Friday 24th, May 2019
canara news

ಜೂ.16-17: ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಎರಡು ದಿನಗಳ ನಾಟಕೋತ್ಸವ

Published On : 07 Jun 2018   |  Reported By : Rons Bantwal


ಪ್ರಕಾಶ್ ಬೆಳವಾಡಿ ನಿರ್ದೇಶನದ `ಶಿಕಾರಿ'-ಪ್ರಮೀಳಾ ಬೆಂಗ್ರೆ ನಿರ್ದೇಶನದ`ಚಿರೇಬಂದಿ ವಾಡೆ'

ಮುಂಬಯಿ, ಜೂ.06: ಮೈಸೂರು ಅಸೋಸಿಯೇಷನ್ ಜೊತೆಗೂಡಿ ರಂಗಾಯಣ ಮೈಸೂರು ಅರ್ಪಿಸುವ ಎರಡು ದಿನಗಳ ನಾಟಕೋತ್ಸವ ಇದೇ ಜೂನ್ 16 ಶನಿವಾರ ಮತ್ತು 17ರ ಭಾನುವಾರ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ನಡೆಯಲಿದೆ. ಪ್ರಕಾಶ್ ಬೆಳವಾಡಿ ಅವರು ಯಶವಂತ ಚಿತ್ತಾಲರ `ಶಿಕಾರಿ' ಕಾದಂಬರಿಗೆ ರಂಗರೂಪ ನೀಡಿ ನಿರ್ದೇಶಿಸಿರುವ ನಾಟಕವು ಜೂ.16 ಶನಿವಾರ ಸಂಜೆ 6.00 ಗಂಟೆಗೆ ಮತ್ತು ಜೂ.17ರ ಭಾನುವಾರ ಸಂಜೆ 6.00 ಗಂಟೆಗೆ ಮರಾಠಿಯ ಪ್ರಸಿದ್ಧ ಮಹೇಶ್ ಎಲ್.ಕುಂಚವಾರ್ ಅವರ `ಚಿರೇಬಂದಿ ವಾಡೆ' ನಾಟಕ ಪ್ರಮೀಳಾ ಬೆಂಗ್ರೆ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಮುಂಬಯಿ ಮಹಾನಗರ ಹಾಗೂ ಆಸುಪಾಸಿನ ಎಲ್ಲಾ ನಾಟಕ ಕಲಾಭಿಮಾನಿಗಳು ಆಗಮಿಸಿ ಎರಡೂ ನಾಟಕಗಳನ್ನು ವೀಕ್ಷಿಸ ಬೇಕಾಗಿ ಮೈಸೂರು ಅಸೋಸಿಯೇಷನ್ ಮುಂಬಯಿ ಇದರ ಗೌರವ ಕಾರ್ಯದರ್ಶಿ ಡಾ| ಗಣಪತಿ ಶಂಕರಲಿಂಗ್ ಈ ಮೂಲಕ ವಿನಂತಿಸಿದ್ದಾರೆ.

ಆಧುನಿಕ ಜಗದ ಭೇಟೆ ಮತ್ತು ಸಾಮಾನ್ಯ ಬದುಕಿನ ತಲ್ಲಣ:

ಸೀಳುನಾಯಿಗಳ ಪಡೆಯೊಂದು ಮರಿ ಮೊಲವೊಂದನ್ನು ಬೆನ್ನಟ್ಟಿದೆ. ಹುಲ್ಲು ಮೇಯುತ್ತಿರುವ ಮರಿ ಗಾಬರಿಯಿಂದ `ಇದೇಣಾಗುತ್ತಿದೆ...? ಯಾಕೆ ಹೀಗೆ ಸುತ್ತಲಿನ ಅಪ್ಪ, ಅಮ್ಮ, ಅಣ್ಣ, ಅಕ್ಕ ಓಡುತ್ತಿದ್ದಾರೆ...? ನಾನೂ ಬರುತ್ತೇನೆ...ನಿಲ್ಲಿ... ಅಮ್ಮಾ...ಅಪ್ಪಾ...ಅಕ್ಕಾ....ಅಣ್ಣಾ...? ಎಂದು ಕೂಗತೊಡಗುತ್ತದೆ. ಸುತ್ತಲಿಂದ ಎಲ್ಲ ದಿಕ್ಕುಗಳಿಂದ ದಾಳಿಯಿಕ್ಕುವ ನಾಯಿಗಳಿಂದ ತಪ್ಪಿಸಿಕೊಳ್ಳಲೋಸುಗ ಮರಿ ಮನಬಂದತ್ತ ಓಡತೊಡಗುತ್ತದೆ. ಇದೆಲ್ಲಾ ಏನು...? ಏನು ನಡೆಯುತ್ತಿದೆ...? ಯಾಕೆ..? ಒಂದೂ ತಿಳಿಯುತ್ತಿಲ್ಲ. ಗಂಟಲಿನಿಂದ ತಿಳಿವು ಮೀರಿ ಉಕ್ಕಿ ಬರುತ್ತಿರುವ ಆಕ್ರಂದನ. ಓಡಿಸಿ, ಓಡಿಸಿ ಓದುವ ದಣಿವಿನಿಂದಲೇ ಕೊಲ್ಲುವ ಶೀತಲ ಕ್ರೌರ್ಯದ ನಾಯಿಗಳ ಮುಖದಲ್ಲಿ ಮಂದಹಾಸ. ಕೊನೆಗೊಮ್ಮೆ `ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್'. ಇದು ಕಾಡೀನ ಕತೆ. ಈ ಕತೆ ನಾಡಿಗೆ ವರ್ಗವಾದರೆ..! `ಕಾಂಕ್ರೀಟ್' ಕಾಡಾಗಿರುವ ನಾಗರಿಕತೆ ನಕಲಾದರೆ.. ! ಮೊಲವೇ ಇದ್ದಕ್ಕಿಂದತೆ ನಾಯಿಯಂತಾಗಿ ಮರಿ ಮೊಲವೊಂದನ್ನು ಬೆನ್ನಟ್ಟಿ ಕೊಲ್ಲುವಂತಾದರೆ..! ಆಧುನಿಕ ಬದುಕು ಸೃಷ್ಟೀಸಿದ ಸಂಕೀರ್ಣ ಜಗತ್ತು ತಲ್ಲಣ ಹುಟ್ಟಿಸುವ ಗೊಂಡಾರಣ್ಯದಂತಾದರೆ..! ಮನುಷ್ಯರೇ ನಾಯಿಗಳಂತಾಗಿ ಇನ್ನೋರ್ವ ಮನುಷ್ಯನ ಮೇಲೆ ಎರಗಿದರೆ..! `ಕರಿಯರ್', `ಮೇಲೇರುವುದು' ಎನ್ನುವ ಮಾಯಾಮೃಗದ ಹಿಂದೆ ಬೆನ್ನಟ್ಟಿ ಪಕ್ಕದ ಜೀವವನ್ನೂ ನೋಡದಷ್ಟು, ಅದರ ಆತಂಕಗಳನ್ನೂ ಗಮನಿಸದೇ ಹೋಗುವಂತಾದರೆ..! ಆಸರೆಗಾಗಿ ಹಗ್ಗವೆಂದು ಹಿಡಿಯಲು ಹೋದದ್ದೆಲ್ಲಾ ಹಾಲಾಹಲ ಉಗುಳುವ ಕಾರ್ಕೋಟಕ ಸರ್ಪವಾದರೆ..! ತುತ್ತು ನೀಡುವ ಕೈಯೊಂದು ಅದೇ ತುತ್ತಿನಲ್ಲಿ ವಿಷ ಬೆರೆಸಿದರೆ..! ಪ್ರೀತಿ ತೋರುವ ಕೈಯೊಂದು ಕತ್ತು ಹಿಚುಕಲು ಬಂದರೆ..! ತಾಯ ಮೊಲೆ ಹಾಲು ನಂಜಾಗಿ ಕೊಲ್ಲುವುದಾದರ್...! ಈ ಇಂಥ ಕಾರಣಗಳಿಂದಾಗಿ, ಭೂತ, ವರ್ತಮಾನ ಹಾಗೂ ಭವಿಷ್ಯತ್ಕಾಲಗಳೆಲ್ಲಾ ಏಕಕಾಲದಲ್ಲಿ ಆತಂಕ ಹುಟ್ಟಿಸುತ್ತಾ ಭೂತಗಳಾಗಿ ಕಾಡತೊಡಗಿದರೆ ..! ಯಾರಿಗೆ ದೂರುವುದು...! ಏನು ಮಾಡುವುದು...! ಎಲ್ಲಿಗೆ ಹೋಗುವುದು...!
ಇದು ಯಶವಂತ ಚಿತ್ತಾಲರ `ಶಿಕಾರಿ' ಕಾದಂಬರಿಯ ಕತೆ. ಕಾಪೆರ್Çೀರೇಟ್ ಬದುಕಿನ ಗೊಂಡಾರಣ್ಯದ ಚಕ್ರವ್ಯೂಹದಲ್ಲಿ ನಮ್ಮನ್ನು ಸ್ತುತ್ತಿಸುವ ಚಿತ್ತಾಲರು ಬಾಲ್ಯದ ಕರಾಳ ನೆನಪುಗಳನ್ನು ಹೊತ್ತ, ಪ್ರಾಮಾಣಿಕವಾಗಿ ಬದುಕಲೆತ್ನಿಸುವ ನಾಗಪ್ಪನ ತಲ್ಲಣಗಳನ್ನು ನಮ್ಮ ತಲ್ಲಣಗಳನ್ನಾಗಿ ಪರಿವರ್ತಿಸುವಲ್ಲಿ ಗೆಲ್ಲುವುದಷ್ಟೇ ಅಲ್ಲ. ಸಾಮಾನ್ಯ ಬದುಕಿನ ಮುಗ್ಧ. ನಿರಾಳ ಸರಳತೆಯನ್ನು ಧಿಕ್ಕರಿಸಿದ. ಪಕ್ಕದ ಜೀವವನ್ನು ತುಳಿಯುವುದನ್ನೇ ಬದುಕಿನ ಪರಮ ಧರ್ಮವನ್ನಾಗಿ ಮಾಡಿಕೊಂಡ ?ಆಧುನಿಕ? ಜಗತ್ತಿನ ಪಾಶವೀಯ ಮುಖಕ್ಕೆ ಕನ್ನಡಿ ಹಿಡಿಯುತ್ತಾರೆ. ?ಏನಿಲ್ಲದಿದ್ದರೂ ಬದುಕಬಹುದೇನೋ... ಆದರೆ ಪ್ರೀತಿಯಿಲ್ಲದೇ...? ಗೆಳೆತನವಿಲ್ಲದೇ...? ಮಾನವೀಯ ಅಂತಃಕರಣವಿಲ್ಲದೇ...? ಸಹಾನುಭೂತಿ ಇಲ್ಲದೆ ಬದುಕಲು ಸಾಧ್ಯವೇ...?ಇವೆಲ್ಲ ಇಲ್ಲವಾದರೆ ಬದುಕಬೇಕಾದ ರೂ ಯಾಕೆ. .? ಚಿತ್ತಾಲರು ಇಂತಹ ಪ್ರಶ್ನೆಗಳನ್ನು ಕೇಳಿ, ಸಂವೇದನಾರಹಿತ ಸ್ವಕೇಂದ್ರಿತ ಹುಸಿ ಅವಸರದ ಮನಸ್ಸುಗಳನ್ನು ಬೆಚ್ಚಿಸುತ್ತಾರೆ. ತನ್ನೆಲ್ಲ ಕುರೂಪಗಳನ್ನು ದೌರ್ಬಲ್ಯಗಳನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವ ತಾಯಿ ಜೀವಕ್ಕಾಗಿ ಕಾಯುವ ತಳಮಳದ ಜೀವವೊಂದರ ಸಂಕೇತವಾಗುತ್ತಾನೆ ನಾಗಪ್ಪ.

ಈ ದಿನವನ್ನು ಎಲ್ಲ ಪ್ರಾಮಾಣಿಕ ಅರ್ಥಗಳಲ್ಲೂ ಸಾರ್ಥಕವಾಗಿ, ಸದ್ಬಳಕೆ ಮಾಡಿಕೊಳ್ಳದಿದ್ದರೆ ಎಷ್ಟೊಂದು ನಾಳೆಗಳಿದ್ದೇನು ಪ್ರಯೋಜನ...? ಎನ್ನುವ ನಿರಂತರವಾಗಿ ಮನುಷ್ಯ ಎನ್ನುವ ಪ್ರಾಣಿಯನ್ನು ಕಾಡುವ ಪ್ರಶ್ನೆಯನ್ನು, ಆಗಾಗ ಮರೆಯುವ ಮನುಷ್ಯ ಪ್ರಾಣಿಗೆ ?ಶಿಕಾರಿ?ಯ ಮೂಲಕ ಚಿತ್ತಾಲರು ಮತ್ತೆ ಮತ್ತೆ ನೆನಪಿಸುತ್ತಾ ಎದುರಿಗಿಡುತ್ತಾರೆ.

ಇಂಥ ಕನ್ನಡದ ಶ್ರೇಷ್ಠ ಹಾಗೂ ಸಂಕೀರ್ಣ ಕಾದಂಬರಿಯೊಂದನ್ನು ರಂಗಕ್ಕೆ ತರುವುದು ನಿಜಕ್ಕೂ ಸವಾಲಿನ ಕೆಲಸ. ಸಾಹಿತ್ಯಾಭಿವ್ಯಕ್ತಿ ಹಾಗೂ ರಂಗಾಭಿವ್ಯಕ್ತಿಗಳು ಪರಸ್ಪರ ಸಂಧಿಸಿ, ಸಂಘರ್ಷಿಸಿ ಹೊಸದೊಂದು ಹುಟ್ಟೂವ ಪರಿ ಸೋಜಿಗವಾದುದು. ಈ ಸವಾಲನ್ನು ಕನ್ನಡದ ಶ್ರೇಷ್ಠ ಹಾಗೂ ಸೂಕ್ಶ್ಮ ಸಂವೇದನೆಯ ನಿರ್ದೇಶಕರಾದ ಶ್ರೀ ಪ್ರಕಾಶ್ ಬೆಳವಾಡಿಯವರ ಜೊತೆ ಎದುರಿಸಿದ ಈ ಹಾದಿಯ ಪಯಣವೇ ಒಂದು ಅದ್ಭುತ ಅನುಭವ. ಇಂಥ ಸವಾಲನ್ನು ಸ್ವೀಕರಿಸಿದಾಗಲೆಲ್ಲಾ ದೊಡ್ಡ ಕೃತಿಯ ದೊಡ್ಡ ಶಕ್ತಿಯ ಸಣ್ಣ ಕಂಪನವೊಂದು ನಮ್ಮಲ್ಲೂ ಪ್ರವಹಿಸುವ ಸಂಭ್ರಮ, ಸಡಗರ ನಮ್ಮದು. ಇಂಥ ದೊಡ್ಡದರ ಜೊತೆ ಸೆಣೆಸುತ್ತಾ, ನಿಮಗಿದನ್ನು ಅರ್ಪಿಸಿ ಹಿಗ್ಗುವ, ಹಿಗ್ಗಿಸುವ ಹಾಗೂ ಹಿಗ್ಗಿಸಿಕೊಳ್ಳುವ ಆಸೆ ನಮ್ಮದು.

ಜೂ.17ರ ಭಾನುವಾರ ಸಂಜೆ 6.00 ಗಂಟೆಗೆ ಮರಾಠಿಯ ಪ್ರಸಿದ್ಧ ಮಹೇಶ್ ಎಲ್.ಕುಂಚವಾರ್ ಅವರ `ಚಿರೇಬಂದಿ ವಾಡೆ' ವಸ್ತು ಆಧುನಿಕ ದಿನಗಳು ತಂದೊಡ್ಡಿರುವ ಸಂಕೀರ್ಣ ಒತ್ತಡಗಳ ಪ್ರಭಾವಕ್ಕೆ ಒಳಗಾಗಿ ವಿಘಟನೆಗೊಳ್ಳುವ ಒಂದು ಸಂಯುಕ್ತ ಕುಟುಂಬದ ಮನೋವ್ಯಾಪಾರಗಳ ಸಂಘರ್ಷವನ್ನು ಬಿಂಬಿಸುವ ರೀತಿ ಗಮನಾರ್ಹವಾಗಿದೆ. ಮಾತು ಮಾನಗಳ ನಡುವೆ ವ್ಯಕ್ತಿ ಪಾತ್ರಗಳ ವಿಭಿನ್ನ ಲೋಕವನ್ನು ತೆರೆದು ನೋಡುವ ಈ ನಾಟಕವನ್ನು ಮಾರುತಿ ಶಾನಭಾಗ ಅವರು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ಪ್ರಮೀಲಾ ಬೆಂಗ್ರೆಯವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ.

ಮೇಲು ನೋಟಕ್ಕೆ ಈ ನಾಟಕ ಒಂದು ವಾಡೆ ಕುಸಿದು ಬೀಳುತ್ತಿರುವ ಪ್ರಸಂಗ ಅಥವಾ ದೇಶಪಾಂಡೆ ಮನೆತನದ ಅವನತಿ ಅನ್ನಿಸಿದರೂ... ಒಳಗಣ್ಣಿಗೆ ನಮ್ಮ ಸಮಾಜ ಇಂದು ಪ್ರಗತಿ ಎನ್ನುವ ಹೆಸರಲ್ಲಿ ಕಟ್ಟಿಕೊಂಡಿರುವ ಅಥವಾ ಮುಂದೆ ಮುಂದೆ ಸಾಗುತ್ತಿದ್ದೇವೆ ಎನ್ನುವ ಭ್ರಮೆಯಿಂದ, ಕಳಚಿಕೊಳ್ಳುತ್ತಿರುವ ಮೌಲ್ಯಗಳನ್ನು ಒಂದೊಂದಾಗಿ ತೆರೆದಿಡುತ್ತಾ ಹೋಗುತ್ತದೆ.

ಮನುಷ್ಯ ಮನುಷ್ಯನ ಸಂಬಂಧಗಳನ್ನು ಶಕ್ತಿಯುತಗೊಳಿಸುವಂತಹ ಈ ನಾಟಕ ನಮ್ಮನ್ನು ಜೀವಪರ ಮನುಷ್ಯಪರ-ಪ್ರೀತಪರ ಆಲೋಚನೆಗಳಿಗೆ ತೊಡಗಿಸುತ್ತದೆಯಾದ್ದರಿಂದ ಈ ಸ್ಥಿತ್ಯಂತರ ಅಥವಾ ಯುಗಾಂತ (ಒoಜeಡಿಟಿ ಒobiಟe ಯುಗ) ದಲ್ಲಿ ಈ ನಾಟಕ ಹೆಚ್ಚು ಪ್ರಸ್ತುತ ಮತು ಅಗತ್ಯ ಕೂಡ. ಎಲ್‍ಕುಂಚವಾರ್‍ಅವರ ಮಾತುಗಳಲ್ಲೇ ಹೇಳುವುದಾದರೆ ?ಯಾವ ಗ್ರಾಮೀಣ ಸಂಸ್ಕೃತಿಯಿಂದ ಕಲಾ ಪ್ರಕಾರದ ಉದಯವಾಯಿತೋ ಆ ಸಂಸ್ಕೃತಿ ಸದ್ಯ ನಾಶಗೊಂಡು ಬಿಟ್ಟೀದೆ ಎಂದರೂ ಸರಿ. ಹಳ್ಳಿಯಲ್ಲ್ ಗಿರಣಿ ಬಂದ ಕೂಡಲೇ ಬೀಶುಗಲ್ಲು ಮೂಲೆ ಗುಂಪಾಯಿತು. ಅದರ ಜೊತೆ ಬೀಸುವ ಹಾಡುಗಳೂ ಹೋದವು. ನಲ್ಲಿಗಳಲ್ಲಿ ನೀರು ಅಂದ ಮೇಲೆ ಬಾವಿಯಿಂದ ನೀರು ಸೇದುವುದು ನಿಂತಿತು. ಟೂರಿಂಗ್ ಟಾಕೀಸು ಬಂದ ಕೂಡಲೇ ದೇವಸ್ಥಾನದಲ್ಲಿಯ ಭಜನೆ, ಕೀರ್ತನೆಗೆ ಬರುವವರೇ ಕಡಿಮೆಯಾಯಿತು.

ಚಿರೇಬಂದಿ ವಾಡೆಯ ಜನರ ಮುಂದಿರುವುದು ಕತ್ತಲೆಯ ಜಗತ್ತು. ಆದರೆ ಈ ಕತ್ತಲೆ ತಮ್ಮ ತಮ್ಮ ಕ್ಷುದ್ರ ಸ್ವಾರ್ಥಗಳನ್ನು ಸಾಧಿಸಿಕೊಳ್ಳುತ್ತ, ಕಾಪಾಡಿಕೊಳ್ಳುತ್ತ, ಇರುವಾಗಲೆ ಪರಸ್ಪರರ ಬಗ್ಗೆಯೂ ಅವರ ಜಿವ ಮಿಡಿಯುವುದನ್ನು ಕಾಣುತ್ತೇವೆ. ಕರುಳಿನ ಗಂಟನ್ನು ಬಿಡಿಸಿಕೊಳ್ಳುತ್ತಿರುವಾಗಲೇ ಅದು ಇನ್ನಷ್ಟು ಕೊಂಡಿಗಳಾಗುತ್ತ ಹೋಗುತ್ತದೆ.
ಜೀವಪರ, ಪ್ರೀತಿಪರ ಸಂಬಂಧಗಳೇ ಬಂಗಾರ. ವಾಡೆಯ ಕುಸಿತಕ್ಕೆ ಕಾರಣವಾಗಿರುವ `ಟ್ರಾಕ್ಟರ್' ಅಗೋಚರವಾಗಿದ್ದರು ಈಗಿನ `ರೈತರ ಆತ್ಮಹತ್ಯೆ' ಯವರೆಗೆ ರೈತರನ್ನು ಎಳೆದು ತರಲು ಕಾರಣವಾದ ಈ ತಂತ್ರಜ್ಞಾನದ `ಪ್ರತಿಮೆ'ಯಾಗಿದೆ.
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here