Thursday 25th, April 2024
canara news

ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದಲ್ಲಿ ಕೃಷಿ ತಂತ್ರಜ್ಞಾನ ಸಪ್ತಾಹದ ಅಂಗವಾಗಿ ಬಾಳೆ ಮತ್ತು ಅಡಿಕೆ ಬೆಳೆಯಲ್ಲಿ ಉತ್ಪಾದನ ತಾಂತ್ರಿಕತೆಗಳು ಕುರಿತು ತಾಂತ್ರಿಕ ಸಮಾವೇಶ

Published On : 21 Dec 2014   |  Reported By : creative BVR


ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದಲ್ಲಿ ದಿನಾಂಕ 16.12.2014 ರಿಂದ 20.12.2014 ರವರೆಗೆ ಹಮ್ಮಿಕೊಳ್ಳಲಾಗಿದ್ದ ಕೃಷಿ ತಂತ್ರಜ್ಞಾನ ಸಪ್ತಾಹದ ಮೂರನೇ ದಿನವಾದ ದಿನಾಂಕ 18.12.2014ರಂದು ತೋಟಗಾರಿಕೆ ಇಲಾಖೆ, ಕಾರ್ಕಳ, ಇವರ ಸಂಯುಕ್ತಾಶ್ರಯದಲ್ಲಿ ಬಾಳೆ ಮತ್ತು ಅಡಿಕೆ ಬೆಳೆಯಲ್ಲಿ ಉತ್ಪಾದನ ತಾಂತ್ರಿಕತೆಗಳು ಕುರಿತು ತಾಂತ್ರಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ. ಸಿದ್ದಲಿಂಗೇಶ್ವರ ಟಿ., ಹಿರಿಯ ಸಹಾಯಕ ತೋಟಗಾರಿಕಾ ನಿದೆ೯ಶಕರು, ತೋಟಗಾರಿಕೆ ಇಲಾಖೆ, ಕಾರ್ಕಳ ಇವರು ಬಾಳೆ ರೈತರು ಅಳವಡಿಸಿಕೊಳ್ಳಬೇಕಾದ ತಾಂತ್ರಿಕತೆಗಳನ್ನು ಹಾಗೂ ಇಲಾಖೆಯಲ್ಲಿ ಇರುವ ಸವಲತ್ತುಗಳ ಕುರಿತು ರೈತರಿಗೆ ಸವಿಸ್ತಾರವಾಗಿ ವಿವರಿಸಿದರು.

ಡಾ. ಎಸ್.ಯು ಪಾಟೀಲ್, ಪ್ರಾಂಶುಪಾಲರು, ಕೃಷಿ ಡಿಪ್ಲೋಮ ಕಾಲೇಜು, ಬ್ರಹ್ಮಾವರ ಇವರು ಬಾಳೆಯಲ್ಲಿ ಕೀಟ ಮತ್ತು ರೋಗಗಳು ಹಾಗೂ ಇತ್ತೀಚಿನ ದಿನಗಳಲ್ಲಿ ಬಾಳೆಯ ತೋಟವನ್ನು ಹೆಚ್ಚು ನಾಶಮಾಡುತ್ತಿರುವ ಬಾಳೆ ಸುರುಳಿ ಹುಳುಗಳ ಜೀವನ ಚರಿತ್ರೆ ಮತ್ತು ಅದರ ನಿಯಂತ್ರಣ ಬಗ್ಗೆ ಮಾಹಿತಿ ನೀಡಿದರು. ಅಡಿಕೆ ಬೆಳೆಯನ್ನು ಬಾಧಿಸುವ ಕೀಟ ಮತ್ತು ರೋಗಗಳು ಮತ್ತು ಅವುಗಳ ಸಮಗ್ರ ಹತೋಟಿ ಕುರಿತು ಡಾ. ಜಯಲಕ್ಷ್ಮೀ ನಾರಾಯಣ ಹೆಗಡೆ, ಕಾರ್ಯಕ್ರಮ ಸಂಯೋಜಕರು, ಕೆ.ವಿ.ಕೆ., ಬ್ರಹ್ಮಾವರ ಇವರು ಮಾತನಾಡಿದರು ಹಾಗೂ ಬೋಡೊ೯ ದ್ರಾವಣದ ತಯಾರಿಕೆಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಶ್ರೀ ಚೈತನ್ಯ ಹೆಚ್. ಎಸ್, ವಿಷಯ ತಜ್ಞರು (ತೋಟಗಾರಿಕೆ), ಕೆ.ವಿ.ಕೆ. ಬ್ರಹ್ಮಾವರ ಇವರು ಅಡಿಕೆ ಮತ್ತು ಬಾಳೆ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮತ್ತು ಉತ್ಪಾದನಾ ತಾಂತ್ರಿಕತೆಗಳ ಕುರಿತು ಸವಿಸ್ತರವಾಗಿ ಮಾಹಿತಿ ನೀಡಿ, ಅಧಿಕ ಇಳುವರಿಯನ್ನು ಪಡೆಯಲು ಬಾಳೆಗೊನೆಗೆ ಪೋಷಕಾಂಶಗಳನ್ನು ಉಣಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತೋರಿಸಿದರು. ಈ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕಿನ 49 ಜನ ರೈತರು ಭಾಗವಹಿಸಿ ಅಡಿಕೆ ಮತ್ತು ಬಾಳೆ ಬೆಳೆಯಲ್ಲಿಯ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ಪ್ರಯೋಜನ ಪಡೆದುಕೊಂಡರು. ತರಬೇತಿ ನಂತರ ರೈತರಿಗೆ ಕ್ಷೇತ್ರ ಭೇಟಿ ಮಾಡಿಸಲಾಯಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here