Tuesday 23rd, April 2024
canara news

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಯಿಂದ ಬಿಡುಗಡೆ, ಬೆಂಗಳೂರಿಗೆ ಪ್ರಯಾಣ

Published On : 29 Jun 2018   |  Reported By : Rons Bantwal


ಉಜಿರೆ: ಧರ್ಮಸ್ಥಳದಲ್ಲಿ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಇದೇ 16 ರಿಂದ 28ರ ವರೆಗೆ “ಸಾಧಕ”ರಾಗಿ ಶುಶ್ರೂಷೆ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡರು.

ಗುರುವಾರ ಬೆಳಿಗ್ಗೆ ಹನ್ನೊಂದು ಗಂಟೆ ವರೆಗೆ ಎಂದಿನಂತೆ ಶುಶ್ರೂಷೆ ಪಡೆದು ಬಳಿಕ ಶ್ರೀ ಸನ್ನಿಧಿ ಅತಿಥಿ ಗೃಹಕ್ಕೆ ಬಂದರು.

ಅಲ್ಲಿಂದ 12 ಗಂಟೆಗೆ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಬಂದು ಶತರುದ್ರಾಭಿಷೇಕ ಸೇವೆ ಸಲ್ಲಿಸಿದರು.

ಬಳಿಕ ಶ್ರೀ ಸನ್ನಿಧಿಯಲ್ಲಿ ಭೋಜನ ಸ್ವೀಕರಿಸಿ ಮಂಗಳೂರಿಗೆ ಹೋದರು.

ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಉಪಸ್ಥಿತರಿದ್ದರು.

ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದರು: ದೇವರ ದರ್ಶನ ಮಾಡಿ ಹೊರಗೆ ಬರುವಾಗ ಹಾಗೂ ಶ್ರೀ ಸನ್ನಿಧಿಯಲ್ಲಿ ಊಟಕ್ಕೆ ಮೊದಲು ಹಾಗೂ ಊಟದ ಬಳಿಕ ಹೊರಡುವಾಗ ಮಾಧ್ಯಮದವರು ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದರೂ, ಅವರು ನಿರಾಕರಿಸಿದರು. ಕಾರಿನಲ್ಲಿ ಕುಳಿತುಕೊಳ್ಳುವಾಗ ತಮ್ಮ ಆರೋಗ್ಯ ಹೇಗಿದೆ ಎಂದು ಪ್ರಶ್ನಿಸಿದಾಗ “ಚೆನ್ನಾಗಿದೆ” ಎಂದಷ್ಟೇ ಹೇಳಿ ಮೌನಿಯಾದರು.

ಉತ್ತಮ ಸಾಧಕ: ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಶಾಂತ್ ಶೆಟ್ಟಿ ಮಾಧ್ಯಮದವರಿಗೆ ಶುಸ್ರೂಷೆಯ ಸವಿವರ ಮಾಹಿತಿ ನೀಡಿದರು.

ಪ್ರಕೃತಿ ಚಿಕಿತ್ಸಾ ವಿಧಾನದಲ್ಲಿ ದೇಹ ಮತ್ತು ಮನಸ್ಸಿಗೆ ಏಕ ಕಾಲದಲ್ಲಿ ಶುಶ್ರೂಷೆ ನೀಡಿ ಪುನಶ್ಚೇತನಗೊಳಿಸಲಾಗುತ್ತದೆ. ಬೆಳಿಗ್ಗೆ ಗಂಟೆ 6 ರಿಂದ 7ರ ವರೆಗೆ ಯೋಗ, ಧ್ಯಾನ, ಪ್ರಾರ್ಥನೆ ಮೂಲಕ ಮಾನಸಿಕ ಆರೋಗ್ಯ ಮತ್ತು ಶಾಂತಿ ಹೆಚ್ಚಾಗುವಂತೆ ಮಾಡಲಾಗುತ್ತದೆ.

ಆಹಾರ ಚಿಕಿತ್ಸೆ ಮೂಲಕ ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಿ, ದೈಹಿಕ ಆರೋಗ್ಯ ಸುಧಾರಣೆ ಮಾಡಲಾಗುತ್ತದೆ. ಇದರಿಂದಾಗಿ ದೇಹದ ತೂಕ ಕಡಿಮೆ ಆಗಿ, ಜೀವನ ಶೈಲಿ ಸುಧಾರಣೆಯಾಗಿ ಉತ್ಸಾಹ ಮತ್ತು ಲವಲವಿಕೆ ಮೂಡಿ ಬರುತ್ತದೆ.

ಸಿದ್ದರಾಮಯ್ಯ ಮೂರನೆ ಬಾರಿಗೆ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದು ಎಲ್ಲಾ ರೀತಿ ಚಿಕಿತ್ಸೆಗಳಿಗೂ ಉತ್ತಮ ಸ್ಪಂದನೆ ನೀಡುತ್ತಾರೆ. ಶಿಸ್ತಿನ ಸಿಪಾಯಿಯಾಗಿ ಸಹಕರಿಸುತ್ತಾರೆ ಎಂದು ಡಾ. ಪ್ರಶಾಂತ್ ಶೆಟ್ಟಿ ತಿಳಿಸಿದರು.

ದೇಹದ ತೂಕದಲ್ಲಿ 3 (ಮೂರು) ಕೆ.ಜಿ. ಕಡಿಮೆಯಾಗಿದೆ. ಯಾವುದೇ ಭಿನ್ನತೆ ಇಲ್ಲದೆ ಇತರ ಸಾಧಕರೊಂದಿಗೆ ಮುಕ್ತವಾಗಿ ಬೆರೆಯುತ್ತಾರೆ ಎಂದು ಅವರು ಹೇಳಿದರು. ಇತರ ಸಾಧಕರಿಗೆ ಇವರು ಆದರ್ಶ ಹಾಗೂ ಅನುಕರಣೀಯರಾಗಿದ್ದಾರೆ. ಉತ್ತಮ ಸಾಧಕ ಎಂದು ಡಾ. ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.

ಮುಖ್ಯಾಂಶಗಳು:
• 12 ದಿನ ಶಾಂತಿವನದಲ್ಲಿ ಮಾಜಿ ಸಿ.ಎಂ. ಸಿದ್ದರಾಮಯ್ಯ ಶುಶ್ರೂಷೆ ಪಡೆದರು.
• ಮೊಳಕೆ ಬರಿಸಿದ ಕಾಳುಗಳು, ಹಣ್ಣಿನ ರಸ, ಸೊಪ್ಪು, ತರಕಾರಿ, ಚಪಾತಿ, ಪಾನೀಯಗಳನ್ನು ನೀಡಲಾಯಿತು.
• ಮಾಜಿ ಸಿ.ಎಂ. ಆಸ್ಪತ್ರೆಗೆ ಸೇರಿದ ಬಳಿಕ ಇತರ ಸಾಧಕರಿಗೆ ಏನೂ ಅಡಚಣೆಯಾಗಿಲ್ಲ.
• ಮೂರನೆ ಬಾರಿ ಸಿದ್ದರಾಮಯ್ಯ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆದಿರುವರು.
• ಯೋಗ, ಪ್ರಾರ್ಥನೆ, ಧ್ಯಾನ, ವ್ಯಾಯಾಮ, ಭಜನೆ, ಸತ್ಸಂಗ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕಾಯಕಲ್ಪ.
• ಶಾಂತಿವನದಲ್ಲಿ ಹಾಗೂ ಮಣಿಪಾಲದ ಬಳಿಕ ಪರೀಕಾದಲ್ಲಿರುವ ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳು ಸದಾ “ಹೌಸ್ ಫುಲ್” ಆಗಿರುತ್ತವೆ.
• ಬೆಂಗಳೂರಿನಲ್ಲಿ ಮೂರನೆ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here