Saturday 20th, April 2024
canara news

ದ.ಕ.ಜಿಲ್ಲೆಯಲ್ಲೊಂದು ವಿನೂತನ ಮದುವೆ

Published On : 20 Jun 2018   |  Reported By : canaranews network


ಮಂಗಳೂರು : ಪ್ರಪಂಚದಲ್ಲಿ ಚಿತ್ರವಿಚಿತ್ರ ರೀತಿಯಲ್ಲಿ ಮದುವೆಯಾದ, ಮದುವೆಯ ದಿಬ್ಬಣ ಹೊರಟ ನಿದರ್ಶನಗಳು ನಮ್ಮ ಮುಂದಿವೆ. ಆದರೆ ಜೆಸಿಬಿ ಮೇಲೆ ದಿಬ್ಬಣ ಹೊರಟಿದ್ದು ಕಂಡಿದ್ದಿರಾ? ಇಂತಹದೊಂದು ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.ಮದುವೆ ಎಂಬ ಸಂತೋಷದ ಶುಭ ಘಳಿಗೆಯಲ್ಲಿ ತನಗೆ ಬದುಕು ಕಟ್ಟಿ ಕೊಟ್ಟವರನ್ನು ನೆನಪಿಸೋದು ಸಾಮಾನ್ಯವೇ. ಆದರೆ ಪುತ್ತೂರಿನಲ್ಲೊಬ್ಬರು ಮದುವೆ ಎಂಬ ಜೀವನದ ಪ್ರಮುಖ ಘಟ್ಟ ಪ್ರವೇಶಿಸುವಾಗ ತನಗೆ ಬದುಕು ಕಟ್ಟಿ ಕೊಟ್ಟ ವಾಹನವನ್ನು ಮರೆಯಲೇ ಇಲ್ಲ.ಇವರು ತನಗೆ ಜೀವನಕ್ಕೆ ಆಧಾರವಾದ ಜೆಸಿಬಿ ಯಂತ್ರವನ್ನು ತನ್ನ ಮದುವೆಯ ದಿಬ್ಬಣದ ವಾಹನವನ್ನಾಗಿ ಆಯ್ದುಕೊಂಡಿದ್ದರು.

 

ಕಳೆದ ಹಲವು ವರ್ಷಗಳಿಂದ ಇದೇ ಜೆಸಿಬಿಯಲ್ಲಿ ದುಡಿದ ಗಳಿಕೆಯಲ್ಲೇ ಜೀವನ ನಿರ್ವಹಿಸುತ್ತಿದ್ದ ಪುತ್ತೂರಿನ ಸಂಟ್ಯಾರು ನಿವಾಸಿ ಚೇತನ್ ಈ ರೀತಿ ಜೆಸಿಬಿಯಲ್ಲಿ ದಿಬ್ಬಣ ಹತ್ತಿದವರಾಗಿದ್ದಾರೆ.ತಿಂಗಳಾಡಿ ಸಮೀಪದ ಬೋಳೋಡಿಯ ಯುವತಿ ಮಮತಾ ಅವರೊಂದಿಗೆ ಹಸಮಣೆಗೆ ಏರಿದ ಚೇತನ್ ಮದುವೆ ಕಾರ್ಯಕ್ರಮಗಳೆಲ್ಲಾ ಮುಗಿದ ಬಳಿಕ ಸೀದಾ ತನ್ನ ಮದುಮಗಳೊಂದಿಗೆ ಜೆಸಿಬಿ ಹತ್ತಿದ್ದಾರೆ.ಹಿತರೆಲ್ಲಾ ಸೇರಿ ಜೆಸಿಬಿಯನ್ನು ಹೂ ಹಾಗೂ ಇತರ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಿದ್ದರು. ಜೆಸಿಬಿ ಹತ್ತಿ ಬಂದ ವಧು ವರರನ್ನು ದಾರಿ ಯುದ್ದಕ್ಕೂ ಜನ ನಿಬ್ಬೆರಗಾಗಿ ನೋಡಿದ್ದೇ ನೋಡಿದ್ದು. ಆದರೆ ಚೇತನ್ ಗೆ ಮಾತ್ರ ಬದುಕು ಕಟ್ಟಿಕೊಟ್ಟ ಈ ಜೆಸಿಬಿ ಯಾವುದೇ ಐಷಾರಾಮಿ ಕಾರಿಗೆ ಕಡಿಮೆ ಎಂದು ಅನಿಸಲೇ ಇಲ್ಲ. ಅವರ ಪಾಲಿಗೆ ಅದೇ ಐಷಾರಾಮಿ ಕಾರಾಗಿತ್ತು.ಈ ಮದುವೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿದೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here