Thursday 25th, April 2024
canara news

ದುಡ್ಡು ಆಸ್ತಿ ಸಂಪತ್ತು ಅಧಿಕಾರಕ್ಕಾಗಿ ಮೋರೆಯಿಡಬೇಡಿ - ಶಾಂತಿ ಸಮಾಧಾನ, ಸಂಭಂದ, ದೈವಭಕ್ತಿಗಾಗಿ ಪ್ರಾರ್ಥಿಸಿರಿ – ಆರ್ಚ್ ಬಿಶಪ್ ಬರ್ನಾಡ್ ಮೊರಾಸ್

Published On : 15 Jun 2018   |  Reported By : Bernard Dcosta


ಇಟೆಲಿಯಿಂದ ತರಿಸಲ್ಪಟ್ಟ ವೀಶಷ ಸಂತ ಅಂತೋನಿಯವರ ಕಿರು ಅವಶೇಷ
ಕುಂದಾಪುರ ವಲಯದ ಅತೀ ಎತ್ತರದ ಘಂಟಾಗೋಪುರ ಉದ್ಘಾಟನೆ

ಕುಂದಾಪುರ,ಜೂ 15: ‘ಸಂತ ಅಂತೋನಿಯವರು ಮಹಾ ಪವಾಡ ಪುರುಷ, ಮಹಾ ದೈವ ಭಕ್ತ, ಬಾಲ ಯೇಸು ಅವರ ಕೈಗಳಲ್ಲಿ ಆಡುತಿದ್ದುದನ್ನು ಅವನ ಕಾಲದ ಜನರು ಸ್ವತ ಕಂಡಿದ್ದಾರೆ, ಅವರು ಯೇಸು ಮತ್ತು ಪವಿತ್ರತ್ಮಾನ ಶಕ್ತಿಯಿಂದ ಪವಾಡಗಳನ್ನು ಮಾಡುತಿದ್ದರು, ಅವರು ಕಳೆದು ಹೋದ ವಸ್ತುಗಳನ್ನು ಹುಡುಕಿಕೊಡುವ ಸಂತರು, ಆದರೆ ಇವತ್ತು ನೀವು ದುಡ್ಡು ಆಸ್ತಿ ಪಾಸ್ತಿ ಭಾಂಗರ ಅಧಿಕಾರ ಇವಗಳಿಗಾಗಿ ನೀವು ಅವರಲ್ಲಿ ಮೊರೆಯಿಡಬೇಡಿ, ನೀವು ಈಗ ನಾವು ಕಳೆದು ಕೊಳ್ಳುತ್ತಿರುವ ಶಾಂತಿ ಸಮಾಧಾನ ಸಂಭಂದ ಪ್ರೀತಿ ದೈವ ಭಕ್ತಿ ಇವುಗಳನ್ನು ಪಡೆದುಕೊಳ್ಳಲಿಕ್ಕಾಗಿ ಅವರಲ್ಲಿ ಪ್ರಾರ್ಥಿಸಿರಿ’ ಇತ್ತಿಚೇಗೆಯಸ್ಟೇ ನಿವ್ರತ್ತರಾದ ಬೆಂಗಳೂರಿನ ಆರ್ಚ್ ಬಿಶಪ್ ಸ್ವಾಮಿ ಅತೀ ವಂ| ಡಾ| ಬರ್ನಾಡ್ ಮೊರಾಸ್ ಇವರÅ ಸಂತ ಅಂತೋನಿ ಕೆರೆಕಟ್ಟೆ ಪುಣ್ಯಕ್ಷೇತ್ರದ ವಾರ್ಷಿಕ ಮಹಾ ಹಬ್ಬ ಮತ್ತು ಸ್ವರ್ಣ ಮಹೋತ್ಸವದ ಸಮಾರೋಪ ಸಂದರ್ಭದ ಸಂಭ್ರಮ ಭಕ್ತಿಯ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.

‘ಸಂತ ಅಂತೋನಿ ದೈವ ಶಕ್ತಿ ಎಸ್ಟಿತ್ತು ಅಂದರೆ, ತನ್ನ ಹತ್ತಿರ ಪಾಪಗಳನ್ನು ತೋಡಿಕೊಳ್ಳಲು ಕಶ್ಟವಾಗಿರುವಾತ ಒಬ್ಬನಿಗೆ, ಸಂತ ಆಂತೋನಿಯವರು ನೀನು ನಿನ್ನ ಪಾಪಗಳನ್ನು ಕಾಗದದಲ್ಲಿ ಬರೆದುಕೊಂಡು ಬಾ ಎನ್ನುತ್ತಾರೆ, ಅದರಂತೆ ಆತ ಆತನು ಬರೆದುಕೊಂಡ ತನ್ನ ಪಾಪಗಳನ್ನು ಉಚ್ಚರಿಸುವಾಗ ಆತನ ಕಾಗದಲ್ಲಿದ್ದ ಒಂದೊಂದೇ ಪಾಪಗಳು ಅಳಿಸಿಹೋಗುತ್ತವೆ, ಅಂದರೆ ಪಾಪ ನೀವೆದನೆಯ ಮುಖಾಂತರ ಪಾಪಗಳು ಕ್ಷಮಿಸುತ್ತವೆ, ಎಂಬುದನ್ನು ಶಾಬಿತು ಮಾಡಿದ ಮಹಾತ್ಮ ಸಂತ ಅಂತೋನಿ’ ಎಂದು ವಿವರಣೆ ನೀಡಿ ಅವರು ಬಹು ವಿರಳವಾಗಿ ದೊರಕುವ ಪವಾಡ ಪುರುಷ ಅಂತೋನಿಯವರ ದೇಹದ ಒಂದು ಚಿಕ್ಕ ತುಂಡು ಇಟಲಿಯಿಂದ ತರಿಸಿಕೊಂಡ ಅವಶೇಷನಿಂದ (ರೆಲಿಕ್) ಸುಮಾರು ಐದು ಸಾವಿರ ಸೇರಿದ ಭಕ್ತಾಧಿಗಳಿಗೆ ಆಶಿರ್ವಚನವನ್ನು ನೀಡಿದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ|ವಂ|ಡಾ ಜೆರಾಲ್ಡ್ ಐಸಾಕ್ ಲೋಬೊ, ಉಡುಪಿ ಧರ್ಮಪ್ರಾಂತ್ಯದ ಛಾನ್ಸಲರ್ ಅ|ವಂ| ಸ್ಟ್ಯಾನಿ ಬಿ ಲೋಬೊ, ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ. ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಝೇವಿಯರ್ ಪಿಂಟೊ ಮತ್ತ ಹಲವಾರು ಧರ್ಮಗುರುಗಳು ಈ ಮಹಾ ಬಲಿದಾನದಲ್ಲಿ ಭಾಗಿಯಾದರು.

ಬಲಿದಾನಕ್ಕೂ ಮುನ್ನಾ ಸುಮಾರು 6 ಲಕ್ಷ ವೆಚ್ಚದ ಬಹಳ ಎತ್ತರದ ಘಂಟಾಗೋಪುರವನ್ನು ಧರ್ಮಾಧ್ಯಕ್ಷರುಗಳು ಆಶಿರ್ವದಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅ|ವಂ|ಡಾ ಜೆರಾಲ್ಡ್ ಐಸಾಕ್ ಲೋಬೊ, ಆರ್ಚ್ ಬಿಶಪ್ ಸ್ವಾಮಿ ಅತೀ ವಂ| ಡಾ| ಬರ್ನಾಡ್ ಮೊರಾಸ್ ಅವರನ್ನು ಸನ್ಮಾನಿಸಿ ಹಿರಿಯರಾದ ಅವರಿಂದ ನಾನು ಬಹಳಸ್ಟು ಕಲಿತು ಕೊಂಡಿದ್ದೆನೆ ಎನ್ನುತ್ತಾ ಅವರಿಗೆ ಮತ್ತು ಎಲ್ಲರಿಗೂ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ವಂ|ಝೇವಿಯರ್ ಪಿಂಟೊ, ಘಂಟಾಗೋಪುರದ ದಾನಿಗಳಾದ ಲೀನೆಟ್- ವಿಲಿಯಮ್, ಕಂಟ್ರ್ಯಾಕ್ಟರ್ ಪಿ.ಟಿ.ಆಲೆಕ್ಷ್, ಆರಿಕಿಟೆಕ್ಟ್ ಸಂದೀಪ್ ಡಿಮೆಲ್ಲೊ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆಲ್ವಿನ್ ಲೋಬೊ ಸ್ವಾಗತಿಸಿ, ಕಾರ್ಯಕ್ರಮವನ್ನು ವಂ|ಫಾ|ಜೋನ್ ಮೆಂಡೊನ್ಸಾ ಮತ್ತು ಪ್ರಾಧ್ಯಪಕ ಡೆನಿಸ್ ಡಿಸೋಜಾ ನಿರೂಪಿಸಿದರು. ವಂ|ಝೇವಿಯರ್ ಪಿಂಟೊ ಧನ್ಯವಾದಗಳನ್ನು ಅರ್ಪಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here