Friday 24th, May 2019
canara news

ಫಾ|ಅನಿಲ್ ವರ್ಗಾವಣೆ ಪ್ರಯುಕ್ತ ಕುಂದಾಪುರ ಕಥೊಲಿಕ್ ಸಭಾದಿಂದ ಸಹಮಿಲನ

Published On : 10 Jun 2018   |  Reported By : Bernard Dcosta


ಕುಂದಾಪುರ,ಜೂ 10: ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ವಂ| ಅನಿಲ್ ಡಿಸೋಜರಿಗೆ ವರ್ಗಾವಣೆ ಇರುವುದರಿಂದ ಕಥೊಲಿಕ್ ಸಭಾ ಕುಂದಾಪುರ ಘಟಕದ ಸದಸ್ಯರು ಹಾಗೂ ಕುಂದಾಪುರ ಕಲಾಮ್ರತ್ ಕಲಾ ತಂಡ, ಫಾ ಅನಿಲ್‍ರೊಂದಿಗೆ ಸಹಮಿಲನ ಕಾರ್ಯಕ್ರಮ ಜೂನ್ 6 ರಂದು ಚರ್ಚ್ ಹಾಲ್‍ನಲ್ಲಿ ನೆಡೆಯಿತು.
ಈ ಸಂದರ್ಭದಲ್ಲಿ ಚರ್ಚ್ ಸಲಹ ಮಂಡಳಿ ಉಪಾಧ್ಯಕ್ಷ, ಕಥೊಲಿಕ್ ಸಭಾದ ಮಾಜಿ ಅಧ್ಯಕ್ಷ ಜೇಕಬ್ ಡಿಸೋಜಾ ‘ಕುಂದಾಪುರ ಕಥೊಲಿಕ್ ಸಭೆಯ ಅದ್ಯಾತ್ಮಿಕ ನಿರ್ದೇಶಕರಾಗಿದ್ದು ಕಥೊಲಿಕ್ ಸಭೆಗೆ ಮಾರ್ಗದರ್ಶನ ಕೊಟ್ಟು, ಉತ್ತಮವಾಗಿ ಸಹಕರಿಸಿ ಕಥೊಲಿಕ್ ಸಭೆಯ ಎಳಿಗಾಗಿ ಶ್ರಮಿಸಿದ್ದಾರೆ’ ಎಂದು ವರ್ಗಾವಣೆಯ ಪ್ರಯುಕ್ತ ಅವರ ಮುಂದಿನ ಧಾರ್ಮಿಕ ಸೇವೆಗೆ ಯಶಸ್ಸನ್ನು ಕೋರಿ ಶುಭ ಹಾರೈಸಿದರು.

ಕಥೊಲಿಕ್ ಮಾಜಿ ಅಧ್ಯಕ್ಷ, ಮಾಜಿ ಸಲಹ ಮಂಡಳಿ ಉಪಾಧ್ಯಕ್ಷ ಜಾನ್ಸನ್ ಡಿಆಲ್ಮೇಡ ಮಾತಾಡಿ ‘ಕುಂದಾಪುರ ಕಥೊಲಿಕ್ ಸಭೆಯಲ್ಲಿರುವ ಕಾಳಜಿಯನ್ನು ಎತ್ತಿ ತೋರಿಸಿದ್ದಾರೆ, ಬಡ ಬಗ್ಗರ ಒಳಿತಿಗಾಗಿ ಕಥೊಲಿಕ ಸಭಾ ಕೆಲಸ ಮಾಡಬೇಕೆಂಬುದು ಅವರ ಅಪೇಕ್ಷೆ’ ಎಂದು ಅವರ ವಿಶಾಲ ಮನೋಭಾವನೆಯನ್ನು ತಿಳಿಸಿ ಶುಭ ಕೋರಿದರು.

ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ‘ಪಾ|ಅನಿಲ್ ಧಾರ್ಮಿಕ ಸೇವೆ ಹಾಗೇ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ನೀಡಲು ನನಗೆ ಬಹಳವಾದ ಸ್ಪೂರ್ತಿ ಸಹಕಾರ ನೀಡಿದ್ದಾರೆ, ಕಾಲೇಜಿನ ಸಂಚಾಲಕಾರಾಗಿದ್ದರೂ ಅವರು ನನಗೆ ಕಾಲೇಜಿನ ಏಳಿಗೆಗಾಗಿ ಪೂರ್ಣ ಸ್ವಾಂತತ್ರ್ಯ ಕೊಟ್ಟಿದ್ದರು, ಅವರೊಬ್ಬ ಪ್ರೀತಿಯ ಒಳ್ಳೆಯ ಮನಸ್ಸಿನ ಮನುಷ್ಯ, ಸಹ ಧರ್ಮಗುರುಗಳಲ್ಲಿ ಅವರಿಗೆ ಬಹಳ ಕಾಳಜಿ, ಇವರ ಜೊತೆ ಸೇವೆ ಮಾಡುವುದೆಂದರೆ ಅದೊಂದು ಭಾಗ್ಯ’ ಎಂದು ಗುಣಗಾನ ಮಾಡಿ ಶುಭ ಕೋರಿದರು.

ಉತ್ತರವಾಗಿ ಫಾ|ಅನಿಲ್ ‘ನೀವೆಲ್ಲರೂ ನನ್ನ ಬಗ್ಗೆ ನೋಡಿ, ನನ್ನ ತಿಳಿದುಕೊಂಡು, ನನ್ನ ಬಗ್ಗೆ ಮಾತಾನಾಡಿದ್ದಿರಿ, ನಾನು ದೇವರ ಸೇವೆ ಮಾಡಲು ಬಂದಿರುವನು, ಅದನ್ನು ಪ್ರಮಾಣಿಕವಾಗಿ ಮಾಡುವುದು ನನ್ನ ಧರ್ಮ, ವಲಯ ಪ್ರಧಾನರಾಗಿ ವತ್ತಡದಲ್ಲಿದ್ದರೂ, ಎಲ್ಲಾ ಕೆಲಸಗಳನ್ನು ಮಾಡಲು ಸಾಧ್ಯವಾಗಿದ್ದು ಈ ಚರ್ಚಿನ ರೋಜರಿ ಮಾತೆಯ ಆಶಿರ್ವಾದದಿಂದ ಹಾಗೇ ನನಗೆ ಆರೋಗ್ಯದಿಂದ ಕಾಪಾಡಿದ ನನ್ನ ಹುಟ್ಟೂರಿನ ಆರೋಗ್ಯ ಮಾತೆ. ಕಥೊಲಿಕ್ ಸಭಾ ನಮ್ಮ ಸಮಾಜದಲ್ಲಿ ಒಂದು ಬಲವಾದ ಸಂಘಟನೆ, ಈ ಸಂಘನೆಯಿಂದ ಸಮಾಜಿಕ ಕಳ ಕಳಿಯನ್ನು ಮನಸ್ಸಿನಲ್ಲಿ ನಿಸ್ವಾರ್ಥ ಸೇವೆ ಮಾಡಬೇಕು, ಹೆಸರಿಗಾಗಿ, ಅಧಿಕಾರಕ್ಕಾಗಿ ಈ ಸಂಘದಲ್ಲಿ ಇರಬೇಡಿ, ವಯಕ್ತಿಕವಾಗಿ ಸೇವೆ ಮಾಡದೆ ಸಂಘಟಿತರಾಗಿ ಸೇವೆ ಮಾಡಿರಿ, ಕುಂದಾಪುರ ಕಥೊಲಿಕ್ ಸಂಘಟನೆಗೆ, ಜಿಲ್ಲೆಯಲ್ಲಿಯೇ ಉತ್ತಮ ಮಟ್ಟದ ಕೆಲಸವನ್ನು ಮಾಡುತ್ತದೆ ಎಂದು ಹೆಗ್ಗಳಿಕೆ ಇದೆ, ಇಂತಹ ಒಳ್ಳೆತನ ಮತ್ಸಸ್ಟು ಹೆಚ್ಚಲಿ’ ಎಂದು ಅವರು ಎಲ್ಲರನ್ನು ಆಶಿರ್ವದಿಸಿದರು.

ಕಥೊಲಿಕ್ ಸಭಾ ಕುಂದಾಪುರ ಘಟಕದ ಸದಸ್ಯರು ಹಾಗೂ ಕಥೊಲಿಕ್ ಸಭಾ ಕುಂದಾಪುರ ಘಟಕದ ಪರವಾಗಿ ನಾಟಕಗಳನ್ನು ಪ್ರದರ್ಶಿಸುತ್ತಿರುವ ಕಲಾಮ್ರತ್ ಕಲಾ ತಂಡದ ಸದಸ್ಯರು ಭಾಗವಹಿಸಿದ್ದ ಈ ಸಹ ಮಿಲನ ಕಾರ್ಯಕ್ರಮದಲ್ಲಿ ಕಥೊಲಿಕ್ ಸಭೆಯ ಅಧ್ಯಕ್ಷೆ ಶೈಲಾ ಡಿ ಆಲ್ಮೇಡಾ ಸ್ವಾಗತಿಸಿದರು. ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್ ವಂದಿಸಿದರು. ಕಲಾಮ್ರತ್ ಸಂಸ್ಥೆಯ ಸಂಚಾಲಕ ಬರ್ನಾಡ್ ಡಿಕೋಸ್ತಾ ಕಾರ್ಯಕ್ರಮವನ್ನು ನಿರೂಪಿಸಿದರು.
More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here