Thursday 24th, May 2018
canara news

ಬೆಳ್ತಂಗಡಿಯಲ್ಲಿ ವಸಂತ ಬಂಗೇರಗೆ ಸೋಲು; ಯುವ ಅಭ್ಯರ್ಥಿ ಹರೀಶ್ ಪೂಂಜಾಗೆ ಗೆಲುವು

Published On : 16 May 2018   |  Reported By : canaranews network


ಮಂಗಳೂರು: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹರೀಶ್ ಪೂಂಜಾ ಅವರು ಕಾಂಗ್ರೆಸ್ ಅಭ್ಯರ್ಥಿ ವಸಂತ ಬಂಗೇರ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹರೀಶ್ ಪೂಂಜಾ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿದ್ದರು. ಯುವ ಸಮೂಹದ ನೆಚ್ಚಿನ ನಾಯಕನಾಗಿ ಹೊರ ಹೊಮ್ಮುತ್ತಿರುವ ಹರೀಶ್ ಪೂಂಜಾ ಅವರಿಗೆ ಯುವಜನತೆಯ ಭರ್ಜರಿ ಬೆಂಬಲ ಸಿಕ್ಕಿತ್ತು.

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 13 ಚುನಾವಣೆಗಳಲ್ಲಿ ಕಾಂಗ್ರೆಸ್ ಬರೋಬ್ಬರೀ 8 ಬಾರಿ ಪ್ರಾಬಲ್ಯ ಸಾಧಿಸಿ ಅಧಿಕಾರ ಹಿಡಿದಿದ್ದರೆ, ಬಿಜೆಪಿ ಕೇವಲ ನಾಲ್ಕು ಬಾರಿ ಜಯ ಸಾಧಿಸಿತ್ತು. ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ವಸಂತ ಬಂಗೇರ ವಿರುದ್ಧ ಸ್ಪರ್ಧಿಸಿದ್ದ ಹರೀಶ್ ಪೂಂಜಾ, ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ವಿಜಯದ ನಗೆ ಬೀರಿದ್ದಾರೆ.ಹರೀಶ್ ಪೂಂಜಾ ಅವರು ಪಕ್ಷದ ಅಭ್ಯರ್ಥಿ ಆಗುವ ಮುನ್ನ ದಕ್ಷಿಣ ಕನ್ನಡ ಜಿಲ್ಲೆಯ ಯುವ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

 
More News

 ‘ನಿಫಾ ವೈರಸ್’ ಲಕ್ಷಣಗಳಿರುವ 2 ಶಂಕಿತ ಪ್ರಕರಣಗಳು ಮಂಗಳೂರಿನಲ್ಲಿ ಪತ್ತೆ
‘ನಿಫಾ ವೈರಸ್’ ಲಕ್ಷಣಗಳಿರುವ 2 ಶಂಕಿತ ಪ್ರಕರಣಗಳು ಮಂಗಳೂರಿನಲ್ಲಿ ಪತ್ತೆ
ಮಂಗಳೂರು ವಿಮಾನ ದುರಂತಕ್ಕೆ 8 ವರ್ಷ
ಮಂಗಳೂರು ವಿಮಾನ ದುರಂತಕ್ಕೆ 8 ವರ್ಷ
ಮಂಗಳೂರು ಸಬ್ ಜೈಲಿನಲ್ಲಿ ಖೈದಿಗಳ ಹೊಡೆದಾಟ
ಮಂಗಳೂರು ಸಬ್ ಜೈಲಿನಲ್ಲಿ ಖೈದಿಗಳ ಹೊಡೆದಾಟ

Comment Here