Saturday 20th, April 2024
canara news

ಕರ್ನಾಟಕ ವಿಧಾನಸಭೆ ಚುನಾವಣೆ-ಕೆ.ಆರ್ ಪೇಟೆ ಕ್ಷೇತ್ರದಿಂದ ಮುಂಬಯಿ ಉದ್ಯಮಿ ಡಾ| ನಾರಾಯಣ ಆರ್.ಗೌಡ ದ್ವಿತೀಯ ಬಾರಿ ಶಾಸಕರಾಗಿ ಆಯ್ಕೆ

Published On : 16 May 2018   |  Reported By : canaranews network


(ಚಿತ್ರ / ವರದಿ :ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.15: ಕರ್ನಾಟಕ ರಾಜ್ಯ ಅಸೆಂಬ್ಲಿ ಚುನಾವಣೆ-2018ರಲ್ಲಿ ಕೃಷ್ಣರಾಜಪೇಟೆ (ಕೆ.ಆರ್.ಪೇಟೆ) ವಿಧಾನಸಭಾ ಕ್ಷೇತ್ರದಿಂದ ಜನತಾ ದಳ ಜಾತ್ಯಾತೀತ (ಜೆಡಿಎಸ್) ಪಕ್ಷದ ಅಧಿಕೃತ ಅಭ್ಯಥಿರ್üಯಾಗಿ ಮತ್ತೆ ಸ್ಪರ್ಧಿಸಿದ ಮುಂಬಯಿ ಮಹಾನಗರದಲ್ಲಿನ ಏಕೈಕ ಕನ್ನಡಿಗ ಸ್ಪರ್ಧಿ ಡಾ| ನಾರಾಯಣ ಆರ್.ಗೌಡ ಅವರು ದ್ವಿತೀಯ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಪ್ರಬಲ ಪ್ರತಿಸ್ಪರ್ಧಿ ಕಾಂಗ್ರೇಸ್ (ಐ) ಪಕ್ಷದ ಕೆ.ಬಿ ಚಂದ್ರಶೇಖರ್ ಅವರ ವಿರುದ್ಧ 88,016 ಮತಗಳನ್ನು ಪಡೆದು ನಾರಾಯಣ ಗೌಡ ಗೆಲುವು ಸಾಧಿಸಿದ್ದಾರೆ. ಚಂದ್ರಶೇಖರ್ 70,897 ಮತಗಳನ್ನು ಪಡೆದು ದ್ವಿತೀಯ ಸ್ಥಾನ ಪಡೆದಿದ್ದು, ಬಿಜೆಪಿ ಅಭ್ಯಥಿರ್ü ಭೋಕಳ್ಳಿ ಮಂಜುನಾಥ್ ಅವರು 9,819 ಮತಗಳೊಂದಿಗೆ ತೃತೀಯ ಸ್ಥಾನ ಪಡೆದಿರುವರು. ಆ ಮೂಲಕ ನಾರಾಯಣ ಗೌಡ ಅವರು 17,119 ಮತಗಳಿಂದ ಜಯಭೇರಿ ಗಳಿಸಿದ್ದಾರೆ. ಸುಮಾರು 1093 ನೋಟಾ ವೋಟುಗಳೂ ಇಲ್ಲಿ ಚಲಾವಣೆ ಆಗಿವೆ.

ಈ ಬಾರಿ ಸುಮಾರು ಒಟ್ಟು 11 ಹುರಿಯಾಳುಗಳು ಕಣದಲ್ಲಿದ್ದರು. ರಾಷ್ಟ್ರದ ಮಾಜಿ ಪ್ರಧಾನಿ ಜೆಡಿಎಸ್ ಪಕ್ಷದ ರಾಷ್ಟ್ರೀಯಾಧ್ಯಕ್ಷ, ಹೆಚ್.ಡಿ ದೇವೆಗೌಡ ಹಾಗೂ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ನಿಕಟವರ್ತಿ ಆಗಿರುವ ನಾರಾಯಣ ಗೌಡರು ಕಳೆದ 2013ರ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಜಯಭೇರಿ ಸಾಧಿಸಿದ್ದರು. ಅಂತೆಯೇ ನುಡಿದಂತೆ ನಡೆದು ತನ್ನ ಕ್ಷೇತ್ರವನ್ನು ಸರ್ವೋನ್ನತಿಗಾಗಿ ಶ್ರಮಿಸಿ ಜನಾನುರೆಣೆಸಿದ್ದರು. ಕರ್ಮಭೂಮಿ ಮುಂಬಯಿಯಲ್ಲಿದ್ದು ಉದ್ಯಮದಲ್ಲಿ ತೊಡಗಿಸಿ ಕೊಂಡಿದ್ದೂ ಕಳೆದ ಸುಮಾರು ಒಂದುವರೆ ದಶಕದಿಂದÀ ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಸಕ್ರೀಯರಾಗಿ ಹುಟ್ಟೂರ ಸ್ವಕ್ಷೇತ್ರ ಕೃಷ್ಣರಾಜಪೇಟೆಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದರು.

ಮುಂಬಯಿ ಮಹಾನಗರದಲ್ಲಿನ ಉದ್ಯಮಿ, ಕೊಡುಗೈದಾನಿ, ಸಂಘ-ಸಂಸ್ಥೆಗಳ ಮಹಾಪೆÇೀಷಕ ಈ ಬಾರಿ 2018ರ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿ ಕರ್ನಾಟಕ ರಾಜ್ಯ ಅಸೆಂಬ್ಲಿ ಸದಸ್ಯರಾಗಿ ಆರಿಸಿ ಬಂದಿರುವುದು ಜನ್ಮಭೂಮಿ ಕರ್ನಾಟಕದ ವಿಧಾನ ಸಭೆಯಲ್ಲಿ ಕರ್ಮಭೂಮಿ ಮುಂಬಯಿಯಲ್ಲಿನ ಕನ್ನಡಿಗರ ಧ್ವನಿಯಾಗುವ ಆಶಯ ಮುಂಬಯಿ ಕನ್ನಡಿಗರು ವ್ಯಕ್ತ ಪಡಿಸಿದ ಕರ್ನಾಟಕ ರಾಜ್ಯದಲ್ಲಿ ಜನಪ್ರತಿನಿಧಿಯಾಗಿ ಪ್ರತಿನಿಧಿಸಲು ಮುಂಬಯಿ ನೆಲೆಯ ಶಾಸಕನೋರ್ವನ ಅಗತ್ಯವಿದ್ದು, ಕರ್ನಾಟಕದಲ್ಲಿ ನಾರಯಾಣ ಗೌಡರ ಪ್ರತಿನಿಧಿತ್ವ ಮಹಾರಾಷ್ಟ್ರದಲ್ಲಿನ ಕನ್ನಡಿಗರಿಗೆ ವರದಾನವಾಗಲಿದೆ ಎನ್ನುವ ಅಭಿಮತ ವ್ಯಕ್ತ ಪಡಿಸಿದ್ದಾರೆ. ಶ್ರೀ ಆದಿಚುಂಚನಗಿರಿ ಸೇವಾ ಸಮಿತಿ ಮುಂಬಯಿ ಮೂಲದ ಒಕ್ಕಲಿಗ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷರಾಗಿ, ಅದೇ ಸಂಘದ ಪ್ರಾಯೋಜಕತ್ವದ ಜಯಲಕ್ಷ್ಮೀ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷರಾಗಿ ಅನೇಕ ವರ್ಷಗಳ ಅವಿರತ ಸೇವೆಗೈದು, ಮಹಾನಗರದಲ್ಲಿನ ನೂರಾರು ತುಳು-ಕನ್ನಡಿಗ ಸಂಘಟನೆಗಳ ಹಿತೈಷಿ, ದಾನಿಯಾಗಿ ಜನಮಾನಸದಲ್ಲಿ ಜನಾನುರಾಗಿರುವ ನಾರಾಯಣ ಗೌಡರ ವಿಜಯ ಫಲಿಸಿರುವುದಕ್ಕೆ ಮಹಾನಗರ ಮುಂಬಯಿಯಲ್ಲಿನ ತುಳು-ಕನ್ನಡಿಗರ ಬಹುತೇಕ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಒಕ್ಕಲಿಗ ಸಮಾಜ ಮುಂಬಯಿಯ ಮುಂದಾಳುಗಳು ನಾರಾಯಣ ಗೌಡರನ್ನು ಅಭಿನಂದಿಸಿ ಶುಭಕೋರಿದ್ದಾರೆ.

ಇಂದಿಲ್ಲಿ ಪತ್ನಿ ದೇವಕಿ ಎನ್. ಗೌಡ, ಜೆಡಿಎಸ್‍ನ ಮುಖಂಡರು ಮತ್ತು ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಮತದಾರರು, ಅಸಂಖ್ಯ ಅಭಿಮಾನಿಗಳ ಜನ ಸಾಗರದೊಂದಿಗೆ ಭವ್ಯ ಮೆರವಣಿಗೆಯಲ್ಲಿ ವಿಜಯೋತ್ಸವ ಸಂಭ್ರಮಿಸಿದ ನೂತನ ಶಾಸಕ ನಾರಾಯಣ ಗೌಡರು ತನ್ನ ವಿಜಯಕ್ಕೆ ಆಶೀರ್ವಾದಿಸಿ ಸಹಕರಿಸಿದ ಸರ್ವರನ್ನೂ ಅಭಿವಂದಿಸಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here