Thursday 18th, April 2024
canara news

ಹವ್ಯಕ ವೆಲ್ಫೇರ್ ಸಂಸ್ಥೆ ಮುಂಬಯಿ ವತಿಯಿಂದ ಆಯೋಜಿಸಲಾದ

Published On : 13 Jun 2018   |  Reported By : Rons Bantwal


ಕವಿ ದಿ| ವಿ.ಜಿ ಭಟ್ಟ ಸ್ಮರಣಾರ್ಥ ಅಖಿಲ ಭಾರತ ಕನ್ನಡ ಕವನ ಸ್ಪರ್ಧೆಗೆ ಆಹ್ವಾನ

ಮುಂಬಯಿ, ಜೂ.13: ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕ ೃತ, ಕನ್ನಡದ ಉದ್ದಾಮ ಕವಿ ದಿ| ವಿ.ಜಿ ಭಟ್ಟ ಸ್ಮರಣಾರ್ಥವಾಗಿ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಸಕ್ತರು ಯಾವುದೇ ವಿಷಯದ ಕುರಿತಂತೆ ಕನ್ನಡ ಕವಿತೆಗಳನ್ನು ರಚಿಸಬಹುದಾಗಿದೆ. ಇಲ್ಲಿ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

ಪ್ರಥಮ ಬಹುಮಾನ ರೂಪಾಯಿ 10,000/-, ದ್ವಿತೀಯ ಬಹುಮಾನ ರೂ.5,000/-, ತೃತೀಯ ಬಹುಮಾನ ರೂ. 3,000/- , ಪೆÇ್ರೀತ್ಸಾಹಕ ಬಹುಮಾನ ರೂ.1,000/-.

ಸ್ಪರ್ಧೆಯು ಕೆಲವೊಂದು ನಿಯಮಾವಳಿಗಳನ್ನು ಇರಿಸಿದ್ದು ನಗಳು ಸ್ವರಚಿತವಾಗಿರಬೇಕು. ಅನುವಾದ, ಅನುಕರಣೆ ಆಗಿರಕೂಡದು. ಕವನಗಳು ಸುಮಾರು ಮೂವತ್ತು ಸಾಲಿನ ಮಿತಿಯಲ್ಲಿರಲಿ. ಕಾಗದದ ಒಂದೇ ಮಗ್ಗುಲಲ್ಲಿ ಚಿತ್ತಿಲ್ಲದಂತೆ ಸ್ಫುಟವಾಗಿ ಬರೆದು ಕಳುಹಿಸಿ. (ಹಸ್ತ ಲಿಖಿತ ಯಾ ಕಂಪ್ಯೂಟರ್ ಮುದ್ರಿತ). ನಮ್ಮ ಇ-ಮೇಯ್ಲ್ havyakamumbai@hotmail.com ಮೂಲಕ ಅಥವಾ ನಮ್ಮHAVYAKA WELFARE TRUST,B-207, Valmiki Apts, Near Pharmacy College, Sundar Nagar, Kalina, Vidyanagari P.O.,Mumbai - 400 098. . ವಿಳಾಸಕ್ಕೂ ಕಳುಹಿಸಬಹುದು.

ಕವನದ ಕವಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಇ-ಮೇಯ್ಲ್ ಐಡಿ ಪ್ರತ್ಯೇಕ ಕಾಗದದಲ್ಲಿ ಬರೆದು ಕಳುಹಿಸತಕ್ಕದ್ದು. ಸ್ಪರ್ಧೆಗೆ ಕಳುಹಿಸಿದ ಕವನಗಳು ಫಲಿತಾಂಶ ಬರುವ ತನಕ ಬೇರೆ ಎಲ್ಲಿಯೂ ಪ್ರಕಟವಾಗಬಾರದು. ಒಬ್ಬರು ಒಂದೇ ಕವನವನ್ನು ಬರೆದು ಕತ್ರಿಳುಹಿಸಬೇಕು. ಸ್ಪರ್ಧೆಗೆ ಬಂದ ಕವನಗಳನ್ನು ಮರಳಿಸಲಾಗುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಕವನಗಳನ್ನು ಸ್ವೀಕರಿಸುವ ಅಂತಿಮ ದಿನಾಂಕ 30.07.2018 ಆಗಿರುತ್ತದೆ.

ಆಯ್ಕೆಯಾದ ಕವನಗಳ ಫಲಿತಾಂಶವನ್ನು ಹವ್ಯಕ ವೆಲ್ಫೇರ್‍ಟ್ರಸ್ಟ್‍ನ ಮಾಸಿಕ `ಹವ್ಯಕ ಸಂದೇಶ' ಪಕೆಯಲ್ಲಿ ಹಾಗೂ ಸ್ಥಳೀಯ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here