Monday 22nd, October 2018
canara news

ಸಚಿವ ಯು.ಟಿ. ಖಾದರ್ ಧರ್ಮಸ್ಥಳ ಭೇಟಿ

Published On : 11 Jun 2018   |  Reported By : Rons Bantwal


ಉಜಿರೆ: ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಭಾನುವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ತುಳುನಾಡಿನ ಘನತೆ, ಗೌರವ ಉಳಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಿ, ಉತ್ತಮ ಸೇವೆ ಮಾಡಿ. ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹವಿರಲಿ ಎಂದು ಹೇಳಿ ಸಚಿವರಿಗೆ ಹೆಗ್ಗಡೆಯವರು ಶುಭ ಹಾರೈಸಿದರು.

ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಇದ್ದರು. ಸಚಿವರು ದೇವಸ್ಥಾನದ ಹೊರ ಆವರಣದಲ್ಲಿ ದೇವರನ್ನು ಪ್ರಾರ್ಥಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ನಗರಾಭಿವೃದ್ಧಿ ಮತ್ತು ವಸತಿ ಖಾತೆಯನ್ನು ಜನಪರವಾಗಿ, ಜನಸ್ನೇಹಿಯಾಗಿ ಪರಿವರ್ತಿಸಲು ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಈ ಬಗ್ಗೆ ಇಂದು ಸೋಮವಾರ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಹೇಳಿದರು. ಎಲ್ಲಾ ಹಿರಿಯ ಮುಖಂಡರ ಹಾಗೂ ಶಾಸಕರು ಮತ್ತು ಮಾಜಿ ಶಾಸಕರ ಸಹಕಾರ ಪಡೆದು ಮುನ್ನಡೆಯುವುದಾಗಿ ತಿಳಿಸಿದ ಅವರು ಸಮ್ಮಿಶ್ರ ಸರ್ಕಾರ ಐದು ವರ್ಷ ಸುಗಮವಾಗಿ ಆಡಳಿತ ನಡೆಸುತ್ತದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾಗುವ ಸಾಧ್ಯತೆ ಬಗ್ಗೆ ಪ್ರಸ್ತಾಪಿಸಿದಾಗ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಸಿಕ್ಕಿಲ್ಲ. ಆದರೂ ತನ್ನ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಹೆಚ್ಚಿನ ಸೇವೆ ಮಾಡಬೇಕೆಂಬ ಸಂಕಲ್ಪ ಇದೆ ಎಂದು ಹೇಳಿದರು.

ಬಳಿಕ ಧರ್ಮಸ್ಥಳದಲ್ಲಿ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಕನ್ಯಾಡಿಯಲ್ಲಿ ರಾಮ ಕ್ಷೇತ್ರ ಹಾಗೂ ಉಜಿರೆಯಲ್ಲಿ ಮಲ್‍ಜಾ ಮಸೀದಿಗೆ ಸಚಿವರು ಭೇಟಿ ನೀಡಿದರು.

ಬೆಳ್ತಂಗಡಿಯಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಸಚಿವರು ಮಂಗಳೂರಿಗೆ ಪ್ರಯಾಣ ಬೆಳೆಸಿದರು.
More News

ಗೋರೆಗಾಂವ್ ಮೋತಿಲಾಲ್ ನಗರÀದ ಶ್ರೀ ಶಾಂತ ದುರ್ಗಾದೇವಿ ಮಂದಿರದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ವಾರ್ಷಿಕ ಶರನ್ನವರಾತ್ರಿ ಉತ್ಸವ
ಗೋರೆಗಾಂವ್ ಮೋತಿಲಾಲ್ ನಗರÀದ ಶ್ರೀ ಶಾಂತ ದುರ್ಗಾದೇವಿ ಮಂದಿರದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ವಾರ್ಷಿಕ ಶರನ್ನವರಾತ್ರಿ ಉತ್ಸವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಸಾಯನ್,  ಆಶ್ರಯದಲ್ಲಿ  ದೀಪಾರಾಧನೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಸಾಯನ್, ಆಶ್ರಯದಲ್ಲಿ ದೀಪಾರಾಧನೆ
ಬಿ.ಎ ಮೊಹಿದೀನ್ ಅವರು ತೆರೆದಿಟ್ಟ ನನ್ನೊಳಗಿನ ನಾನು
ಬಿ.ಎ ಮೊಹಿದೀನ್ ಅವರು ತೆರೆದಿಟ್ಟ ನನ್ನೊಳಗಿನ ನಾನು

Comment Here