Thursday 25th, April 2024
canara news

ಐದು ವರ್ಷ ಗಲಭೆಗಳು ಇಲ್ಲಾ - ಅಲ್ಪಸಂಖ್ಯಾರೊಡಗುಡಿ ಶಾಂತಿಯುತ ಬದುಕನ್ನು ನೆಡೆಸುತ್ತೆವೆ – ಐವನ್ ಡಿಸೋಜಾ

Published On : 09 May 2018   |  Reported By : Bernard Dcosta


ಕುಂದಾಪುರ, ಮೇ. 9: ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿಯ ಪರವಾಗಿ ಮತಯಾಚಿಸುತ್ತಾ ಎಮ್.ಎಲ್.ಸಿ ಐವನ್ ಡಿಸೋಜಾ ಕುಂದಾಪುರ ರೋಜರಿ ಮಾತ ಚರ್ಚಿನ ಸಭಾ ಭವನದಲ್ಲಿ ಸೇರಿದ ಜನರ ಮುಂದೆ, ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡಿರುವ ಸಾಧನೆಯನ್ನು ಮುಂದಿಟ್ಟರು.

‘ಸಿದ್ದ ರಾಮಯ್ಯ ಸರ್ಕಾರ ಸಿದ್ದ ಸರಕಾರ, ಮನ್‍ಕಿ ಬಾತ್ ಆಲ್ಲಾ ನಮ್ಮದ್ದು ಕಾಮ್‍ಕಿ ಬಾತ್, ಈ ಐದು ವರ್ಷಗಳಲ್ಲಿ ನುಡಿದಂತೆ ನೆಡೆದಿದ್ದೆವೆ, 15 ಲಕ್ಷ ಎಕೌಂಟಿಗೆ ಹಾಕುತ್ತೇವೆ ಎಂದು ನಂಬಿಸಿ, ಇದ್ದ ಅಲ್ಪ ಸ್ವಲ್ಪ ಹಣದಿಂದ ಬಡವರಿಂದ ಬ್ಯಾಂಕ್ ಎಕೌಂಟ್ ಒಪನ್ ಮಾಡಿಸಿ, ಈಗ ಆ ಎಕೌಂಟುಗಳು ಬಂದ್ ಆಗುವ ಸ್ಥಿತಿಗೆ ಬಂದಿವೆ, ಸಿದ್ದ ರಾಮಯ್ಯ ಸರಕಾರ ಅಲ್ಪ ಸಂಖ್ಯಾತರಿಗೆ ಹಲವಾರು ಸೌಲಭ್ಯಗಳನ್ನು ನೀಡಿದ್ದಾರೆ, ಇದಕ್ಕಾಗಿ ಬಿಜೆಪಿ ಸರಕಾರಕ್ಕಿಂದ 20 ಪಟ್ಟು ಹಣವನ್ನು ಹೆಚ್ಚು ವಿನಿಯೋಗಿಸಿದ್ದಾರೆ, ಮುಂದಿನ ವರ್ಷ ಇದರ ಮೊತ್ತ ಇನ್ನೂ ಹೆಚ್ಚು ಎರಲಿದೆ, ಕ್ರೈಸ್ತರ ಏಳಿಗಾಗಿ ಒಂದು ಬೋರ್ಡನ್ನು ರಚಿಸುವಲ್ಲಿ ನಾವು ಶ್ರಮಿಸುತಿದ್ದೆವೆ. ಬಿಜೆಪಿ ಸಬಕಾ ಸಾಥ್, ಸಬಕಾ ವಿಕಾಸ್ ಹೇಳುತ್ತದೆ ಆದರೆ ಒಟ್ಟು 18 ಶೇಕಡ ಇರುವ ಅಲ್ಪ ಸಂಖ್ಯತರಲ್ಲಿ ಒಬ್ಬ ಮನುಷ್ಯನಿಗೂ, ಆ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಟೀಕೆಟ್ ನಿಡಿಲ್ಲಾ, ಇದೇನಾ ಅವರು ಎಲ್ಲರ ವಿಕಾಸ ಮಾಡುವ ರೀತಿ? ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಗ್ಗೂಡಿಸಿಗೊಂಡು ಹೋಗುತ್ತದೆ, ಎಲ್ಲರ ವಿಕಾಸಕ್ಕಾಗಿ ಶ್ರಮಿಸುತ್ತದೆ, ಕಾಂಗ್ರೆಸ್ ಪಕ್ಷ ಸಾಂವಿಧಾನಿಕವಾಗಿ ಆಡಳಿತ ನೆಡಸಲು ಸಿದ್ದಾಂತ ಇರುವ ಪಕ್ಷ. ಮೋದಿಜಿಯರು ಕೇವಲ ಭಾಷಣ ಬಿಗಿಯುತ್ತಾರೆ, ಆ ಭಾಷಣದಿಂದ ಬಡವರ ಹೊಟ್ಟೆ ತುಂಬುವುದಿಲ್ಲಾ, ಬಡವರ ಹೊಟ್ಟೆ ತುಂಬಿಸಿದವರು ನಮ್ಮ ಸಿದ್ದ ರಾಮಯ್ಯ, ನಮ್ಮ ಸರ್ಕಾರ ಅಭಿವ್ರದ್ದಿಯಲ್ಲಿ ಭಾರತದಲ್ಲಿ ನಂ. ಒನ್ ಸ್ಥಾನದಲ್ಲಿದೆ, ಆದರೆ ಬಿಜೆಪಿ ಹಸಿ ಸುಳ್ಳುಗಳನ್ನು ಹೇಳುತ್ತಾ, ಜನರ ದಾರಿ ತಪ್ಪಿಸುತ್ತದೆ, ಆದರೆ ಈ ಸಲ ಕಾಂಗ್ರೆಸ್ ಪಕ್ಷವೆ ಗೆಲ್ಲುವುದು, ನಮ್ಮ ಕರ್ನಾಟಕ ಸರಕಾರ, ಶಾಂತಿಯುತ ಬದುಕಿಗಾಗಿ ಕರ್ನಾಟಕದ ಏಳಿಗೆಗಾಗಿ ಪುನಹ ಸಿದ್ದರಾಮಯ್ಯ ಸರ್ಕಾರ ಬರಬೇಕು, ಹಾಗಾಗಿ ರಾಕೇಶ್ ಮಲ್ಲಿಯನ್ನು ಬಹುಮತದಿಂದ ಆರಿಸಿ ಕಳಿಸಿ, ಅವರು ಕುಂದಾಪುರದ, ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಾರೆ. ಎಂದು ತಿಳಿಸಿದರು.

ಅಭ್ಯರ್ಥಿ ರಾಕೇಶ್ ಮಲ್ಲಿ ‘ಕುಂದಾಪುರದವರು 18 ವರ್ಷದಿಂದ ಅಭಿವ್ರದ್ದಿ ಕಾಣದಂತಾಗಿದ್ದಾರೆ, ಅದಕ್ಕೆ ಕಾರಣ ಕುಂದಾಪುರದವರು ಆರಿಸಿ ಕಳುಹಿಸಿ ಕೊಟ್ಟ ಶಾಸಕರು ಅನರ್ಹರು, ಅವರು ಕುಂದಾಪುರದ ಅಭಿವ್ರದ್ದಿಗೆ ಶ್ರಮಿಸಲೇ ಇಲ್ಲಾ, ಇಂತವರನ್ನು ಆರಿಸಿ ಕಳುಹಿಸಿದರೆ, ಕುಂದಾಪುರ ಅಭಿವ್ರದ್ದಿ ಆಗುವುದಿಲ್ಲಾ, ಅದಕ್ಕಾಗಿ ಈ ಸಲ ಕಾಂಗ್ರೆಸ್‍ಗೆ ಮತ ಹಾಕಿ, ನಾನು ಕುಂದಾಪುರದ ಅಭಿವ್ರದ್ದಿಗೆ ಶ್ರಮಿಸುತ್ತೇನೆಂದು’ ವಾಗ್ದಾನ ಮಾಡಿದರು.

ಹಿರಿಯರಾದ ವಾಲೇರಿಯನ್ ಮಿನೇಜೆಸ್ ಮಾತಾಡಿ ’ಬಿಜೆಪಿ ಆಡಳಿತದಲ್ಲಿ ಅಲ್ಪ ಸಂಖ್ಯಾರರು ಪಟ್ಟ ಬವಣೆ ವಿವರಿಸಿ, ನಿರಂತ ಚರ್ಚಗಳ ಮೇಲೆ ಆಗುತಿದ್ದ ಹಲ್ಲೆ ನೆನಪಿಸಿದರು. ರೋಜರಿ ಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ ‘ನಾನು ಇಂತವರನ್ನೇ ಆರಿಸಿ ಕಳುಹಿಸಿ ಅಂತಾ ಯಾರಿಗೂ ಹೇಳುವುದಿಲ್ಲಾ, ನಮಗೆ ಶಾಂತಿಯುತವಾಗಿ ಬದುಕಲು ಆಸ್ಪದ ಕೊಡುವರಿಗೆ, ನಮ್ಮ ಧರ್ಮಾಚರಣೆಯನ್ನು ನಿರ್ಭಯವಾಗಿ ನೆಡೆಸಿಕೊಂಡು ಹೋಗಲು ಸಹಕರಿಸುವರಿಗೆ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವರಿಗೆ, ಸಮಾಜದ ಏಳಿಗೆಗಾಗಿ ಶ್ರಮ ಪಡುವರಿಗೆ ಮತ ಹಾಕಿ’ ಎಂದು ಜನತೆಗೆ ಸಂದೇಶ ನೀಡಿದರು.

ಕುಂದಾಪುರ ಬ್ಲಾಕ್ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ತಾ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಕಾರ್ಯಕ್ರಮವನ್ನು ನೆಡೆಸಿಕೊಟ್ಟರು. ಕುಂದಾಪುರ ಕಾಂಗ್ರೆಸಿನ ಪ್ರಧಾನ ಪ್ರಚಾರ ಸಮಿತಿಯ ಅಧ್ಯಕ್ಷ ಜೇಕಬ್ ಸಂತಾನ್ ಡಿಸೋಜಾ, ಅಲ್ಪ ಸಂಖ್ಯಾತ ಉಡುಪಿ ಜಿಲ್ಲಾ ಉಪಾಧ್ಯಕ್ಷ ಜೆರಾಲ್ಡ್ ಕ್ರಾಸ್ತಾ, ರಾಜಕೀಯ ಧುರಿಣರಾದ ರೋಶನಿ ಒಲಿವೇರಾ, ಶಾಂತಿ ಪಿರೇರಾ ಮತ್ತು ಇತರರು ಹಾಗೂ ಹಲವಾರು ಅತಿಥಿ ರಾಜಕೀಯ ಧುರಿಣರು ಈ ಸಂದರ್ಭದಲ್ಲಿ ಹಾಜರಿದ್ದರು. ಅಲ್ಪ ಸಂಖ್ಯಾತ ಉಡುಪಿ ಜಿಲ್ಲಾ ಮಹಿಳ ಉಪಾಧ್ಯಕ್ಷೆ ಆಶಾ ಕರ್ವಾಲ್ಲೊ ವಂದಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here