Thursday 25th, April 2024
canara news

ಬಾರಕೂರು ಸೈಂಟ್ ಪೀಟರ್ಸ್ ಚಚ್೯ ವಾಷಿ೯ಕ ಮಹೋತ್ಸವದ ಆಚರಣೆ

Published On : 21 Dec 2014   |  Reported By : creative BVR


ಬ್ರಹ್ಮಾವರ ಡಿ.19: ಬಾರಕೂರು ಸೈಂಟ್ ಪೀಟರ್ಸ್ ಚಚ್೯ನ ವಾಷಿ೯ಕ ಮಹೋತ್ಸವವು ವಿಜೃಂಭಣೆಯಿಂದ ಚಚ್೯ ವ್ಯಾಪ್ತಿಯಲ್ಲಿರುವ ನಾಗರಮಠ ವಾಡ್೯ನ ಕ್ರೈಸ್ತ ಬಾಂಧವರ ಪ್ರಾಯೋಜಕತ್ವದಲ್ಲಿ ಆಚರಿಸಲಾಯಿತು. ಡಿಸಂಬರ್ 14ರಂದು ಸಂಜೆ 4ಗಂಟೆಗೆ ದಿವ್ಯ ಬಲಿಪೂಜೆಯೊಂದಿಗೆ ಪರ್ಷಂಪ್ರತಿಯಂತೆ ಪರಮಪ್ರಸಾದವನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಪ್ರಾಥಿ೯ಸಲಾಯಿತು. ಪ್ರಧಾನ ಗುರುಗಳಾಗಿ ವಂ. ಫಾ. ಹೆನ್ರಿ ಡಿ'ಸೋಜರವರು ಪೂಜಾ ವಿಧಿಗಳನ್ನು ನೇರವೇರಿಸಿದರು.

ದ.16ರಂದು ಸಂಜೆ 7ಗಂಟೆಗೆ ಸೈಂಟ್ ಪೀಟರ್ಸ್ರವರ ಮೂತಿ೯ಯನ್ನು ತೆರಾಲಿ ಮೆರವಣಿಗೆಯಲ್ಲಿ ಕೊಂಡೊಯ್ದು ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಪ್ರಧಾನಗುರುಗಳಾಗಿ ವಂ. ಫಾ. ವಿಶಾಲ್ ಲೋಬೊರವರು ಪೂಜಾವಿಧಿಗಳನ್ನು ಇತರ ಗುರುಗಳೊಂದಿಗೆ ನೆರವೇರಿಸಿದರು.

ದ.17ರಂದು ಬೆಳ್ಳಿಗ್ಗೆ 10ಗಂಟೆಗೆ ಚಚ್೯ ಪಾಲನಾಮಂಡಳಿ ಸದಸ್ಯರಿಗೆ ಹಾಗೂ ಪೋಷಕರಿಗೆ ಗೌರವವನ್ನು ನೀಡಲಾಯಿತು. 10.30ಕ್ಕೆ ವಾಷಿ೯ಕ ಮಹೋತ್ಸವದ ದಿವ್ಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪ ಕಾ೯ಧಿಕಾರೊಗಳಾಗಿರುವ ವಂ.ಫಾ. ಡೆನಿಸ್ ಡೆಸಾರವರು ಇತರ ಧರ್ಮಗುರುಗಳೊಂದಿಗೆ ನೆರವೇರಿಸಿದರು. ಚಚ್೯ ಧರ್ಮಗುರುಗಳಾದ ವಂ. ಫಾ. ವಲೇರಿಯನ್ ಮೆಂಡೋನ್ಸಾರವರು ಸಹಕರಿಸಿದ ಸರ್ವರಿಗೆ ಕೃತಜ್ಞತೆಗಳನ್ನು ನೀಡಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here