿರಿದಿನ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಭತ್ತ ಮತ್ತು ಹುರುಳಿ ಬಿತ್ತಿ ಉದ್ಘಾಟಿಸಿ, ತುಳುವೆರೆ ಆಯನೊ ಕೊಡಮಾಡಲ್ಪದುವ ತುಳುರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಸಮಾರಂಭದಲ್ಲಿ ಸಿರಿ ಪಾಡ್ದನವನ್ನು ಉಳಿಸಿದ ಕರ್ಗಿ ಶೆಡ್ತಿ ಮತ್ತು ಲೀಲಾ ಶೆಡ್ತಿಯವರನ್ನು ಸನ್ಮಾನಿಸಲಾಯಿತು. ವಿಧಿಯ ಕ್ರೂರತೆ ಮತ್ತು ಸಮಾಜದ ಕಟ್ಟುಪಾಡುಗಳನ್ನು ಮೀರಿ ಸಾಧನೆಗೈದ ಏಳು ಜನ ಮಹಿಳೆಯರಿಗೆ ಏಳ್ವೆರ್‍ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ವೈದ್ಯೆಯಾಗಿ ಸಮಾಜ ಸೇವಕಿಯಾಗಿರುವ ಡಾ1 ರತಿದೇವಿ, ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡುತ್ತಿರುವ ಶ್ರೀಮತಿ ವನಜ, ಮಾಧ್ಯಮ ಉದ್ಧಿಮೆದಾರರಾದ ವೈಲೆಟ್ ಪಿರೇರಾ, ಮಹಿಳಾ ಸಬಲಿಕರಣ ಹೋರಾಟಗಾರ್ತಿ ಕೈರುನ್ನಿಸ ಸೈಯದ್, ಆಂಬ್ಯುಲೆನ್ಸ್ ಚಾಲಕಿ ಮತ್ತು ಮಾಲಕಿಯಾದ ಸಿ.ಎಸ್. ರಾಧಿಕ, ಆಂಗವೈಕಲ್ಯತೆಯಿದ್ದರೂ ಅದನ್ನು ಮೀರಿ ನಿಂತು ಚಿತ್ರಕಲೆಯಲ್ಲಿ ಸಾಧನೆಗೈದ ಕು1 ಸುಧಾರತ್ನ, ಅಂಧ ಕಲಾವಿದೆಯಾದರೂ ಸಂಗೀತಾ ಕ್ಷೇತ್ರದಲ್ಲಿ ಸಾಧನೆಮಾಡಿದ ಕು1 ಕಸ್ತೂರಿ ಇವರಿಗೆ ಏಳ್ವೆರ್‍ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು..

ಮುS ್ಯ ಅಥಿತಿಗಳಾಗಿ ಡಾ. ಚಿನ್ನಪ್ಪ ಗೌಡ ಮಾತನಾಡಿ “ ಪಗ್ಗು ಪದಿನೆಣ್ಮ ವಿಷುದಿನದಂದು ಅಂದರೆ ಪಗ್ಗು ಒಂದರಿಂದ ಪ್ರಾರಂಭವಾಗುವ ಪ್ರಕ್ರಿಯೆ (ವಿಷುದಿನತಾನಿ ನಾಲೆರು ಮಾದಾದ್ ಪಗ್ಗು ಪದಿನೆಣ್ಮಗ್ ಕೈಬಿತ್ತ್ ಪಾಡುನೆ) ಪಗ್ಗು ಒಂದು ವಿಷುದಿನದÀಂದು ಗದ್ದೆಯನ್ನು ಉತ್ತು ಪಗ್ಗು ಹದಿನೆಂಟರಂದು ಕೈಯಿಂದ ಬೀಜವನ್ನು ಎಸೆದು ಬಿತ್ತುವುದು ಪ್ರಮುಖವಾಗಿದೆ. ಸಿರಿಯ ಚರಿತ್ರೆಯು ಮೂರು ತಲೆಮಾರುಗಳನ್ನು ಹೊಂದಿದೆ. ಸಿರಿ, ಸೊನ್ನೆ-ಗಿಂಡೆ ಮತ್ತು ಅಬ್ಬಗ-ಧಾರಗ ಈ ಮೂರು ತಲೆಮಾರುಗಳ ವಿಭಿನ್ನ ಸಾಮಾಜಿಕ ಜೀವನ ರೀತಿಗಳನ್ನು ಪ್ರತಿಬಿಂಬಿಸುತ್ತಿದೆ. 2500ಕ್ಕಿಂತಲೂ ಹೆಚ್ಚು ಸಾಲುಗಳಿರುವ ಸಿರಿ ಮಹಾಕಾವ್ಯ ಅಸಾಧಾರಣವಾಗಿದೆ ಎಂದರು. ಇಂದು ಏಳುಜನ ಮಹಿಳೆಯರಿಗೆ ಏಳ್ವೆರ್ ಸಿರಿ ಪ್ರಶಸ್ತಿ ನೀಡಿದ್ದು ಅವರ ಜೀವನ ಹೋರಾಟಗಳಿಗೆ ದೊರೆತ ಮನ್ನಣೆ ಇದನ್ನು ತುಳುರಾಜ್ಯ ಪ್ರಶಸ್ತಿಯಾಗಿ ಪರಿಗಣಿಸಬಹುದು ಎಂದರು.

ಸಭೆಯ ಅಧ್ಯಕ್ಷತೆವಹಿಸಿದ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ಮಾಲಾಡಿಯವರು ಮಾತನಾಡಿ ಅಳಿದು ಹೋಗುತ್ತಿರುವ ಪಗ್ಗುಪದಿನೆಣ್ಮದಂತ ತುಳುವ ಸಂಸ್ಕøತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಅದ್ಯಕರ್ತವ್ಯವಾಗಿದೆ. ಪಗ್ಗುಪದಿನೆಣ್ಮ ತುಳುವರಿಗೆ ಒಂದು ರೀತಿಯಲ್ಲಿ ಸಮೃದ್ಧಿಯ ದಿನವಾದುದರಿಂದ ಪಗ್ಗುಪದಿನೆಣ್ಮವನ್ನು ಸಿರಿದಿನವೆಂದು ಆಚರಿಸುತ್ತಿರುವುದು ಅಭಿನಂದನಾರ್ಹವಾಗಿದೆ ಮತ್ತು ಇದನ್ನು ವಿಶ್ವವ್ಯಾಪಿಗೊಳಿಸಬೇಕೆಂದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ತೀರ್ಪುಗಾರರಾಗಿ ಡಾ. ಆಶೋಕ ಆಳ್ವ, ಡಾ. ಕಿಶೋರ್ ಕುಮಾರ್ ರೈ ಶೇಣಿ, ಡಾ. ಜ್ಯೋತಿ ರೈ ಭಾಗವಹಿಸಿದರು. ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸಿರಿ ರಸ ಪ್ರಶ್ನೆ ವಿಭಾಗದಲ್ಲಿ ಪ್ರಥಮ ರೂಪಾ ಶೋದನ್ ಶೆಟ್ಟಿ, ದ್ವಿತಿಯ ಸುಹಾಸ್ ಹೆಗಡೆ ನಂದಳಿಕೆ, ಛದ್ಮವೇಶ –ಏಕಪಾತ್ರ ಆಭಿನಯದಲ್ಲಿ ಮಕ್ಕಳ ವಿಭಾದಲ್ಲಿ ತಕ್ಷಿಲ್ ದೇವಾಡಿಗ ಯುವಕರ ವಿಭಾಗದಲ್ಲಿ ಪ್ರಜಾÐ ಭಂಡಾರಿ, ಹಿರಿಯರ ವಿಭಾಗದಲ್ಲಿ ಮಲ್ಲಿಕ ಭಂಡಾರಿ ಮತ್ತು ವೀಣಾ ಶೆಟ್ಟಿ ಪ್ರಶಸ್ತಿಗಳನ್ನು ಪಡೆದರು. ಪಾಡ್ಧನ ಸ್ಪರ್ಧೆಯಲ್ಲಿ ಮುತ್ತು ಶೆಟ್ಟಿ ಪ್ರಥಮ ಹಾಗು ಅಶ್ವಿನ್ ಶೆಟ್ಟಿ ಧ್ವಿತಿಯ ಸ್ಥಾನ ಪಡೆದುಕೊಂಡರು. ದೇಶಿ ಉತ್ಥಾನ ಸಾವಯವ ರೈತ ಬಂಧು ಟ್ರಸ್ಟ್ (ರಿ) ಮತ್ತು ಆರೋಗ್ಯ ಭಾರತಿ, ಮಂಗಳೂರು ಇವರಿಂದ ಸಿರಿಧಾನ್ಯಗಳ ಪ್ರದರ್ಶನ, ಸಿರಿಧಾನ್ಯ ಆಹಾರ ಉತ್ಪನ್ನಗಳ ಮಾರಾಟ ಹಾಗೂ ಪ್ರಾತ್ಯಕ್ಷಿಕೆಗಳು ಸಂಪನ್ನಗೊಂಡವು. ತುಳುನಾಡ ಶೈಲಿಯ ಲಘುಉಪಹಾರ ಮತ್ತು ಸಾವಯವ ಪಾನೀಯಗಳು ಅಹ್ಲಾದವೆನಿಸಿದವು.

ಬಂಟರ ಯಾನೆ ನಾಡವರ ಮಾತೃ ಸಂಘ ಮಹಿಳಾ ವಿಭಾಗ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ ಪ್ರಾಸ್ತಾವಿಕವಾಗಿ ಮಾತನಾಡಿ “ಪಗ್ಗು ಹದಿನೆಂಟರಂದು ದಾನ್ಯಗಳನ್ನು ಬಿತ್ತುವುದು ಪ್ರಧಾನ. ಈ ದಿನವನ್ನು ತುಳುನಾಡಿನ ಚರಿತ್ರೆಯಲ್ಲಿ ಅಗ್ರಗಣ್ಯ ಪಾತ್ರ ವಹಿಸಿದ ದೈವತ್ವಕ್ಕೇರಿದ ಸಿರಿಯನ್ನು ನೆನಪಿಸುವ ದಿನವನ್ನಾಗಿಸಬೇಕೆಂಬ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಯೆಂದರು ಹಾಗು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಮತ್ತು ಕವಿತಾ ಪಕಳ ಕಾರ್ಯಕ್ರಮ ನಿರ್ವಹಣೆ ಮಾಡಿದರು. ತುಳುವೆರೆ ಆಯನೊ ಕೂಟದ ಅಧ್ಯಕ್ಷರಾದ ಡಾ. ರಾಜೇಶ ಆಳ್ವರವರು ಧನ್ಯವಾದವಿತ್ತರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here