Wednesday 24th, April 2024
canara news

ಜುಲೈ.01: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ನವಿ ಮುಂಬಯಿ ಸ್ಥಳೀಯ ಕಚೇರಿ ವತಿಯಿಂದ `ಸ್ನೇಹ ಮಿಲನ'

Published On : 29 Jun 2018   |  Reported By : Rons Bantwal


ಮುಂಬಯಿ, ಜೂ.28: ಬಿಲ್ಲವರ ಅಸೋಸಿಯೇಶನ್ ಮುಂಬಯಿ, ಇದರ ನವಿ ಮುಂಬಯಿ ಸ್ಥಳೀಯ ಕಚೇರಿ ವತಿಯಿಂದ `ಸ್ನೇಹ ಮಿಲನ'ವನ್ನು ಇದೇ ಜುಲೈ.01ರ ಭಾನುವಾರ ಸಂಜೆ ಸಂಜೆ 5.00 ಗಂಟೆಗೆ ನವಿಮುಂಬಯಿ ಸೆಕ್ಟರ್-19ರ ನೆರೂಲ್, ಸೀವುಡ್ ರೈಲ್ವೇ ಸ್ಟೇಶನ್ ಹತ್ತಿರದ ಸ್ಟೆರ್ಲಿಂಗ್ ಕಾಲೇಜ್ ಇದರ ಏಳನೇ ಮಹಡಿಯ ಬಾಂಕ್ವೇಟ್ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಮೊದಲು ಪ್ರಕಟಗೊಂಡ ಸ್ನೇಹ ಮಿಲನದ ಈ ಕಾರ್ಯಕ್ರಮವನ್ನು ಕಳೆದ ಜೂನ್.24 ರಂದು ಜರಗಿಸುವುದಾಗಿತ್ತು ಆದರೆ ಕಾರಣಾಂತರಗಳಿಂದ ಅನಾನುಕೂಲತೆ ಆಗಿತ್ತು. ಈ ಸ್ನೇಹಮಿಲನವನ್ನು ಇದೇ ಜು.01ರ ಭಾನುವಾರ ಸಂಜೆ ನಡೆಸಲಾಗುವುದು. ಸಮಾಜ ಬಾಂಧವರು ವಿಷಯ ತಿಳಿದು ಈ ಸ್ನೇಹ ಮಿಲನ ಕಾರ್ಯಕ್ರಮಕ್ಕೆ ಸ್ಥಳಿಯ ಬಿಲ್ಲವ ಬಾಂಧವರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹಕರಿಸಬೇಕು ಎಂದು ನವಿ ಮುಂಬಯಿ ಸ್ಥಳೀಯ ಕಚೇರಿಯ ಪದಾಧಿಕಾರಿಗಳು, ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ್ ಜಿ. ಅಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here