Saturday 20th, April 2024
canara news

10 ವರ್ಷ ಕಷ್ಟಪಟ್ಟು ಸಾಧನೆ ಮಾಡಿದರೆ ಮುಂದಿನ ಇಡೀ ಜೀವನ ಸಂತೋಷದಲ್ಲಿ ಕಳೆಯಬಹುದು

Published On : 27 Jun 2018   |  Reported By : Dr. Gerry Niddodi


ಪಿಯುಸಿ ವಿದ್ಯಾರ್ಥಿಗಳು ಮುಂದಿನ 10 ವರ್ಷ ಕಷ್ಟಪಟ್ಟು ಸಾಧನೆ ಮಾಡಿದರೆ ಮುಂದಿನ ಇಡೀ ಜೀವನ ಸಂತೋಷದಲ್ಲಿ ಕಳೆಯಬಹುದು, ಈಗ ಗಮ್ಮತ್ ಮಾಡಿ ಸಮಯ ಹಾಳು ಮಾಡಿದರೆ ಮುಂದಿನ ಇಡೀ ಜೀವನ ದು:ಖದಲ್ಲಿ ಕಳೆಯಬೇಕಾಗಬಹುದು ಎಂದು ಕಾಲೇಜಿನ ಕೇಂಪಾಸ್ ಮಿನಿಸ್ಟರ್ ರೆ.ಡಾ.ಆನಿಲ್ ಪ್ರಕಾಶ್ ಕಾಸ್ತೆಲಿನೊ ವಿದ್ಯಾರ್ಥಿಗಳಿಗೆ ಹೇಳಿದರು. ಅವರು 26.6.2018ರಂದು ಮಿಲಾಗ್ರಿಸ್ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು ಹಾಗೂ ಕಥೊಲಿಕ್ ಸಭಾ ಕಲ್ಯಾಣಪುರ ಜಂಟಿಯಾಗಿ ಆಯೋಜಿಸಿದ ವ್ರತ್ತಿ ಮಾರ್ಗದರ್ಶನ ಶಿಬಿರವನ್ನು ಉದ್ಗಾಟಸಿ ಮಾತನಾಡುತಿದ್ದರು.

ಕಾಲೆಜಿನ ಪ್ರಾಂಶುಪಾಲೆ ಸವಿತಾ ಹೆಬ್ಬಾರ್ ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಡಾ.ಜೆರಾಲ್ಡ್ ಪಿಂಟೊ ಸ್ವಾಗತಿಸಿ ಕಥೊಲಿಕ್ ಸಭಯ ರೋಜಿ ಬಾರೆಟ್ಟೊ ವಂದಿಸಿದರು. ಡಾ.ಜೆರಾಲ್ಡ್ ಪಿಂಟೊ, ಡಾ.ಜಯರಾಮ್ ಶೆಟ್ಟಿಗಾರ್ ಹಾಗೂ ಪ್ರದೀಪ್ ಮೊರಾಸ್ ಸಂಪನ್ಮೂಲ ವೆಕ್ತಿಗಳಾಗಿ ಆಗಮಿಸಿದ್ದರು. ಕಥೊಲಿಕ ಸಭೆಯ ಪದಾಧಿಕಾರಿಗಳದ ಸಂತೋಶ್ ಕರ್ನಲಿಯೊ ಹಾಗೂ ಸ್ಟೆನಿ ರೊಡ್ರಿಗೆಸ್ ವೇದಿಕೆಯಲ್ಲಿದ್ದರು. ಜೆನಿಶಿಯಾ ಢಿ ಸೋಜ ಕಾರ್ಯಕ್ರಮ ನಿರೂಪಿಸಿದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here