Friday 19th, April 2024
canara news

ಖಾರ್ ಜವಾಹರ್ ನಗರ ಪಹೇಲ್ವಾನ್ ಚಾಳ್‍ನ ಶ್ರೀ ಶನಿಮಹಾತ್ಮ ಸಮಿತಿಯಿಂದ ಜರುಗಿದ ನವಗ್ರಹಶ್ರೇಷ್ಠ ಶ್ರೀ ಶನೈೀಶ್ವರ ಜನ್ಮೋತ್ಸವ-ಶನೀಶ್ವರ ಗ್ರಂಥಪಾರಾಯಣ

Published On : 17 May 2018   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.17: ತುಳು ಕನ್ನಡಿಗರ ಸಂಚಾಲಕತ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಸಂಚಾಲಕತ್ವದಿಂದ ಖಾರ್ ಪೂರ್ವದ ಸಾಯಿಬಾಬಾ ರಸ್ತೆಯ ಜವಾಹಾರ್ ನಗರ್‍ನ ಪಹೇಲ್ವಾನ್ ಚಾಳ್‍ನಲ್ಲಿ ಸೇವಾ ನಿರತ ಸದ್ಯ ಸಾಯಿಧಾಮ್ ಬಿಲ್ಡಿಂಗ್‍ನಲ್ಲಿ ಪ್ರತಿಷ್ಠಾಪಿತ ಶ್ರೀ ಶನಿಮಹಾತ್ಮ ಮಂದಿರದಲ್ಲಿ ಕಳೆದ ಮಂಗಳವಾರ ಸಾಮೂಹಿಕ ಶನಿ ಪೂಜೆಮತ್ತು ಶನೀಶ್ವರ ಗ್ರಂಥಪಾರಾಯಣದೊಂದಿಗೆ ನವಗ್ರಹಶ್ರೇಷ್ಠ ಶ್ರೀ ಶನೈೀಶ್ವರ ಜನ್ಮೋತ್ಸವವು ಸಧ್ಭಕ್ತರೆಲ್ಲರ ಸಹಕಾರದಿಂದ ಬಹಳ ವಿಜೃಂಭಣೆಯಿಂದ ಸುಸಾಂಗವಾಗಿ ನೆರವೇರಿಸಲ್ಪಟ್ಟಿತು. ಖಾರ್ ಪೂರ್ವದ ಸ್ಥಾನೀಯ ನಗರ ಸೇವಕಿ ಶ್ರೀಮತಿ ಪ್ರಜ್ಞ ಭೂತ್ಕಾರ್ ದೀಪ ಪ್ರಜ್ವಲಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆ ಪ್ರಯುಕ್ತ ಅಪರಾಹ್ನ ಕಳಶ ಮುಹೂರ್ತ, ಭಜನೆ, ಸದ್ಭಕ್ತರ ಪರವಾಗಿ ಸಾಮೂಹಿಕ ಶನೀಶ್ವರ ಗ್ರಂಥ ಪಾರಾಯಣ, ಮಂಗಳಾರತಿಗೈದು ನೆರೆದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ವಿತರಣೆ ನಡೆಸಲಾಯಿತು. ಅರ್ಚಕ ನಾಗೇಶ್ ಸುವರ್ಣ ಅವರು ಕಲಶ ಪ್ರತಿಷ್ಠಾಪನೆಗೈದು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಚಿತ್ರಕರ್ ಶೆಟ್ಟಿ ಮತ್ತು ಲಕ್ಷಿ ್ಮೀ ಶೆಟ್ಟಿ ದಂಪತಿ ಪೂಜೆಯ ಯಜಮಾನಿಕೆ ವಹಿಸಿದ್ದರು.

ಈ ಗ್ರಂಥಪಾರಾಯಣ, ಪೂಜೆ ಇತ್ಯಾದಿ ಪುಣ್ಯಾಧಿ ಕಾರ್ಯಕ್ರಮದಲ್ಲಿ ಸ್ಥಳಿಯ ಮಾಜಿ ನಗರ ಸೇವಕರಾದ ರಾಜು ಭೂತ್ಕÀರ್, ಸಮಿತಿಯ ಗೌರವ ಅಧ್ಯಕ್ಷ ಶ್ರೀಧರ್ ಜೆ.ಪೂಜಾರಿ, ಅಧ್ಯಕ್ಷ ಶಂಕರ್ ಕೆ.ಸುವರ್ಣ, ಕಾರ್ಯಾಧ್ಯಕ್ಷ ಆರ್.ಡಿ ಕೋಟ್ಯಾನ್, ಉಪಾಧ್ಯಕ್ಷರಾದ ದೇವೇಂದ್ರ ವಿ.ಬಂಗೇರ, ಶರತ್ ಮೂಡಿಬಿದ್ರಿ, ಉಪ ಕಾರ್ಯಧ್ಯಕ್ಷ ಜಯರಾಮ್ ಶೆಟ್ಟಿ, ಅರ್ಚಕ ಹಾಗೂ ಗೌರವ ಕೋಶಾಧಿಕಾರಿ ನಾಗೇಶ್ ಸುವರ್ಣ, ಪೂಜಾ ಸಮಿತಿ ಕಾರ್ಯದರ್ಶಿ ಜನಾರ್ದನ ಸಾಲಿಯಾನ್, ಉಪ ಕಾರ್ಯದರ್ಶಿ ರಮೇಶ್ ಪೂಜಾರಿ, ನರಸಿಂಹ ಸಾಲಿಯಾನ್, ಸಹ ಅರ್ಚಕರಾದ ಕೃಷ್ಣ ಕುಲಾಲ್, ಪೂಜಾ ಸಮಿತಿ ಕಾರ್ಯದರ್ಶಿ ರವೀಂದ್ರ ಕೋಟ್ಯಾನ್, ವಿಶ್ವನಾಥ ಕುಂದರ್, ಭಾರತ್ ಬ್ಯಾಂಕ್‍ನ ನಿರ್ದೇಶಕ ಅಡ್ವಕೇಟ್ ಸೋಮನಾಥ್ ಬಿ.ಅವಿೂನ್, ಪ್ರಬಂಧಕ ಸೋಮನಾಥ್ ಪೂಜಾರಿ, ಸಂಗೀತಾ ಎಸ್.ಪೂಜಾರಿ, ಯುವಕ ವೃಂದದ ಕಾರ್ಯಾಧ್ಯಕ್ಷವಿಜಯ್ ಸಾಲಿಯಾನ್, ಜೊತೆ ಕೋಶಾಧಿಕಾರಿ ವಿನೋದ್ ಹೆಜಮಾಡಿ, ಸಮಿತಿ ಸದಸ್ಯರಾದ ರಮೇಶ್ ಪೂಜಾರಿ, ಮಹಿಳಾ ಮಂಡಳಿ ಕಾರ್ಯಾಧ್ಯಕ್ಷೆ ಕೇಸರಿ ಬಿ. ಅವಿೂನ್, ಕಾಂದಿವಲಿ ಕನ್ನಡ ಸಂಘದ ಮಾಜಿ ಗೌರವಾಧ್ಯಕ್ಷ ಶ್ಯಾಮರಾಜ್ ಶೆಟ್ಟಿÀ, ಅಧ್ಯಕ್ಷ ಪೆÇಲ್ಯ ಜಯಪಾಲ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಸಮಿತಿಯ ಇತರ ಪದಾಧಿಕಾರಿಗಳು, ಮಹಿಳಾ ಮಂಡಳಿ ಸದಸ್ಯೆಯರು, ಯುವ ವಿಭಾಗ ಸೇರಿದಂತೆ ವಿವಿಧ ಉಪಸಮಿತಿಗಳ ಸದಸ್ಯರು, ಮಹಾನಗರದಲ್ಲಿನ ಬಹುಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀ ಶನಿದೇವರ ಕೃಪೆಗೆ ಪಾತ್ರರಾಗಿದ್ದು ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಗುರು ನಾರಾಯಣ ಯಕ್ಷಗಾನ ಮಂಡಳಿಯ ಸಚಿನ್ ಪೂಜಾರಿ ಅವರನ್ನು ಸಮಿತಿಯ ಟ್ರಸ್ಟಿ ಸದಸ್ಯ ನಾರಾಯಣ ಜಿ.ಕೋಟ್ಯಾನ್ ಪುಷ್ಪಗುಚ್ಛ, ಪ್ರಸಾದ ನೀಡಿ ಗೌರವಿಸಿದರು. ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೇಶ್ ಕೆ.ಹೆಜ್ಮಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವದಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here